ಬಿಹಾರದಲ್ಲೊಂದು ಅಮಾನವೀಯ ಘಟನೆ; ಮಹಿಳೆಯನ್ನು ಥಳಿಸಿ, ಬೆತ್ತಲೆ ಮೆರವಣಿಗೆ


Updated:August 21, 2018, 10:51 AM IST
ಬಿಹಾರದಲ್ಲೊಂದು ಅಮಾನವೀಯ ಘಟನೆ; ಮಹಿಳೆಯನ್ನು ಥಳಿಸಿ, ಬೆತ್ತಲೆ ಮೆರವಣಿಗೆ
  • Share this:
ನ್ಯೂಸ್​ 18

ಆರಾಹ್​ (ಆ.21): 19 ವರ್ಷದ ಯುವಕನ ಹತ್ಯೆಯಲ್ಲಿ ಮಹಿಳೆಯ ಪಾತ್ರವಿದೆ ಎಂಬ ಅನುಮಾನದ ಮೇಲೆ ಗುಂಪೊಂದು ಆಕೆಯನ್ನು ಥಳಿಸಿ, ಬೆತ್ತಲು ಮಾಡಿ ಮೆರವಣಿಗೆ ಮಾಡಿರುವ ಅಮಾನವೀಯ ಘಟನೆ ಬಿಹಾರದ ಬೋಜ್ಪುರ್​ ಜಿಲ್ಲೆಯಲ್ಲಿ ನಡೆದಿದೆ.

ಬೋಜ್ಪುರದ ಬಿಹಿಯಾದಲ್ಲಿ ವಿಮಲೇಶ್​ ಶಾ ಎಂಬ ಯುವಕ ನಾಪತ್ತೆಯಾಗಿದ್ದು, ಸೋಮವಾರ ಆತನ ದೇಹ ರೈಲ್ವೆ ಹಳಿಗಳ ಮೇಲೆ ಪತ್ತೆಯಾಗಿತ್ತು. ​ಈ ಸುದ್ದಿ ತಿಳಿಯುತ್ತಿದ್ದಂತೆ ವಿಮಲೇಶ್​ ಸಹೋದರಿ ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದು, ಇದು ಗುಂಪನ್ನು ಮತ್ತೊಷ್ಟು ಕೆರಳಿಸಿತು.

ಘಟನೆಯಿಂದ ಉದ್ರಿಕ್ತಗೊಂಡ ಗುಂಪು ಅಂಗಡಿ, ವಾಹನಕ್ಕೆ ಬೆಂಕಿ ಇಟ್ಟಿದ್ದು, ಬಸ್​, ಟ್ರೈನ್​ ಮೇಲೆ ಕಲ್ಲೆಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಾಠಿ ಚಾರ್ಚ್​ ನಡೆಸಿ, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಎಸ್ಪಿ ಅವಕಾಶ್​ ಕುಮಾರ್​ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶಾಹಪುರ ಪೊಲೀಸ್​ ಠಾಣಾಧಿಕಾರಿ ಹಾಗೂ ರೈಲ್ವೆ ಪೊಲೀಸ್​ರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಬಿಗಿ ಪೊಲೀಸ್​ ಭದ್ರತೆ ನಿಯೋಜಿಸಲಾಗಿದೆ. ಘಟನೆಗೆ ಖಂಡನೆ ವ್ಯಕ್ತಪಡಿಸಿ ಮಾಜಿ ಉಪ ಮುಖ್ಯಮಂತ್ರಿಯಾಗಿದ್ದ ತೇಜಸ್ವಿಯಾದವ್​ ಕೂಡ ಟ್ವೀಟ್​ ಮಾಡಿದ್ದಾರೆ.

First published:August 21, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ