ಪಾಟ್ನಾ: ಪ್ರೀತಿ-ಪ್ರೇಮದಲ್ಲಿ (Love) ಮುಳುಗಿದ್ದಾಗ ಎಲ್ಲರೂ ಸಂತೋಷವಾಗಿರುತ್ತಾರೆ. ಆದರೆ ಮದುವೆಯ (Marriage) ವಿಷಯ ಬಂದಾಗ ಕೆಲವರ ಬಣ್ಣ ಬಯಲಾಗುತ್ತದೆ. ಇದೇ ರೀತಿ ಎರಡು ವರ್ಷ ಪ್ರೀತಿಸಿ ಕೈಕೊಟ್ಟ ಪ್ರೇಮಿಗೆ (Lover) ಬಿಹಾರದ (Bihar) ಯುವತಿ ತಕ್ಕ ಪಾಠ ಕಲಿಸಿದ್ದಾಳೆ. ಬಿಹಾರದ ಭಾಗಲ್ಪುರ್ (Bihar’s Bhagalpur) ಎಂಬಲ್ಲಿ ಹೈಡ್ರಾಮ ನಡೆದಿದ್ದು, ಯುವತಿಯೊಬ್ಬಳು ತನ್ನ ಪ್ರೇಮಿಯ ಕುತ್ತಿಗೆ ಪಟ್ಟಿ ಹಿಡಿದು ಕಚೇರಿಯಿಂದ ಹೊರಗೆ ಎಳೆದುಕೊಂಡು ಬಂದು ವಿವಾಹವಾಗು ಎಂದು ಬೇಡಿಕೆ ಇಟ್ಟಿದ್ದಾಳೆ. ಹತ್ತಾರು ಮಂದಿ ಈ ದೃಶ್ಯವನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಬಿಹಾರದ ಭಾಗಲ್ಪುರದ ಬಳಿಯ ಬಡೋಟಿಯಾ ಎಂಬ ಹಳ್ಳಿಯ ಯುವತಿ ಕೃಷ್ಣ ಅದೇ ಊರಿನ ರೋಹಿತ್ ಎಂಬಾತನನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಇಬ್ಬರೂ ಎರಡು ವರ್ಷಗಳಿಂದ ಪಿಕ್ನಿಕ್, ಪಬ್ ಅಲ್ಲಿ ಇಲ್ಲಿ ಅಂತಾ ಚೆನ್ನಾಗಿ ಎಂಜಾಯ್ ಮಾಡಿದ್ದಾರೆ. ಆದರೆ ಕೃಷ್ಣ ಕೆಲವು ದಿನಗಳ ಹಿಂದೆ ತನ್ನನ್ನು ಮದುವೆಯಾಗುವಂತೆ ರೋಹಿತ್ ಮೇಲೆ ಒತ್ತಡ ಹೇರಿದ್ದಾಳೆ.
ಇದನ್ನೂ ಓದಿ: Tipu Sultan Sword: ಕೋಟಿ ಕೋಟಿ ರೂಪಾಯಿಗೆ ಮಾರಾಟವಾಗಿ ದಾಖಲೆ ಸೃಷ್ಟಿಸಿದ ಟಿಪ್ಪು ಸುಲ್ತಾನ್ ಖಡ್ಗ!
ಮದುವೆ ಆಗು ಎಂದು ಪ್ರಿಯತಮೆ ಹಠ ಹಿಡಿದಿದ್ದಕ್ಕೆ ರೋಹಿತ್ ಕೂಡಲೇ ಕೃಷ್ಣಾಳ ಹಣೆಗೆ ಕುಂಕುಮ ಹಚ್ಚಿ ಮನೆಗೆ ಕರೆದೊಯ್ದಿದ್ದಾನೆ. ಆದರೆ ರೋಹಿತ್ ಮನೆಯವರು ಈ ಮದುವೆಯನ್ನೂ ಮತ್ತು ಕೃಷ್ಣಳನ್ನು ಒಪ್ಪಿಕೊಂಡಿಲ್ಲ. ಇದರಿಂದ ಕೃಷ್ಣ ರೋಹಿತ್ ಮತ್ತು ಕುಟುಂಬಸ್ಥರ ವಿರುದ್ಧ ಕೋಪಗೊಂಡಿದ್ದಾಳೆ.
ಅತ್ಯಾಚಾರ ದೂರು ದಾಖಲು
ರೋಹಿತ್ ಮನೆಯವರು ಕೃಷ್ಣಳನ್ನು ಒಪ್ಪದೇ, ಮನೆಯವರಿಂದ ಹೊರ ಹಾಕಿದ ನಂತರ, ಕೃಷ್ಣ ತಕ್ಷಣ ಪೊಲೀಸರಿಗೆ ರೋಹಿತ್ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರೋಹಿತ್‌ನನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ. ರೋಹಿತ್ ಕೆಲವು ದಿನಗಳ ನಂತರ ಜಾಮೀನು ಪಡೆದು ಎಂದಿನಂತೆ ಕೆಲಸಕ್ಕೆ ಹೋಗತೊಡಗಿದ್ದ.
ಕಚೇರಿಗೆ ನುಗ್ಗಿ ಎಳೆದುಕೊಂಡ ಬಂದ ಕೃಷ್ಣ
ಬೇಲ್ ಮೇಲೆ ಹೊರ ಬಂದ ರೋಹಿತ್ ಎಲ್ಲವನ್ನು ಮರೆತು ಎಂದಿನಂತೆ ತನ್ನ ಕೆಲಸಕ್ಕೆ ಹೋಗಲು ಶುರು ಮಾಡಿದ್ದ. ಆದರೆ ಕೃಷ್ಣ ಅವನನ್ನು ಬಿಡಲು ಸಿದ್ದಳಿರಲಿಲ್ಲ. ರೋಹಿತ್ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಲೇ ಇದ್ದಳು. ಆದರೆ ರೋಹಿತ್ ತಲೆಕೆಡಿಸಿಕೊಂಡಿರಲಿಲ್ಲ.
ಇದನ್ನೂ ಓದಿ: Viral News: ಕೆಲಸ ಮುಗಿಸಿ ಬಂದಾಗ ಮನೆಯೆಲ್ಲಾ ಕೆಟ್ಟ ವಾಸನೆ! ಸಿಸಿಟಿವಿ ನೋಡಿ ಬೆಚ್ಚಿಬಿದ್ದ ಮಾಲೀಕರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ