KOCHI: ಮದುವೆಯಾಗಿ ಮನೆಗೆ ಬಂದ ಸೊಸೆಗೆ ಅತ್ತೆಯ ಅಕ್ರಮ ಸಂಬಂಧ ಗೊತ್ತಾಗಿಬಿಡ್ತು.. ಮುಂದಾಗಿದೆಲ್ಲಾ ಅನಾಹುತ!

ಮದುವೆಯಾಗಿ ಮನೆಗೆ ಬಂದ ಕೆಲವೇ ದಿನಗಳಲ್ಲಿ ಅತ್ತೆಯ ಅಕ್ರಮ ಸಂಬಂಧದ ಬಗ್ಗೆ ಸೊಸೆ ವೈಷ್ಣವಿಗೆ ಗೊತ್ತಾಗಿಬಿಟ್ಟಿದೆ. ಇದನ್ನು ಗಂಡನ ಎದುರು, ಸಂಬಂಧಿಕರು, ಅಕ್ಕಪಕ್ಕದ ಮನೆಯವರ ಎದುರು ಸೊಸೆ ವೈಷ್ಣವಿ ಹೇಳಿಬಿಟ್ಟಿದ್ದಾಳೆ. ಇದರಿಂದ ರೊಚ್ಚಿಗೆದ್ದ ಅತ್ತೆಯ ಪ್ರಿಯಕರ ವೈಷ್ಣವಿ ಮೇಲೆ ದಾಳಿ ಮಾಡಿದ್ದಾನೆ.

ಹಲ್ಲೆಗೊಳಗಾಗಿರುವ ಸೊಸೆ ವೈಷ್ಣವಿ

ಹಲ್ಲೆಗೊಳಗಾಗಿರುವ ಸೊಸೆ ವೈಷ್ಣವಿ

  • Share this:
ಕೊಚ್ಚಿ: ಮದುವೆ (Marriage) ಆಗಿ ಗಂಡನ ಮನೆಗೆ ಹೋಗುವ ಪ್ರತಿ ಹೆಣ್ಣು ನೆಮ್ಮದಿಯ ಜೀವನವನ್ನು ಬಯಸುತ್ತಾಳೆ. ಗಂಡನೊಂದಿಗೆ(Husband), ಆತನ ಮನೆಯವರೊಂದಿಗೆ ಬೆರತು ಬಾಳಲು ಪ್ರಯತ್ನಿಸುತ್ತಾಳೆ. ಬಹುತೇಕರು ಇದರಲ್ಲಿ ಯಶಸ್ವಿಯೂ ಆಗುತ್ತಾರೆ. ಆದರೆ ಕೆಲ ಮನೆಗಳು ಅತ್ತೆ-ಸೊಸೆ (Mother in law and Daughter in law) ಜಗಳದಿಂದ ರಣರಂಗವಾಗಿ ಬಿಡುತ್ತವೆ. ಸಾಮಾನ್ಯವಾದ ಅತ್ತೆ-ಸೊಸೆ ಜಗಳವನ್ನು ದೊಡ್ಡವರು, ಅನುಭವಸ್ಥರು ಕುಳಿತು ಬಗೆಹರಿಸಬಹುದು. ಆದರೆ ಮನೆಯಲ್ಲಿನ ಸಂಬಂಧಗಳೇ ನೈತಿಕತೆಯ ಗೆರೆ ದಾಟಿಬಿಟ್ಟರೆ ಮನೆ ಮುರಿಯದೇ ಇರದು. ಕೇರಳದ ಈ ಪ್ರಕರಣದಲ್ಲಿ ಅದೇ ಆಗಿದೆ. ಅತ್ತೆಯ ಅನೈತಿಕ ಸಂಬಂಧವನ್ನು ಬಯಲು ಮಾಡಿದ ಸೊಸೆ ಮೇಲೆ ಅತ್ತೆಯ ಪ್ರಿಯಕರ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ತ್ರಿಸ್ಸೂರ ಜಿಲ್ಲೆಯ ಕೊರಟ್ಟಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: Death: ಮನೆಗೆ ಬಿದ್ದ ಬೆಂಕಿ ಐವರನ್ನು ಬಲಿ ಪಡೆಯಿತು! ನೋಡ ನೋಡುತ್ತಿದ್ದಂತೆ ಸುಟ್ಟು ಹೋದ ಕಂದಮ್ಮ

ಅತ್ತೆಯ ಅಕ್ರಮ ಸಂಬಂಧದ ಬಗ್ಗೆ ಗೊತ್ತಾಗಿಬಿಡ್ತು..!

ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ಸೊಸೆ ಪೆರಂಬೂರ್​ ಮೂಲದ ಎಂ.ಎಸ್​.ವೈಷ್ಣವಿ. ಅಂತಿಮ ವರ್ಷ ಸಿವಿಲ್​ ಇಂಜಿನಿಯರ್​ ಆಗಿರುವ ಈಕೆ 6 ತಿಂಗಳಗಳ ಹಿಂದೆಯಷ್ಟೇ ಪಲಪಲ್ಲಿ ಮೊಝಿಕುಲಂ ನಿವಾಸಿ ಮುಕೇಶ್​ ಎಂಬುವರನ್ನು ಮದುವೆಯಾಗಿದ್ದರು. ಮದುವೆಯಾಗಿ ಮನೆಗೆ ಬಂದ ಕೆಲವೇ ದಿನಗಳಲ್ಲಿ ಅತ್ತೆಯ ಅಕ್ರಮ ಸಂಬಂಧದ ಬಗ್ಗೆ ಸೊಸೆ ವೈಷ್ಣವಿಗೆ ಗೊತ್ತಾಗಿಬಿಟ್ಟಿದೆ. ಇದನ್ನು ಗಂಡನ ಎದುರು, ಸಂಬಂಧಿಕರು, ಅಕ್ಕಪಕ್ಕದ ಮನೆಯವರ ಎದುರು ಸೊಸೆ ವೈಷ್ಣವಿ ಹೇಳಿಬಿಟ್ಟಿದ್ದಾಳೆ. ಇದರಿಂದ ರೊಚ್ಚಿಗೆದ್ದ ಅತ್ತೆಯ ಪ್ರಿಯಕರ ವೈಷ್ಣವಿ ಮೇಲೆ ದಾಳಿ ಮಾಡಿದ್ದಾನೆ. ಭಯಾನಕವಾಗಿ ಗಾಯಗೊಂಡಿರುವ ವೈಷ್ಣವಿಯಲ್ಲಿ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.


ಮುಖದ 3-4 ಮೂಳೆಗಳು ಮುರಿದಿವೆ

ತನ್ನೊಂದಿಗಾದ ಅನ್ಯಾಯದ ಬಗ್ಗೆ ವೈಷ್ಣವಿ ಇನ್​​ ಸ್ಟಾಗ್ರಾಂನಲ್ಲಿ ವಿವರವಾಗಿ ಬರೆದುಕೊಂಡಿದ್ದಾಳೆ. ಮಹಿಳಾ ದಿನಾಚರಣೆ ಆಚರಿಸುತ್ತಿದ್ದೇವೆ. ಆದರೆ ಇಂದಿಗೂ ಇಲ್ಲಿ ಮಹಿಳೆಯರಿಗೆ ಕಾನೂನಿನ ರಕ್ಷಣೆ ಇಲ್ಲ ಎಂಬುದಕ್ಕೆ ನಾನೇ ಸಾಕ್ಷಿ. ನನ್ನ ಗಂಡನ ತಾಯಿಯ ಅನೈತಿಕತೆಯನ್ನು ಬಯಲು ಮಾಡಿದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದೆ. ಮುಖದ 3-4 ಮೂಳೆಗಳು ಮುರಿದುಹೋಗಿವೆ.. ಉಸಿರಾಡಲು, ತಿನ್ನಲು ಸಹ ಸಾಧ್ಯವಾಗುತ್ತಿಲ್ಲ.  ಇಷ್ಟೆಲ್ಲಾ ಮಾಡಿದ ವ್ಯಕ್ತಿ ಆರಾಮಾಗಿ ಓಡಾಕೊಂಡಿದ್ದಾನೆ. ಏಕೆಂದರೆ ಅವರು ಬಿಜೆಪಿಯ ಪಕ್ಷದೊಂದೊಗೆ ಗುರಿತಿಸಿಕೊಂಡು, ಪ್ರಕರಣದ ಮೇಲೆ ಪ್ರಭಾವ ಬೀರಿದ್ದಾರೆ ಎಂದು ವೈಷ್ಣವಿ ಆರೋಪಿಸಿದ್ದಾರೆ.

ನ್ಯಾಯಕ್ಕಾಗಿ ಮೊರೆ

ಮದುವೆಯಾದ 6 ತಿಂಗಳ ನಂತರ 2ನೇ ಬಾರಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ಒಂದು ದಿನವೂ ಮನೆಯಲ್ಲಿ ನೆಮ್ಮದಿಯಿಂದ ಬಾಳಲು ಸಾಧ್ಯವಾಗಿಲ್ಲ. ಊಟ ಕೊಡದೆ ಕೋಲಿನಿಂದ ನನ್ನನ್ನು ಥಳಿಸಿದ್ದಾರೆ. ನನ್ನ ಗಂಡನೂ ನನಗೆ ಹಿಂಸೆ ನೀಡಿದ್ದಾನೆ. ದಯವಿಟ್ಟು ಮಾಧ್ಯಮದವಾರದರೂ ನನ್ನ ಸಹಾಯಕ್ಕೆ ಧಾವಿಸಿ ನ್ಯಾಯ ಕೊಡಿಸಬೇಕು ಎಂದು ವೈಷ್ಣವಿ ಇನ್​​ಸ್ಟಾ ಪೋಸ್ಟ್​ನಲ್ಲಿ ಬೇಡಿಕೊಂಡಿದ್ದಾರೆ.

ಇದನ್ನೂ ಓದಿ: Tamil Nadu Minister Sekar Babu ಮಗಳು ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್​; ಪ್ರಿಯಕರನ ಮದುವೆಯಾಗಿ ರಕ್ಷಣೆ ಕೋರಿದ ಯುವತಿ

ಮತ್ತೊಂದು ಅಪರಾಧ ಪ್ರಕರಣ

 ಉತ್ತರ ಪ್ರದೇಶದ ನೋಯ್ಡಾದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 28 ವರ್ಷದ ರಾಬಿನ್ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಆತನನ್ನು ಕೊಂದ ಆರೋಪಿಗಳು ಮೇಲೆ ಮೋನಿಕಾ ಹಾಗೂ ಆಕೆಯ ತಾಯಿ ಅಂಜು ಅಂತ ಗುರುತಿಸಲಾಗಿದೆ. ಇನ್ನು ಇದೇ ಕೇಸ್‌ಗೆ ಸಂಬಂಧಿಸಿದಂತೆ ಒಟ್ಟು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೂರಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಕೊಲೆಯಾದ ರಾಬಿನ್ ಹಾಗೂ ಆರೋಪಿ ಮೋನಿಕಾ ನಡುವೆ ಪ್ರೀತಿ ಇತ್ತು. ಸುಮಾರು ವರ್ಷಗಳ ಕಾಲ ಪ್ರೀತಿಯ ಹೆಸರಲ್ಲಿ ಇಬ್ಬರೂ ಸುತ್ತಾಡಿದ್ದರು. ಬಳಿಕ ಯಾವುದೋ ಕಾರಣಕ್ಕೆ ದೂರಾಗಿದ್ದರು. ಬಳಿಕ 2018ರಲ್ಲಿ ಆಕೆ ಬೇರೆ ವಿವಾಹವಾಗಿದ್ದಳು.
Published by:Kavya V
First published: