HOME » NEWS » National-international » WOMAN CONCEIVES THIRD BABY WHILE BEING PREGNANT WITH TWINS LG

ಅವಳಿ ಮಕ್ಕಳನ್ನು ಹೆರುವ ಮೊದಲೇ ಮತ್ತೆ ಗರ್ಭಿಣಿಯಾದ ಮಹಿಳೆ!

ಮಹಿಳೆ ಎರಡು ಬಾರಿ ಗರ್ಭವತಿಯಾಗಿದ್ದರೂ ಸಹ, ಆಕೆ ಗರ್ಭದಲ್ಲಿರುವ ತ್ರಿವಳಿ ಮಕ್ಕಳೂ ಒಂದೇ ದಿನ ಜನಿಸುತ್ತಾರೆ ಎಂದು ತಿಳಿದು ಬಂದಿದೆ.

news18-kannada
Updated:December 31, 2020, 2:01 PM IST
ಅವಳಿ ಮಕ್ಕಳನ್ನು ಹೆರುವ ಮೊದಲೇ ಮತ್ತೆ ಗರ್ಭಿಣಿಯಾದ ಮಹಿಳೆ!
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಡಿ.31): ಒಂದೊಂದು ಸಲ ಸೃಷ್ಟಿಯ ವಿಸ್ಮಯವನ್ನು ಅರ್ಥ ಮಾಡಿಕೊಳ್ಳಲು ಆಗುವುದೇ ಇಲ್ಲ. ಅಸಾಮಾನ್ಯ ಸಂಗತಿಗಳು ನಡೆದೇ ಬಿಡುತ್ತವೆ. ತಾಯ್ತನ ಪ್ರಕೃತಿಯ ವಿಸ್ಮಯ. ಪ್ರತೀ ಹೆಣ್ಣಿಗೂ ತಾನು ತಾಯಿಯಾಗಬೇಕೆಂಬ ಮಹಾದಾಸೆ ಇದ್ದೇ ಇರುತ್ತದೆ. ತಾಯ್ತತನವನ್ನು ಸಂಭ್ರಮಿಸಲು ಅದೆಷ್ಟು ಉತ್ಸುಕರಾಗಿರುತ್ತಾರೋ. ತನ್ನೊಡಲೊಳಗೆ ಚಿಗುರಿದ ಕಂದನನ್ನು 9 ತಿಂಗಳು ಜೋಪಾನ ಮಾಡಿ, ಈ ಭೂಮಿಗೆ ಕರೆತರುತ್ತಾಳೆ. ಇಲ್ಲಿ ಹೇಳ ಹೊರಟಿರುವ ದಂಪತಿಯ ಕಥೆ ಸ್ವಲ್ಪ ವಿಚಿತ್ರವೆನಿಸಿದರೂ ಅದು ಸತ್ಯ. ಈಗಾಗಲೇ ಅವಳಿ ಮಕ್ಕಳಿಗೆ ಗರ್ಭ ಧರಿಸಿದ್ದ ಮಹಿಳೆಯು ಮತ್ತೊಮ್ಮೆ ಗರ್ಭಿಣಿಯಾಗಿರುವ ವಿಚಿತ್ರ ಘಟನೆ ನಡೆದಿದೆ.

ಹೌದು, ಆ ಮಹಿಳೆ ಈಗಾಗಲೇ ಗರ್ಭವತಿಯಾಗಿದ್ದಳು. ಅಲ್ಟ್ರಾಸೌಂಡ್​ ಸ್ಕ್ಯಾನಿಂಗ್​ ಮೂಲಕ ಆಕೆಯ ಗರ್ಭದಲ್ಲಿ ಅವಳಿ ಮಕ್ಕಳಿರುವುದು ತಿಳಿದಿತ್ತು. ಆದರೆ ಕೆಲವು ದಿನಗಳ ಬಳಿಕ ಆಕೆ ಮತ್ತೆ ಗರ್ಭ ಧರಿಸಿದ್ದು, ಸದ್ಯ ಆಕೆಯ ಹೊಟ್ಟೆಯಲ್ಲಿ ಮತ್ತೊಂದು ಮೊಳಕೆ ಚಿಗುರೊಡೆಯುತ್ತಿದೆ. ಈ ವಿಷಯವನ್ನು ಸ್ವತಃ ಮಹಿಳೆಯೇ ಹೇಳಿಕೊಂಡಿದ್ದಾರೆ.

New Year 2021: ಹೊಸ ವರ್ಷಕ್ಕೆ ದೀಪಾಲಂಕಾರವಿಲ್ಲದೇ ಬಿಕೋ ಎನ್ನುತ್ತಿವೆ ಎಂಜಿ ರೋಡ್ ಮತ್ತು ಬ್ರಿಗೇಡ್ ರಸ್ತೆ

ಡೈಲಿ ಮೇಲ್​ ವರದಿ ಪ್ರಕಾರ, ಈಗಾಲೇ ಮಹಿಳೆಯ ಗರ್ಭದಲ್ಲಿರುವ ಅವಳಿ ಮಕ್ಕಳಿಗೆ 10 ಮತ್ತು 11 ದಿನಗಳಾಗಿವೆ. ಈಗ ಮಹಿಳೆಯು ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ. ಈ ಸಂದರ್ಭವನ್ನು ವೈಜ್ಞಾನಿಕವಾಗಿ ಸೂಪರ್​​ಫೆಟೇಶನ್ ಎಂದು ಕರೆಯುತ್ತಾರೆ.

ಮಹಿಳೆಯ ಗರ್ಭದಲ್ಲಿ ಮತ್ತೊಂದು ಅಂಡಾಣು ಫಲಿತಗೊಂಡಾಗ, ಒಂದೆರಡು ದಿನ ಅಥವಾ ವಾರಗಳ ನಂತರ ಆಕೆ ಮತ್ತೆ ಗರ್ಭಿಣಿಯಾಗಿರುವ ಸಾಧ್ಯತೆ ಇದೆ. ಈ ವಿಷಯವನ್ನು ಗರ್ಭಿಣಿ ಮಹಿಳೆ ಅನೇಕ ಟಿಕ್​-ಟಾಕ್​ ವಿಡಿಯೋಗಳಲ್ಲಿ ಹಂಚಿಕೊಂಡಿದ್ದಾಳೆ. ಜೊತೆಗೆ ಪ್ರತೀ ವಾರ ವೈದ್ಯರು ಅಲ್ಟ್ರಾಸೌಂಡ್​​ ಸ್ಕ್ಯಾನಿಂಗ್ ಮಾಡಿ, ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತಿದ್ದರು ಎಂದು ತಿಳಿದು ಬಂದಿದೆ.

ಮಹಿಳೆಯು ಯಾವುದೇ ಔಷಧಿಗಳನ್ನು ತೆಗೆದುಕೊಳ್ಳದೆ ನೈಸರ್ಗಿಕವಾಗಿ ಗರ್ಭ ಧರಿಸುವುದರ ಬಗ್ಗೆ ಮತ್ತೊಂದು ವಿಡಿಯೋದಲ್ಲಿ ಹೇಳಿದ್ದಾರೆ. ಮತ್ತೊಂದು ವಿಷಯ ಏನೆಂದರೆ, ಮಹಿಳೆ ಎರಡು ಬಾರಿ ಗರ್ಭವತಿಯಾಗಿದ್ದರೂ ಸಹ, ಆಕೆ ಗರ್ಭದಲ್ಲಿರುವ ತ್ರಿವಳಿ ಮಕ್ಕಳೂ ಒಂದೇ ದಿನ ಜನಿಸುತ್ತಾರೆ ಎಂದು ತಿಳಿದು ಬಂದಿದೆ.
ಸದ್ಯ ಮಹಿಳೆಯು 17 ವಾರಗಳ ಗರ್ಭಿಣಿಯಾಗಿದ್ದು, ತನ್ನ ತ್ರಿವಳಿ ಮಕ್ಕಳನ್ನೂ ಕನಿಷ್ಠ 28 ವಾರಗಳವರೆಗೆ ಕೊಂಡೊಯ್ಯುವ ಆಸೆ ಹೊಂದಿರುವುದಾಗಿ ತಿಳಿಸಿದ್ದಾರೆ.
Published by: Latha CG
First published: December 31, 2020, 2:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories