ಜಾರ್ಖಂಡ್​ನಲ್ಲಿ ಮಹಿಳೆ ಮೇಲೆ 17 ಮಂದಿಯಿಂದ ಸಾಮೂಹಿಕ ಅತ್ಯಾಚಾರ

ವಿವಾಹಿತ ಮಹಿಳೆಯ ಮೇಲೆ ಆಕೆಯ ಗಂಡನ ಎದುರೇ 17 ಮಂದಿ ಗ್ಯಾಂಗ್ ರೇಪ್ ಎಸಗಿದರೆನ್ನಲಾದ ಘಟನೆ ಜಾರ್ಖಂಡ್​ನ ದುಮ್ಕ ಜಿಲ್ಲೆಯಲ್ಲಿ ಮೊನ್ನೆ ರಾತ್ರಿ ನಡೆದಿದೆ. ಎರಡು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಬೇಕೆಂದು ಮಹಿಳಾ ಆಯೋಗ ಪೊಲೀಸರಿಗೆ ಸೂಚಿಸಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • News18
 • Last Updated :
 • Share this:
  ನವದೆಹಲಿ: ಮಾರುಕಟ್ಟೆಯಿಂದ ಗಂಡನ ಜೊತೆ ಮನೆಗೆ ವಾಪಸ್ ಹೋಗುತ್ತಿದ್ದ ಮಹಿಳೆಯೊಬ್ಬರ ಮೇಲೆ 17 ಮಂದಿ ಗ್ಯಾಂಗ್ ರೇಪ್ ಮಾಡಿರುವ ಪೈಶಾಚಿಕ ಘಟನೆ ಜಾರ್ಖಂಡ್​ನ ದುಮ್ಕ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಮಂಗಳವಾರ ರಾತ್ರಿ ನಡೆದ ಈ ಘಟನೆಯಲ್ಲಿ ದುರುಳರು ಮಹಿಳೆಯ ಗಂಡನನ್ನು ಬಂಧನದಲ್ಲಿಟ್ಟು ಅಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎರಡು ತಿಂಗಳಲ್ಲಿ ಪ್ರಕರಣದ ತನಿಖೆ ಪೂರ್ಣಗೊಳಿಸಬೇಕೆಂದು ಜಾರ್ಖಂಡ್ ಪೊಲೀಸರಿಗೆ ಸೂಚನೆ ನೀಡಿದೆ.

  ಅತ್ಯಾಚಾರಕ್ಕೊಳಗಾಘದ ಮಹಿಳೆ ನೀಡಿದ ಹೇಳಿಕೆ ಪ್ರಕಾರ ಆರೋಪಿಗಳು ಕುಡಿದಿದ್ದರೆನ್ನಲಾಗಿದೆ. ಮಹಿಳಾ ಆಯೋಗ ಸುಮೋಟೋ ಆಗಿ ಪ್ರಕರಣವನ್ನು ಪರಿಗಣಿಸಿದೆ. ಲೈಂಗಿಕ ಹಲ್ಲೆ ಪ್ರಕರಣಗಳಲ್ಲಿ ಕೇಂದ್ರ ಗೃಹ ಸಚಿವಾಲಯದ ಮಾರ್ಗದರ್ಶಿ ಪ್ರಕಾರ ಎರಡು ತಿಂಗಳಲ್ಲಿ ತನಿಖೆ ನಡೆಸಬೇಕೆಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಜಾರ್ಖಂಡ್ ಡಿಜಿಪಿಗೆ ಪತ್ರ ಬರೆದಿದ್ದಾರೆ. ಹಾಗೆಯೇ ಈ ಪ್ರಕರಣದಲ್ಲಿ ಪೊಲೀಸರು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ವರದಿ ನೀಡುವಂತೆ ತಿಳಿಸಿದ್ದಾರೆ.

  ಇದನ್ನೂ ಓದಿ: Sir W Arthur Lewis: ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಸರ್ ಡಬ್ಲು ಅರ್ಥೂರ್ ಲೆವಿಸ್​ಗೆ ಗೂಗಲ್ ಡೂಡಲ್ ಗೌರವ

  ಸಂತ್ರಸ್ತೆ ನೀಡಿರುವ ದೂರಿನ ಮೇರೆಗೆ ಪೊಲೀಸರು 17 ಮಂದಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ ಒಬ್ಬ ಆರೋಪಿಯನ್ನು ಗುರುತಿಸಿದ್ದು, ಅದರ ಆಧಾರದ ಮೇಲೆ ಆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ, ಮಹಿಳೆ ತನ್ನ ಹೇಳಿಕೆಯನ್ನ ಬದಲಿಸುತ್ತಿದ್ದಾರೆ ಎಂದೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೊದಲಿಗೆ ಐವರು ವ್ಯಕ್ತಿಗಳು ಅತ್ಯಾಚಾರ ಎಸಗಿದ್ದರೆಂದು ಹೇಳಿದ್ದ ಆ ಮಹಿಳೆ ನಂತರ 17 ಮಂದಿ ಎಂದು ಹೇಳಿಕೆ ಬದಲಾಯಿಸಿದರು ಎಂದು ಡಿಐಜಿ ಮಾಹಿತಿ ನೀಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
  Published by:Vijayasarthy SN
  First published: