ರಾಂಚಿ (ಸೆ. 13): ಮಹಾರಾಷ್ಟ್ರದ ಸಕಿನಾಕಾದ ಸಾಮೂಹಿಕ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಂತಹದ್ದೆ ಕೃತ್ಯ ಬಿಹಾರದ ಭಾಗಲ್ಪುರದಲ್ಲಿ ( Bihar’s Bhagalpur) ನಡೆದಿದೆ. ವ್ಯಕ್ತಿಯೊಬ್ಬ 500 ರೂ ಹಪ್ತಾ ಕೊಡಲು ನಿರಾಕರಿಸಿದ ಕಾರಣಕ್ಕೆ ಆತನ ಹೆಂಡತಿ ಮೇಲೆ ಇಬ್ಬರು ಕೀಚಕರು ಸಾಮೂಹಿಕ ಅತ್ಯಾಚಾರ (gangrape) ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಶನಿವಾರ ರಾತ್ರಿ 25 ವರ್ಷದ ಮಹಿಳೆ ಮೇಲೆ ಇಬ್ಬರು ವ್ಯಕ್ತಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಿರುವ ಮಹಿಳೆ ಸಾವನ್ ಯಾದವ್ ಮತ್ತು ಕನ್ಹಯ್ಯ ಎಂಬ ಇಬ್ಬರು ಈ ಕೃತ್ಯ ನಡೆಸಿರುವುದಾಗಿ ತಿಳಿಸಿದ್ದಾರೆ. ಈ ಇಬ್ಬರು ಮದ್ಯ ಮತ್ತು ಊಟಕ್ಕಾಗಿ ತನ್ನ ಗಂಡನ ಬಳಿ 500 ರೂ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ ತನ್ನ ಗಂಡ ಹಣ ನೀಡಲು ನಿರಾಕರಿಸಿದರು. ಇದರಿಂದ ಸಿಟ್ಟಿಗೆದ್ದ ಅವರಿಬ್ಬರು ತಮ್ಮ ಪತಿಯನ್ನು ಬಲವಂತವಾಗಿ ಕೊಠಡಿಯೊಂದಕ್ಕೆ ಕರೆದೊಯ್ದು ಹಲ್ಲೆ ನಡೆಸಿದರು.
ಘಟನೆ ನಡೆದ ಕೆಲ ಹೊತ್ತಿನ ನಂತರ ಸಾವನ್ ಬಂದು ನನ್ನ ಬಳಿ ಕ್ಷಮೆ ಯಾಚಿಸಿದ. ಅಲ್ಲದೇ ಕನ್ಹಯ್ಯಾ ನಿಮ್ಮ ಬಳಿ ಕ್ಷಮೆಯಾಚಿಸಲು ಕೇಳುತ್ತಿದ್ದಾರೆ. ಆತನನ್ನು ಭೇಟಿಯಾಗುವಂತೆ ತಿಳಿಸಿದ. ಒಂದು ವೇಳೆ ನೀವು ಕನ್ಹಯ್ಯನನ್ನು ಭೇಟಿಯಾಗದಿದ್ದರೆ ನನ್ನ ಗಂಡನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದರು. ಬೆದರಿದ ನಾನು ಕನ್ಹಯ್ಯನನ್ನು ಭೇಟಿಯಾಗಲು ಮುಂದಾದೆ. ಈ ವೇಳೆ ಕೊಠಡಿಯಲ್ಲಿ ಕೂಡಿ ಹಾಕಿದ್ದ ನನ್ನ ಗಂಡ ತಪ್ಪಿಸಿಕೊಳ್ಳಲು ಸಫಲರಾದರು ಎಂದು ಸಂತ್ರಸ್ತೆ ದೂರಿನಲ್ಲು ಉಲ್ಲೇಖಿಸಿದ್ದಾರೆ.
ಈ ವೇಳೆ ಪಿಸ್ತೂಲ್ ತೋರಿಸಿ ಕನ್ಹಯ್ಯ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ, ಇನ್ನು ಸಾವನ್ ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವಂತೆ ಪ್ರಚೋದಿಸಿದ. ಘಟನೆ ನಡೆದ ಕೆಲ ಹೊತ್ತಿನ ಬಳಿಕ ಅವರಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾದ ಮಹಿಳೆ ಮನೆ ಸಮೀಪದ ಅಭಾಯಾರಣ್ಯಕ್ಕೆ ಓಡಿ ಹೋದಳು. ಈ ವೇಳೆ ಆಕೆಗೆ ದಾರಿ ಹೋಕರು ಬಟ್ಟೆ ನೀಡಿದ್ದಾರೆ. ಬಳಿಕ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ.
ಇದನ್ನು ಓದಿ: ಯಾದಗಿರಿ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಪರಿಚಿತರಿಂದಲೇ ನಡೆದಿತ್ತಾ ಕೃತ್ಯ?
ದೂರಿನ ಬಳಿಕ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನು ಆರೋಪಿಗಳ ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ. ಅಲ್ಲದೇ, ಆರೋಪಿಗಳು ಯಾವುದಾದರೂ ಕ್ರಿಮಿನಲ್ ಬ್ಯಾಗ್ರೌಂಡ್ ಹೊಂದಿದ್ದಾರಾ ಎಂಬ ಬಗ್ಗೆ ಕೂಡ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕರ್ನಾಟಕ ಯಾದಗಿರಿಯ ಶಹಾಪುರದಲ್ಲಿ ಕೂಡ ಕಳೆದ ಎಂಟು ಒಂಭತ್ತು ತಿಂಗಳ ಹಿಂದೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಡಿಯೋವೊಂದು ವೈರಲ್ ಆಗಿದ್ದು, ಈ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಶಹಾಪುರ ಹೊರವಯಲದಲ್ಲಿ ಸಂತ್ರಸ್ತೆ ಯುವತಿ ಬಸ್ಗೆ ಕಾಯುತ್ತಿದ್ದಾಗ ಆಕೆಯನ್ನು ಅಪಹರಣ ಮಾಡಲಾಗಿದೆ. ಈ ವೇಳೆ ಆಕೆಯನ್ನು ನಗ್ನಗೊಳಿಸಿ ಕಬ್ಬಿನ ಜಲ್ಲೆಯಿಂದ ಹಲ್ಲೆ ಮಾಡಲಾಗಿದೆ. ಬಳಿಕ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಈ ಸಂಪೂರ್ಣ ಘಟನೆಯನ್ನು ವಿಡಿಯೋ ಮಾಡಲಾಗಿದೆ. ಈ ವಿಡಿಯೋ ಇಂದು ವೈರಲ್ ಆದ ಬಳಿಕ ಪ್ರಕರಣ ಬೆನ್ನತ್ತಿದ ಪೊಲೀಸರು ಆರೋಪಿಗಳ ಬಂಧಿಸಿದ್ದಾರೆ. ಇದು ಹಳೆಯ ಪ್ರಕರಣವಾಗಿದ್ದು, ಈ ಸಂಬಂಧ ಸಂತ್ರಸ್ತೆ ದೂರು ಸಲ್ಲಿಕೆ ಮಾಡಿರಲಿಲ್ಲ. ಈಗ ವಿಡಿಯೋ ವೈರಲ್ ಆಗಿದ್ದು, ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ