ಹಬ್ಬಕ್ಕೆ ಗಂಡ ಹೊಸ ಬಟ್ಟೆ ಕೊಡಿಸಲಿಲ್ಲ ಎಂದು ಆರು ತಿಂಗಳ ಮಗುವನ್ನೇ ಹೊಡೆದು ಸಾಯಿಸಿದ ತಾಯಿ

ತಾನು ಉದ್ದೇಶಪೂರ್ವಕವಾಗಿ ಮಗುವನ್ನು ಸಾಯಿಸಿಲ್ಲ. ಕೌಂಟುಬಿಕ ಕಲಹದ ಒತ್ತಡದಲ್ಲಿ ಈ ಕೃತ್ಯ ಎಸಗಿದೆ. ಗಂಡನ ಮೇಲಿನ ಸಿಟ್ಟಿನ ಮೇಲೆ ಈ ರೀತಿ ಮಾಡಿದೆ. ಇದರಿಂದ ಮಗು ಸಾವನ್ನಪ್ಪುತ್ತದೆ ಎಂಬ ಯಾವ ಕಲ್ಪನೆ ಕೂಡ ತನಗೆ ಇರಲಿಲ್ಲ ಎಂದು ಪೊಲೀಸರ ಮುಂದೆ ತಾಯಿ ಅಲವತ್ತು ಕೊಂಡಿದ್ದಾಳೆ

Seema.R | news18-kannada
Updated:March 2, 2020, 12:38 PM IST
ಹಬ್ಬಕ್ಕೆ ಗಂಡ ಹೊಸ ಬಟ್ಟೆ ಕೊಡಿಸಲಿಲ್ಲ ಎಂದು ಆರು ತಿಂಗಳ ಮಗುವನ್ನೇ ಹೊಡೆದು ಸಾಯಿಸಿದ ತಾಯಿ
ಹೌದು, ಕೆಲ ದಿನಗಳ ಹಿಂದೆಯಷ್ಟೇ ಉತ್ತರ ಪ್ರದೇಶದಲ್ಲಿ ಜನಿಸಿದ ಅವಳಿ ಮಕ್ಕಳಿಗೆ ಕೊರೋನಾ ಮತ್ತು ಕೋವಿಡ್ ಎಂದು ಹೆಸರಿಟ್ಟು ದಂಪತಿಗಳು ಸುದ್ದಿಯಾಗಿದ್ದರು. ಇಲ್ಲಿ ಗಂಡು ಮಗುವಿಗೆ ಕೋವಿಡ್​, ಹೆಣ್ಣು ಮಗುಗೆ ಕೊರೋನಾ ಎಂದು ನಾಮಕರಣ ಮಾಡಲಾಗಿತ್ತು.
  • Share this:
ಆಲಿಘಡ್​ (ಮಾ.2): ಹೋಳಿ ಹಬ್ಬಕ್ಕೆ ಗಂಡ ಹೊಸ ಬಟ್ಟೆ  ಕೊಡಿಸಲಿಲ್ಲ ಎಂಬ ಸಿಟ್ಟಿನಲ್ಲಿ ಆತನ ಹೆಂಡತಿ ತನ್ನ  6 ತಿಂಗಳ ಹಸುಗೂಸನ್ನು ಮನಸೋಇಚ್ಛೆ ಥಳಿಸಿದ್ಧಾಳೆ. ಪರಿಣಾಮವಾಗಿ ಆ ಮಗು ಸಾವನ್ನಪ್ಪಿದೆ. ಉತ್ತರ ಪ್ರದೇಶದ ರಾಮಪುರದಲ್ಲಿ ಭಾನುವಾರ ಈ ಘಟನೆ ಸಂಭವಿಸಿದೆ.

ಪೊಲೀಸರ ಮಾಹಿತಿ ಪ್ರಕಾರ, ಹೊಸ ಬಟ್ಟೆ ತರುವ ವಿಷಯಕ್ಕೆ ಸಂಬಂಧಿಸಿದಂತೆ ಪಿಂಕಿ ಶರ್ಮಾ (25) ಮತ್ತು ಆಕೆ ಗಂಡ ರಾಹುಲ್​ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಬಟ್ಟೆ ಕೊಡಿಸಲು ರಾಹುಲ್​ ನಿರಾಕರಿಸಿದ್ದ ಕಾರಣಕ್ಕೆ ಪಿಂಕಿ ಸಿಟ್ಟಾಗಿದ್ದು, ತನ್ನ ಕೋಪವನ್ನು ಆರು ತಿಂಗಳ ಹೆಣ್ಣು ಮಗುವಿನ ಮೇಲೆ ತೋರಿಸಿ ಜೋರಾಗಿ ದೂಡಿದ್ದಾಳೆ. ಇದರಿಂದ ಮಗು ಸಾವನ್ನಪ್ಪಿದೆ.

ಈ ಘಟನೆ ಸಂಬಂಧ ರಾಹುಲ್​ ಪೊಲೀಶರಿಗೆ ದೂರು ನೀಡಿದ್ದು, ಪಿಂಕಿ ಮೇಲೆ ಐಪಿಸಿ ಸೆಕ್ಷನ್ 302 (ಕೊಲೆ) ಆರೋಪದಡಿ ದೂರು ದಾಖಲಿಸಿ ಬಂಧಿಸಿದ್ದಾರೆ.

ಘಟನೆ ಬಳಿಕ ತಾನು ಉದ್ದೇಶಪೂರ್ವಕವಾಗಿ ಮಗುವನ್ನು ಸಾಯಿಸಿಲ್ಲ. ಕೌಟುಂಬಿಕ ಕಲಹದ ಒತ್ತಡದಲ್ಲಿ ಈ ಕೃತ್ಯ ಎಸಗಿದೆ. ಗಂಡನ ಮೇಲಿನ ಸಿಟ್ಟಿನಿಂದ ಈ ರೀತಿ ಮಾಡಿದೆ. ಇದರಿಂದ ಮಗು ಸಾವನ್ನಪ್ಪುತ್ತದೆ ಎಂಬ ಯಾವ ಕಲ್ಪನೆ ಕೂಡ ತನಗೆ ಇರಲಿಲ್ಲ ಎಂದು ಆಕೆ ಪೊಲೀಸರ ಮುಂದೆ ತಿಳಿಸಿದ್ದಾಳೆ.

ಇದನ್ನು ಓದಿ: Sriramulu Daughter Marriage: ಯಾವ ಸ್ಟಾರ್​ ಸೆಲೆಬ್ರಿಟಿಗಳ ಮದುವೆಗೂ ಕಡಿಮೆ ಇಲ್ಲ ರಾಮುಲು ಮಗಳ ಮದುವೆ; ಇಲ್ಲಿವೆ ಫೋಟೋಸ್​​

ನಾಲ್ಕು ವರ್ಷದ ಹಿಂದೆ ರಾಹುಲ್​ನನ್ನು ಮದುವೆಯಾಗಿದ್ದ ಪಿಂಕಿಗೆ ಮೂರು ವರ್ಷದ ಮಗ ಕೂಡ ಇದ್ದಾನೆ.
First published: March 2, 2020, 12:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading