• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Tamil Nadu: ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕವೂ ಗರ್ಭಿಣಿಯಾದ ಮಹಿಳೆ, ಸರ್ಕಾರಕ್ಕೆ ಬಿತ್ತು ಬರೆ!

Tamil Nadu: ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕವೂ ಗರ್ಭಿಣಿಯಾದ ಮಹಿಳೆ, ಸರ್ಕಾರಕ್ಕೆ ಬಿತ್ತು ಬರೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಮಿಳುನಾಡಿನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನಹರಣ ಚಿಕಿತ್ಸೆ ಮಾಡಿದರೂ ಮಹಿಳೆಯೊಬ್ಬರು ಗರ್ಭಿಣಿಯಾದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ಮಹಿಳೆಗೆ 3 ಲಕ್ಷ ರೂಪಾಯಿ ಪರಿಹಾರ ನೀಡಿದ್ದು, ಆಕೆಗೆ 21 ವರ್ಷ ತುಂಬುವವರೆಗೆ ಅಥವಾ ಪದವಿ ಪಡೆಯುವವರೆಗೆ ಮಗುವಿನ ಪೋಷಣೆ ಮತ್ತು ಶಿಕ್ಷಣದ ವೆಚ್ಚವನ್ನು ಭರಿಸುವಂತೆ ತಮಿಳುನಾಡು ಸರ್ಕಾರಕ್ಕೆ ಆದೇಶಿಸಿದೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Tamil Nadu, India
  • Share this:

ಚೆನ್ನೈ(ಮೇ.04): ಟ್ಯೂಬೆಕ್ಟಮಿ (Tubectomy) ಮಾಡಿದರೂ ಗರ್ಭಿಣಿಯಾದ ಮಹಿಳೆಯ ಪರವಾಗಿ ಮದ್ರಾಸ್ ಹೈಕೋರ್ಟ್ ಶುಕ್ರವಾರ ತೀರ್ಪು ನೀಡಿದ್ದು, ಆಕೆಗೆ 3 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ತಮಿಳುನಾಡು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಮಹಿಳೆಯ ಮೂರನೇ ಮಗುವಿನ ಶಿಕ್ಷಣ ವೆಚ್ಚವನ್ನು ಸರ್ಕಾರವೇ ಭರಿಸುವಂತೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ನಿರ್ದೇಶಿಸಿದೆ. ಈಗಾಗಲೇ ಪಾವತಿಸಿರುವ ಯಾವುದೇ ಶುಲ್ಕವನ್ನು ಮರುಪಾವತಿಸಲು ಮತ್ತು ಪುಸ್ತಕಗಳು, ಲೇಖನ ಸಾಮಗ್ರಿಗಳು, ಉಡುಗೆ ಮತ್ತು ಇತರ ಶೈಕ್ಷಣಿಕ ಅಗತ್ಯಗಳಿಗೆ ಸಂಬಂಧಿಸಿದ ಎಲ್ಲಾ ಭವಿಷ್ಯದ ವೆಚ್ಚಗಳನ್ನು ಭರಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.


'ಇಂಡಿಯನ್ ಎಕ್ಸ್‌ಪ್ರೆಸ್'ನ ಸುದ್ದಿ ಪ್ರಕಾರ, ನ್ಯಾಯಮೂರ್ತಿ ಬಿ ಪುಗಲೇಂಧಿ ಅವರ ಪೀಠವು ಮಗುವಿನ ಪೋಷಣೆ ಮತ್ತು ಇತರ ಅಗತ್ಯಗಳಿಗಾಗಿ ವಾರ್ಷಿಕ 1.20 ಲಕ್ಷ ಅಥವಾ ತಿಂಗಳಿಗೆ 10,000 ರೂ ಮಗು ಪದವಿ ಪಡೆಯುವವರೆಗೆ ಅಥವಾ 21 ವರ್ಷ ತುಂಬುವವರೆಗೆ ನೀಡಬೇಕು ಎಂದಿದೆ. 2016ರಲ್ಲಿ ಮಧುರೈ ಪೀಠದಲ್ಲಿ ತೂತುಕುಡಿಯ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ನೀಡಿದ ತೀರ್ಪು ಇದಾಗಿದೆ.


ಇದನ್ನೂ ಓದಿ: Wrestler Protest: ರಾತ್ರಿ ಹುಡುಗಿಯರನ್ನು ಮನೆಗೆ ಕರೀತಾರೆ, ಮುಂದುವರೆದ ಕುಸ್ತಿ ಪಟುಗಳ ಪ್ರತಿಭಟನೆ!


ಹೈಕೋರ್ಟ್ ಮೆಟ್ಟಿಲೇರಿದ್ದ ಮಹಿಳೆ ಗೃಹಿಣಿಯಾಗಿದ್ದು, ಆಕೆಯ ಪತಿ ಕೃಷಿ ಕಾರ್ಮಿಕ. ಅವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದರು. ಅವರು 2013 ರಲ್ಲಿ ತೂತುಕುಡಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದ್ದರು. ಆದಾಗ್ಯೂ, ವೈದ್ಯಕೀಯ ನಿರ್ಲಕ್ಷ್ಯದ ಕಾರಣ, ಅವರು ಮಾರ್ಚ್ 2014 ರಲ್ಲಿ ಮತ್ತೆ ಗರ್ಭಧರಿಸಿದರು ಹಾಗೂ ಜನವರಿ 2015 ರಲ್ಲಿ ಮೂರನೇ ಮಗುವಿಗೆ ಜನ್ಮ ನೀಡಿದರು.


ಇದನ್ನೂ ಓದಿ: PT Usha: ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಕೊನೆಗೂ ಭೇಟಿಯಾದ ಪಿಟಿ ಉಷಾ


top videos



    ಮುಂದಿನ ಗರ್ಭಧಾರಣೆಯನ್ನು ತಡೆಯಲು ಆ ಮಹಿಳೆ ಮತ್ತೊಂದು ಚಿಕಿತ್ಸೆ ನಡೆಸಬೇಕಾಯ್ತು. ಬಳಿಕ ವೈದ್ಯರ ನಿರ್ಲಕ್ಷ್ಯಕ್ಕೆ ಪರಿಹಾರ ನೀಡುವಂತೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ವೇಳೆ ವಿವಿಧ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳ ಮೂಲಕ ದೇಶಾದ್ಯಂತ ಜಾರಿಗೆ ತರುತ್ತಿರುವ ಕುಟುಂಬ ಯೋಜನೆ ಕಾರ್ಯಕ್ರಮವು ಸಂಪೂರ್ಣವಾಗಿ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಮೂರ್ತಿ ಪುಗಳೆಂಧಿ ಹೇಳಿದರು. ಈ ಗಂಭೀರ ಜವಾಬ್ದಾರಿ ಬಗ್ಗೆ ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಯೋಜನೆ ದುರ್ಬಲವಾಗುತ್ತಿದೆ ಎಂದೂ ಕೋರ್ಟ್​ ಅಭಿಪ್ರಯಪಟ್ಟಿದೆ.

    First published: