ಕೊಲಂಬೋದಲ್ಲಿ ಸರಣಿ ಬಾಂಬ್​ ಸ್ಫೋಟಿಸಿದ 9 ಆತ್ಮಾಹುತಿ ದಾಳಿಕೋರರಲ್ಲಿ ಓರ್ವ ಮಹಿಳೆಯೂ ಇದ್ದಳು; ರಕ್ಷಣಾ ಸಚಿವ

ಶ್ರೀಲಂಕಾದಲ್ಲಿ ನಡೆದ ಬಾಂಬ್​ ಸ್ಪೋಟದಲ್ಲಿ ಸತ್ತವರ ಸಂಖ್ಯೆ ಏರುತ್ತಲೆ ಇದೆ. ಈವರೆಗೆ 359 ಜನ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

Seema.R | news18
Updated:April 24, 2019, 2:03 PM IST
ಕೊಲಂಬೋದಲ್ಲಿ ಸರಣಿ ಬಾಂಬ್​ ಸ್ಫೋಟಿಸಿದ 9 ಆತ್ಮಾಹುತಿ ದಾಳಿಕೋರರಲ್ಲಿ ಓರ್ವ ಮಹಿಳೆಯೂ ಇದ್ದಳು; ರಕ್ಷಣಾ ಸಚಿವ
ಶ್ರೀಲಂಕಾ ಬಾಂಬ್​ ಸ್ಪೋಟದ ಚಿತ್ರಣ
  • News18
  • Last Updated: April 24, 2019, 2:03 PM IST
  • Share this:
ಕೊಲೊಂಬೋದಲ್ಲಿ ಬಾಂಬ್​ ಸ್ಪೋಟ ನಡೆಸಿದ ಒಂಭತ್ತು ಜನ ಆತ್ಮಾಹುತಿ ದಾಳಿಕೋರರಲ್ಲಿ ಓರ್ವರು ಮಹಿಳೆಯಾಗಿದ್ದರು ಎಂದು ಶ್ರೀಲಂಕಾ ರಕ್ಷಣಾ ಮಂತ್ರಿ ರುವಾನ್​ ವಿಜೆವರ್ಧೆನೆ ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ನಡೆದ ಬಾಂಬ್​ ಸ್ಪೋಟದಲ್ಲಿ ಸತ್ತವರ ಸಂಖ್ಯೆ ಏರುತ್ತಲೆ ಇದೆ. ಈವರೆಗೆ 359 ಜನ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ದಾಳಿಗೆ ಸಂಬಂಧಿಸಿದಂತೆ 60 ಶಂಕಿತರನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್​ ವಕ್ತಾರ ರುವಾನ್​ ಗುಣಶೇಖರ ಮಾಹಿತಿ ನೀಡಿದ್ದಾರೆ.

ಎರಡು ದಿನಗಳ ಹಿಂದೆ ಈಸ್ಟರ್​ ಸಂಭ್ರದ ದಿನ ದ್ವೀಪ ರಾಷ್ಟ್ರದಲ್ಲಿ ನಡೆದ ಬಾಂಬ್​ ಸ್ಪೋಟದಿಂದಾಗಿ ವಿಶ್ವವೇ ಬೆಚ್ಚಿದೆ. ಈ ಘಟನೆಯ ಹೊಣೆಯನ್ನು ಇಸ್ಲಾಮಿಕ್​ ಸ್ಟೇಟ್​ ಸಂಘಟನೆ​ ಹೊತ್ತುಕೊಂಡಿದೆ.

ಶ್ರೀಮಂತ ಉದ್ಯಮಿ ಹಾಗೂ ಸ್ಪೈಸ್​ ವಾಣಿಜ್ಯಗಾರ ಮೊಹಮ್ಮದ್​ ಯೂಸಫ್​ ಇಬ್ರಾಹಿಂನ ಇಬ್ಬರು ಮಕ್ಕಳು  ಈ ಸರಣಿ ಬಾಂಬ್​ ಆತ್ಮಾಹುತಿ ದಾಳಿಕೋರರಾಗಿದ್ದಾರೆ. 33 ವರ್ಷದ ಇಮ್ಸತ್​ ಅಹಮದ್​ ಇಬ್ರಾಹಿಂ ಮತ್ತು 31 ವರ್ಷದ ಇಲಾಮ್​ ಅಹಮದ್​ ಇಬ್ರಾಹಿಂ ಸಹೋದರರು ಚಿನ್ನಮೊನ್​ ಗ್ರಾಂಡ್​ ಮತ್ತು ಶಾಂಗ್ರಿಲಾ ಹೊಟೇಲ್​ನಲ್ಲಿ ಬಾಂಬ್​ ಸ್ಪೋಟಿಸಿದವರು ಎಂದು ಭಾರತದ ಗುಪ್ತಚರ ಮೂಲಗಳು ಫಸ್ಟ್​ಪೋಸ್ಟ್​ಗೆ ತಿಳಿಸಿದೆ.

ಸಂಸತ್ತಿನಲ್ಲಿ ಪ್ರತಿಧ್ವನಿಸಿದ ರಕ್ಷಣಾ ಇಲಾಖೆ ಲೋಪ

ಈ ದಾಳಿಯ ಕುರಿತು ಹಿರಿಯ ಅಧಿಕಾರಿಗಳಿಗೆ ಈ ಮೊದಲೇ ಮಾಹಿತಿ ತಿಳಿದಿದ್ದು, ಉದ್ದೇಶಪೂರ್ವಕವಾಗಿ ಈ ಮಾಹಿತಿಯನ್ನು ಅವರು ಹಂಚಿಕೊಂಡಿರಲಿಲ್ಲ ಎಂದು ಸಂಸತ್ತಿನಲ್ಲಿ ನಾಯಕರು ತಿಳಿಸಿದ್ದಾರೆ.

ಈಸ್ಟರ್​ ಭಾನುವಾರದಂದು ದೇಶದಲ್ಲಿ ಶಾಂತಿ ಕದಡಲು ಉಗ್ರರು ಸಜ್ಜಾಗಿದ್ದರ ಕುರಿತು ಗುಪ್ತಚರ ಇಲಾಖೆಗೆ ಮಾಹಿತಿ ತಿಳಿದಿತ್ತು. ಆದರೆ ರಕ್ಷಣಾ ಇಲಾಖೆ ಉನ್ನತಾಧಿಕಾರಿಗಳು ಈ ಕುರಿತು ಸರಿಯಾದ ಕ್ರಮಕ್ಕೆ ಮುಂದಾಗಲಿಲ್ಲ ಎಂದು ಸಾರ್ವಜನಿಕ ಉದ್ಯಮ ಸಚಿವ ಲಕ್ಷಣ ಕಿರೈಲಾ ಸಂಸತ್ತಿನ ಮುಂದೆ ತಿಳಿಸಿದ್ದಾರೆ.ಇದನ್ನು ಓದಿ: SriLanka Blasts: ಚರ್ಚ್​ ಸ್ಪೋಟಿಸುವ ಮುನ್ನ ಬಾಲಕಿಯ ತಲೆ ಸವರಿದ್ದ ಶಂಕಿತ ಆತ್ಮಾಹುತಿ ದಾಳಿಕೋರ!

ದೇಶದ ಚರ್ಚ್​ , ಹೊಟೇಲ್​ ಹಾಗೂ ರಾಜಕೀಯ ನಾಯಕರ ಮೇಲೆ ಬಾಂಬ್​ ದಾಳಿಯಾಗುವ ಬಗ್ಗೆ ಏಪ್ರಿಲ್​ 4ರಂದು ರಂದು ಭಾರತದ ಗುಪ್ತಚರ ಇಲಾಖೆ ಮಾಹಿತಿ ನೀಡಿತು. ಏಪ್ರಿಲ್​ 7ರಂದು ಅಧ್ಯಕ್ಷ ಮಹಿತ್ತಿಪಾಲ್​ ಸೇರಿಸೇನಾ ನೇತೃತ್ವದಲ್ಲಿ ರಕ್ಷಣಾ ಮಂಡಳಿ ಸಭೆ ಕೂಡ ನಡೆದಿತ್ತು. ಆದರೆ, ಈ ಮಾಹಿತಿಯನ್ನು ಅವರು ಬೇರೆಲ್ಲೂ ಹಂಚಿಕೊಂಡಿರಲಿಲ್ಲ ಎಂದಿದ್ದಾರೆ.

ಈ ಗುಪ್ತಚರ ಮಾಹಿತಿಯನ್ನು ಯಾರೋ ನಿಯಂತ್ರಿಸುತ್ತಿದ್ದಾರೆ. ರಕ್ಷಣಾ ಮಂಡಳಿ ರಾಜಕೀಯ ನಡೆಸುತ್ತಿದೆ. ಈ ಕುರಿತು ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

 

First published: April 24, 2019, 2:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading