ಹೈದರಾಬಾದ್: ಆಕೆ ಪೊಲೀಸ್ ಪೇದೆ (Police Constable) ಕಳೆದ ವರ್ಷದಿಂದ ಆಕೆಗೆ ಮದುವೆ (Marriage) ಮಾಡುವುದಕ್ಕೆ ಕುಟುಂಬಸ್ಥರು ಸಂಬಂಧವನ್ನು ಹುಡುಕುತ್ತಿದ್ದರು. ಆದರೆ ಹಲವಾರು ಬಾರಿ ನಿಶ್ಚಿತಾರ್ಥವಾದರೂ (Engagement) ಕೆಲವು ಕಾರಣಗಳಿಂದ ರದ್ಧಾಗುತ್ತಿದ್ದವು. ಇತ್ತೀಚೆಗೆ ಸೆಟ್ ಆಗಿದ್ದ ಸಂಬಂಧವೂ ಹೀಗೆ ಕ್ಷುಲ್ಲಕ ನೆಪದಿಂದ ರದ್ದಾಗಿದೆ. ಹೀಗೆ ಸತತವಾಗಿ ನಿಶ್ಚಿತಾರ್ಥಗಳು ರದ್ಧಾಗುತ್ತಿದ್ದರಿಂದ ಯುವತಿ ಮಾನಸಿಕವಾಗಿ (Mentally Disturbed) ಕುಗ್ಗಿದ್ದರು. ಜೀವನದಲ್ಲಿ ತನಗೆ ಮದುವೆಯೇ ಆಗುವುದಿಲ್ಲ ಎಂದು ಮನನೊಂದು ಕೊನೆಗೆ ಆತ್ಮಹತ್ಯೆ (Sucide) ಮಾಡಿಕೊಂಡಿದ್ದಾರೆ. ಹೈದರಾಬಾದ್‌ನ ಸಾಲಿಬಂದಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದಾರುಣ ಘಟನೆ ನಡೆದಿದೆ.
ಕಾನ್ಸ್‌ಟೇಬಲ್ ಆತ್ಮಹತ್ಯೆ
ಪೊಲೀಸರು ನೀಡಿರುವ ವಿವರಗಳ ಪ್ರಕಾರ, ರಂಗಾರೆಡ್ಡಿ ಜಿಲ್ಲೆಯ ಕಂದುಕೂರು ತಾಲೂಕಿನ ಜೈತ್ವಾರಂ ಗ್ರಾಮದ ಪರ್ವತಾಲು ಎಂಬುವವರ ಅವರ ಪುತ್ರಿ ಸುರೇಖಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಹೈದರಾಬಾದ್‌ನ ಛತ್ರಿನಾಕ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆಕೆಗೆ 28 ವರ್ಷ. ಆಕೆ ತನ್ನ ಹೆತ್ತವರು ಮತ್ತು ಸಹೋದರಿಯೊಂದಿಗೆ ಅಲಿಯಾಬಾದ್‌ನ ಕಲ್ವಗಡ್ಡಾದಲ್ಲಿ ವಾಸಿಸುತ್ತಿದ್ದರು. 2018ರ ಬ್ಯಾಚ್‌ಗೆ ಸೇರಿದ ಸುರೇಖಾ ಅವರನ್ನು ಇತ್ತೀಚೆಗೆ ಭವಾನಿನಗರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಕಳೆದ ವರ್ಷದಿಂದ ಸುರೇಖಾ ಅವರ ಪೋಷಕರು ಮದುವೆ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: Miss Universe: ಕೇವಲ 23 ವರ್ಷಕ್ಕೆ ದುರಂತ ಸಾವು ಕಂಡ ಮಿಸ್ ಯೂನಿವರ್ಸ್ ಫೈನಲಿಸ್ಟ್ !
ಹಲವು ಸಂಬಂಧಗಳು ರದ್ದು
2022 ರಲ್ಲಿ ಸುರೇಖಾ ಅವರಿಗೆ ಒಂದು ಸಂಬಂದ ಗೊತ್ತಾಗಿತ್ತು. ಆದರೆ ಕಾರಣಾಂತರಗಳಿಂದ ಅದು ರದ್ದಾಯಿತು. ಇತ್ತೀಚೆಗಷ್ಟೇ ಅವರ ಊರಿನ ಯುವಕನ ಜೊತೆ ವಿವಾಹ ಕುದುರಿತ್ತು. ಇತ್ತೀಚೆಗಷ್ಟೇ ನಿಶ್ಚಿತಾರ್ಥವೂ ನಡೆದಿತ್ತು. ಆದರೆ ನಿಶ್ಚಿತಾರ್ಥದ ನಂತರ ಸುರೇಖಾಗೆ ಆ ಯುವಕ ವರಸೆಯಲ್ಲಿ ಮಗ ಆಗುತ್ತಾನೆ ಎಂದು ಅಕ್ಕಪಕ್ಕದವರು ಮಾಡನಾಡಲು ಶುರು ಮಾಡಿಕೊಂಡಿದ್ದಾರೆ.
ಅಕ್ಕಪಕ್ಕದವರ ಮಾತಿಗೆ ಬೇಸತ್ತು ಆತ್ಮಹತ್ಯೆ
ಅಲ್ಲದೆ ಹಿರಿಯರು ಈ ಮದುವೆಗೆ ಹೇಗೆ ಒಪ್ಪಿಕೊಂಡರು. ಅವರಿಬ್ಬರ ಇಬ್ಬರ ಜಾತಕವೂ ಹೊಂದಾಣಿಕೆಯಾಗುತ್ತಿಲ್ಲ ಎಂದು ಸಂಬಂಧಿಕರು ಚರ್ಚಿಸುತ್ತಿರುವುದರಿಂದ ಯುವತಿ ಆತಂಕಗೊಂಡಿದ್ದಾಳೆ. ಹೀಗಾದರೆ ತನಗೆ ಇನ್ನೂ ಮದುವೆ ಆಗುವುದಿಲ್ಲ ಎಂದು ಅವಳು ತೀವ್ರವಾಗಿ ಚಿಂತಿಸುತ್ತಿದ್ದಾಳೆ. ಈ ಪ್ರಕ್ರಿಯೆಯಲ್ಲಿ ಆಕೆ ಆತ್ಮಹತ್ಯೆ ದಾರಿ ಹಿಡಿದಿದ್ದಾಳೆ.
ಮಾಹಿತಿ ಮೇರೆಗೆ ಶಹಲಿಬಂಡಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಾಥಮಿಕ ತನಿಖೆ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಸುರೇಖಾ ಮದುವೆ ವಿಚಾರಕ್ಕೆ ಮನನೊಂದಿದ್ದು, ಆ ಕಾರಣಕ್ಕೆ ಜೀವನ ಅಂತ್ಯಗೊಳಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ