Woman Luck Shines: ಕಟ್ಟಿಗೆ ಆರಿಸಲು ಕಾಡಿಗೆ ಹೋಗಿದ್ದ ಮಹಿಳೆಯ ಅದೃಷ್ಟ ಖುಲಾಯಿಸಿದ ವಜ್ರ!

ಬುಡಕಟ್ಟು ಮಹಿಳೆ ಅರಣ್ಯಕ್ಕೆ ಹೋದಾಗ ಸಿಕ್ಕ ಆ ಒಂದು ಬೆಲೆ ಬಾಳುವ ರತ್ನ ಮಹಿಳೆಯ ಅದೃಷ್ಟ ಖುಲಾಯಿಸಿದೆ. ಬುಡಕಟ್ಟು ಮಹಿಳೆಯೊಬ್ಬರು ಕಾಡಿನಲ್ಲಿ ಕಟ್ಟಿಗೆ ಆರಿಸಲು ಹೋಗಿದ್ದರು. ಆಗ ಅಲ್ಲಿ ಅವರಿಗೆ ಹೊಳೆಯುವ ವಸ್ತುವೊಂದು ದೊರೆತಿದೆ. ಸಿಕ್ಕಿರುವ ಹೊಳೆಯುವ ವಸ್ತುವನ್ನು ಮನೆಗೆ ತಂದಾಗ ಅದು ವಜ್ರವೆಂದು ಗೊತ್ತಾಗಿದೆ.

ಮಧ್ಯಪ್ರದೇಶದ ಪನ್ನಾ ಕಾಡಿನಲ್ಲಿ ಮಹಿಳೆಗೆ ಸಿಕ್ಕ ವಜ್ರ

ಮಧ್ಯಪ್ರದೇಶದ ಪನ್ನಾ ಕಾಡಿನಲ್ಲಿ ಮಹಿಳೆಗೆ ಸಿಕ್ಕ ವಜ್ರ

  • Share this:
    ಮಧ್ಯಪ್ರದೇಶದ (Madhya Pradesh) ರತ್ನಗರ್ಭ ನಗರವೆಂದೇ (City) ಖ್ಯಾತಿ ಪಡೆದಿರುವ ಪನ್ನಾ (Panna), ಸಾಕಷ್ಟು ಜನರ ಭವಿಷ್ಯ (Future) ಬದಲಾಯಿಸಿದೆ. ಅದೃಷ್ಟ (Luck) ಖುಲಾಯಿಸಿದ ಹಾಗೂ ಬದುಕು ಬದಲಾವಣೆಯ ಸಾವಿರಾರು ಕಥೆಗಳು ಪನ್ನಾದಲ್ಲಿ ಕೇಳಲು ಸಿಗುತ್ತವೆ. ಅಂತಹುದ್ದೇ ಆದರೆ ಸ್ವಲ್ಪ ಡಿಫರೆಂಟ್ ಆಗಿರುವ ಹಾಗೂ ಮಹಿಳೆಯೊಬ್ಬರ ಅದೃಷ್ಟ ಖುಲಾಯಿಸಿದ ಕಥೆಯೊಂದು ಬೆಳಕಿಗೆ ಬಂದಿದೆ. ಬುಡಕಟ್ಟು ಮಹಿಳೆ ಅರಣ್ಯಕ್ಕೆ ಹೋದಾಗ ಸಿಕ್ಕ ಆ ಒಂದು ಬೆಲೆ ಬಾಳುವ ರತ್ನ ಮಹಿಳೆಯ ಅದೃಷ್ಟ ಖುಲಾಯಿಸಿದೆ. ಬುಡಕಟ್ಟು ಮಹಿಳೆಯೊಬ್ಬರು ಕಾಡಿನಲ್ಲಿ ಕಟ್ಟಿಗೆ ಆರಿಸಲು ಹೋಗಿದ್ದರು. ಆಗ ಅಲ್ಲಿ ಅವರಿಗೆ ಹೊಳೆಯುವ ವಸ್ತುವೊಂದು ದೊರೆತಿದೆ.

    ಸಿಕ್ಕಿರುವ ಹೊಳೆಯುವ ವಸ್ತುವನ್ನು ಮನೆಗೆ ತಂದಾಗ ಅದು ವಜ್ರವೆಂದು ಗೊತ್ತಾಗಿದೆ. ವಜ್ರ ಸಿಕ್ಕಿರುವುದು ಮಹಿಳೆಯ ಬಡತನದ ಬದುಕನ್ನು ಕೊಂಚ ಸುಧಾರಿಸುವ ಆಶಯ ಎತ್ತಿ ಹಿಡಿದಿದೆ. ಬಡತನದಲ್ಲಿ ಬೆಂದಿದ್ದ ಮಹಿಳೆ ಮತ್ತು ಕುಟುಂಬದ ಬದುಕಿನ ದಾರಿದ್ರ್ಯ ದೂರವಾಗುವಂತೆ ಕಂಡು ಬಂದಿದೆ. ಅಂದ ಹಾಗೇ ಮಹಿಳೆಗೆ ಸಿಕ್ಕಿರುವ ವಜ್ರದ ಮೌಲ್ಯ 15 ಲಕ್ಷ ರೂಪಾಯಿಗಿಂತ ಹೆಚ್ಚು ಎಂದು ತಿಳಿದು ಬಂದಿದೆ.

    ಕಚೇರಿಯಲ್ಲಿ ವಜ್ರ ಠೇವಣಿ ಇಟ್ಟ ಮಹಿಳೆ

    ಪನ್ನಾ ನಗರಕ್ಕೆ ಹೊಂದಿಕೊಂಡಿರುವ ಪುರುಷೋತ್ತಮಪುರ ಗ್ರಾಮದ ಬುಡಕಟ್ಟು ಮಹಿಳೆ ಐವತ್ತು ವರ್ಷದ ಗೆಂದಾ ಬಾಯಿ ಅವರು ಕಾಡಿನಲ್ಲಿ ಕಟ್ಟಿಗೆ ಆರಿಸುವಾಗ 4.39 ಕ್ಯಾರೆಟ್ ತೂಕದ ರತ್ನದ ಗುಣಮಟ್ಟದ ವಜ್ರ ಸಿಕ್ಕಿದೆ. ಮಹಿಳೆ ತನ್ನ ಪತಿ ಪರ್ಮಲಾಲ್ ಜೊತೆಗೆ ಪನ್ನಾಗೆ ಬಂದು ಕಲೆಕ್ಟರೇಟ್‌ನಲ್ಲಿರುವ ವಜ್ರ ಕಚೇರಿಯಲ್ಲಿ ಠೇವಣಿ ಇಟ್ಟಿದ್ದಾರೆ. ಈ ವಜ್ರದ ಮೌಲ್ಯ 15 ಲಕ್ಷಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ.

    ಇದನ್ನೂ ಓದಿ: ಕಾಯ್ದಿರಿಸಿದ್ದಷ್ಟೇ, ಖರೀದಿಯೇ ಮಾಡದ ಲಾಟರಿಗೆ ಸಿಕ್ತು 75 ಲಕ್ಷ! ಕೇರಳ ಮಹಿಳೆಗೆ ಬಂಪರ್

    ವಜ್ರ ಸಿಕ್ಕಿರುವ ಬಗ್ಗೆ ಮಹಿಳೆ ಹೇಳಿದ್ದು ಹೀಗೆ

    ವಜ್ರ ಸಿಕ್ಕಿದ್ದರಿಂದ ತುಂಬಾ ಸಂತಸವಾಗಿದೆ ಎಂದಿದ್ದಾರೆ ಗೆಂದಾ ಬಾಯಿ. ಮೂರು-ನಾಲ್ಕು ದಿನಗಳ ಹಿಂದೆ ಮರದ ಕಟ್ಟಿಗೆ ಆರಿಸಲು ಪುಖ್ರಿ ಅರಣ್ಯಕ್ಕೆ ಹೋಗಿದ್ದೆ. ಕಾಡಿಗೆ ಹೋಗುವ ದಾರಿಯಲ್ಲಿ ಹೊಳೆಯುವ ವಸ್ತುವೊಂದು ಕಣ್ಣಿಗೆ ಕಂಡಿತು. ಅದನ್ನು ತೆಗೆದುಕೊಂಡು ಮನೆಗೆ ಬಂದೆ. ಅದು ವಜ್ರವೆಂದು ನಮಗೆ ಗೊತ್ತಿರಲಿಲ್ಲ. ಯಾಕೆಂದ್ರೆ ವಜ್ರವನ್ನು ನಾವು ಯಾವತ್ತೂ ನೋಡಿರಲಿಲ್ಲ. ಆದ್ದರಿಂದ ನಾವು ಅದನ್ನು ಗಾಜಿನ ತುಂಡು ಎಂದುಕೊಂಡು ಮನೆಯಲ್ಲಿ ಇಟ್ಟಿದ್ದೆವು.

    ಆದರೆ ನನ್ನ ಪತಿ ಪರ್ಮಲಾಲ್, ಪನ್ನಾಗೆ ಹೋಗಿ ವಜ್ರ ಕಚೇರಿಯಲ್ಲಿ ತೋರಿಸಿದಾಗ ಅದು ಗಾಜಿನ ತುಂಡಲ್ಲ ವಜ್ರ ಎಂದು ತಿಳಿದು ಬಂತು. ಇದನ್ನು ತಿಳಿದು ಗೆಂದಾಬಾಯಿ ಹಾಗೂ ಕುಟುಂಬ ಸಾಕಷ್ಟು ಖುಷಿ ಪಟ್ಟಿದೆ. ತನ್ನ ಹೆಣ್ಣುಮಕ್ಕಳಿಗೆ ಅದ್ಧೂರಿಯಾಗಿ ಮದುವೆ ಮಾಡುತ್ತೇನೆ ಎಂದಿದ್ದಾರೆ.

    50 ವರ್ಷದ ಗೆಂದಾ ಬಾಯಿಗೆ ಒಟ್ಟು ಎಂಟು ಮಕ್ಕಳಿದ್ದಾರೆ. ಹಿರಿಯ ಮಗ 35 ವರ್ಷ. ಆತನಿಗೆ ಮದುವೆಯಾಗಿ ಮಕ್ಕಳಿವೆ. ಪತಿ ಪರ್ಮಲಾಲ್, ಕೂಲಿ ಕೆಲಸ ಮಾಡುತ್ತಾರೆ. ಇಷ್ಟು ದೊಡ್ಡ ಕುಟುಂಬ ಈ ಹಣದುಬ್ಬರದಲ್ಲಿ ಕಷ್ಟಪಟ್ಟು ಬದುಕಬೇಕಾಗಿದೆ.

    ಹೆಣ್ಣು ಮಕ್ಕಳಿಗೆ ಮದುವೆ ಮಾಡುತ್ತೇನೆ

    ತನಗೆ ಆರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂದು ಗೆಂದಾ ಬಾಯಿ ಹೇಳಿದ್ದಾರೆ. ಹಿರಿಯ ಮಗಳಿಗೆ 20 ವರ್ಷ, ಮದುವೆ ಮಾಡಬೇಕಿದೆ. ಹಣದ ಕೊರತೆಯಿಂದ ನಮಗೆ ಮದುವೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಈಗ ಇಬ್ಬರೂ ಹೆಣ್ಣುಮಕ್ಕಳಿಗೆ ಅದ್ಧೂರಿಯಾಗಿ ಮದುವೆ ಮಾಡುತ್ತೇನೆ ಎಂದಿದ್ದಾರೆ.

    ವಜ್ರವನ್ನ ಹರಾಜು ಮಾಡಲಾಗುವುದು

    ಪನ್ನಾ ಡೈಮಂಡ್ ಕಛೇರಿಯ ವಜ್ರದ ರಸಿಕ ಅನುಪಮ್ ಸಿಂಗ್ ಅವರು ಪುರುಷೋತ್ತಮಪುರ ಗ್ರಾಮದ ನಿವಾಸಿ ಗೆಂದಾಬಾಯಿ ಅವರು ಕಾಡಿನಲ್ಲಿ ಬಿದ್ದಿರುವ ಈ ವಜ್ರವನ್ನು ಕಂಡು ಇಂದು ಠೇವಣಿ ಮಾಡಿದ್ದಾರೆ. ರತ್ನದ ಗುಣಮಟ್ಟದ ಈ ರತ್ನವು 4.39 ಕ್ಯಾರೆಟ್‌ ಇದೆ. ವಜ್ರದ ಉತ್ತಮ ಗುಣಮಟ್ಟದ್ದಾಗಿದೆ. ಹರಾಜಿನಲ್ಲಿ ಈ ವಜ್ರಕ್ಕೆ ಉತ್ತಮ ಬೆಲೆ ಸಿಗುವ ನಿರೀಕ್ಷೆಯಿದೆ ಎಂದಿದ್ದಾರೆ ತಜ್ಞರು. ಇದರ ಬೆಲೆ 15 ಲಕ್ಷಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ.

    ಇದನ್ನೂ ಓದಿ: ಕಾಲು ಒದ್ದೆಯಾಗುತ್ತೆ ಅಂತ ವಿದ್ಯಾರ್ಥಿಗಳಿಂದ ಕುರ್ಚಿ ಹಿಡಿಸಿದ ಶಿಕ್ಷಕಿಗೆ ಆಯ್ತು ತಕ್ಕ ಶಾಸ್ತಿ!

    ಮುಂಬರುವ ಹರಾಜಿನಲ್ಲಿ ಈ ವಜ್ರವನ್ನು ಮಾರಾಟಕ್ಕೆ ಇಡಲಾಗುವುದು ಎಂದು ಡೈಮಂಡ್ ಅಧಿಕಾರಿ ರವಿ ಪಟೇಲ್ ತಿಳಿಸಿದ್ದಾರೆ. ಮಾರಾಟದಿಂದ ಸಿಗುವ ಮೊತ್ತದಲ್ಲಿ ಸರ್ಕಾರದ ಧನವನ್ನು ಕಡಿತಗೊಳಿಸಿ ಉಳಿದ ಮೊತ್ತವನ್ನು ಗೆಂದಾಬಾಯಿಗೆ ನೀಡಲಾಗುವುದು ಎಂದಿದ್ದಾರೆ.
    Published by:renukadariyannavar
    First published: