Dance Video Viral: ಐಸಿಯುನಲ್ಲಿದ್ದ ಪದ್ಮಶ್ರೀ ಪುರಸ್ಕೃತೆಗೆ ಡ್ಯಾನ್ಸ್ ಮಾಡುವಂತೆ ಒತ್ತಾಯ, ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ

ಸರ್ಕಾರಿ ಆಸ್ಪತ್ರೆ ಐಸಿಯುನಲ್ಲಿ ಮಹಿಳೆಯೊಬ್ಬರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಮಲಾ ಪೂಜಾರಿ ಅವರೊಂದಿಗೆ ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಮಲಾ ಪೂಜಾರಿ ಈ ಬಗ್ಗೆ ಮಾತನಾಡಿದ್ದಾರೆ. ನನ್ನನ್ನು ಡ್ಯಾನ್ಸ್ ಮಾಡುವಂತೆ ಬಲವಂತ ಮಾಡಿದರು ಎಂದು ಹೇಳಿದ್ದಾರೆ.

ಐಸಿಯು ವಾರ್ಡ್ ನಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಮಲಾ ಪೂಜಾರಿ

ಐಸಿಯು ವಾರ್ಡ್ ನಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಮಲಾ ಪೂಜಾರಿ

 • Share this:
  ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಮಲಾ ಪೂಜಾರಿ (Padma Shree Awarded Kamala Pujari) ಅವರು ಕಟಕ್‌ನ ಎಸ್‌ ಸಿಬಿ ಮೆಡಿಕಲ್‌ ನ ಐಸಿಯುನಲ್ಲಿ ಡ್ಯಾನ್ಸ್ (ICU Dance) ಮಾಡಿದ್ದ ವಿಡಿಯೋ ವೈರಲ್ (Video Viral) ಆಗಿತ್ತು. ವಿಡಿಯೋ ವೈರಲ್ ಆದ ಬೆನ್ನಲ್ಲೇ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಮಲಾ ಪೂಜಾರಿ ಅವರನ್ನು ಆಸ್ಪತ್ರೆಯಲ್ಲಿ ಡಿಸ್ಚಾರ್ಜ್ (Discharge) ಮಾಡುವ ಮೊದಲು ಬಲವಂತವಾಗಿ ನೃತ್ಯ ಮಾಡುವಂತೆ ಒತ್ತಾಯಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಇದೀಗ ಪರ್ಜಾ ಬುಡಕಟ್ಟು ಸಮುದಾಯದ ಜನರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಮಲಾ ಪೂಜಾರಿ ಅವರನ್ನು ಒತ್ತಾಯಪೂರ್ವಕವಾಗಿ ಡ್ಯಾನ್ಸ್ ಮಾಡಿಸಿದ್ದರ ವಿರುದ್ಧ ಹರಿಹಾಯ್ದಿದ್ದಾರೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

   ನನ್ನನ್ನು ಡ್ಯಾನ್ಸ್ ಮಾಡುವಂತೆ ಬಲವಂತ ಮಾಡಿದರು- ಕಮಲಾ ಪೂಜಾರಿ

  ಸರ್ಕಾರಿ ಆಸ್ಪತ್ರೆ ಐಸಿಯುನಲ್ಲಿ ಮಹಿಳೆಯೊಬ್ಬರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಮಲಾ ಪೂಜಾರಿ ಅವರೊಂದಿಗೆ ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಮಲಾ ಪೂಜಾರಿ ಈ ಬಗ್ಗೆ ಮಾತನಾಡಿದ್ದಾರೆ. ‘ನನ್ನನ್ನು ಡ್ಯಾನ್ಸ್ ಮಾಡುವಂತೆ ಬಲವಂತ ಮಾಡಿದರು’ ಎಂದು ಕಮಲಾ ಪೂಜಾರಿ ಹೇಳಿದ್ದಾರೆ.

  ನೃತ್ಯದ ಬಗ್ಗೆ ನಾನು ಏನನ್ನೂ ಮಾತನಾಡಿಲ್ಲ ಎಂದು ಹೇಳಿದ್ದಾರೆ. ನಾನು ಬಲವಂತವಾಗಿ ನೃತ್ಯ ಮಾಡಿದ್ದೆ. ನಾನು ನಿರಾಕರಿಸಿದರೂ ಸಮಾಜ ಸೇವಕಿ ಮಮತಾ ಬೆಹೆರಾ ನನ್ನ ಮಾತು ಕೇಳಲಿಲ್ಲ. ನಾನು ಅನಾರೋಗ್ಯದಲ್ಲಿದ್ದರೂ ಅದನ್ನು ತಿಳಿದ ನಂತರವೂ ಡ್ಯಾನ್ಸ್ ಮಾಡುವಂತೆ ಬಲವಂತ ಮಾಡಿದರು. ನೃತ್ಯ ಮಾಡಿದ ನಂತರ ನಾನು ಮತ್ತಷ್ಟು ದಣಿದಿದ್ದೇನೆ ಮತ್ತು ಹೆಚ್ಚು ಅಸ್ವಸ್ಥತೆ ಉಂಟಾಗಿದೆ ಎಂದಿದ್ದಾರೆ.

  ಇದನ್ನೂ ಓದಿ: ಭಾರತಕ್ಕೆ ಇನ್ಮೇಲೆ ಹೊಸ ನೌಕಾಧ್ವಜ! ಸಮುದ್ರದೆಲ್ಲೆಡೆ ಹರಡಲಿದೆ ಕೀರ್ತಿ ಪತಾಕೆ

  ಘಟನೆ ಬಗ್ಗೆ SCB ವೈದ್ಯಕೀಯ ರಿಜಿಸ್ಟ್ರಾರ್ ಪ್ರತಿಕ್ರಿಯೆ

  ಐಸಿಯುನಲ್ಲಿ ಪದ್ಮಶ್ರೀ ಕಮಲಾ ಪೂಜಾರಿ ಅವರು ನೃತ್ಯ ಮಾಡಿದ ಘಟನೆಗೆ ಸಂಬಂಧಿಸಿದಂತೆ ವೀಡಿಯೊ ಇಂಟರ್ನೆಟ್ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ನಂತರ ಈ ವಿಷಯ ಕಾಡ್ಗಿಚ್ಚಿನಂತೆ ಹರಡಿದೆ. ಇದರ ಬಗ್ಗೆ ಎಸ್‌ಸಿಬಿ ವೈದ್ಯಕೀಯ ವಿಭಾಗದ ರಿಜಿಸ್ಟ್ರಾರ್ ಡಾ.ಅವಿನಾಶ್ ರಾವುತ್ ಮೀಡಿಯಾಗೆ ಪ್ರತಿಕ್ರಿಯೆ ನೀಡಿದ್ದಾರೆ.

  ಪದ್ಮಶ್ರೀ ಕಮಲಾ ಪೂಜಾರಿ ಅವರನ್ನು ಕಳೆದ ಆಗಸ್ಟ್ 24 ರಂದು ಬೆಳಗಿನ ಜಾವ 4 ಗಂಟೆಗೆ ಎಸ್‌ಸಿಬಿಗೆ ದಾಖಲಿಸಲಾಯಿತು. ಅವರನ್ನು ವೈದ್ಯಕೀಯ ವಿಭಾಗದ ಐಸಿಯುನಲ್ಲಿ ಪ್ರಸ್ತುತ ಸ್ಟೆಪ್ ಡೌನ್ ಬೆಡ್‌ನಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ. ಅವರ ಮೊಮ್ಮಗ ಧನುಪತಿ ಮತ್ತು ರಾಜೀವ್ ಹೀಲ್ ಎಂಬ ಯುವಕ ಎಸ್‌ಸಿಬಿಯಲ್ಲಿ ಇದ್ದರು.

  ಪರಿಚಿತರು ಎಂದು ವಾರ್ಡ್​ಗೆ ಹೋಗಿದ್ದರು

  ಪದ್ಮಶ್ರೀ ಕಮಲಾ ಪೂಜಾರಿಯವರು ಈ ವಿಶೇಷ ಕ್ಯಾಬಿನ್‌ನಲ್ಲಿ ಮಲಗುತ್ತಿದ್ದರು. ಮತ್ತು ಧನುಪತಿ ಮತ್ತು ರಾಜೀವ್ ಇತರೆ ಎರಡು ಹಾಸಿಗೆಗಳಲ್ಲಿ ಮಲಗುತ್ತಿದ್ದರು. ಆದರೆ ಪದ್ಮಶ್ರೀ ಕಮಲಾ ಪೂಜಾರಿ ಅವರು ಅಡ್ಮಿಟ್ ಆದ ನಂತರ, ಮಹಿಳೆಯೊಬ್ಬರು ತಾವು ಕಮಲಾ ಪೂಜಾರಿ ಅವರು ಪರಿಚಿತರು ಎಂದು ಹೇಳಿ ಕ್ಯಾಬಿನ್ ಒಳಗೆ ಹೋಗಿದ್ದರು.

  ಮಹಿಳೆ ಕ್ಯಾಬಿನ್ ಪ್ರವೇಶ ಮಾಡಿದ ನಂತರ ಕಮಲಾ ಅವರ ಮೊಮ್ಮಗ ಧನುಪತಿ ಮತ್ತು ರಾಜೀವ್ ಹೀಲ್, ಮೆಡಿಕಲ್ ನಲ್ಲಿ ಮಲಗದೆ ಸರ್ಕ್ಯೂಟ್ ಹೌಸ್ ನಲ್ಲಿ ಮಲಗುತ್ತಿದ್ದರು. ಇನ್ನು ಪದ್ಮಶ್ರೀ ಕಮಲಾ ಪೂಜಾರಿ ಅವರನ್ನು ಡಿಸ್ಚಾರ್ಜ್ ಮಾಡಿದ ಬಳಿಕ ಮಹಿಳೆ ಕ್ಯಾಬಿನ್ ಒಳಗೆ ಅವರ ಜೊತೆ ಡ್ಯಾನ್ಸ್ ಮಾಡಿರಬಹುದು. ಈ ಬಗ್ಗೆ ಕಮಲಾ ಅವರ ಮೊಮ್ಮಗನಿಗೆ ಗೊತ್ತಿಲ್ಲದಿರಬಹುದು ಎಂದಿದ್ದಾರೆ.

  ಕಮಲಾ ಐದು ದಿನಗಳ ಕಾಲ SCB ಯಲ್ಲಿದ್ದರು

  ಮಾಹಿತಿಯ ಪ್ರಕಾರ, ಕಮಲಾ ಪೂಜಾರಿ ಅಸ್ವಸ್ಥತೆ ಹಿನ್ನೆಲೆ ಐದು ದಿನ ಕಟಕ್ ಎಸ್‌ಸಿಬಿ ಮೆಡಿಕಲ್‌ಗೆ ದಾಖಲಾಗಿದ್ದರು. ಕಳೆದ ಸೋಮವಾರ ಇಲ್ಲಿಂದ ಡಿಸ್ಚಾರ್ಜ್ ಆಗಿದ್ದರು. ಆಸ್ಪತ್ರೆಯಿಂದ ಹೊರಬಂದ ನಂತರ ಅವರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಕಮಲಾ ಪೂಜಾರಿ ಅವರು ಐಸಿಯುನಲ್ಲಿ ಸಾಮಾಜಿಕ ಕಾರ್ಯಕರ್ತೆ ಮಮತಾ ಬೆಹೆರಾ ನೃತ್ಯ ಮಾಡಿದ್ದಾರೆ.

  ಇದನ್ನೂ ಓದಿ: ಮಂಗಳೂರಲ್ಲಿ ಪ್ರಧಾನಿ ಮೋದಿ; ಲೇಟೆಸ್ಟ್ ಅಪ್​ಡೇಟ್ ಇಲ್ಲಿದೆ

  ಸೂಕ್ತ ಕ್ರಮಕ್ಕೆ ಆಗ್ರಹ

  ಈ ವಿಡಿಯೋ ನೋಡಿದ ವಿವಿಧ ವರ್ಗದ ಜನರು ಅನಾರೋಗ್ಯ ಪೀಡಿತ ಕಮಲಾ ಪೂಜಾರಿ ಅವರನ್ನು ಹೀಗೆ ಬಲವಂತವಾಗಿ ಡ್ಯಾನ್ಸ್ ಮಾಡಿಸಿರುವುದು ಸರಿಯಲ್ಲ. ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಾಪುಟ್ ಪರ್ಜಾ ಸಮಾಜದ ಅಧ್ಯಕ್ಷ ಹರೀಶ್ ಮುದುಳಿ ಆಗ್ರಹಿಸಿದ್ದಾರೆ.
  Published by:renukadariyannavar
  First published: