ಪತಿಯನ್ನು ಮರಕ್ಕೆ ಕಟ್ಟಿಹಾಕಿ ಗನ್​ ಪಾಯಿಂಟ್​ನಲ್ಲಿ ಅಮ್ಮ, ಮಗಳ ಅತ್ಯಾಚಾರ

news18
Updated:June 15, 2018, 8:42 AM IST
ಪತಿಯನ್ನು ಮರಕ್ಕೆ ಕಟ್ಟಿಹಾಕಿ ಗನ್​ ಪಾಯಿಂಟ್​ನಲ್ಲಿ ಅಮ್ಮ, ಮಗಳ ಅತ್ಯಾಚಾರ
  • Share this:
ನ್ಯೂಸ್​ 18 ಕನ್ನಡ

ಬಿಹಾರ್ (ಜೂ 15)​: ವೈದ್ಯನನ್ನು ಮರಕ್ಕೆ ಕಟ್ಟಿಹಾಕಿ ಆತನ ಕಣ್ಣೆದುರು ಆತನ ಪತ್ನಿ ಹಾಗು 12 ವರ್ಷದ ಮಗಳನ್ನು ಗನ್​ ಪಾಯಿಂಟ್​ನಲ್ಲಿ 20 ಜನರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಬಿಹಾರದ ಗಾಯದಲ್ಲಿ ನಡೆದಿದೆ.

ಗುರುವಾರ ರಾತ್ರಿ 8ಗಂಟೆ ಸಮಯದಲ್ಲಿ ವೈದ್ಯ ಆತನ ಕ್ಲಿನಿಕ್​ ಮುಗಿಸಿ  ಕುಟುಂಬದೊಂದಿಗೆ ಮನೆಗೆ ತೆರಳುವಾಗ ಕೊಂಚ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

20 ಜನರ ಗುಂಪಿನಲ್ಲಿ ಒರ್ವ ಮಹಿಳೆ ಕೂಡ ಇದ್ದು , ಸ್ಥಳೀಯರ ಸಹಾಯದಿಂದಾಗಿ ಪೊಲೀಸರು ಆರೊಪಿಗಳನ್ನು ಬಂಧಿಸಲಾಗಿದೆ. ಇದೇ ಗುಂಪು ಈ ಹಿಂದೆ ಈ ಮಾರ್ಗದಲ್ಲಿ ಹಾದು ಹೋಗುತ್ತಿದ್ದ ಯುವಕರನ್ನು ಅಡ್ಡಕಟ್ಟಿ ಮೊಬೈಲ್​ ಕಿತ್ತುಕೊಂಡಿದ್ದರು .

ಘಟನೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಕೊಂಚ್​ ಪೊಲೀಸ್​ ಠಾಣೆಯ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಘಟನೆ ಕುರಿತು ಆರ್​ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್​ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಜೊತೆ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಕೈ ಜೋಡಿಸಿದ ಬಳಿಕ ರಾಜಜ್ಯದ ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
First published:June 15, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ