Online Cheating: ಆನ್​​ಲೈನ್​​ ಸುಂದರಿಗಾಗಿ 25 ಕೋಟಿ ಕಳೆದುಕೊಂಡ 68ರ ಅಜ್ಜ.. ಹೇಗಿತ್ತು ಆಕೆಯ ಮೋಹದ ಬಲೆ?

ಅನ್‍ಲೈನ್ ನಲ್ಲಿ ಇಬ್ಬರ ಸ್ನೇಹ ನಂಬಿಕೆ ಹಂತಕ್ಕೆ ತಲುಪಿದಾಗ ಕ್ಯಾಪ್ಲನ್, ವೃದ್ಧನನ್ನು ಭೇಟಿಯಾಗಲು ಹೋಟೆಲಿಗೆ ಕರೆಸಿಕೊಂಡಿದ್ದಾಳೆ. ನಂತರ ಹೀಗಿ ಎರಡ್ಮೂರು ಬಾರಿ ಭೇಟಿಯಾಗುತ್ತಲೇ ವೃದ್ಧ 10 ಕೋಟಿ ರೂ. ಬೆಲೆ ಬಾಳುವ ಗಿಫ್ಟ್ ನೀಡಿದ್ದಾನೆ.

ವಂಚಕಿ ಲೂಯಿಸ್ ಕ್ಯಾಪ್ಲನ್

ವಂಚಕಿ ಲೂಯಿಸ್ ಕ್ಯಾಪ್ಲನ್

  • Share this:
    ಲಂಡನ್: ತಂತ್ರಜ್ಞಾನದ ಲಾಭವನ್ನು ಕೆಲವರು ಮೋಸ ಮಾಡಲು ಬಳಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಯಾರದ್ದು ಸೋಶಿಯಲ್ ಮೀಡಿಯಾ ಖಾತೆಗಳನ್ನ ಹ್ಯಾಕ್ ಮಾಡುವ ಡಿಜಿಟಲ್ ಕಳ್ಳರು ಹಣ ವರ್ಗಾಯಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾ(Social Media)ದಲ್ಲಿ ಅಪರಿಚಿತರೊಂದಿಗೆ ಸಂಪರ್ಕ ಒಳ್ಳೆಯದಲ್ಲ ಎಂದು ಪೊಲೀಸರು ಎಚ್ಚರಿಸುತ್ತಿರುತ್ತಾರೆ. ಆದ್ರೂ ಕೆಲವರು ಸುಂದರ ಯುವತಿಯರು ರಿಕ್ವೆಸ್ಟ್ ಕಳುಹಿಸುತ್ತಿದ್ದಂತೆ ರಿಕ್ವೆಸ್ಟ್ ಅಕ್ಸೆಪ್ಟ್ (Friend Request) ಮಾಡಿಕೊಂಡು ಅವರು ಹೆಣೆದ ಮೋಸದ ಜಾಲಕ್ಕೆ ಬೀಳುತ್ತಾರೆ. ಇಂಗ್ಲೆಂಡ್ ನ 65 ವರ್ಷದ ವೃದ್ಧನೋರ್ವ (Old Man) 34 ವರ್ಷದ ಸೆಕ್ಸ್ ವರ್ಕರ್ ಜಾಲಕ್ಕೆ ಬಿದ್ದು ಬರೋಬ್ಬರಿ 25 ಕೋಟಿ ಕಳೆದುಕೊಂಡಿದ್ದಾನೆ.

    ಸಿಇಓ ಅಂತ ಪರಿಚಯಿಸಿಕೊಂಡ ಮಹಿಳೆ

    34 ವರ್ಷದ ಸೆಕ್ಸ್ ವರ್ಕರ್ ಲೂಯಿಸ್ ಕ್ಯಾಪ್ಲನ್ ( Louise Caplan) ಆನ್‍ಲೈನ್ ನಲ್ಲಿ 68 ವರ್ಷದ ವೃದ್ಧನ ಸ್ನೇಹ ಬೆಳೆಸಿಕೊಂಡಿದ್ದಾಳೆ. ಸೆಕ್ಸ್ ವರ್ಕರ್ ಆಗಿದ್ದ ಕ್ಯಾಪ್ಲನ್ ಹಲವರ ಜೊತೆ ಐಷಾರಾಮಿ ಹೋಟೆಲ್ ಗಳಿಗೆ ಹೋಗುತ್ತಿದ್ದಳು. ಅಲ್ಲಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಳು. ವೃದ್ಧನೂ ಸಹ ಕ್ಯಾಪ್ಲನ್ ಸೌಂದರ್ಯಕ್ಕೆ ಮರುಳಾಗಿ ಸ್ನೇಹ ಬೆಳೆಸಿದ್ದಾನೆ. ಆರಂಭದಲ್ಲಿ ಕ್ಯಾಪ್ಲನ್ ತನ್ನನ್ನು ಖಾಸಗಿ ಕಂಪನಿಯ ಸಿಇಓ (CEO) ಎಂದು ಪರಿಚಯಿಸಿಕೊಂಡಿದ್ದಳು.

    10 ಕೋಟಿ ಗಿಫ್ಟ್ ಸಿಕ್ಕ ನಂತ್ರ 25 ಕೋಟಿ ಕೇಳಿದ್ಳು

    ಆನ್‍ಲೈನ್ ನಲ್ಲಿ ಇಬ್ಬರ ಸ್ನೇಹ ನಂಬಿಕೆ ಹಂತಕ್ಕೆ ತಲುಪಿದಾಗ ಕ್ಯಾಪ್ಲನ್, ವೃದ್ಧನನ್ನು ಭೇಟಿಯಾಗಲು ಹೋಟೆಲಿಗೆ ಕರೆಸಿಕೊಂಡಿದ್ದಾಳೆ. ನಂತರ ಹೀಗಿ ಎರಡ್ಮೂರು ಬಾರಿ ಭೇಟಿಯಾಗುತ್ತಲೇ ವೃದ್ಧ 10 ಕೋಟಿ ರೂ. ಬೆಲೆ ಬಾಳುವ ಗಿಫ್ಟ್ (Gift) ನೀಡಿದ್ದಾನೆ. ತಾನು ಕೇಳದಿದ್ದರೂ 10 ಕೋಟಿ ಗಿಫ್ಟ್ ಸಿಕ್ಕರೂ ಕ್ಯಾಪ್ಲನ್ ಆಸೆ ತಣ್ಣಗಾಗಿರಲಿಲ್ಲ. ನಂತರ ದುಬೈ ಮತ್ತು ಡಬ್ಲಿನ್ ನಲ್ಲಿ ವ್ಯವಹಾರಕ್ಕೆ ಸಂಬಂಧಿಸಿದ ಹಣಕಾಸಿನ ಸಮಸ್ಯೆಯುಂಟಾಗಿದೆ ಎಂದು ಹೇಳಿಕೊಂಡಿದ್ದಾಳೆ. ನಂತರ ಇದೇ ನೆಪವನ್ನು ಮುಂದಿಟ್ಟುಕೊಂಡು ಸುಮಾರು 25 ಕೋಟಿ ರೂ. ಪಡೆದಿದ್ದಾಳೆ. ಆದ್ರೆ ವೃದ್ಧನಿ ಕ್ಯಾಪ್ಲನ್ ನಡೆ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದಾನೆ.

    ಕ್ಯಾಪ್ಲನ್ ಗೆ ಏಳು ವರ್ಷ ಶಿಕ್ಷೆ?

    ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗಲೇ ಕ್ಯಾಪ್ಲನ್ ಸೆಕ್ಸ್ ವರ್ಕರ್. ಇದೇ ರೀತಿ ಹಲವರಿಗೆ ಮೋಸ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ನ್ಯಾಯಾಲಯ ಲೂಯಿಸ್ ಕ್ಯಾಪ್ಲನ್ ಳನ್ನು ದೋಷಿ ಎಂದು ಆದೇಶ ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿಲ್ಲ. ವಕೀಲರ ಪ್ರಕಾರ ಕ್ಯಾಪ್ಲನ್ ಗೆ ಏಳು ವರ್ಷ ಶಿಕ್ಷೆ ಆಗಲಿದೆ ಎಂದು ಅಂದಾಜಿಸಲಾಗಿದೆ. ಲೂಯಿಸ್ ಕ್ಯಾಪ್ಲನ್ ಸೋಶಿಯಲ್ ಮೀಡಿಯಾದಲ್ಲಿ ಹಲವು ಖಾತೆಗಳನ್ನು ಹೊಂದಿದ್ದಳು. ಸುಂದರ ಫೋಟೋಗಳಿಂದಲೇ ಶ್ರೀಮಂತ ವೃದ್ಧರನ್ನ ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ಅನೇಕರಿಗೆ ತನ್ನನ್ನು ಉದ್ಯಮಿ, ಖಾಸಗಿ ಕಂಪನಿಯಲ್ಲಿ ಉನ್ನತ ಸ್ಥಾನದಲ್ಲಿರುವ ಉದ್ಯೋಗಿ ಎಂದು ಪರಿಚಯಿಸಿಕೊಂಡು ಮೋಸ ಮಾಡುತ್ತಿದ್ದಳು. ಇದೀಗ ಸುಂದರಿಯ ಮೋಸದಾಟಕ್ಕೆ ತೆರೆ ಬಿದ್ದಿದೆ.

    ಇದನ್ನೂ ಓದಿ: Man Assaults Girlfriend: ಸೋದರ-ಸ್ನೇಹಿತನ ಜೊತೆ ಮಲಗಲು ನಿರಾಕರಿಸಿದ ಯುವತಿಗೆ ನರಕ ತೋರಿಸಿದ ಬಾಯ್​​​ಫ್ರೆಂಡ್​​!

    ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ದೂರ ಇರುವುದೇ ಉತ್ತಮ. ಕಳೆದ ಕೆಲ ತಿಂಗಳಿನಿಂದ ಸಾಮಾನ್ಯ ವ್ಯಕ್ತಿಗಳ ಖಾತೆಗಳು ಹ್ಯಾಕ್ ಆಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಆತನ ಖಾತೆ ಮೂಲಕ ಹಣ ಕಳುಹಿಸುವಂತಹ ಮೆಸೇಜ್ ಬರುತ್ತಿವೆ. ಸೈಬರ್ ಸೆಂಟರ್ ಗಳಲ್ಲಿ ಹಣಕಾಸಿನ ವ್ಯವಹಾರ ನಡೆಸೋದು ಸಹ ಅಪಾಯ. ಹಣಕಾಸಿನ ವ್ಯವಹಾರಗಳಿಗೆ ನಿಮ್ಮದೇ ಮೊಬೈಲ್ ಅಥವಾ ಲ್ಯಾಪ್‍ಟಾಪ್ ಬಳಸಬೇಕು. ಯಾವುದೇ ಪಾಸ್‍ವರ್ಡ್ ಗಳನ್ನು ಯಾರ ಜೊತೆಯಲ್ಲಿಯೂ ಹಂಚಿಕೊಳ್ಳಬಾರದು.

    ವರದಿ: ಮೊಹ್ಮದ್​ ರಫೀಕ್​​ ಕೆ 
    Published by:Kavya V
    First published: