Dance Video: ಡ್ಯಾನ್ಸ್ ಮಾಡುವಾಗ ವೇದಿಕೆಯಲ್ಲಿ ಬಿದ್ದ ಯುವತಿ! ಅಪ್ಪ ಏನ್ ಮಾಡಿದ್ರು ನೋಡಿ, ವಿಡಿಯೋ ವೈರಲ್

ಯುವತಿಯೊಬ್ಬಳು ವೇದಿಕೆಯಲ್ಲಿ ಖುಷಿಯಿಂದ ಡ್ಯಾನ್ಸ್ ಮಾಡುವಾಗ ತಪ್ಪಿ ಬಿದ್ದುಬಿಡುತ್ತಾಳೆ. ತಕ್ಷಣ ಆಕೆಯ ತಂದೆ ಮಾಡಿದ್ದೇನು ನೋಡಿ, ಇಂಥಾ ಅಪ್ಪ ಸಿಗೋಕೂ ಪುಣ್ಯ ಮಾಡಿರಬೇಕು.

ಮಾಡೆಲ್ ನಿಶಾ ಹಾಗೂ ಅವರ ತಂದೆ

ಮಾಡೆಲ್ ನಿಶಾ ಹಾಗೂ ಅವರ ತಂದೆ

  • Share this:
ಅಪ್ಪಂದಿರಿಗೆ (Father) ತಮ್ಮ ಹೆಣ್ಣು ಮಕ್ಕಳೆಂದರೆ ಭಾರೀ ಪ್ರೀತಿ. ಪುಟ್ಟ ಮಗುವಿನಿಂದ (Baby) ಹಿಡಿದು ಮದುವೆ ಮಾಡಿಕೊಟ್ಟ ಮೇಲೂ ಅಪ್ಪನ ಪ್ರೀತಿ ಕಿಂಚಿತ್ತೂ ಕಮ್ಮಿಯಾಗದು. ಅಮ್ಮ ಒಂದೇಟು ಹೊಡೆದರೂ ಸರಿ, ಆದರೆ ಅಪ್ಪ ಮಾತ್ರ ಎಂದೂ ನೋಯಿಸರು. ಹೀಗೊಂಥರಾ ಅಪ್ಪ-ಮಗಳ (Father Daughter) ಬಾಂಧವ್ಯ ಅತ್ಯಂತ ಸುಂದರ. ಇದೀಗ ಸೋಷಿಯಲ್ ಮಿಡಿಯಾದಲ್ಲಿ ಅಪ್ಪ ಮಗಳಿಗೆ ಸಂಬಂಧಿಸಿದ ವಿಡಿಯೋ (Video) ಒಂದು ವೈರಲ್ (Viral) ಆಗಿದೆ. ಇದರಲ್ಲಿ ಅಪ್ಪ ರಿಯಲ್ ಹೀರೋ ಅನ್ನೋದು ಸಿಂಪಲ್ಲಾಗಿ ರಿವೀಲ್ ಆಗಿದೆ. ಅಪ್ಪಂದಿರಿಗೆ ಮಗಳ ಮೇಲಿನ ಪ್ರೀತಿ ತಿಳಿಸಲು ಈ ವಿಡಿಯೋ ಸಾಕು.

ಪೋಷಕರು ತಮ್ಮ ಮಕ್ಕಳನ್ನು ಯಾವಾಗಲೂ ರಕ್ಷಿಸುತ್ತಾರೆ. ಅವರು ಎಷ್ಟೇ ವಯಸ್ಸಾದರೂ ಅಪ್ಪ ಅಮ್ಮ ಮಾತ್ರ ಅವರನ್ನು ಪುಟ್ಟ ಮಕ್ಕಳಂತೆಯೇ ಕಾಣುತ್ತಾರೆ. ಒಬ್ಬ ವ್ಯಕ್ತಿಯು ಚಿಕ್ಕ ಮಗುವಾಗಿದ್ದಾಗ ಇದು ಪ್ರಾರಂಭವಾಗುತ್ತದೆ. ಅವರ ಪೋಷಕರರು ಮಕ್ಕಳ ಕಾಳಜಿಯನ್ನು ವಾಬ್ದಾರಿಯುತವಾಗಿ ಮಾಡುತ್ತಾರೆ. ಪೋಷಕರು ತಮ್ಮ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗುವವರೆಗೆ ಮುಂದುವರಿಯುತ್ತದೆ ಇದು ಹೀಗೆಯೇ ಇರುತ್ತದೆ.

ಇತ್ತೀಚಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊ ವೈರಲ್ ಆಗುತ್ತಿದೆ . ಅಪ್ಪನ ಕಾಳಜಿ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ. ಕೌಟುಂಬಿಕ ಸಮಾರಂಭದಲ್ಲಿ ಯುವತಿಯೊಬ್ಬರು ಹೇಗೆ ಡ್ಯಾನ್ಸ್ ಮಾಡುತ್ತಿದ್ದಾರೆ ಎನ್ನುವುದನ್ನು ಇದರಲ್ಲಿ ಕಾಣಬಹುದು. ಆದರೆ ಅವರ ಡ್ಯಾನ್ಸ್ ಪ್ರದರ್ಶನದ ಸಮಯದಲ್ಲಿ ತಿಳಿಯದೆ ಕಾಲು ಎಡವಿ ಬೀಳುತ್ತಾರೆ.


View this post on Instagram


A post shared by Anisha Nisha (@modelnisha7)


ವಿಡಿಯೋದಲ್ಲಿ ಯುವತಿಯರಿಬ್ಬರು ಉತ್ಸಾಹದಲ್ಲಿ ವೇದಿಕೆಯಲ್ಲಿ ಡ್ಯಾನ್ಸ್ ಮಾಡುವುದನ್ನು ಕಾಣಬಹುದು. ಇದರಲ್ಲಿ ಒಬ್ಬ ಯುವತಿ ಬೀಳುತ್ತಾಳೆ. ಅವಳು ತಕ್ಷಣ ಎದ್ದು ನೃತ್ಯವನ್ನು ಮುಂದುವರೆಸುತ್ತಾಳೆ. ಆದರೆ ವೀಡಿಯೊದಲ್ಲಿ ಹೈಲೈಟ್ ಮಾಡಿರುವುದು ಅವಳ ತಂದೆಯ ಕಡೆಯಿಂದ ಸಿಕ್ಕಿದ ರಕ್ಷಣೆಯನ್ನು.

ಮಗಳ ಹಿಂದೆ ಬಂದು ನಿಂತ ತಂದೆ

ಯುವತಿ ಅತ್ಯಂತ ಕಾನ್ಫಿಡೆನ್ಸ್​ನಿಂದ ಎದ್ದು ಮತ್ತೆ ಡ್ಯಾನ್ಸ್ ಮಾಡುತ್ತಾಳೆ. ಅದೇ ಹೊತ್ತಲ್ಲಿ ಆಕೆಯ ತಂದೆ ನಿಧಾನವಾಗಿ ಬಂದು ತಮ್ಮ ಮಗಳ ಹಿಂದೆ ನಿಂತಿರುವುದನ್ನು ಕಾಣಬಹುದು. ಅವಳು ಮತ್ತೊಮ್ಮೆ ಬೀಳದಂತೆ ನೋಡಿಕೊಳ್ಳಲು ಅವಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಆ ತಂದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

ಈ ವಿಡಿಯೋವನ್ನು ಅನಿಶಾ ನಿಶಾ ಎಂಬ ಮಾಡೆಲ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ಇನ್‌ಸ್ಟಾಗ್ರಾಮ್ ಪುಟದಲ್ಲಿ ಅವರು ಸುಮಾರು 33,000 ಅನುಯಾಯಿಗಳನ್ನು ಹೊಂದಿದ್ದಾರೆ. ಅಲ್ಲಿ ಅವರು ತಮ್ಮ ಮಾಡೆಲಿಂಗ್ ಕಾರ್ಯಯೋಜನೆಗಳು ಮತ್ತು ಸಾಮಾನ್ಯವಾಗಿ ಜೀವನದ ಬಗ್ಗೆ ಪೋಸ್ಟ್ ಮಾಡುತ್ತಾರೆ.

ಇದನ್ನೂ ಓದಿ: Worst Genocides: ಗರ್ಭಿಣಿಯರಿಗೆ ಚಿತ್ರಹಿಂಸೆ ನೀಡುತ್ತಿದ್ದರಂತೆ ಈ ದೇಶದ ಸೈನಿಕರು! ಘಟನೆ ಬಗ್ಗೆ ಕೇಳಿದ್ರೆ ಮೈ ಜುಂ ಎನ್ನುತ್ತೆ

ಆದರೂ ಈ ನಿರ್ದಿಷ್ಟ ವೀಡಿಯೊವು ಅವರ ಹೆಚ್ಚಿನ ಪೋಸ್ಟ್‌ಗಳಿಗಿಂತ ಹೆಚ್ಚು ಪ್ರತಿಕ್ರಿಯೆಗಳನ್ನು ಪಡೆದಿದೆ. ಉತ್ತಮ ಕಾರಣಕ್ಕಾಗಿ ಹಲವಾರು Instagram ಬಳಕೆದಾರರ ಹೃದಯವನ್ನು ಗೆದ್ದಿದೆ. ಈ ವೀಡಿಯೋ ನಿಮ್ಮನ್ನೂ ಭಾವುಕವಾಗಿಸುವುದರಲ್ಲಿ ಸಂದೇಹವೇ ಇಲ್ಲ. "ನನ್ನ ತಂದೆ. ನನ್ನ ಮೊದಲ ಪ್ರೀತಿ, ಎಂದು ವಿಡಿಯೋಗೆ ಶೀರ್ಷಿಕೆಯನ್ನು ನೀಡಲಾಗಿದೆ.

4.51 ಲಕ್ಷಕ್ಕೂ ಹೆಚ್ಚು ಲೈಕ್‌

ಕೇವಲ ಒಂದು ದಿನದ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ ನಂತರ, ವೀಡಿಯೊ 4.51 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Baby Video: ನಾಯಿ ಬೊಗಳೋದನ್ನು ಫಸ್ಟ್ ಟೈಂ ಕೇಳಿದ ಮಗುವಿನ ರಿಯಾಕ್ಷನ್ ಹೀಗಿತ್ತು!

Instagram ನಲ್ಲಿ ಒಬ್ಬ ವ್ಯಕ್ತಿ ಕಮೆಂಟ್ ಮಾಡಿ ಇದು ತುಂಬಾ ಸುಂದರವಾಗಿದೆ. ಇದನ್ನು ನೋಡುವಾಗ ನಾನು ಭಾವುಕನಾದೆ ಎಂದಿದ್ದಾರೆ. ಸುಂದರವಾಗಿದೆ. ಪ್ರೀತಿ ತುಂಬಿದೆ. ನಿಜಕ್ಕೂ ಅಪ್ಪಂದಿರು ಹಾಗೆ ಎಂದು ಮತ್ತೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.
Published by:Divya D
First published: