Viral News: ಒಂದೇ ವರ್ಷದಲ್ಲಿ 20 ಮಕ್ಕಳನ್ನು ಪಡೆದ ಮಹಾತಾಯಿ ! ಆಗಲೇ ಮುಂದಿನ ಮಗುವಿಗೆ ಪ್ಲಾನಿಂಗ್ !

ಕೆಲ ಮಕ್ಕಳೊಂದಿಗೆ ಕ್ರಿಸ್ಟೀನ್

ಕೆಲ ಮಕ್ಕಳೊಂದಿಗೆ ಕ್ರಿಸ್ಟೀನ್

ಇವರ ಮನೆಯಲ್ಲಿ 21 ಮಕ್ಕಳಿದ್ದು, ಅವರನ್ನು ನೋಡಿಕೊಳ್ಳಲು 16 ಜನ ಆಯಾಗಳು ಇವರೊಂದಿಗೇ ವಾಸಿಸುತ್ತಿದ್ದಾರೆ. ಮಕ್ಕಳನ್ನು ನೋಡಿಕೊಳ್ಳುವ ಸಿಬ್ಬಂದಿಯ ಸಂಬಳಕ್ಕಾಗಿ ಇವರು ವರ್ಷಕ್ಕೆ ಸುಮಾರು 69 ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ.

  • Share this:

ಒಂದು ಮಗುವನ್ನು ಹೆತ್ತು, ಹೊತ್ತು, ಸಂಭಾಳಿಸೋಕೇ ಸಾಕಪ್ಪಾ ಸಾಕು ಅಂತ ಎಷ್ಟೊಂದು ಜನ ಏದುಸಿರು ಬಿಡ್ತಿರ್ತಾರೆ. ಅಂಥಾದ್ರಲ್ಲಿ ಇಲ್ಲೊಬ್ಬಾಕೆ ಬರೋಬ್ಬರಿ 20 ಮಕ್ಕಳನ್ನು ಒಂದೇ ವರ್ಷದಲ್ಲಿ ಪಡೆದು ದಾಖಲೆ ಬರೆದಿದ್ದಾರೆ. ಹಾಗಂತ ಇದೇನೂ ಮಕ್ಕಳನ್ನು ದತ್ತು ಪಡೆದವರ ವಿಚಾರವಲ್ಲ. ಈಕೆ ಬಾಡಿಗೆ ತಾಯಂದಿರ ಸಹಾಯದಿಂದ ತನ್ನ ಹಾಗೂ ಪತಿಯ ಜೀನ್​ಗಳನ್ನೇ ಹೊಂದಿರುವ ಮಕ್ಕಳನ್ನು ಪಡೆದಿದ್ದಾರೆ. ಕಳೆದ ವರ್ಷ ಬಾಡಿಗೆ ತಾಯಿಯ ಮೂಲಕ ಒಂದು ಮಗುವನ್ನು ಪಡೆದಿದ್ದರು. ಅದರಿಂದ ಉತ್ತೇಜಿತಗೊಂಡು ಈಗ ಮತ್ತಷ್ಟು ಬಾಡಿಗೆ ತಾಯಂದಿರ ಮೂಲಕ 20 ಮಕ್ಕಳನ್ನು ಪಡೆದಿದ್ದಾರೆ. ಈಗ ಈ ಶ್ರೀಮಂತ ದಂಪತಿಗೆ 21 ಜನ ಮಕ್ಕಳು.


23 ವರ್ಷದ ಕ್ರಿಸ್ಟೀನಾ ಓಜ್​ಟರ್ಕ್, 57 ವರ್ಷದ ತನ್ನ ಕೋಟ್ಯಾಧೀಶ ಪತಿಯನ್ನು ಜಾರ್ಜಿಯಾದಲ್ಲಿ ಭೇಟಿಯಾಗಿದ್ದರಂತೆ. ಆಗಲೇ ಇವರಿಬ್ಬರೂ ತಮ್ಮದೊಂದು ಬಹು ದೊಡ್ಡ ಕುಟುಂಬ ಇರಬೇಕು ಎಂದು ಕನಸು ಕಂಡಿದ್ದರಂತೆ. ಆ ಕನಸು ನನಸಾಗಿ ಈಗ ಇವರ ಮನೆಯಲ್ಲಿ 21 ಮಕ್ಕಳಿದ್ದು, ಅವರನ್ನು ನೋಡಿಕೊಳ್ಳಲು 16 ಜನ ಆಯಾಗಳು ಇವರೊಂದಿಗೇ ವಾಸಿಸುತ್ತಿದ್ದಾರೆ. ಮಕ್ಕಳನ್ನು ನೋಡಿಕೊಳ್ಳುವ ಸಿಬ್ಬಂದಿಯ ಸಂಬಳಕ್ಕಾಗಿ ಇವರು ವರ್ಷಕ್ಕೆ ಸುಮಾರು 69 ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ.


ಇದನ್ನೂ ಓದಿ: Viral News: ರಸ್ತೆಯಲ್ಲಿ ನರಳುತ್ತಿದ್ದ ಜಿರಳೆಯನ್ನು ಆಸ್ಪತ್ರೆ ಸೇರಿಸಿದ ವ್ಯಕ್ತಿ, ಬದುಕುವ ಚಾನ್ಸ್ 50/50 ಎಂದ ಡಾಕ್ಟರ್ !


ತಾನು ಬಹಳ ಇಷ್ಟಪಟ್ಟು ಈ ಮಕ್ಕಳನ್ನು ಪಡೆದಿದ್ದೇನೆ. ಹಾಗಾಗಿ ಇಡೀ ದಿನ ಮಕ್ಕಳ ಕೆಲಸಗಳಲ್ಲೇ ಬ್ಯುಸಿಯಾಗಿರುತ್ತೇನೆ, ಎಂದು ಖುಷಿಯಿಂದಲೇ ಹೇಳುತ್ತಾರೆ ಕ್ರಿಸ್ಟೀನಾ. ಈ ದಂಪತಿಗೆ ಈಗಾಗಲೇ ವಿಕ್ಟೋರಿಯಾ ಎನ್ನುವ 6 ವರ್ಷದ ಮಗಳಿದ್ದಾಳೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮುಸ್ತಾಫಾ ಎನ್ನುವ ಮಗನನ್ನು ಬಾಡಿಗೆ ತಾಯಿಯ ಮೂಲಕ ಪಡೆದರು. ನಂತರ ಪ್ರತೀ ಗರ್ಭಕ್ಕೂ ಸುಮಾರು 8 ಲಕ್ಷ ರೂಪಾಯಿ ನೀಡಿ ಮಕ್ಕಳನ್ನು ಪಡೆದಿದ್ದಾರೆ. ಈಗ 4 ತಿಂಗಳಿಂದ 14 ತಿಂಗಳ ವಯಸ್ಸಿನ 20 ಮಕ್ಕಳು ಇವರ ಮನೆಯಲ್ಲಿದ್ದಾರೆ.


ಮೂರು ಅಂತಸ್ತಿನ ಬಂಗಲೆಯಲ್ಲಿ ವಾಸಿಸುತ್ತಿರುವ ಈ ಕುಟುಂಬ ಪ್ರತೀ ವಾರ 20 ದೊಡ್ಡ ನ್ಯಾಪಿ ಪ್ಯಾಕೆಟ್ ಮತ್ತು 53 ಪ್ಯಾಕೆಟ್​​ಗಳಷ್ಟು ಮಕ್ಕಳ ಆಹಾರವನ್ನು ಬಳಸುತ್ತದೆಯಂತೆ. ಪ್ರತೀ ವಾರ ಮಕ್ಕಳ ಅಗತ್ಯಗಳಿಗಾಗಿ ಮೂರೂವರೆಯಿಂದ ನಾಲ್ಕೂವರೆ ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ಈ ಮಕ್ಕಳ ತಾಯಿ ಕ್ರಿಸ್ಟೀನಾ ತಿಳಿಸಿದ್ದಾರೆ. ಇವರ 6 ವರ್ಷದ ಮಗಳು ಇಷ್ಟೊಂದು ತಮ್ಮ – ತಂಗಿಯರ ಜೊತೆ ಆಟವಾಡುವುದನ್ನು ಬಹಳ ಎಂಜಾಯ್ ಮಾಡುತ್ತಿದ್ದಾಳಂತೆ. ಅವರಿಗೆ ಊಟ ಮಾಡಿಸುವುದು, ಕತೆ ಹೇಳುವುದು ಇದೆಲ್ಲಾ ವಿಕ್ಟೋರಿಯಾಗೆ ಬಹಳ ಖುಷಿ ಕೊಡುತ್ತಿದೆ ಎಂದಿದ್ದಾರೆ ಅವರು.


ಇನ್ನು ತಾನು ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆಯುವುದಿಲ್ಲ ಎಂದು ನಿರ್ಧರಿಸಿರುವ ಕ್ರಿಸ್ಟೀನಾ ಕೆಲ ಸಮಯದ ನಂತರ ನೈಸರ್ಗಿಕವಾಗಿ ಮತ್ತೊಂದು ಮಗುವನ್ನು ಪಡೆಯುವ ಬಗ್ಗೆ ಆಲೋಚಿಸುತ್ತಿದ್ದಾರಂತೆ. ಈಗ ನಾನು ಗರ್ಭಿಣಿಯಾದರೆ 21 ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತದೆ. ಹಾಗಾಗಿ ಕೆಲ ವರ್ಷಗಳ ನಂತರ ನಾವು ಮತ್ತೊಂದು ಮಗುವಿನ ಬಗ್ಗೆ ಆಲೋಚಿಸುತ್ತೇವೆ ಎಂದಿದ್ದಾರೆ. ಇಡೀ ದಿನದಲ್ಲಿ ಒಂದೇ ಒಂದು ಕ್ಷಣವೂ ತನಗೆ ಬೋರ್ ಎನಿಸುವುದೇ ಇಲ್ಲ. ಮಕ್ಕಳ ನಾನಾ ಕೆಲಸಗಳಲ್ಲಿ ಕಳೆದುಹೋಗಿರುತ್ತೇನೆ ಎನ್ನುತ್ತಾರೆ ಆಕೆ.


ಸಾಮಾನ್ಯವಾಗಿ ಮಕ್ಕಳು ರಾತ್ರಿ 8 ಗಂಟೆಯಿಂದ ಬೆಳಗ್ಗೆ 6ರವರಗೆ ನಿದ್ದೆ ಮಾಡುತ್ತಾರೆ, ದೊಡ್ಡ ಮಗಳು ಮಾತ್ರ 7 ಗಂಟೆಗೆ ಏಳುತ್ತಾಳೆ. ತನಗೆ ಅಷ್ಟೊಂದು ನಿದ್ದೆ ಮಾಡಲು ಆಗೋದಿಲ್ಲ, ಆದರೆ ಅದರ ಬಗ್ಗೆ ಬೇಸರವೇನೂ ಇಲ್ಲ ಎಂದಿದ್ದಾರೆ ಕ್ರಿಸ್ಟೀನಾ. ಕ್ರಿಸ್ಟೀನಾ ಪತಿ ಗ್ಯಾಲಿಪ್ ಮಕ್ಕಳ ಮತ್ತು ಕುಟುಂಬದ ಚಿತ್ರಗಳನ್ನು ಇನ್ಸ್ಟಾಗ್ರಾಮ್​ನಲ್ಲಿ ಆಗಾಗ ಶೇರ್ ಮಾಡುತ್ತಾ ಇರುತ್ತಾರೆ.

Published by:Soumya KN
First published: