Wrong Hair Treatment: ಮಾಡೆಲ್ ಕೂದಲಿಗೆ ಹೇರ್​ಸ್ಟೈಲಿಸ್ಟ್ ಕತ್ತರಿ, ಹೋಟೆಲ್​ಗೆ ಬಿತ್ತು 2 ಕೋಟಿ ರೂಪಾಯಿ ದಂಡ..ಯಾಕೆ?

Woman To Get Rs 2 Crore As Ccompensation: ದೂರು ನೀಡಿದಾಕೆ ಹೇಳಿರುವುದಕ್ಕಿಂತ ಹೆಚ್ಚು ಕೂದಲನ್ನು ಸ್ಟೈಲಿಸ್ಟ್‌ ಕತ್ತರಿಸಿರುವುದನ್ನ ಗಮನಿಸಿ, ಅದನ್ನು ವಿರೋಧಿಸಿದ್ದಾರೆ.  ಅದರ ನಂತರ, ಸಲೂನ್ ಸಿಬ್ಬಂದಿ ಆಕೆಗೆ ಉಚಿತ ಕೂದಲಿನ ಚಿಕಿತ್ಸೆಯನ್ನು ನೀಡುವುದಾಗಿ ಆಫರ್ ನೀಡಿದರೂ. ಇದು ಆಕೆಯ ಅನುಮಾನ ಹುಟ್ಟಿಸಿತ್ತು. ಅಲ್ಲದೇ, ಆ ಉತ್ಪನ್ನಗಳ ಕಾರಣದಿಂದ ಆಕೆಯ ಕೂದಲಿಗೆ ಹಾನಿಯುಂಟಾಗಿದೆ ಎಂದು ಹೇಳಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು 2018 ರಲ್ಲಿ(The National Consumer Disputes Redressal Commission) ಹೋಟೆಲ್ ಐಟಿಸಿ ಮೌರ್ಯದಲ್ಲಿನ(Hotel ITC Maurya) ಸಲೂನ್‌ನಲ್ಲಿ ಸಿಬ್ಬಂದಿ ಮಾಡಿದ  ತಪ್ಪು  ಕೂದಲಿನ ಆರೈಕೆಯ(Hair Treatment) ಕಾರಣದಿಂದ ಕೂದಲನ್ನು ಕಳೆದುಕೊಂಡಿದ್ದ ಮಹಿಳೆಗೆ 2 ಕೋಟಿ ಪರಿಹಾರವನ್ನು ನೀಡಿದೆ.   ಸಲೂನ್​ ಸಿಬ್ಬಂದಿಗಳ ತಪ್ಪಿನಿಂದ ಆಕೆ ತನ್ನ ಕೂದಲನ್ನು ಕಳೆದುಕೊಂಡಿದ್ದಾರೆ, ಆಕೆಯ ಈ ದೂರು ಕೂದಲು ಉತ್ಪನ್ನಗಳಿಗೆ ಮಾದರಿಯಾಗಿದೆ. ನ್ಯಾಯಮೂರ್ತಿ ಆರ್‌ಕೆ ಅಗರವಾಲ್ ಮತ್ತು ಡಾ ಎಸ್ ಎಂ ಕಾಂತಿಕರ್ ಅವರು ಈ ಆದೇಶವನ್ನು ಜಾರಿಗೊಳಿಸಿದ್ದು, ಮಹಿಳೆಯರು ತಮ್ಮ ಕೂದಲಿಗೆ ಸಂಬಂಧಿಸಿದಂತೆ ಬಹಳ ಎಚ್ಚರಿಕೆಯಿಂದ ಮತ್ತು ಜಾಗರೂಕರಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ, ಅವರು ತಮ್ಮ ಮುಖದ ಮತ್ತು ಕೂದಲಿನ ಸೌಂದರ್ಯವನ್ನು ಕಾಪಾಡಲು ಹೆಚ್ಚು ಹಣವನ್ನು ಸಹ ಖರ್ಚು ಮಾಡುವುದರಿಂದ ಅವರು ಹೆಚ್ಚು ಕಾಳಜಿವಹಿಸಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.  

ಮಹಿಳೆಯರು ತಮ್ಮ ಕೂದಲಿನ ಜೊತೆ ಭಾವನಾತ್ಮಕವಾದ ಸಂಬಂಧವನ್ನು ಹೊಂದಿರುತ್ತಾರೆ. ದೂರುದಾರ ತನ್ನ ಉದ್ದ ಕೂದಲಿನಿಂದಾಗಿ ಕೂದಲು ಉತ್ಪನ್ನಗಳಿಗೆ ಮಾದರಿಯಾಗಿದ್ದರು,  ಅವರು VLCC ಮತ್ತು ಪ್ಯಾಂಟೆನ್ ಸಂಸ್ಥೆಗೆ ಮಾಡೆಲಿಂಗ್ ಸಹ  ಮಾಡಿದ್ದಾರೆ. ಆದರೆ ಅವರ ಸೂಚನೆಗೆ ವಿರುದ್ಧವಾಗಿ ಕೂದಲು ಕತ್ತರಿಸುವುದರಿಂದ, ಆಕೆ ತನ್ನ ಕೂದಲನ್ನು ಕಳೆದುಕೊಂಡಿರುವುದಲ್ಲದೇ, ಆಕೆಯ ಮಾಡೆಲಿಂಗ್ ವೃತ್ತಿಯ ಮೇಲೆ ಪರಿಣಾಮ ಬೀರಿ,

ಇದನ್ನೂ ಓದಿ: ಪೊಲೀಸ್​ ಗುಂಡಿಗೆ ಬಲಿಯಾಗಿದ್ದ ವ್ಯಕ್ತಿಯ ಮೇಲೆ ಅಮಾನವೀಯ ದಾಳಿ ನಡೆಸಿದ್ದ ಛಾಯಾಗ್ರಾಹಕ ಬಂಧನ!

ಕೆಲಸ ಕಳೆದುಕೊಂಡ ಕಾರಣ  ಆಕೆಯ ಜೀವನಶೈಲಿ  ಸಂಪೂರ್ಣವಾಗಿ ಬದಲಾಯಿಸಿತು ಮತ್ತು ಉನ್ನತ ರೂಪದರ್ಶಿಯಾಗಬೇಕೆಂಬ ಆಕೆಯ ಕನಸನ್ನು ಭಗ್ನಗೊಳಿಸಿತು.  ದೂರುದಾರರು ತನ್ನ ಮಾಡೆಲಿಂಗ್  ಯೋಜನೆಗಳನ್ನು ಮುಂದುವರಿಸಲು ಯೋಜಿಸುತ್ತಿದ್ದರು. ಅದರಲ್ಲೂ ಮುಖ್ಯವಾಗಿ ಅವರ ವೃತ್ತಿ ಜೀವನ  ಕೂದಲು ಉತ್ಪನ್ನಗಳಿಗೆ ಸಂಬಂಧಿಸಿದೆ. ಅಲ್ಲದೇ ಅವರಿಗೆ ಕೆಲ  ಚಲನಚಿತ್ರದಲ್ಲಿ ನಟಿಸಲು ಸಹ ಅವಕಾಶಗಳು ಒದಗಿದ್ದವು.

ಏಪ್ರಿಲ್ 12, 2018 ರಲ್ಲಿ ಆಕೆಗೆ ಒಂದು ಇಂಟರ್​ವ್ಯೂ ಇದ್ದ ಕಾರಣ ಹೇರ್ ಕಟ್ ಮಾಡಿಸಿಕೊಳ್ಳಲು ಹೋಟೆಲ್ ಐಟಿಸಿ ಮೌರ್ಯದಲ್ಲಿನ ಸಲೂನ್‌ಗೆ ಭೇಟಿ ನೀಡಿದರು. ಮಹಿಳೆ ಆಕೆಗೆ ಬೇಕಿರುವ ಹೇರ್ ಸ್ಟೈಲಿಸ್ಟ್‌ ತನ್ನ ಕೂದಲನ್ನು ಕತ್ತರಿಸಬೇಕು ಎಂದು ಕೇಳಿದ್ದರು. ಆದರೆ ಅಂದು ಆ ಹೇರ್ ಸ್ಟೈಲಿಸ್ಟ್‌ ಲಭ್ಯವಿಲ್ಲದ ಕಾರಣ ಬದಲಾಗಿ ಸಿಬ್ಬಂದಿಯ ಭರವಸೆಯ ಮೇರೆಗೆ ಬೇರೆ ಹೇರ್ ಸ್ಟೈಲಿಸ್ಟ್‌ ದೂರುದಾರರ ಹೇರ್ ಕಟ್ ಮಾಡಿದ್ದರು.

ದೂರು ನೀಡಿದಾಕೆ ಹೇಳಿರುವುದಕ್ಕಿಂತ ಹೆಚ್ಚು ಕೂದಲನ್ನು ಸ್ಟೈಲಿಸ್ಟ್‌ ಕತ್ತರಿಸಿರುವುದನ್ನ ಗಮನಿಸಿ, ಅದನ್ನು ವಿರೋಧಿಸಿದ್ದಾರೆ.  ಅದರ ನಂತರ, ಸಲೂನ್ ಸಿಬ್ಬಂದಿ ಆಕೆಗೆ ಉಚಿತ ಕೂದಲಿನ ಚಿಕಿತ್ಸೆಯನ್ನು ನೀಡುವುದಾಗಿ ಆಫರ್ ನೀಡಿದರೂ. ಇದು ಆಕೆಯ ಅನುಮಾನ ಹುಟ್ಟಿಸಿತ್ತು. ಅಲ್ಲದೇ, ಆ ಉತ್ಪನ್ನಗಳ ಕಾರಣದಿಂದ ಆಕೆಯ ಕೂದಲಿಗೆ ಹಾನಿಯುಂಟಾಗಿದೆ ಎಂದು ಹೇಳಿದರು.

ಈ ಕೂದಲಿನ ಚಿಕಿತ್ಸೆಯಿಂದಾಗಿ ಆಕೆಯ  ನೆತ್ತಿಯು ಸುಟ್ಟಿದ್ದಲ್ಲದೇ ,  ನೆತ್ತಿಯ ತುರಿಕೆ ಆರಂಭವಾಗಿತ್ತು. ಕೂದಲಿನ ಚಿಕಿತ್ಸೆಯಲ್ಲಿ ಬಳಸುವ ರಾಸಾಯನಿಕವು ಆಕೆಯ ನೆತ್ತಿಗೆ ಶಾಶ್ವತ ಹಾನಿಯನ್ನುಂಟು ಮಾಡಿದೆ ಎಂದು ಆಯೋಗ ತಿಳಿಸಿದೆ.  ದೂರುದಾರರು ಉತ್ತಮ ಕೆಲಸದಲ್ಲಿರುವುದಲ್ಲದೇ, ಒಳ್ಳೆಯ ಆದಾಯವನ್ನು ಸಹ ಗಳಿಸುತಿದ್ದರು. ಆದರೆ ಆಕೆಯ ಕೂದಲು ಕತ್ತರಿಸುವಲ್ಲಿ ಹೇರ್ ಡ್ರೆಸ್ರ್ ಮಾಡಿರುವ ತಪ್ಪಿನಿಂದ ಮಾನಸಿಕವಾಗಿ ನೊಮದ ಆಕೆ, ಕೆಲಸದಲ್ಲಿ ಗಮನ ನೀಡಲು ಸಾಧ್ಯವಾದೆ ಕೆಲಸಕೊಳ್ಳಬೇಕಾಯಿತು ಎಂದು ಆಯೋಗ ತಿಳಿಸಿದೆ.

ಅಲ್ಲದೇ ಹೇರ್ ಡ್ರೆಸರ್ ನಿರ್ಲಕ್ಷ್ಯದ ಕಾರಣದಿಂದ ಆಕೆಯ ಕೂದಲಿನ ಆರೋಗ್ಯ ಹಾಳಾಗಿದೆ ಎಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.  ಆ ಮಹಿಳೆ ಅವಳು ಯಾವಾಗಲೂ ಉದ್ದನೆಯ ಕೂದಲನ್ನು ಹೊಂದಿದ್ದರಿಂದ  ಬಹಳ ಸಮಸ್ಯೆಯನ್ನು ಅನುಭವಿಸಬೇಕಾಯಿತು. ಆಕೆ ಕನ್ನಡಿಯಲ್ಲಿ ತನ್ನನ್ನು ನೋಡುವುದನ್ನು ನಿಲ್ಲಿಸಿದ್ದರು.

ಇದನ್ನೂ ಓದಿ: ಐರಿಷ್ ಹೌಸ್‌ನಲ್ಲಿ ಪತ್ತೆಯಾಯ್ತು ದೆವ್ವ ; ಆನ್‌ಲೈನ್‌ನಲ್ಲಿ ಫೋಟೋ ವೈರಲ್

ಆಕೆ ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಕೆಲಸ ಮಾಡುತ್ತಿದ್ದರು, ಆದರೆ ಕೂದಲು ಹಾಳಾದ ಕಾರಣ,  ಆಕೆ ಆತ್ಮವಿಶ್ವಾಸವನ್ನು ಕಳೆದುಕೊಂಡು,ಆದಾಯದಲ್ಲಿ ನಷ್ಟವನ್ನು ಅನುಭವಿಸಿದರು. ಘಟನೆಯ ನಂತರ ಕಳೆದ ಎರಡು ವರ್ಷಗಳಿಂದ ಆಕೆ ನೋವು ಮತ್ತು ಆಘಾತವನ್ನು ಅನುಭವಿಸುತ್ತಿದ್ದಾರೆ ಎಂದು ಆಯೋಗವು  ಹೇಳಿದೆ.
Published by:Sandhya M
First published: