Kitten Death: ಸೌಂಡ್ ಮಾಡುತ್ತೆ ಎಂದು 4 ತಿಂಗಳ ಬೆಕ್ಕಿನ ಮರಿಯನ್ನು ಕೊಂದಳು, ಕೇಸ್ ದಾಖಲು

ಬೆಕ್ಕು ಕೂಗಿದ್ರೆ ಕಿರಿಕಿರಿಯಾಗುತ್ತಾ? ವಿಪರೀತ ಹೆಚ್ಚು ಹೆಚ್ಚು ಕೂಗುತ್ತಿದ್ದರೆ ಸ್ವಲ್ಪ ಕಿರಿಕಿರಿಯಾಗುತ್ತೆ. ಆದರೂ ಬೆಕ್ಕು, ಬೆಕ್ಕಿನ ಮರಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಇಲ್ಲೊಬ್ಬ ಮಹಿಳೆ ಬರೀ 4 ತಿಂಗಳ ಬೆಕ್ಕನ್ನು ಕ್ರೂರವಾಗಿ ಕೊಂದುಬಿಟ್ಟಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪುಣೆ(ಏ.10): ಬೆಕ್ಕು ತುಂಬಾ ಜನರ ಫೇವರೇಟ್ ಪೆಟ್ ಎನಿಮಲ್. ಮುದ್ದಾದ ಬೆಕ್ಕುಗಳನ್ನು ಸಾಕುವವರು ಬಹಳಷ್ಟು ಜನರಿದ್ದಾರೆ. 8, 9 ಬೆಕ್ಕುಗಳನ್ನು ಸಾಕುವವರೂ ಇದ್ದಾರೆ. ಪುಟ್ಟ ಪುಟ್ಟ ಬೆಕ್ಕಿನ ಮರಿಗಳು ಕೂಗುತ್ತಲೇ ಇರುತ್ತವೆ. ಅದು ಸಾಮಾನ್ಯ. ಆದರೆ ಇಲ್ಲಿ ಒಬ್ಬ ಮಹಿಳೆ ಬೆಕ್ಕಿನ ಮರಿಯ ಕೂಗು ಕೇಳಲಾಗದೆ ಅದನ್ನು ಕೊಂದೇಬಿಟ್ಟಿದ್ದಾಳೆ. ಅಬ್ಬಾ ಇವಳೇನು ಸೈಕೋನಾ ಎಂದು ಕೇಳಬೇಡಿ.. ಅಂತೂ ಇಂತೂ ಪುಟ್ಟ 4 ತಿಂಗಳ ಬೆಕ್ಕಿನ ಮರಿಗೆ ಇವಳೇ ಸಾವು ತೋರಿಸಿದ್ದಾಳೆ.

ನಾಲ್ಕು ತಿಂಗಳ ಬೆಕ್ಕಿನ ಮರಿ ಕೊಂದ ಆರೋಪದ ಮೇಲೆ ಮಹಿಳೆಯೊಬ್ಬರ ವಿರುದ್ಧ ಚತುಃಶ್ರುಂಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೋಖಲೆನಗರ ನಿವಾಸಿ ಶಿಲ್ಪಾ ನೀಲಕಂಠ ಶಿರ್ಕೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆಕೆಯ ನೆರೆಯ ವ್ಯಕ್ತಿ ಪ್ರಶಾಂತ್ ದತ್ತಾತ್ರೇ ಗಾಥೆ (53) ದೂರು ದಾಖಲಿಸಿದ್ದಾರೆ.

ಮನೆಗೆ ಬಂದು ಗಲಾಟೆ ಮಾಡ್ತಿದ್ದ ಬೆಕ್ಕು

ಪೋಲೀಸರ ಪ್ರಕಾರ, ಏಪ್ರಿಲ್ 2 ರಂದು ಬೆಳಿಗ್ಗೆ 8.15 ರ ಸುಮಾರಿಗೆ ಈ ಘಟನೆ ನಡೆದಿದೆ. ಮಹಿಳೆಯ ಮನೆಗೆ ಬೆಕ್ಕಿನ ಮರಿ ತಲೆಗೆ ಮೊಂಡಾದ ವಸ್ತುವಿನಿಂದ ಹೊಡೆದಿದ್ದಾರೆ. ಬೆಕ್ಕಿನ ಮರಿ ಆಗಾಗ್ಗೆ ತನ್ನ ಮನೆಗೆ ಬಂದು 'ಗಲಾಟೆ' ಮಾಡುತ್ತಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾಳೆ.

ಪ್ರಕರಣ ದಾಖಲು

ಪೊಲೀಸರು ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 429 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11 (i) (a) ಮತ್ತು (l) ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಿದ್ದಾರೆ. ಹೆಡ್ ಕಾನ್​ಸ್ಟೇಬಲ್ ಮೋರೆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Fungus: ವೈರಸ್​ ಆಯ್ತು, ಈಗ ಫಂಗಸ್ ಸರದಿ? ಸಾಂಕ್ರಾಮಿಕ ರೋಗ ಭೀತಿ

ಬೆಕ್ಕಿನ ಮರಿಗಳು ಹುಟ್ಟಿ ಪ್ರಾಥಮಿಕ ಕ್ಷುಲ್ಲಕತೆಯನ್ನು ಪ್ರದರ್ಶಿಸುತ್ತವೆ. ಉಳಿವಿಗಾಗಿ ಸಂಪೂರ್ಣವಾಗಿ ತಮ್ಮ ತಾಯಂದಿರ ಮೇಲೆ ಅವಲಂಬಿತವಾಗಿವೆ. ಅವು ಸಾಮಾನ್ಯವಾಗಿ ಏಳರಿಂದ ಹತ್ತು ದಿನಗಳವರೆಗೆ ತಮ್ಮ ಕಣ್ಣುಗಳನ್ನು ತೆರೆಯುವುದಿಲ್ಲ. ಸುಮಾರು ಎರಡು ವಾರಗಳ ನಂತರ, ಬೆಕ್ಕುಗಳು ತ್ವರಿತವಾಗಿ ಅಭಿವೃದ್ಧಿ ಹೊಂದುತ್ತವೆ.

3/4 ವಾರದ ನಂತರ ಘನ ಆಹಾರ ಸೇವನೆ

ತಮ್ಮ ಗೂಡಿನ ಹೊರಗಿನ ಪ್ರಪಂಚವನ್ನು ಅನ್ವೇಷಿಸಲು ಪ್ರಾರಂಭಿಸುತ್ತವೆ. ಇನ್ನೂ ಮೂರರಿಂದ ನಾಲ್ಕು ವಾರಗಳ ನಂತರ, ಅವು ಘನ ಆಹಾರವನ್ನು ತಿನ್ನಲು ಆರಂಭಿಸುತ್ತದೆ. ನಂತರ ಪುಟ್ಟ ಹಲ್ಲುಗಳೂ ಕಾಣಿಸಿಕೊಳ್ಳುತ್ತವೆ.

ಬೆಕ್ಕಿನ ಮರಿಗಳೇಕೆ ಹೆಚ್ಚು ಕೂಗುತ್ತವೆ?

ಕಿಟೆನ್ಸ್ ಹೆಚ್ಚಿನ ಶಕ್ತಿ ಇರುವ ಕುತೂಹಲಕಾರಿ ಜೀವಿಗಳು. ಅವು ಸಂತೋಷವಾಗಿರಲು ಎಚ್ಚರವಾಗಿರುವಾಗ ಅವರಿಗೆ ಸಾಕಷ್ಟು ಮಾನಸಿಕ ಮತ್ತು ದೈಹಿಕ ಪ್ರಚೋದನೆಯ ಅಗತ್ಯವಿರುತ್ತದೆ. ಒಂದು ಕಿಟನ್ ನಿರಂತರವಾಗಿ ಅಳುತ್ತಿದ್ದರೆ, ಅದು ನಿಮ್ಮ ಗಮನವನ್ನು ಹುಡುಕುತ್ತಿರಬಹುದು ಅಥವಾ ಇನ್ನೊಂದು ಕಿಟನ್ ಅಥವಾ ಅವರ ತಾಯಿಯ ಹುಡುಕಾಟದಲ್ಲಿ ಹೀಗೆ ಮಾಡಬಹುದು. ವಿಶೇಷವಾಗಿ ಆಗಷ್ಟೇ ಹುಟ್ಟಿದ ಅಥವಾ ಮನೆಗೆ ತಂದ ಹೊಸ ಬೆಕ್ಕು ಅಳುವುದು ತುಂಬಾ ಸಾಮಾನ್ಯ.

ಇದನ್ನೂ ಓದಿ: Covid19 XE: ಗುಜರಾತ್​ನಲ್ಲಿ ಕೊರೋನಾ XE ಪಾಸಿಟಿವ್ ಕೇಸ್ ಪತ್ತೆ, ಟ್ರಾವೆಲ್ ಹಿಸ್ಟರಿ ಹೇಗಿದೆ?

ಗಂಡನನ್ನೇ ಕೊಂದ ಮಹಿಳೆ

ಪತಿಯನ್ನು ಹತ್ಯೆಗೈದ 40 ವರ್ಷದ ಮಹಿಳೆಯನ್ನು ಉತ್ತಮ ನಗರ ಪೊಲೀಸರು ಬಂಧಿಸಿದ್ದಾರೆ. ನಂತರ ಆತ್ಮಹತ್ಯೆ ಎಂದು ತೋರಿಸಲು ಆತನ ದೇಹವನ್ನು ನೇಣು ಹಾಕಿದ್ದಾರೆ. ಘಟನೆ ಇತ್ತೀಚೆಗೆ ನಡೆದಿದೆ. ಆರೋಪಿಯನ್ನು ನಂದಿನಿ ರಮೇಶ್ ಭಿಸೆ (40) ಎಂದು ಗುರುತಿಸಲಾಗಿದೆ. ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನಂದಿನಿಯನ್ನು ಏಪ್ರಿಲ್ 12 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಮೃತರನ್ನು ಉತ್ತಮನಗರದ ಎನ್‌ಡಿಎ ರಸ್ತೆಯ ಲಾಂಡ್ಜ್ ನಿವಾಸ ನಿವಾಸಿ ರಮೇಶ್ ಭಿಸೆ (44) ಎಂದು ಗುರುತಿಸಲಾಗಿದೆ.
Published by:Divya D
First published: