Massage To Police: ಠಾಣೆಯ ಒಳಗೆ ಶರ್ಟ್​ ಬಿಚ್ಚಿ ಮಹಿಳೆಯಿಂದ ಬಲವಂತ ಮಸಾಜ್ ಮಾಡಿಸ್ಕೊಂಡ ಪೊಲೀಸ್, ವಿಡಿಯೋ ವೈರಲ್

ಪೊಲೀಸ್ ಅಧಿಕಾರಿ ಠಾಣೆಯ ಒಳಗೇ ಶರ್ಟ್ ಬಿಚ್ಚಿ ಮಹಿಳೆ ಕೈಯಿಂದ ಬಲವಂತವಾಗಿ ಮಸಾಜ್ ಮಾಡಿಸಿಕೊಂಡಿದ್ದಾರೆ. ಬಿಹಾರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದ ಮಹಿಳೆಯಿಂದ ಪೊಲೀಸ್ ಠಾಣೆಯೊಳಗೆ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪೊಲೀಸರು (Police) ಎಂದರೆ ಈಗ ಜನಸ್ನೇಹಿ. ಈಗ ಹಿಂದಿನಂತೆ ಜನರು ಪೊಲೀಸ್ ಬಳಿ ಹೋಗಲು ಹೆದರುವ ಸ್ಥಿತಿ ಇಲ್ಲ, ಪೊಲೀಸರು ಜನಸ್ನೇಹಿಗಳಾಗಿ ಕೆಲಸ ಮಾಡಲು ಆರಂಭಿಸಿದ್ದಾರೆ. ಆದರೂ ಎಲ್ಲಾ ಅಧಿಕಾರಿಗಳೂ ಒಳ್ಳೆಯವರೇ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೆ ಸ್ಪಷ್ಟ ಉದಾಹರಣೆಯಾಗುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಪೊಲೀಸ್ ಅಧಿಕಾರಿ ಠಾಣೆಯ ಒಳಗೇ ಶರ್ಟ್ (Shirt) ಬಿಚ್ಚಿ ಮಹಿಳೆ ಕೈಯಿಂದ ಬಲವಂತವಾಗಿ ಮಸಾಜ್ (Massage) ಮಾಡಿಸಿಕೊಂಡಿದ್ದಾರೆ. ಬಿಹಾರದ (Bihar) ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದ ಮಹಿಳೆಯಿಂದ ಪೊಲೀಸ್ ಠಾಣೆಯೊಳಗೆ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ (Viral) ಆದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ. ರಾಜ್ಯದ ಸಹರ್ಸಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ನೌಹಟ್ಟಾ ಪೊಲೀಸ್ ಠಾಣೆಯ ದರ್ಹಾರ್ ಔಟ್‌ಪೋಸ್ಟ್‌ನ ಹಿರಿಯ ಅಧಿಕಾರಿ ಶಶಿಭೂಷಣ ಸಿನ್ಹಾ ಅವರು ಶರ್ಟ್ ಇಲ್ಲದೆ ಮಸಾಜ್ ಸ್ವೀಕರಿಸುವಾಗ ಫೋನ್‌ನಲ್ಲಿ ಮಾತನಾಡುತ್ತಿರುವುದು ಕ್ಲಿಪ್‌ನಲ್ಲಿ ಕಂಡುಬಂದಿದೆ.

ಪೊಲೀಸ್ ಔಟ್‌ಪೋಸ್ಟ್‌ನಲ್ಲಿರುವ ವಸತಿ ಕ್ವಾರ್ಟರ್ಸ್‌ನಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ವಿಡಿಯೋ ವೈರಲ್ ಆದ ನಂತರ ಸಹರ್ಸಾ ಪೊಲೀಸ್ ವರಿಷ್ಠಾಧಿಕಾರಿ ಲಿಪಿ ಸಿಂಗ್ ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ.

ಬರಿಮೈಯಲ್ಲಿ ಮಸಾಜ್

3 ಸೆಕೆಂಡುಗಳ ವೈರಲ್ ವೀಡಿಯೊದಲ್ಲಿ, ಮಹಿಳೆಯೊಬ್ಬರು ಶಶಿಭೂಷಣ ಸಿನ್ಹಾ ಅವರು ಪೊಲೀಸ್ ಠಾಣೆಯಲ್ಲಿ ಬರಿ-ಎದೆಯಲ್ಲಿ ಕುಳಿತು ಮಸಾಜ್ ಮಾಡುತ್ತಿರುವುದನ್ನು ಕಾಣಬಹುದು.

ಮಗನ ಬಿಡಿಸಿಕೊಳ್ಳಲು ಬಂದಿದ್ದ ತಾಯಿ

ವರದಿಗಳ ಪ್ರಕಾರ, ಮಹಿಳೆ ತನ್ನ ಮಗನನ್ನು ಜೈಲಿನಿಂದ ಬಿಡುಗಡೆ ಮಾಡಲು ಪೊಲೀಸ್ ಠಾಣೆಗೆ ಬಂದಿದ್ದಳು. ಆಗ ಶಶಿಭೂಷಣ ಸಿನ್ಹಾ ಅವರಿಗೆ ಮಸಾಜ್ ಮಾಡುವಂತೆ ಹೇಳಿದ್ದರು. ಶೀಘ್ರದಲ್ಲೇ ತನ್ನ ಮಗ ಜೈಲಿನಿಂದ ಹೊರಬರುತ್ತಾನೆ ಎಂದು ಅವರು ಭರವಸೆ ನೀಡಿದರು.

ಜಾರ್ಖಂಡ್‌ನ ಖುಂತಿ ಜಿಲ್ಲೆಯಲ್ಲಿ 12 ವರ್ಷದ ಬಾಲಕನೊಬ್ಬ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು (Police) ಮಂಗಳವಾರ ತಿಳಿಸಿದ್ದಾರೆ. ಬಾಲಕಿ ತನ್ನ ಮನೆಯ ಸಮೀಪದ ಅಂಗಡಿಯೊಂದಕ್ಕೆ ತಂಪು ಪಾನೀಯ ಖರೀದಿಸಲು (Cool Drinks) ಹೋದಾಗ ಅಲ್ಲಿ ಒಬ್ಬನೇ ಇದ್ದ ಹುಡುಗ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಅವರು ಹೇಳಿದ್ದಾರೆ. ಶನಿವಾರದಂದು ತೋರ್ಪಾ ಪೊಲೀಸ್ ಠಾಣಾ (Police Station) ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಜಿಲ್ಲೆಯಾದ್ಯಂತ ಬೆಚ್ಚಿಬೀಳಿಸಿದೆ.

ಇದನ್ನೂ ಓದಿ: Crime News: ಮನೆಯ ಹತ್ತಿರ ಉಗುಳಿದ್ದಕ್ಕೆ ನೆರೆ ಮನೆಯ ಬಾಲಕನ ಉಸಿರುಕಟ್ಟಿಸಿ ಕೊಂದ

ಭಾನುವಾರ ಬಾಲಕನನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮನ್ ಕುಮಾರ್ ಹೇಳಿದ್ದಾರೆ. ರಿಮಾಂಡ್ ಮೇಲೆ ಬಾಲಕನನ್ನು ರಾಂಚಿಯ ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಹುಟ್ಟುಹಬ್ಬದ ಪಾರ್ಟಿಯಲ್ಲಿ 14 ವರ್ಷದ ಅಪ್ರಾಪ್ತೆ ಅತ್ಯಾಚಾರಕ್ಕೆ (Minor Rape) ಒಳಗಾಗಿದ್ದು, ಆಕೆ ಸಾವನ್ನಪ್ಪಿರುವ ದಾರುಣ ಘಟನೆ ಪಶ್ಚಿಮ ಬಂಗಾಳದ (West Bengal) ನಾಡಿಯಾ (Nadiya) ಜಿಲ್ಲೆಯ ಹನ್ಸ್​ಖಾಲಿಯಲ್ಲಿ ನಡೆದಿದೆ. ಬಾಲಕಿ ಸಾವನ್ನಪ್ಪಿದ ಬಳಿಕ ಸ್ಥಳೀಯ ಮುಖಂಡರ ಒತ್ತಡ ಮೇರೆಗೆ ಪೊಲೀಸರು ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸದೇ ಬಲವಂತವಾಗಿ ಅಂತ್ಯಕ್ರಿಯೆ ಮಾಡಿಸಿದ್ದಾರೆ. ಈ ಘಟನೆ ಸಂಬಂಧ ಕಲ್ಕತ್ತಾ ಹೈ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಕ್ಕೆ ಆಗ್ರಹಿಸಲಾಗಿದೆ.

ಇದನ್ನೂ ಓದಿ: Shot Dead: ಗುಂಡಿಟ್ಟು BJP ನಾಯಕನ ಕೊಲೆ, ತನ್ನದೇ ಮನೆಮುಂದೆ ಸಾವು

ಆರೋಪಿ ವಶಕ್ಕೆ

ಪ್ರಕರಣ ನಡೆದು ನಾಲ್ಕು ದಿನಗಳ ಆದ ಬಳಿಕ ಸಂತ್ರಸ್ತೆ ಪೋಷಕರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧ ಮುಖ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ರಜಗೋಪಾಲ್ ಅಲಿಯಾಸ್ ಸೊಹೈಲ್ ಗಯಾಲಿ ಎಂಬಾಂತನನ್ನು ಪೊಲೀಸರು ವಶಕ್ಕೆ ಪಡೆದಿತ್ತು ಈಗನ ವಿರುದ್ಧ ಅತ್ಯಾಚಾರ, ಕೊಲೆ ಮತ್ತು ಸಾಕ್ಷ್ಯಾಧಾರಗಳ ನಾಶ ಸೇರಿದಂತೆ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published by:Divya D
First published: