ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಎದುರು ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ

ಘಟನೆಯಾದ ತಕ್ಷಣ ಮಹಿಳೆ ಫೇಸ್​ಬುಕ್​ ಮೂಲಕ ಪೊಲೀಸರ ಸಂಪರ್ಕಕ್ಕೆ ಮುಂದಾದರು. ಆದರೆ, ಅದು ಸಾಧ್ಯವಾಗಲಿಲ್ಲ. ಇದಾದ ಬಳಿಕ ಆಕೆ ಟ್ವೀಟರ್​ನಲ್ಲಿ ಪೊಲೀಸರೊಂದಿಗೆ ಸಂಪರ್ಕಿಸಿದ್ದು, ಬಳಿಕ ದೆಹಲಿ ಮೆಟ್ರೋ ನಿಲ್ದಾಣ ಅಧಿಕಾರಿಗಳ ಮುಂದೆ ದೂರು ದಾಖಲಿಸಿದ್ದಾರೆ.

Seema.R | news18
Updated:June 18, 2019, 6:57 PM IST
ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಎದುರು ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ
ದೆಹಲಿ ಮೆಟ್ರೋ
  • News18
  • Last Updated: June 18, 2019, 6:57 PM IST
  • Share this:
ನವದೆಹಲಿ (ಜೂ.18): ರಾತ್ರಿ ಸಮಯದಲ್ಲಿ ಮೆಟ್ರೋ ಪ್ರಯಾಣ ಬೆಳಸಿದ ಮಹಿಳೆ ಮುಂದೆ ಅಪರಿಚಿತ ವ್ಯಕ್ತಿಯೊಬ್ಬ ಹಸ್ತು ಮೈಥುನ ಮಾಡಿಕೊಂಡಿರುವ ಘಟನೆ ನಡೆದಿದ್ದು, ಈ ಕುರಿತು ಮಹಿಳೆ ದೂರ ದಾಖಲಿಸಿದ್ದಾರೆ.

ಗುರುಗ್ರಾಮದ ಹುಡಾ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ, 29 ವರ್ಷದ ಇಂಟಿರಿಯರ್​ ಡಿಸೈನರ್​ ರಾತ್ರಿ 9.25ಕ್ಕೆ ಮೆಟ್ರೋ ನಿಲ್ದಾಣದಲ್ಲಿದ್ದ ಈ ಘಟನೆ ನಡೆದಿದೆ.

ಮೆಟ್ರೋ ನಿಲ್ದಾಣದಲ್ಲಿದ್ದ ಬಟ್ಟೆ ಅಂಗಡಿಯಿಂದ ಹೊರಬಂದು ಮೆಟ್ಟಿಲು ಹತ್ತಿದಾಗ ನನ್ನ ಹಿಂದೆ ಏನೋ ಆಗುತ್ತಿರುವ ಅನುಭವವಾಯಿತು. ತಿರುಗಿ ನೋಡಿದರೆ ವ್ಯಕ್ತಿಯೊಬ್ಬ ನನ್ನ ಮುಂದೆ ಹಸ್ತ ಮೈಥನ ಮಾಡಿಕೊಳ್ಳಲು ಮುಂದಾದ. ಗಾಬರಿಗೆ ಒಳಗಾದ ನಾನು ಹೆದರಿ. ಆಘಾತಕ್ಕೆ ಒಳಗಾದೆ. ಆತ ನನ್ನ ವಿರುದ್ಧ ಕೆಟ್ಟಪದಗಳಿಂದ ಮಾತನಾಡಲು ಶುರು ಮಾಡಿದ. ಆತನ ಕೆನ್ನೆಗೆ ನಾನು ಬಾರಿಸಿ ಎಂದು ಮಹಿಳೆ ದೂರಿನಲ್ಲಿ ದಾಖಲಿಸಿದ್ದಾರೆ.

ಘಟನೆಯಾದ ತಕ್ಷಣ ಮಹಿಳೆ ಫೇಸ್​ಬುಕ್​ ಮೂಲಕ ಪೊಲೀಸರ ಸಂಪರ್ಕಕ್ಕೆ ಮುಂದಾದರು. ಆದರೆ, ಅದು ಸಾಧ್ಯವಾಗಲಿಲ್ಲ. ಇದಾದ ಬಳಿಕ ಆಕೆ ಟ್ವೀಟರ್​ನಲ್ಲಿ ಪೊಲೀಸರೊಂದಿಗೆ ಸಂಪರ್ಕಿಸಿದ್ದು, ಬಳಿಕ ದೆಹಲಿ ಮೆಟ್ರೋ ನಿಲ್ದಾಣ ಅಧಿಕಾರಿಗಳ ಮುಂದೆ ದೂರು ದಾಖಲಿಸಿದ್ದಾರೆ.

ಘಟನೆ ಕುರಿತು ಮಾತನಾಡಿರು ಸಂತ್ರಸ್ತ ಮಹಿಳೆ ಸಿಸಿಟಿವಿಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ್ದೇನೆ. ಈ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸುವ ಬಗ್ಗೆ ಯೋಚಿಸುತ್ತಿದ್ದೇನೆ ಕಾರಣ ನನ್ನ ಸುರಕ್ಷತೆ ದೃಷ್ಟಿಯಿಂದ ಎಂದಿದ್ದಾರೆ.

ಇದನ್ನು ಓದಿ: ಪುಲ್ವಾಮಾ ದಾಳಿಗೆ ಉಗ್ರ ಬಳಸಿದ್ದ ಕಾರಿನ ಮಾಲೀಕ ಸಜ್ಜದ್​ ಭಟ್​ ಸೈನಿಕರ ಗುಂಡಿಗೆ ಬಲಿ

ಟ್ವೀಟ್​ ಮೂಲಕ ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಧ್ವನಿ ಎತ್ತಿರುವ ಅವರು, ನಿಲ್ದಾಣದಲ್ಲಿ ಮಹಿಳೆಗೆ ಯಾವುದೇ ಭದ್ರತೆ ಇಲ್ಲ. ನಮಗೆ ಮೆಟ್ರೋದಲ್ಲಿ ಉಚಿತ್ರ ಸಂಚಾರಕ್ಕಿಂತಲೂ ಹೆಚ್ಚಾಗಿ ಸುರಕ್ಷತೆ ಬೇಕಾಗಿದೆ. ಸರ್ಕಾರದಿಂದ ನಾವು ಮಹಿಳಾ ಭದ್ರತೆಯನ್ನು ನಿರೀಕ್ಷಿಸುತ್ತೇವೆ. ಆದರೆ, ಸರ್ಕಾರ ಇದನ್ನು ನೀಡಲು ವಿಫಲವಾಗಿವೆ. ರಾತ್ರಿ 9.25ಕ್ಕೆಲ್ಲಾ ಓಡಾಡುವುದಕ್ಕೆ ಹೆದರಿಕೆಯಾಗುತ್ತದೆ. 9 ಗಂಟೆ ಎಂದರೆ ತಡರಾತ್ರಿಯೇ ಎಂದು ಪ್ರಶ್ನಿಸಿದ್ದಾರೆ.
First published:June 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ