• Home
  • »
  • News
  • »
  • national-international
  • »
  • Shocking Crime: ಡ್ರಮ್​ನಲ್ಲಿತ್ತು ಮಹಿಳೆಯ ದೇಹ! ವರ್ಷದ ಹಿಂದೇ ನಡೆದಿತ್ತಾ ಬರ್ಬರ ಕೊಲೆ?

Shocking Crime: ಡ್ರಮ್​ನಲ್ಲಿತ್ತು ಮಹಿಳೆಯ ದೇಹ! ವರ್ಷದ ಹಿಂದೇ ನಡೆದಿತ್ತಾ ಬರ್ಬರ ಕೊಲೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಹಿಳೆಯ ಮೃತದೇಹದ ಭಾಗಗಳು ಡ್ರಮ್​ನಲ್ಲಿ ಪತ್ತೆಯಾಗಿದ್ದು ಮನೆ ಮಾಲೀಕ ಶಾಕ್ ಆಗಿದ್ದಾರೆ. ಮಹಿಳೆಯ ಡ್ರಮ್ ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • News18 Kannada
  • 4-MIN READ
  • Last Updated :
  • Andhra Pradesh, India
  • Share this:

    ಶ್ರದ್ಧಾ ವಾಕರ್ ಹತ್ಯಾಕಾಂಡದ (Shraddha Walkar Murder Case) ನಂತರ ಸೇಮ್ ಟು ಸೇಮ್ ಕೊಲೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆಂಧ್ರ ಪ್ರದೇಶದ ವಿಶಾಖಪಟ್ಟಣದ ಮನೆಯೊಂದರಲ್ಲಿ ಡ್ರಮ್ ಒಂದರಲ್ಲಿ ಮಹಿಳೆಯೊಬ್ಬಳ ದೇಹದ ಭಾಗಗಳು ಪತ್ತೆಯಾಗಿವೆ. ಅದಕ್ಕೂ ಮಿಗಿಲಾಗಿ ಒಂದು ವರ್ಷಕ್ಕೂ ಮುನ್ನವೇ ಮಹಿಳೆಯ ಕೊಲೆಯಾಗಿರುವ ಕುರಿತು ಪೊಲೀಸರು ಶಂಖೆ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿ ಬಾಡಿಗೆ ಕೊಟ್ಟಿಲ್ಲ ಎಂದು ಮನೆ ಮಾಲೀಕ ಬಾಗಿಲನ್ನು ಒಡೆದಿದ್ದಾರೆ. ಆಗ ಮಹಿಳೆಯ ಮೃತದೇಹದ ಬಿಡಿಭಾಗಗಳು ಪತ್ತೆಯಾಗಿವೆ. ಇಂದು ಆಂಧ್ರ ಪ್ರದೇಶ (Andhra Pradesh) ವಿಶಾಖಪಟ್ಟಣದ (Visakhapatnam) ಮಧುರವಾಡದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ ಸಾಮಾನುಗಳನ್ನು ತೆರವುಗೊಳಿಸಲು ಮನೆಯ ಮಾಲೀಕರು ಬಾಗಿಲು ಒಡೆದು ಮನೆಯೊಳಗೆ ಹೊಕ್ಕಾಗ ಈ ಶಾಕಿಂಗ್ ಘಟನೆ ಬಹಿರಂಗಗೊಂಡಿದೆ.


    ಜೂನ್ 2021 ರಲ್ಲಿ ಮನೆಯಲ್ಲಿ ಬಾಡಿಗೆಗಿದ್ದ ವ್ಯಕ್ತಿ ತನ್ನ ಹೆಂಡತಿ ಗರ್ಭಿಣಿ ಎಂದು ಹೇಳಿ ಏಕಾಏಕಿ ಮನೆ ಖಾಲಿ ಮಾಡಿದ್ದ ಎಂದು ಮನೆ ಮಾಲೀಕರು ತಿಳಿಸಿದ್ದಾರೆ. ಅಲ್ಲದೇ ಮನೆ ಬಾಡಿಗೆಯನ್ನೂ ಕೊಟ್ಟಿರಲಿಲ್ಲವಂತೆ. ಅಲ್ಲದೇ ಹಿಂಬಾಗಿಲಿನಿಂದ ಆಗಾಗ ಮನೆಗೆ ಬಂದು ಹೋಗುತ್ತಿದ್ದನಂತೆ.


    ಒಂದು ವರ್ಷದ ನಂತರ ಮನೆಗೆ ನುಗ್ಗಿದ ಮಾಲೀಕರು
    ಆದರೆ ಒಂದು ವರ್ಷಕ್ಕೂ ಹೆಚ್ಚು ಕಾಲ ಕಾದ ಬಳಿಕ ಮನೆ ಮಾಲೀಕರು ಇಂದು ಬಲವಂತವಾಗಿ ಮನೆಗೆ ನುಗ್ಗಿದ್ದಾರೆ. ಬಾಡಿಗೆದಾರನ ಸಾಮಾನುಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಆಗ ಮಹಿಳೆಯ ಮೃತದೇಹದ ಭಾಗಗಳು ಡ್ರಮ್​ನಲ್ಲಿ ಪತ್ತೆಯಾಗಿದ್ದು ಮನೆ ಮಾಲೀಕ ಶಾಕ್ ಆಗಿದ್ದಾರೆ. ಮಹಿಳೆಯ ಡ್ರಮ್ ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


    ಇದನ್ನೂ ಓದಿ: Liquor Bottles: ಮದ್ಯದ ಬಾಟಲಿಯಿಂದ ಮಹಿಳೆಯರಿಗೆ ಉದ್ಯೋಗ! ಹೆಣ್ಣುಮಕ್ಕಳ ಕೈಯಲ್ಲಿ ನಳನಳಿಸಲಿವೆ ಲಿಕ್ಕರ್ ಬಾಟಲಿ


    ಪ್ರಾಥಮಿಕ ಪುರಾವೆಗಳನ್ನು ಆಧರಿಸಿ ಒಂದು ವರ್ಷದ ಹಿಂದೆಯೇ ಪತ್ತೆಯಾದ ದೇಹದ ತುಂಡುಗಳಾಗಿ ಕತ್ತರಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮನೆ ಮಾಲೀಕರು ದೂರು ನೀಡಿದ್ದು ಅದರ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಈ ಪ್ರಕರಣದ ಕುರಿತು ತೀವ್ರ ತನಿಖೆ ಆರಂಭಿಸಲಾಗಿದೆ.


    ಶ್ರದ್ಧಾ ಕೊಲೆಯಿಂದ ಸ್ಪೂರ್ತಿ ಪಡೆದು ತನ್ನ ಪ್ರೇಯಸಿಯನ್ನೇ ಕೊಂದ ವ್ಯಕ್ತಿ
    ಲಿವ್ ಇನ್ ರಿಲೇಷನ್​ಶಿಪ್​ನಲ್ಲಿ ಇದ್ದ ಮಹಿಳೆಯನ್ನು ಭೀಕರವಾಗಿ ಇರಿದು ಕೊಂದ ಪುರುಷನೋರ್ವನನ್ನು ಬಂಧಿಸಲಾಗಿದೆ. ಪಶ್ಚಿಮ ದೆಹಲಿಯ ತಿಲಕ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ತನ್ನ ಲಿವ್-ಇನ್ ರಿಲೇಷನ್​ಶಿಪ್​ನಲ್ಲಿದ್ದ ಸಂಗಾತಿ ರೇಖಾ ರಾಣಿ ಎಂಬ ಮಹಿಳೆಯನ್ನು ಕೊಂದ ಆರೋಪದ ಮೇಲೆ ಪಟಿಯಾಲದ ಮನ್‌ಪ್ರೀತ್ ಸಿಂಗ್ (45) ಎಂಬ ವ್ಯಕ್ತಿಯನ್ನು ದೆಹಲಿ ಪೊಲೀಸರ ಅಪರಾಧ ವಿಭಾಗ ಶುಕ್ರವಾರ ಬಂಧಿಸಿದೆ. ರೇಖಾ ರಾಣಿ ಅವರ ದೇಹದಲ್ಲಿ ಇರಿತದ ಗಾಯಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.


    ಇದನ್ನೂ ಓದಿ: Vande Bharat Express Train: ಮತ್ತೊಂದು ವಂದೇ ಭಾರತ್ ರೈಲು ಸಂಚಾರ ಶುರು


    ಅಲ್ಲದೇ ಮೃತ ರೇಖಾ ರಾಣಿ ಎಂಬ ಮಹಿಳೆಯ ದವಡೆ, ಕುತ್ತಿಗೆ ಮತ್ತು ಕೈಗೆ ಗಾಯಗಳಾಗಿವೆ. ಆರೋಪಿ ಆಕೆಯ ಬಲಗೈಯ ಉಂಗುರ ಬೆರಳನ್ನು ಕತ್ತರಿಸಿದ್ದಾನೆ ಎನ್ನಲಾಗಿದೆ. ಮನ್‌ಪ್ರೀತ್ ಕಾರುಗಳ ಮಾರಾಟ ಮತ್ತು ಖರೀದಿಯಲ್ಲಿ ವ್ಯವಹರಿಸುತ್ತಿದ್ದ. ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಕಾರುಗಳ ದಾಖಲೆಗಳನ್ನು ನಕಲು ಮಾಡುವಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ವಿರುದ್ಧ ಈ ಮುನ್ನವೇ ಸುಲಿಗೆಗಾಗಿ ಅಪಹರಣ ಮತ್ತು ಕೊಲೆ ಯತ್ನ ಸೇರಿದಂತೆ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು