HOME » NEWS » National-international » WOMAN FROM HARYANA ESCAPED BEING RUN OVER BY A MOVING TRAIN BY LYING DOWN ON THE RAILWAY TRACKS VIDEO VIRAL STG HG

Viral Video: ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿ ಬಚಾವಾದ ಹರಿಯಾಣದ ಮಹಿಳೆ!

ಚಲಿಸುವ ಗೂಡ್ಸ್ ರೈಲಿನ ಕೆಳಗೆ, ರೈಲ್ವೆ ಹಳಿ ಮೇಲೆ ಮಲಗಿಕೊಂಡು ಮಹಿಳೆಯೊಬ್ಬಳು ತನ್ನ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದ್ದು, ಅದೃಷ್ಟವಶಾತ್ ಬಚಾವಾಗಿದ್ದಾರೆ. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ

news18-kannada
Updated:February 19, 2021, 10:47 AM IST
Viral Video: ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿ ಬಚಾವಾದ ಹರಿಯಾಣದ ಮಹಿಳೆ!
Photo: Twitter
  • Share this:
ರೈಲಿಗೆ ಸಿಲುಕಿ ಮನುಷ್ಯರು ಹಾಗೂ ಪ್ರಾಣಿಗಳು ಮೃತಪಡುವ ವರದಿಗಳನ್ನು ಓದುತ್ತಲೇ ಇರುತ್ತೇವೆ. ಇನ್ನು, ಕೆಲವರು ಇನ್ನೇನು ರೈಲಿಗೆ ಸಿಲುಕಲಿದ್ದಾರೆ ಎನ್ನುವಷ್ಟರಲ್ಲಿ ಬಚಾವಾದ ಸಂಗತಿಯನ್ನು ನೋಡಿರುತ್ತೇವೆ. ಅದರಂತೆ ಹರಿಯಾಣದ ಮಹಿಳೆಯೊಬ್ಬರು ಚಲಿಸುವ ರೈಲಿನ ಕೆಳಗಿನಿಂದ ಬಚಾವಾಗಿದ್ದಾರೆ. ಈ ಭಯಾನಕ ಸಾಹಸ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಚಲಿಸುವ ಗೂಡ್ಸ್ ರೈಲಿನ ಕೆಳಗೆ, ರೈಲ್ವೆ ಹಳಿ ಮೇಲೆ ಮಲಗಿಕೊಂಡು ಮಹಿಳೆಯೊಬ್ಬಳು ತನ್ನ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದ್ದು, ಅದೃಷ್ಟವಶಾತ್ ಬಚಾವಾಗಿದ್ದಾರೆ. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಹರ್ಯಾಣದ ರೋಹ್ಟಕ್‌ನಲ್ಲಿ ನಡೆದಿದ್ದು, ಸುದ್ದಿ ಸಂಸ್ಥೆ ಎಎನ್‌ಐ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ಸ್ಥಳಿಯರು ಆಕೆಗೆ ಎಚ್ಚರಿಸುತ್ತಿದ್ದರೂ ಆಕೆ ಗೂಡ್ಸ್ ರೈಲಿನ ಕೆಳಗೆ ಹೋಗಿ ಹಳಿ ದಾಟುವ ಪ್ರಯತ್ನ ಮಾಡಿದ್ದಾಳೆ.

ಮಹಿಳೆ ಚಲಿಸುವ ರೈಲಿನ ಕೆಳಗೆ ಸಿಕ್ಕಿಹಾಕಿಕೊಂಡು ಅದರ ಕೆಳಗೆ ಮಲಗಿ ತನ್ನ ಜೀವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದಳು. ರೈಲು ಅದಕ್ಕೂ ಮುಂಚೆ ನಿಂತುಕೊಂಡಿತ್ತು ಹಾಗೂ ಸಿಗ್ನಲ್‌ಗಾಗಿ ಕಾಯುತ್ತಿತ್ತು. ಈ ವೇಳೆ ರೈಲಿನ ಕೆಳಗೆ ಹೋಗುವ ಮೂಲಕ ಅದನ್ನು ದಾಟಲು ಪ್ರಯತ್ನಿಸಿದ್ದಾಳೆ ಆ ಮಹಿಳೆ. ಈ ವೇಳೆ ಇದ್ದಕ್ಕಿದ್ದಂತೆ ರೈಲು ಚಲಿಸಲು ಪ್ರಾರಂಭಿಸಿದಾಗ, ಮಹಿಳೆ ರೈಲಿನ ಕೆಳಗೆ ಸಿಲುಕಿಕೊಂಡಿದ್ದಾಳೆ ಎಂದು ಎಎನ್‌ಐ ವರದಿ ಮಾಡಿದೆ.

"ಹರಿಯಾಣದ ರೋಹ್ಟಕ್‌ನಲ್ಲಿ ಚಲಿಸುವ ರೈಲಿನ ಕೆಳಗೆ ಸಿಕ್ಕಿಬಿದ್ದ ನಂತರ ಮಹಿಳೆಯೊಬ್ಬಳು ರೈಲ್ವೆ ಹಳಿ ಮೇಲೆ ಮಲಗಿಕೊಂಡು ತನ್ನ ಜೀವವನ್ನು ಉಳಿಸಿಕೊಂಡಿದ್ದಾಳೆ. ರೈಲು ಮೊದಲು ಸ್ಟ್ಯಾಂಡ್‌ಬೈನಲ್ಲಿತ್ತು, ಸಿಗ್ನಲ್‌ಗಾಗಿ ಕಾಯುತ್ತಿತ್ತು. ಈ ವೇಳೆ ಮಹಿಳೆ ರೈಲ್ವೆ ಹಳಿ ದಾಟಲು ಪ್ರಯತ್ನಿಸಿದ್ದಾಳೆ. ರೈಲು ಇದ್ದಕ್ಕಿದ್ದಂತೆ ಚಲಿಸಲು ಪ್ರಾರಂಭಿಸಿದಾಗ ಆಕೆ ರೈಲಿನ ಕೆಳಗಿದ್ದಳು'' ಎಂದು ಸುದ್ದಿಸಂಸ್ಥೆ ಎಎನ್‌ಐ ಟ್ವೀಟ್‌ ಮಾಡಿದೆ.

ರೈಲು ನಿಧಾನವಾಗಿ ಚಲಿಸುವಾಗ ಮಹಿಳೆ ರೈಲ್ವೆ ಹಳಿಗಳಲ್ಲಿ ಮುಖಾಮುಖಿಯಾಗಿ ಮಲಗಿರುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ಹತ್ತಿರದ ಜನಸಮೂಹವು ಅವಳನ್ನು ನೋಡುತ್ತಿರುವುದನ್ನು ಮತ್ತು ಅಲ್ಲಿಯೇ ಇರಲು ನಿರ್ದೇಶಿಸುವುದನ್ನು ನೋಡಬಹುದು. ರೈಲು ಅಲ್ಲಿಂದ ನಿರ್ಗಮಿಸಿದ ಕೂಡಲೇ ಮಹಿಳೆ ಅಲ್ಲಿಂದ ಮೇಲಕ್ಕೇಳಲು ಸುರಕ್ಷಿತವಾದಾಗ, ಜನಸಮೂಹವು ಆಕೆಗೆ ಎದ್ದು ನಿಲ್ಲಲು ಸಹಾಯ ಮಾಡುತ್ತದೆ.

ಇಂಟರ್‌ನೆಟ್‌ನಲ್ಲಿ ಜನರ ಪ್ರತಿಕ್ರಿಯೆ ಹೀಗಿದೆ..ಈ ವೈರಲ್‌ ವಿಡಿಯೋ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದ್ದು, ಐದು ಸಾವಿರಕ್ಕೂ ಹೆಚ್ಚು ಜನ ಲೈಕ್‌ ಮಾಡಿದ್ದರೆ, ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್‌ ಮಾಡಿದ್ದಾರೆ. ಘಟನೆಯ ಬಗ್ಗೆ ಹಲವಾರು ನೆಟ್ಟಿಗರು ಕಾಮೆಂಟ್‌ ಮೂಲಕ ತಮ್ಮ ಆಘಾತ ವ್ಯಕ್ತಪಡಿಸಿದ್ದಾರೆ. ಕೆಲವರು ಮಹಿಳೆಯ ಅಜಾಗರೂಕತೆಗೆ ಟೀಕಿಸಿದ್ದಾರೆ.
Published by: Harshith AS
First published: February 19, 2021, 10:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories