ಆನ್ ಲೈನ್ ಗೇಮ್ ಗಳು (On Line Game) ಎಷ್ಟು ಹುಚ್ಚು ಹಿಡಿಸಿವೆ ಎಂದು ಎಲ್ಲರಿಗೂ ಗೊತ್ತೇ ಇದೆ. ಆಟ ಆಟವಾಗಿದ್ರೆ, ಏನೂ ತೊಂದ್ರೆ ಇಲ್ಲ. ಆಟ ಚಟವಾಗಬಾರದು ಅಂತ ದೊಡ್ಡವರು ಹೇಳೋದು ನಿಜ. ಯಾವಾಗ ಆಟಗಳು ಚಟವಾಗುತ್ತವೋ, ಆಗ ಅಪಾಯ ಕಟ್ಟಿಟ್ಟ ಬುತ್ತಿ. ಐಪಿಎಲ್ ಗಾಗಿ ಮನೆ-ಮಠ, ಆಸ್ತಿ-ಪಾಸ್ತಿಯನ್ನು ಕಳೆದುಕೊಂಡವರನ್ನು ನೋಡಿದ್ದೇವೆ. ಅದು ಬಾಜಿ ಕಟ್ಟಲು. ನಾವು ಈಗ ಹೇಳ್ತಿರೋ ಸ್ಟೋರಿ ಮಹಾಭಾರತ ನೆನಪು ಮಾಡುತ್ತೆ. ಅದರಲ್ಲೂ ದ್ರೌಪದಿಯನ್ನು ಪಗಡೆ ಆಟಕ್ಕೆ ಪಣ ಇಟ್ಟಿದ್ದು. ಅದರಲ್ಲಿ ದ್ರೌಪದಿ ಪತಿಯರು ಜೂಜಿಗಾಗಿ ಆಕೆಯನ್ನು ಪಣಕ್ಕೆ ಇಡುತ್ತಾರೆ. ಆದ್ರೆ ಉತ್ತರ ಪ್ರದೇಶದಲ್ಲಿ (Utter Pradesh) ಮಹಿಳೆಯೊಬ್ಬಳು ಲುಡೋ (Ludo) ಆಟಕ್ಕಾಗಿ, ಜಮೀನ್ದಾರನಿಗೆ ತನ್ನನ್ನೇ ತಾನು ಬಾಜಿ (Bets) ಕಟ್ಟಿಕೊಂಡು ಸೋತಿದ್ದಾಳೆ.
ಲುಡೋ ಆಟಕ್ಕೆ ದಾಸಿಯಾಗಿದ್ದ ಮಹಿಳೆ
ಉತ್ತರ ಪ್ರದೇಶದ ಪ್ರತಾಪ್ಗಢ ಜಿಲ್ಲೆಯ ಮಹಿಳೆಯೊಬ್ಬರು ಲೂಡೋ ಆಟಕ್ಕೆ ವ್ಯಸನಿಯಾಗಿದ್ದರು. ಎಷ್ಟರ ಮಟ್ಟಿಗೆ ಎಂದ್ರೆ ಆ ಆಟವನ್ನು ಆಡದೇ ಅವರಿಗೆ ಜೀವನ ನಡೆಸೋದೇ ಕಷ್ಟವಾಗಿತ್ತು. ಆ ಆಟಕ್ಕಾಗಿ ಇರುವುದನ್ನೆಲ್ಲಾ ಕಳೆದುಕೊಂಡಿದ್ದಾರೆ.
ತನ್ನನ್ನು ತಾನೇ ಬಾಜಿ ಕಟ್ಟಿಕೊಂಡ ಮಹಿಳೆ
ಲುಡೋ ಆಡಲು ಹಣ ಖಾಲಿ ಆದಾಗ, ಮಹಿಳೆ ಏನು ಮಾಡಬೇಕೆಂದು ತಿಳಿಯದೇ, ಜಮೀನುದಾರನಿಗೆ ತನ್ನನ್ನೇ ತಾನು ಬಾಜಿ ಕಟ್ಟಿಕೊಂಡಿದ್ದಾಳೆ. ಆ ಆಟದಲ್ಲಿ ಸೋತು ಹೋಗಿದ್ದಾಳೆ. ಜೈಪುರದಲ್ಲಿ ಕೆಲಸ ಮಾಡುವ ಪತಿ ಕಳುಹಿಸಿದ ಹಣವನ್ನು ಜೂಜಾಟಕ್ಕೆ ಖರ್ಚು ಮಾಡುತ್ತಿದ್ದು, ಹಣದ ಕೊರತೆ ಎದುರಾದಾಗ ತನ್ನನ್ನು ತಾನೇ ಬಾಜಿ ಕಟ್ಟಿದ್ದಾಳೆ.
ಇದನ್ನೂ ಓದಿ: Megha Thakur: 21 ವರ್ಷದ ಟಿಕ್ಟಾಕ್ ತಾರೆ ಮೇಘ ಠಾಕೂರ್ ಹಠಾತ್ ಸಾವು
ಜಮೀನುದಾರನ ಜೊತೆ ಜೀವನ
ಲುಡೋ ಆಡ್ತಿದ್ದ ಮಹಿಳೆ ಜಮೀನುದಾರನಿಗೆ ತನ್ನನೇ ತಾನು ಸೋತ ನಂತರ ಅವನ ಜೊತೆಯೇ ಜೀವನ ಮಾಡಲು ಆರಂಭಿಸಿದ್ದಾಳೆ. ಆತನೇ ಅವರ ಮನೆ ಮಾಲೀಕ ಕೂಡ. ಪತಿ ಬಂದು ಕರೆದ್ರೂ ಆಕೆ ಬರಲು ತಯಾರಿಲ್ವಂತೆ.
ಮಹಿಳೆ ಗಂಡ ಹೇಳಿದ್ದೇನು?
ಜೈಪುರದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯ ಪತಿ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ ಆರು ತಿಂಗಳ ಹಿಂದೆ ಕೆಲಸದ ನಿಮಿತ್ತ ಪತಿ ಜೈಪುರಕ್ಕೆ ತೆರಳಿದ್ದರು. ಲುಡೋ ಚಟಕ್ಕೆ ಬಿದ್ದಿದ್ದ ಆತನ ಪತ್ನಿ, ಮನೆಗೆ ಕಳಿಸುತ್ತಿದ್ದ ಹಣವನ್ನು ಜೂಜಿಗೆ ಖರ್ಚು ಮಾಡುತ್ತಿದ್ದಳು.
ಇತ್ತೀಚೆಗೆ, ತಮ್ಮ ಮನೆಯ ಮಾಲೀಕರೊಂದಿಗೆ ಲುಡೋ ಆಡುತ್ತಿದ್ದಾಗ, ಅವಳು ಎಲ್ಲಾ ಹಣವನ್ನು ಕಳೆದುಕೊಂಡಿದ್ದರಿಂದ ತನ್ನನ್ನು ತಾನೇ ಪಣಕ್ಕಿಟ್ಟುಕೊಂಡಿದ್ದಾಳೆ. ಅವಳು ಅವನನ್ನು ಬಿಡಲು ಸಿದ್ಧಳಿಲ್ಲ ಎಂದು ಪತಿ ಹೇಳಿದ್ದಾರೆ.
ಗಂಡನ ದುಡ್ಡು ಗೋವಿಂದ
ಮಹಿಳೆ ಉತ್ತರ ಪ್ರದೇಶದ ಪ್ರತಾಪ್ಗಢ ಜಿಲ್ಲೆಯಲ್ಲಿ ವಾಸ ಮಾಡ್ತಾ ಇದ್ದರು. ಮದುವೆ ಸಹ ಆಗಿತ್ತು. ಮಹಿಳೆ ಗಂಡ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಜೈಪುರಕ್ಕೆ ಹೋಗಿ ಕೆಲಸ ಮಾಡ್ತಾ ಇದ್ರು. ಹೆಂಡ್ತಿ ಕೇಳಿದಾಗಲೆಲ್ಲಾ ಹಣ ಕಳಿಸುತ್ತಿದ್ದರು. ಅದನ್ನೇ ಬಳಸಿಕೊಂಡ ಪತ್ನಿ ಪದೇ ಪದೇ ಹಣ ಕೇಳಲು ಶುರು ಮಾಡಿದ್ಲು. ಗಂಡನಿಗೆ ಅನುಮಾನ ಸಹ ಬಂದಿತ್ತು. ಪತ್ನಿ ಲಡೋಗಾಗಿ ಇರೋ ಬರೋ ಹಣವನ್ನೆಲ್ಲಾ ಖರ್ಚು ಮಾಡಿದ್ದಾಳೆ.
ಇದನ್ನೂ ಓದಿ: Twin Sisters Marriage: ಒಬ್ಬನನ್ನೇ ಮದುವೆಯಾದ ಅವಳಿ ಸಹೋದರಿಯರು! ಎಂಥಾ ಆಫರ್ ಗುರು ಎಂದ ನೆಟ್ಟಿಗರು!
ಪೊಲೀಸರು ಸಹ ದೂರು ಸ್ವೀಕರಿಸಿ, ತನಿಖೆ ಆರಂಭಿಸಿದ್ದಾರೆ. ಆದ್ರೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ