ಸುಳ್ಳಲ್ಲ, ದೇವರಾಣೆ ಸತ್ಯ: ಲೂಡೋ ಆಟದಲ್ಲಿ ಅಪ್ಪನಿಂದ ಮೋಸ; ಕೋರ್ಟ್ ಮೆಟ್ಟಿಲೇರಿದ ಮಗಳು!

ಕೊರೋನಾ ವೈರಸ್​ ಬಂದ ನಂತರದಲ್ಲಿ ಮನೆಯಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ. ಐಟಿ ಕಂಪೆನಿಗಳಿಗೆ ಡಿಸೆಂಬರ್​ ವರೆಗೆ ವರ್ಕ್​ ಫ್ರಮ್​ ಹೋಂ ಮಾಡಲು ಸೂಚಿಸಲಾಗಿದೆ. ಈ ಅವಧಿಯಲ್ಲಿ ಆನ್​ಲೈನ್ ಗೇಮ್​ಗಳಿಗೆ ಭಾರೀ ಬೇಡಿಕೆ ಬರುತ್ತಿದೆ.

ದೂರು ದಾಖಲಿಸಿದ ಮಹಿಳೆ

ದೂರು ದಾಖಲಿಸಿದ ಮಹಿಳೆ

  • Share this:
ಭೂ ವಿವಾದ, ಹಣಕಾಸಿನ ವಿಚಾರ, ಇಲ್ಲವೇ ಕೌಂಟುಬಿಕ ಕಲಹದಲ್ಲಿ ಕೋರ್ಟ್​ ಮೆಟ್ಟಿಲೇರಿರುವ ಬಗ್ಗೆ ನೀವು ಕೇಳಿರುತ್ತೀರಾ. ಆದರೆ, ಲೂಡೋ ಆಡುವಾಗ ತಂದೆಯಿಂದ ಮೋಸ ಆಯಿತೆಂದು ನ್ಯಾಯಾಲಯದ ಮೊರೆ ಹೋಗಿರುವ ಬಗ್ಗೆ ಎಂದಾದರೂ ಕೇಳಿದ್ದೀರಾ? ಹೀಗೊಂದು ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಈ ವಿಚಾರ ಸದ್ಯ ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಕೊರೋನಾ ವೈರಸ್​ ಬಂದ ನಂತರದಲ್ಲಿ ಮನೆಯಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ. ಐಟಿ ಕಂಪೆನಿಗಳಿಗೆ ಡಿಸೆಂಬರ್​ ವರೆಗೆ ವರ್ಕ್​ ಫ್ರಮ್​ ಹೋಂ ಮಾಡಲು ಸೂಚಿಸಲಾಗಿದೆ. ಈ ಅವಧಿಯಲ್ಲಿ ಆನ್​ಲೈನ್ ಗೇಮ್​ಗಳಿಗೆ ಭಾರೀ ಬೇಡಿಕೆ ಬರುತ್ತಿದೆ. ಈ ಅವಧಿಯಲ್ಲಿ ಭಾರತದಲ್ಲಿ ಲೂಡೋ ಆಟ ತುಂಬಾನೇ ಖ್ಯಾತಿ ಪಡೆದುಕೊಂಡಿದೆ. ಮಧ್ಯ ಪ್ರದೇಶದ ಕುಟುಂಬವೊಂದು ಇತ್ತೀಚೇಗೆ ಲೂಡೋ ಆಟದಲ್ಲಿ ತೊಡಗಿತ್ತು. ಈ ವೇಳೆ ಅಪ್ಪ, ಮಗಳನ್ನು ಸೋಲಿಸಿದ್ದ. ಇದಕ್ಕೆ ಸಿಟ್ಟಾದ ಮಗಳು ಕೋರ್ಟ್​ ಮೆಟ್ಟಿಲೇರಿದ್ದಾಳೆ.

“ನನ್ನ ತಂದೆ ನನಗೆ ಮೋಸ ಮಾಡುತ್ತಾನೆ ಎಂದು ನಾನು ಭಾವಿಸಿರಲಿಲ್ಲ. ಈ ಘಟನೆ ನಂತರದಲ್ಲಿ ನನಗೆ ತಂದೆ ಮೇಲಿದ್ದ ಗೌರವ ಸಂಪೂರ್ಣ ನಾಶವಾಗಿದೆ. ಈ ಮೋಸದ ವಿಚಾರವಾಗಿ ನಾನು ಭೋಪಾಲ್​ ಕುಟುಂಬ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದೇನೆ ಎಂದಿದ್ದಾಳೆ," ಮಗಳು.

ಮಹಿಳೆ ತನ್ನ ಸಹೋದರು ಹಾಗೂ ತಂದೆ ಜೊತೆ ಲೂಡೋ ಆಡುತ್ತಿದ್ದಳು. ಈ ಆಟದಲ್ಲಿ ಆಕೆ ಸೋತಿದ್ದಳು. ಈ ವೇಳೆ ಸಿಟ್ಟಾದ ಮಗಳು, “ನೀನು ನನ್ನ ಖುಷಿಗಾಗಿ ನನ್ನನ್ನು ಗೆಲ್ಲಿಸಬಹುದಿತ್ತು. ಆದರೆ, ನೀನು ಆರೀತಿ ಮಾಡದೇ ನೀನೇ ಗೆದ್ದಿದ್ದೀಯಾ. ನೀನು ನನಗೆ ಮೋಸ ಮಾಡುತ್ತೀಯಾ ಎಂದು ಕನಸಲ್ಲೂ ಭಾವಿಸಿರಲಿಲ್ಲ,” ಎಂದಿದ್ದಾಳೆ. ಅಲ್ಲದೆ ತಂದೆ ಜೊತೆಗಿನ ಸಂಬಂಧವನ್ನೂ ಸಂಪೂರ್ಣವಾಗಿ ಕಡಿದುಕೊಳ್ಳಲು ಆಕೆ ನಿರ್ಧರಿಸಿದ್ದಾಳೆ.ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಚರ್ಚೆ ಆಗುತ್ತಿದೆ.
Published by:Rajesh Duggumane
First published: