ಪ್ರಯಾಣಿಕರಿದ್ದ ಬಸ್​ನಲ್ಲೇ ಮಹಿಳೆ ಮೇಲೆ ಅತ್ಯಾಚಾರ; ಉತ್ತರ ಪ್ರದೇಶದಲ್ಲಿ ಮತ್ತೊಂದು ನಿರ್ಭಯಾ ಪ್ರಕರಣ!

ಪ್ರತಾಪಘಡದಿಂದ ನೊಯ್ಡಾಗೆ ರಾತ್ರಿ ಮಕ್ಕಳೊಂದಿಗೆ ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್​ನ ಚಾಲಕರಲ್ಲಿ ಒಬ್ಬ ಆಕೆಯನ್ನು ಹಿಂದಿನ ಸೀಟಿಗೆ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ. ಈ ವೇಳೆ ಬಸ್​ನಲ್ಲಿದ್ದವರೆಲ್ಲರೂ ನಿದ್ರೆ ಮಾಡುತ್ತಿದ್ದರು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಲಕ್ನೋ (ಜೂ. 19): 8 ವರ್ಷಗಳ ಹಿಂದೆ ದೆಹಲಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಚಲಿಸುವ ಬಸ್​ನಲ್ಲೇ ಅತ್ಯಾಚಾರವೆಸಗಿದ್ದ ಭಯಾನಕ ಘಟನೆಗೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ನಿರ್ಭಯಾ ಎಂಬ ಹೆಸರಿನಲ್ಲಿ ಆ ಘಟನೆಯ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆದ ಪರಿಣಾಮ ಕೊನೆಗೂ ಆ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಿತ್ತು. ಇದೀಗ ಅದೇ ರೀತಿ ಘಟನೆಯೊಂದು ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ ನಡೆದಿದೆ.

ಬಸ್​ನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ರಾತ್ರಿ ಪ್ರತಾಪಘಡದಿಂದ ನೊಯ್ಡಾಗೆ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ. ಬಸ್​ನಲ್ಲಿ ಇನ್ನೂ ಸಾಕಷ್ಟು ಪ್ರಯಾಣಿಕರಿದ್ದರೂ ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ. ಇದು ಸಾರ್ವಜನಿಕ ಸ್ಥಳದಲ್ಲಿ ಮತ್ತು ಬಸ್​ಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಇನ್ನಷ್ಟು ಭಯ ಹೆಚ್ಚಿಸುವಂತೆ ಮಾಡಿದೆ.

ಇದನ್ನೂ ಓದಿ: ಡೇಟಿಂಗ್ ಆ್ಯಪ್ ಮೂಲಕ ಯುವತಿಯರನ್ನು ನಂಬಿಸಿ ವಂಚನೆ; ಬೆಂಗಳೂರಲ್ಲಿ ಸಿಕ್ಕಿಬಿದ್ದ ಕೇರಳದ ಆರೋಪಿ

ಈ ಘಟನೆಗೆ ಸಂಬಂಧಿಸಿದಂತೆ ಬುಧವಾರ ಒಬ್ಬನನ್ನು ಪೊಲೀಸರು ಬಂಧಿಸಿದ್ದರು. ಇಂದು ಮತ್ತೋರ್ವ ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದೆ, ಬಸ್​ನಿಂದ ಇಳಿದ ತಕ್ಷಣ ಆ ಮಹಿಳೆ ತನ್ನ ಮೇಲಾದ ಲೈಂಗಿಕ ದೌರ್ಜನ್ಯವನ್ನು ತನ್ನ ಗಂಡನ ಬಳಿ ಹೇಳಿದ್ದಾಳೆ. ವಿಷಯ ತಿಳಿದ ಕೂಡಲೆ ಆತ ಸ್ಥಳೀಯರ ಸಹಾಯದಿಂದ ಬಸ್ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತನ್ನ ಹೆಂಡತಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ.

ಇದನ್ನೂ ಓದಿ: 100 ವರ್ಷದ ಅಮ್ಮನನ್ನು ಮಂಚದಲ್ಲಿ ಎಳೆದುತಂದ ಮಗಳು; ಒಡಿಶಾದ ಬ್ಯಾಂಕ್ ಮ್ಯಾನೇಜರ್ ಸಸ್ಪೆಂಡ್

ಸಂತ್ರಸ್ತ ಮಹಿಳೆಯ ಗಂಡ ತರಕಾರಿ ವ್ಯಾಪಾರಿಯಾಗಿದ್ದರು. ಆಕೆ ಬುಧವಾರ ನೊಯ್ಡಾಗೆ ತನ್ನ ಇಬ್ಬರು ಮಕ್ಕಳೊಂದಿಗೆ ಹೋಗುವಾಗ ಬಸ್​ನಲ್ಲಿದ್ದ ಇಬ್ಬರು ಚಾಲಕರ ಪೈಕಿ ಒಬ್ಬ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ನಂತರ ಇನ್ನೋರ್ವ ಚಾಲಕನೂ ಅತ್ಯಾಚಾರ ನಡೆಸಿದ್ದ. ಪ್ರತಾಪಘಡದಿಂದ ನೊಯ್ಡಾಗೆ ಬಹಳ ದೂರ ಪ್ರಯಾಣವಾದ್ದರಿಂದ ಬಸ್​ನಲ್ಲಿ ಇಬ್ಬರು ಡ್ರೈವರ್​ಗಳಿದ್ದರು. ಆ ಬಸ್​ನಲ್ಲಿ 12ಕ್ಕೂ ಹೆಚ್ಚು ಬೇರೆ ಪ್ರಯಾಣಿಕರಿದ್ದರು. ಅವರೆಲ್ಲರೂ ರಾತ್ರಿ ನಿದ್ರೆ ಮಾಡುತ್ತಿದ್ದರು.

ಆಗ ಬಸ್​ನ ಹಿಂದಿನ ಸೀಟ್​ಗೆ ಆಕೆಯನ್ನು ಎಳೆದೊಯ್ದು ಚಾಲಕರಿಬ್ಬರೂ ಅತ್ಯಾಚಾರವೆಸಗಿದ್ದಾರೆ. ಕಿರುಚಿಕೊಂಡರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಮಕ್ಕಳನ್ನು ಮುಂದಿಟ್ಟುಕೊಂಡು ಹೆದರಿಸಿ, ಈ ಕೃತ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಇಬ್ಬರು ಚಾಲಕರು, ಕಂಡಕ್ಟರ್, ಕ್ಲೀನರ್ ವಿರುದ್ಧ ಎಫ್​ಐಆರ್ ದಾಖಲಿಸಿಕೊಳ್ಳಲಾಗಿದೆ.

 

 
First published: