ಮಹಾರಾಷ್ಟ್ರ: ಸಾಮಾನ್ಯವಾಗಿ ಗರ್ಭಿಣಿ (Pregnant) ಮಹಿಳೆಯರು ಹೆರಿಗೆ (Delivery) ಸಮಯದಲ್ಲಿ ಬಹಳ ಜಾಗೃತರಾಗಿರಬೇಕು. ನಿಧಾನವಾಗಿ ಓಡಾಡಬೇಕು. ದೂರದ ಪ್ರಯಾಣ ಮಾಡಬಾರದು. ಎಲ್ಲೆಂದರಲ್ಲಿ, ಸಿಕ್ಕ, ಸಿಕ್ಕ ಆಹಾರವನ್ನೆಲ್ಲಾ ತಿನ್ನಬಾರದು. ಗರ್ಭಿಣಿಯರು ಕೆಲವು ಆಹಾರ (Food) ಪದ್ಧತಿಯನ್ನು ಅನುಸರಿಸಬೇಕು. ದಿನ ವಾಕಿಂಗ್ (Walking), ವ್ಯಾಯಾಮ (Exercise) ಮಾಡಬೇಕು ಎಂದು ಹೇಳಲಾಗುತ್ತದೆ. ಕೆಲವರಿಗೆ 9 ತಿಂಗಳಿಗಿಂತ ಮುಂಚೆಯೇ ಹೆರಿಗೆಯಾದರೆ, ಇನ್ನೂ ಕೆಲವರಿಗೆ 9 ತಿಂಗಳಾದರೂ ಹೆರಿಗೆ ನೋವು ಕಾಣಿಸಿರುವುದಿಲ್ಲ. ಹೀಗಾಗಿ ಮಹಿಳೆಯರು ಹೆರಿಗೆ ಸಮಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಹೀಗಿದ್ದರೂ ಈ ವಿಚಾರವಾಗಿ ಅನೇಕ ಮಂದಿ ಅಸಡ್ಡೆ ತೋರಿಸುತ್ತಾರೆ. ಈ ನಡುವೆ ಚಲಿಸುತ್ತಿದ್ದ ಬಸ್ನಲ್ಲಿಯೇ (Bus) ಮಹಿಳೆಯೊಬ್ಬರು (Women) ಮಗುವಿಗೆ ಜನ್ಮ ನೀಡಿರುವ ಘಟನೆ ಮಹಾರಾಷ್ಟ್ರದ (Maharashtra) ಥಾಣೆ (Thane) ಜಿಲ್ಲೆಯ ಕಲ್ಯಾಣ್ನಲ್ಲಿ ನಡೆದಿದೆ. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ (MSRTC bus) ಅಹಮದ್ನಗರಕ್ಕೆ (Ahamadnagar) ಹೋಗುತ್ತಿತ್ತು. ಈ ವೇಳೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಬಳಿಕ ಬಸ್ ಚಲಿಸುತ್ತಿದ್ದ ವೇಳೆಯೇ ಮಹಿಳೆ ಗಂಡು ಮಗುವಿಗೆ (Boy baby) ಜನ್ಮ ನೀಡಿದ್ದಾರೆ.
ಚಲಿಸುತ್ತಿದ್ದ ಬಸ್ಸಿನಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ
ಈ ಕುರಿತಂತೆ ಮಾಹಿತಿ ನೀಡಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬಸ್ ಕಲ್ಯಾಣ್ನ ವರಪ್ ಗ್ರಾಮದ ಬಳಿ ಇದ್ದಾಗ, ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ನಂತರ ಶೀಘ್ರವೇ ಮಹಿಳೆ ಬಸ್ನಲ್ಲಿಯೇ ಮಗುವನ್ನು ಹೆತ್ತಿದ್ದಾರೆ. ಅದೇ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಆಂಬ್ಯುಲೆನ್ಸ್ ಅನ್ನು ನಿಲ್ಲಿಸಿ, ತಾಯಿ ಮತ್ತು ಮಗುವನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿಸಿದೆ.
ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ
ತಾಯಿ ಮತ್ತು ಮಗುವಿನ ಬಗ್ಗೆ ಮಾಹಿತಿ ನೀಡಿದ ವೈದ್ಯರು, ಇಬ್ಬರನ್ನು ಆಂಬ್ಯುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ಕರೆದುಕೊಂಡು ತಕ್ಷಣ ಕರೆದುಕೊಂಡು ಬಂದಿದ್ದರಿಂದ ತಪಾಸಣೆ ನಡೆಸಲಾಯಿತು. ಇದೀಗ ಇಬ್ಬರು ಆರೋಗ್ಯವಾಗಿದ್ದಾರೆ. ಆದರೆ ಇನ್ನೂ ಮೇಲ್ವಿಚಾರಣೆಯಲ್ಲಿರಿಸಲಾಗಿದೆ ಎಂದು ಹೇಳಿದ್ದಾರೆ.
ಒಂದು ದಿನದ ಹಿಂದೆ ಮುಂಬೈನಲ್ಲಿ ಆಸ್ಪತ್ರೆಯ ಹೊರಗೆ ಸಾವನ್ನಪ್ಪಿದ್ದ ಗರ್ಭಿಣಿ
ಒಂದು ದಿನದ ಹಿಂದೆಯಷ್ಟೇ ಮುಂಬೈನ ಆಸ್ಪತ್ರೆಯೊಂದರ ಹೊರಗೆ ಗರ್ಭಿಣಿಯೊಬ್ಬರು ಸಾವನ್ನಪ್ಪಿದ್ದರು. ವೈದ್ಯರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಈ ಸಂಬಂಧ ಪೊಲೀಸರು ಸಹ ದೂರು ದಾಖಲಿಸಿಕೊಂಡಿದ್ದಾರೆ.
ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದ್ದರೆ ನನ್ನ ಪತ್ನಿ ಬದುಕಿರುತ್ತಿದ್ದಳು ಪತಿ ಕಣ್ಣೀರು
ಮೃತ ಮಹಿಳೆಯ ಪತಿ ಹೇಳುವಂತೆ ಮಹಿಳೆಯನ್ನು ಬೆಳಗ್ಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಈ ವೇಳೆ ಯಾರು ಕೂಡ ಇರಲಿಲ್ಲ. ಇದಾದ ಎರಡು ಗಂಟೆಯಲ್ಲೇ ನನ್ನ ಪತ್ನಿ ಕೊನೆಯುಸಿರೆಳೆದಿದ್ದಾಳೆ. ನನ್ನ ಹೆಂಡತಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದ್ದರೆ, ಅವಳು ಇಂದು ಬದುಕುತ್ತಿದ್ದಳು. ಆದರೀಗ 3 ಹೆಣ್ಣು ಮಕ್ಕಳನ್ನು ಬಿಟ್ಟು ಹೋಗಿದ್ದಾಳೆ ಎಂದು ಕಣ್ಣಿರು ಹಾಕಿದ್ದರು.
ಇದನ್ನೂ ಓದಿ: Maternity Leave: ಕೇರಳದ ವಿದ್ಯಾರ್ಥಿನಿಯರಿಗೆ ಸಿಗಲಿದೆ 60 ದಿನಗಳ ಹೆರಿಗೆ ರಜೆ!
ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಆಸ್ಪತ್ರೆ, ಮಹಿಳೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಕಳೆದ 2 ತಿಂಗಳಿಂದ ಸಯಾನ್ ಎಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಗುರುವಾರ ಬೆಳಗ್ಗೆ ಆಸ್ಪತ್ರೆಗೆ ಬಂದಾಗ, ಅವರ ಹಿಮೋಗ್ಲೋಬಿನ್ ಬಹಳ ಕಡಿಮೆಯಾಗಿತ್ತು. ಹೀಗಾಗಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ