HOME » NEWS » National-international » WOMAN COP CARRIES INFANT SON IN ARMS ON DUTY AT YOGI ADITYANATH EVENT IN NOIDA GNR

ಸಿಎಂ ಯೋಗಿ ಆದಿತ್ಯನಾಥ್​ ಕಾರ್ಯಕ್ರಮ: ತನ್ನ ಮಗು ಎತ್ತಿಕೊಂಡು ಕೆಲಸ ಮಾಡಿದ ಮಹಿಳಾ ಕಾನ್ಸ್​ಟೇಬಲ್​

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಎರಡು ದಿನಗಳ ಕಾಲ ಉತ್ತಪ್ರಪದೇಶದ ನೋಯ್ಡಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಇಲ್ಲಿನ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, 1,452 ಕೋಟಿ ರೂ. ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.

news18-kannada
Updated:March 2, 2020, 6:25 PM IST
ಸಿಎಂ ಯೋಗಿ ಆದಿತ್ಯನಾಥ್​ ಕಾರ್ಯಕ್ರಮ: ತನ್ನ ಮಗು ಎತ್ತಿಕೊಂಡು ಕೆಲಸ ಮಾಡಿದ ಮಹಿಳಾ ಕಾನ್ಸ್​ಟೇಬಲ್​
ತನ್ನ ಮಗುವನ್ನು ಕಂಕುಳಿನಲ್ಲಿ ಇರಿಸಿಕೊಂಡು ಕೆಲಸ ಮಾಡುತ್ತಿರುವ ಮಹಿಳಾ ಕಾನ್ಸ್​ಟೇಬಲ್​​
  • Share this:
ನವದೆಹಲಿ(ಮಾ.02): ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಕಾನ್ಸ್​​ಟೇಬಲ್​​ ಒಬ್ಬರು ತನ್ನ ಕಂಕುಳಿನಲ್ಲಿ ಒಂದೂವರೆ ವರ್ಷದ ಪುಟ್ಟ ಮಗು ಇರಿಸಿಕೊಂಡು ಕರ್ತವ್ಯ ನಿಭಾಯಿಸಿದ ಅಪರೂಪದ ಘಟನೆ ಉತ್ತಪ್ರದೇಶದಲ್ಲಿ ಕಂಡು ಬಂದಿದೆ. ಹೀಗೆ ವೃತ್ತಿ ಮತ್ತು ಕುಟುಂಬ ಎರಡನ್ನೂ ಒಟ್ಟಿಗೆ ಸಮರ್ಥವಾಗಿ ನಿಭಾಯಿಸಿದ ಮಹಿಳಾ ಕಾನ್ಸ್​​ಟೇಬಲ್ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಉತ್ತರಪ್ರದೇಶದ ನೋಯ್ಡಾದಲ್ಲಿ ಸರ್ಕಾರದಿಂದ ಕಾರ್ಯಕ್ರಮವೊಂದು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದರು. ಸಿಎಂ ಕಾರ್ಯಕ್ರಮದಲ್ಲಿ ಭದ್ರತೆಗಾಗಿ ಹಲವು ಪೊಲೀಸರನ್ನು ನಿಯೋಜಿಸಲಾಗಿಯತ್ತು. ಇಲ್ಲಿನ ಭದ್ರತೆಗಾಗಿ ನೆರೆದಿದ್ದ ಪೊಲೀಸರ ಪೈಕಿ ಪ್ರಮುಖ ಆಕರ್ಷಣೆಯಾಗಿ ಕಂಡದ್ದು ಕಾನ್‌ಸ್ಟೆಬಲ್‌ ಪ್ರೀತಿ ರಾಣಿ.

ಕಾನ್ಸ್​ಟೇಬಲ್​​ ಪ್ರೀತಿ ರಾಣಿ ಎಂಬುವರು ತನ್ನ ಕಂಕುಳಿನಲ್ಲಿ ಒಂದೂವರೆ ವರ್ಷದ ಪುಟ್ಟ ಮಗು ಇರಿಸಿಕೊಂಡು ಕರ್ತವ್ಯ ನಿಭಾಯಿಸಿದರು. ಈ ಮೂಲಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಎಲ್ಲರಿಗೂ ಮಾದರಿಯಾಗಿ ಕಂಡರು.

ತನ್ನ ಮಗುವನ್ನು ಕಂಕುಳಿನಲ್ಲಿ ಇರಿಸಿಕೊಂಡು ಕೆಲಸ ಮಾಡುತ್ತಿರುವ ಮಹಿಳಾ ಕಾನ್ಸ್​ಟೇಬಲ್​​
ತನ್ನ ಮಗುವನ್ನು ಕಂಕುಳಿನಲ್ಲಿ ಇರಿಸಿಕೊಂಡು ಕೆಲಸ ಮಾಡುತ್ತಿರುವ ಮಹಿಳಾ ಕಾನ್ಸ್​ಟೇಬಲ್​​

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಕಾನ್ಸ್​ಟೇಬಲ್​ ಪ್ರೀತಿ ರಾಣಿ, ಮಗುವಿನ ರಕ್ಷಣೆ ಮತ್ತು ಕಾರ್ಯಕ್ರಮದ ಭದ್ರತೆ ನಮ್ಮ ಕರ್ತವ್ಯ. ಮಗುವಿನ ತಂದೆ ಪರೀಕ್ಷೆ ಬರೆಯಲು ಹೋಗಿದ್ದಾರೆ. ಹಾಗಾಗಿ ಮಗುವನ್ನು ಇಲ್ಲಿಗೆ ಕರೆದುಕೊಂಡು ಬರಬೇಕಾದ ಅನಿವಾರ್ಯ ಪರಿಸ್ಥಿತಿ. ಮಗುವಿನಷ್ಟೇ ನನಗೆ ಕರ್ತವ್ಯ ಮುಖ್ಯ ಎಂದರು.

ಇದನ್ನೂ ಓದಿ: ಓಮರ್ ಅಬ್ದುಲ್ಲಾರಿಂದ ಸಾರ್ವಜನಿಕ ವ್ಯವಸ್ಥೆಗೆ ಅಪಾಯ: ಸುಪ್ರೀಂಗೆ ತಿಳಿಸಿದ ಜಮ್ಮು-ಕಾಶ್ಮೀರ ಸರ್ಕಾರ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಎರಡು ದಿನಗಳ ಕಾಲ ಉತ್ತಪ್ರಪದೇಶದ ನೋಯ್ಡಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಇಲ್ಲಿನ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, 1,452 ಕೋಟಿ ರೂ. ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.
First published: March 2, 2020, 6:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading