• Home
  • »
  • News
  • »
  • national-international
  • »
  • MP Cop; ಒಂದೂವರೆ ವರ್ಷದ ಮಗಳ ಜೊತೆ ಕೆಲಸ್ಕೆ ಹಾಜರಾದ ಪೊಲೀಸ್ ಅಧಿಕಾರಿ: ಪೋಟೋ ವೈರಲ್

MP Cop; ಒಂದೂವರೆ ವರ್ಷದ ಮಗಳ ಜೊತೆ ಕೆಲಸ್ಕೆ ಹಾಜರಾದ ಪೊಲೀಸ್ ಅಧಿಕಾರಿ: ಪೋಟೋ ವೈರಲ್

ಮಹಿಳಾ ಪೊಲೀಸ್

ಮಹಿಳಾ ಪೊಲೀಸ್

ಅಲಿರಾಜ್‌ಪುರ ಜಿಲ್ಲೆಯ ಹೆಲಿಪ್ಯಾಡ್(Helipad)ನಲ್ಲಿ ಕರ್ತವ್ಯ ನಿರ್ವಹಿಸುವಾಗ ತನ್ನ ಅಂಬೆಗಾಲಿಡುವ ಮಗಳನ್ನು ಬೇಬಿ ಕ್ಯಾರಿಯರ್ ಬ್ಯಾಗ್‌ನಲ್ಲಿ ಹೊತ್ತುಕೊಂಡು ಮಹಿಳಾ ಪೊಲೀಸ್ ಅಧಿಕಾರಿ ಕೆಲಸ ಮಾಡುವುದನ್ನು ನೋಡಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ ...
  • Share this:

ಕೆಲವೊಮ್ಮೆ ಪೊಲೀಸ್ ಅಧಿಕಾರಿಗಳು (Police Officers) ತಮ್ಮ ಕರ್ತವ್ಯಕ್ಕಾಗಿ ವೈವಾಹಿಕ ಜೀವನವನ್ನೇ ಬದಿಗಿಟ್ಟಿರುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಆದರೆ ತನ್ನ ಕರ್ತವ್ಯಕ್ಕೂ ಲೋಪವಾಗದಂತೆ ಮತ್ತು ತನ್ನ ವೈವಾಹಿಕ ಜೀವನಕ್ಕೂ ನ್ಯಾಯ ಒದಗಿಸುವುದಕ್ಕೆ ತುಂಬಾ ತಾಳ್ಮೆ ಬೇಕಾಗುತ್ತದೆ. ಇಂತಹ ಒಂದು ಘಟನೆಯು ನಿಜಕ್ಕೂ ತುಂಬಾ ಜನರಿಗೆ ಮಾದರಿ ಆಗಬಹುದು.ಬಹುಶಃ ಈ ಮಹಿಳಾ ಪೊಲೀಸ್ (Woman Police) ಅಧಿಕಾರಿಯ ತಾಳ್ಮೆ ಮತ್ತು ಕರ್ತವ್ಯ ಪ್ರಜ್ಞೆಯನ್ನು ನೋಡಿಯೇ ಮಧ್ಯಪ್ರದೇಶದ (MadhyaPradesh) ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (CM Shivaraj Singh Chouhan)‌ ಈ ಮಹಿಳಾ ಪೊಲೀಸ್ ಅಧಿಕಾರಿಯನ್ನು ಪ್ರಶಂಸೆ ಮಾಡಿರಬೇಕು.


ಶಿವರಾಜ್ ಸಿಂಗ್ ಚೌಹಾಣ್‌ ಪ್ರಶಂಸೆ

ಹೌದು. ಅಲಿರಾಜ್‌ಪುರ ಜಿಲ್ಲೆಯ ಹೆಲಿಪ್ಯಾಡ್(Helipad)ನಲ್ಲಿ ಕರ್ತವ್ಯ ನಿರ್ವಹಿಸುವಾಗ ತನ್ನ ಅಂಬೆಗಾಲಿಡುವ ಮಗಳನ್ನು ಬೇಬಿ ಕ್ಯಾರಿಯರ್ ಬ್ಯಾಗ್‌ನಲ್ಲಿ ಹೊತ್ತುಕೊಂಡು ಮಹಿಳಾ ಪೊಲೀಸ್ ಅಧಿಕಾರಿ ಕೆಲಸ ಮಾಡುವುದನ್ನು ನೋಡಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


ಈ ಮಹಿಳಾ ಪೊಲೀಸ್ ಅಧಿಕಾರಿಯ ಹೆಸರು ಮೋನಿಕಾ ಸಿಂಗ್ (DSP Monika Singh) ಆಗಿದ್ದು, ಧರ್ ಜಿಲ್ಲೆಯಲ್ಲಿ ಉಪ ಪೊಲೀಸ್ ಅಧೀಕ್ಷಕರಾಗಿ (ಡಿಎಸ್‌ಪಿ) ಕೆಲಸ ಮಾಡುತ್ತಿದ್ದಾರೆ. ಜೋಬತ್ ವಿಧಾನಸಭಾ ಸ್ಥಾನಕ್ಕೆ ಮುಂಬರುವ ಉಪಚುನಾವಣೆಗಾಗಿ 2 ದಿನಗಳ ಪ್ರಚಾರಕ್ಕಾಗಿ ಮಂಗಳವಾರದಂದು ಅಲಿರಾಜ್‌ಪುರ ತಲುಪಿದ ಮುಖ್ಯಮಂತ್ರಿ ಚಾಪರ್‌ಗಾಗಿ ಅವರನ್ನು ಹೆಲಿಪ್ಯಾಡ್‌ನಲ್ಲಿ ನಿಯೋಜಿಸಲಾಗಿತ್ತು.


ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಹಂಚಿಕೊಂಡ ಸಿಎಂ

"ಅಲಿರಾಜ್‌ಪುರಕ್ಕೆ ಭೇಟಿ ನೀಡಿದಾಗ, ಡಿಎಸ್‌ಪಿ ಮೋನಿಕಾ ಸಿಂಗ್ ತಮ್ಮ ಒಂದೂವರೆ ವರ್ಷದ ಮಗಳನ್ನು ಬೇಬಿ ಕ್ಯಾರಿಯರ್ ಬ್ಯಾಗ್‌ನಲ್ಲಿ ಹೊತ್ತುಕೊಂಡು ಕರ್ತವ್ಯದಲ್ಲಿದ್ದದ್ದನ್ನು ಮುಖ್ಯಮಂತ್ರಿ ನೋಡಿ, ಪೊಲೀಸ್ ಅಧಿಕಾರಿಗೆ ಕರ್ತವ್ಯದ ಬಗ್ಗೆ ಅವರಿಗಿರುವ ಸಮರ್ಪಣೆ ಭಾವ ಪ್ರಶಂಸನೀಯವಾಗಿದೆ. ನಿಮ್ಮಂತಹ ಪೊಲೀಸ್ ಅಧಿಕಾರಿಗಳ ಬಗ್ಗೆ ನಮಗೆ ತುಂಬಾನೇ ಹೆಮ್ಮೆ ಇದೆ. ಅವರ ಪುಟ್ಟ ಮಗಳಿಗೆ ಒಳ್ಳೆಯದಾಗಲಿ ಎಂದು ನಾನು ಹಾರೈಸುತ್ತೇನೆ" ಎಂದು ಚೌಹಾಣ್‌ ಬುಧವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದಾರೆ ಮತ್ತು ಪೊಲೀಸ್ ಅಧಿಕಾರಿ ಮತ್ತು ಅವರ ಮಗಳೊಂದಿಗೆ ಫೋಟೋ ತೆಗೆಸಿಕೊಂಡಿರುವುದನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ:  Revenge of a Bullet: 20 ವರ್ಷಗಳಿಂದ ಅವನಿಗಾಗಿ ಮರದಲ್ಲಿ ಕಾದು ಕುಳಿತು ಬಲಿ ಪಡೆದ ಗುಂಡು...!

ಚೌಹಾಣ್‌ ಹಂಚಿಕೊಂಡಿರುವ ಫೋಟೋದಲ್ಲಿ, ಮಹಿಳಾ ಪೊಲೀಸ್ ಅಧಿಕಾರಿಯ ಬೇಬಿ ಕ್ಯಾರಿಯರ್ ಬ್ಯಾಗ್‌ನಲ್ಲಿ ಕುಳಿತಿರುವ ಹೆಣ್ಣು ಮಗುವಿನ ತಲೆಯ ಮೇಲೆ ಕೈಯಿಟ್ಟಿರುವುದನ್ನು ಕಾಣಬಹುದು.




ಜೊತೆಗೆ ಬರೋದಾಗಿ ಹೇಳಿ ಹಠ ಮಾಡಿದ ಮಗಳು

ಪ್ರಸ್ತುತ ಧಾರ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಮೋನಿಕಾ ಸಿಂಗ್, ಧರ್‌ನಿಂದ ಸುಮಾರು 145 ಕಿಲೋಮೀಟರ್ ದೂರದಲ್ಲಿರುವ ಅಲಿರಾಜ್‌ಪುರಕ್ಕೆ 2 ದಿನಗಳ ಕಾಲ ಹೋಗಬೇಕಾಗಿದ್ದರಿಂದ ತಮ್ಮ ಮಗಳನ್ನು ತಮ್ಮೊಂದಿಗೆ ಕರೆದೊಯ್ದಿದ್ದರು ಎಂದು ಸುದ್ದಿ ಮಾಧ್ಯಮವೊಂದು ತನ್ನ ವರದಿಯಲ್ಲಿ ತಿಳಿಸಿದೆ. ಅವರು ಮಂಗಳವಾರ ಬೆಳಗ್ಗೆ ಎದ್ದು ತಮ್ಮ ಕರ್ತವ್ಯಕ್ಕೆ ಹೊರಡುವಾಗ, ಅವರ ಮಗಳು ಸಹ ಎಚ್ಚರಗೊಂಡು ಜೊತೆಯಲ್ಲಿ ಬರಬೇಕೆಂದು ಹಠ ಮಾಡಿದಳು ಎಂದು ಮೋನಿಕಾ ಹೇಳಿದರು.


ಇದನ್ನೂ ಓದಿ:  Shocking News: ಕಿವಿಯಲ್ಲಿ ಬಲೆ ಕಟ್ಟಿದ್ದ ಜೇಡ, ಒಳಗಿದ್ದ ಕೀಟದ ಸಂಸಾರ ನೋಡಿ ಡಾಕ್ಟರ್ ಶಾಕ್!


ಹೀಗಾಗಿ ನಾನು ಒಬ್ಬ ತಾಯಿ ಆಗಿ ಜವಾಬ್ದಾರಿಯನ್ನು ನಿಭಾಯಿಸಬೇಕಿತ್ತು ಮತ್ತು ಒಬ್ಬ ಪೊಲೀಸ್ ಅಧಿಕಾರಿಯಾಗಿ ನನ್ನ ಕರ್ತವ್ಯ ನಿರ್ವಹಿಸಬೇಕಾಯಿತು ಎಂದು ಅವರು ಹೇಳಿದರು.


ಕಾಂಗ್ರೆಸ್ ಕಿಡಿ:

ಒಂದೂವರೆ ವರ್ಷದ ಮಗಳನ್ನು ಹೊಂದಿರುವ ಮಹಿಳಾ ಅಧಿಕಾರಿಯನ್ನು ಸಿಎಂ ಚಾಪರ್‌ಗಾಗಿ ಹೆಲಿಪ್ಯಾಡ್ ನಲ್ಲಿ ಸುಡುವ ಬಿಸಿಲಿನಲ್ಲಿ ಕೆಲಸಕ್ಕೆ ನೇಮಿಸಿರುವುದು ರಾಜ್ಯ ಸರ್ಕಾರದ ನಿರ್ಲಕ್ಷ್ಯತನವನ್ನು ಎತ್ತಿ ತೋರಿಸುತ್ತದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ಆರೋಪಿಸಿದೆ.

Published by:Mahmadrafik K
First published: