Pfizer vaccine: ಫೈಜರ್​ ಕೋವಿಡ್​ ಲಸಿಕೆ ಪಡೆದಿದ್ದ ಮಹಿಳೆ ಸಾವು

ಲಸಿಕೆ ಪಡೆದ ಮಹಿಳೆ ಹೃದಯ ಊರಿಯುತ ಉಂಟಾಗಿ, ಮಯೋಕಾರ್ಡಿಟಿಸ್ ನಿಂದಾಗಿ ಸಾವನ್ನಪ್ಪಿದ್ದಾಳೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಫೈಜರ್ ಕೋವಿಡ್​​​- 19 (Pfizer vaccine)​ ಲಸಿಕೆ ಪಡೆದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನ್ಯೂಜಿಲ್ಯಾಂಡ್​ನಲ್ಲಿ (New Zealand) ನಡೆದಿದೆ. ಲಸಿಕೆ ಪಡೆದ ಮಹಿಳೆ ಹೃದಯ ಊರಿಯುತ ಉಂಟಾಗಿ, ಮಯೋಕಾರ್ಡಿಟಿಸ್ (ಲಘು ಹೃದಯಾಘಾತ) (myocarditis)ನಿಂದಾಗಿ ಸಾವನ್ನಪ್ಪಿದ್ದಾಳೆ ಎಂದು ಲಸಿಕಾ ಸುರಕ್ಷಾತಾ ಮೇಲ್ವಿಚಾರಣಾ ಮಂಡಳಿ ತಿಳಿಸಿದೆ. ಫೈಜರ್​ ಲಸಿಕೆ ಪಡೆದು ಸಾವನ್ನಪ್ಪಿರುವ ಮೊದಲ ಪ್ರಕರಣ ಇದಾಗಿದೆ. ಜೊತೆಗೆ ಲಸಿಕೆ ಪಡೆದ ಬಳಿಕ ಬೀರುವ ವೈದ್ಯಕೀಯ ಸಮಸ್ಯೆಗಳನ್ನು ಮಂಡಳಿ ಪರಿಶೀಲಿಸುವುದಾಗಿ ತಿಳಿಸಿದೆ. ಮಯೋಕಾರ್ಡಿಟಿಸ್ ಅತ್ಯಂತ ಅಪರೂಪದ ಅಡ್ಡ ಪರಿಣಾಮವಾಗಿದೆ. ಇನ್ನ ಈ ಸಾವಿಗೆ ಅಧಿಕೃತ ಕಾರಣ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆದಾಗ್ಯೂ ಮಹಿಳೆ ಲಸಿಕೆ ಪಡೆದ ಕಾರಣದಿಂದಲೇ ಮಯೋಕಾರ್ಡಿಟಿಸ್​ಗೆ ತುತ್ತಾಗಿರಬಹುದು ಎಂದು ಕೋವಿಡ್ -19 ಲಸಿಕೆ ಸ್ವತಂತ್ರ ಸುರಕ್ಷತೆ ನಿರ್ವಹಣಾ ಮಂಡಳಿ ತಿಳಿಸಿದೆ.

    ನ್ಯೂಜಿಲೆಂಡ್​ನಲ್ಲಿ ಫೈಜರ್​​ ಲಸಿಕೆ ಪಡೆದು ಸಾವನ್ನಪ್ಪಿರುವ ಮೊದಲ ಪ್ರಕರಣ ಇದಾಗಿದೆ. ನ್ಯೂಜಿಲ್ಯಾಂಡ್‍ನಲ್ಲಿ ಸುಮಾರು 20 ವರ್ಷಕ್ಕೂ ಹೆಚ್ಚು ಮಂದಿ ಕೋವಿಡ್ ಲಸಿಕೆ ಪಡೆದಿದ್ದು, ಈಗ ನಾನಾ ರೀತಿಯ ಆತಂಕಗಳು ಉದ್ಭವಿಸಿವೆ. ಮೃತಪಟ್ಟ ಮಹಿಳೆಗೆ ವಿವಿಧ ಆರೋಗ್ಯ ಸಮಸ್ಯೆಗಳು ಇರುವುದಾಗಿ ತಿಳಿದು ಬಂದಿತ್ತು. ಮಹಿಳೆಯ ಸಾವಿನ ಕುರಿತು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು, ಮಹಿಳೆಯ ವಯಸ್ಸು ಸೇರಿದಂತೆ ಬೇರೆ ಯಾವ ಆರೋಗ್ಯ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ .

    ಫೈಜರ್​ ಮತ್ತು ಮಾಡರ್ನಾ ಲಸಿಕೆಗಳು ಈ ಮಯೋಕಾರ್ಡಿಟಿಸ್​ ಸಮಸ್ಯೆ ಅಪರೂಪದ ಅಡ್ಡ ಪರಿಣಾಮ ಹೊಂದಿದೆ ಎಂದು ಈಗಾಗಲೇ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ತಿಳಿಸಿತ್ತು. ಅಲ್ಲದೇ ಈ ಯುವ ಪುರುಷರಲ್ಲಿ ಹೆಚ್ಚು ಸಾಮಾನ್ಯವಾಗಿದೆ ಎಂದು ಹೇಳಿತ್ತು
    ಫೈಜರ್​ ಲಸಿಕೆ ಪಡೆದವರಲ್ಲಿ 195 ಮಂದಿಯಲ್ಲಿ ಈ ಮಯೋಕಾರ್ಡಿಟಿಸ್​​ ಪ್ರಕರಣ ಕಂಡು ಬಂದಿದೆ. ಮಿಲಿಯನ್​ನಲ್ಲಿ ಸರಿಸುಮಾರು 5 ಪ್ರಕರಣಗಳಲ್ಲಿ ಇದರ ಸೌಮ್ಯ ಲಕ್ಷಣಗಳು ಕಂಡು ಬಂದಿದೆ.

    ಇದನ್ನು ಓದಿ: 5ರಿಂದ 12 ವರ್ಷದ ಮಕ್ಕಳಿಗೆ ಫೈಜರ್​ ಲಸಿಕೆ ಬಳಕೆಗೆ ಅಕ್ಟೋಬರ್​ನಲ್ಲಿ ಅನುಮೋದನೆ

    ಈ ನಡುವೆ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಜನರಿಗೆ ಲಸಿಕೆ ಹಾಕುವುದಕ್ಕೆ ಉತ್ತೇಜಿಸಿದೆ. ಕಾರಣ ಕೋವಿಡ್​ನಿಂದ ಹೆಚ್ಚು ಜನರು ಅನಾರೋಗ್ಯಕ್ಕೆ ತುತ್ತಾಗುವುದನ್ನು ಇದು ತಡೆಯಲು ಸಾಧ್ಯವಾಗುತ್ತದೆ ಎಂದಿದ್ದಾರೆ

    ಮಯೋಕಾರ್ಡಿಟಿಸ್‌ನ ಲಕ್ಷಣಗಳು ಎಂದರೆ. ಎದೆ ನೋವು, ಉಸಿರಾಟದ ತೊಂದರೆ ಹಾಗೂ ಅಸಹಜ ಹೃದಯ ಬಡಿತವಾಗಿದೆ. ಲಸಿಕೆ ಪಡೆದ ನಂತರದ ದಿನಗಳಲ್ಲಿ ಈ ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣಕ್ಕೆ ವೈದ್ಯಕೀಯ ಸಹಾಯ ಪಡೆಯಬೇಕು ಎಂದು ಈಗಾಗಲೇ ತಜ್ಞರು ಸೂಚಿಸಿದ್ದಾರೆ

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:Seema R
    First published: