ಎತ್ತ ಸಾಗುತ್ತಿದೆ ನಮ್ಮ ಭಾರತ(India)? ಹೆಣ್ಣು ಮಕ್ಕಳ(Women)ನ್ನು ತುಂಬಾ ಗೌರವ(Respect)ದಿಂದ ನೋಡುವ ದೇಶ ನಮ್ಮದು. ಆದರೆ ಪ್ರತಿ ದಿನ ಒಂದೊಲ್ಲ ಒಂದು ರೀತಿಯಲ್ಲಿ ಆಕೆಯ ಮೇಲೆ ಶೋಷಣೆಗಳು, ಹಿಂಸೆಗಳು ನಡೆಯುತ್ತಲೆ ಇರುತ್ತವೆ. ಇದಕ್ಕಲ್ಲ ಎಂದಿಗೂ ಕೊನೆ ಇಲ್ವಾ? ಹೆಣ್ಣು ಮಕ್ಕಳು ಏನೇ ಮಾಡಿದರೂ ತಪ್ಪಾ? ಆಕೆಗೆ ಇಷ್ಟವಿರುವ ಹಾಗೇ ಇರಲು ಈ ಸಮಾಜ ಬಿಡುತ್ತಿಲ್ಲ ಯಾಕೆ? ಗಂಡಸರು ಏನೇ ಮಾಡಿದರೂ ಅದನ್ನು ಒಪ್ಪಿಕೊಳ್ಳುವ ಸಮಾಜ, ಮಹಿಳೆ ತನಗಿಷ್ಟ ಬಂದ ಬಟ್ಟೆ(Cloths)ಯನ್ನು ಧರಿಸಿದರೆ ಸಾಕು ಆಕೆ ಕೆಟ್ಟವಳು ಎಂದು ಹಣೆಪಟ್ಟಿ ನೀಡುತ್ತಾರೆ. ಜಗತ್ತು ಮಾತ್ರ ಆಧುನಿಕತೆಯತ್ತ ವಾಲುತ್ತಿದೆ. ಆದರೆ ಕೆಲವರ ಯೋಚನೆಗಳು ಮಾತ್ರ ಇನ್ನೂ ಸಣ್ಣದಾಗಿಯೇ ಇದೆ. ಇಲ್ಲೊಬ್ಬಳು ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವತಿ ಜೀನ್ಸ್ ಪ್ಯಾಂಟ್(Jeans Pant) ಧರಿಸಿದ್ದಾಳೆ ಅನ್ನುವ ಒಂದೇ ಕಾರಣಕ್ಕೆ ಅಂಗಡಿ(Shop)ಯಿಂದ ಆಚೆ ಹಾಕಿರುವ ಘಟನೆ ನಡೆದಿದೆ. ಅಷ್ಟೇ ಅಲ್ಲದೇ ಬುರ್ಖಾ(Burkha) ಏಕೆ ಧರಿಸಿಲ್ಲ, ಜೀನ್ಸ್ ಪ್ಯಾಂಟ್ ಯಾಕೆ ಹಾಕಿಕೊಂಡಿರುವುದು ಎಂದು ಆ ಅಂಗಡಿಯ ಮಾಲೀಕ(Shop Owner)ರು ಆ ಯುವತಿಗೆ ಪ್ರಶ್ನೆಯನ್ನೂ ಮಾಡಿದ್ದಾರೆ.
ಬುರ್ಖಾ ಧರಿಸಿಯೇ ಮನೆಯಿಂದ ಹೊರಬರಬೇಕಂತೆ
ಮುಸ್ಲಿಂ ಯುವತಿಯೊಬ್ಬಳು ಬುರ್ಖಾ ಬದಲು ಜೀನ್ಸ್ ಪ್ಯಾಂಟ್ ಧರಿಸಿದ್ದರು ಎಂಬ ಕಾರಣಕ್ಕೆ ಆಕೆಯನ್ನು ಅಂಗಡಿಯಿಂದ ಹೊರಕ್ಕೆ ತಳ್ಳಿರುವ ಶಾಕಿಂಗ್ ಘಟನೆ ಅಸ್ಸಾಂನಲ್ಲಿ ನಡೆದಿದೆ. ಅಲ್ಲದೆ, ಆಕೆಯನ್ನ ನಿಂಧಿಸಿ ಮನೆಯಿಂದ ಹೊರಕ್ಕೆ ಕಾಲಿಟ್ಟಾಗ ಜೀನ್ಸ್ ಪ್ಯಾಂಟ್ ಧರಿಸಬಾರದು, ಬುರ್ಖಾ ಹಾಕಿಕೊಳ್ಳಬೇಕು ಎಂದು ಬೆದರಿಕೆ ಕೂಡ ಹಾಕಿದ್ದಾರಂತೆ. ಅಸ್ಸಾಂನ ಬಿಸ್ವನಾಥ್ ಚರಿಯಾಲಿಯಲ್ಲಿರುವ ಎಲೆಕ್ಟ್ರಾನಿಕ್ ಅಂಗಡಿಯೊಂದರ ಮಾಲೀಕ ನೂರುಲ್ ಅಮೀನ್ ಎಂಬಾತ, ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕಾಗಿ 22 ವರ್ಷದ ಮುಸ್ಲಿಂ ಯುವತಿಯನ್ನು ಅಂಗಡಿಯಿಂದ ಹೊರಕ್ಕೆ ದಬ್ಬಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.
ಇದನ್ನು ಓದಿ:
ಪ್ರೀತಿಸಿ ಮದ್ವೆಯಾಗಿದ್ದಕ್ಕೆ ನದಿಯಲ್ಲಿ ಮುಳುಗಿಸಿ, ಕೂದಲು ಕತ್ತರಿಸಿ ಎಂಜಲು ತಿನ್ನಿಸಿದ ತಂದೆ
ಅಸಲಿಗೆ ಅಲ್ಲಿ ನಡೆದಿದ್ದೇನು?
ಸಂತ್ರಸ್ಥ ಯುವತಿ ಇಯರ್ಫೋನ್ ಖರೀದಿಸಲು ಎಲೆಕ್ಟ್ರಾನಿಕ್ ಅಂಗಡಿಗೆ ಹೋಗಿದ್ದಾರೆ. ಆದರೆ, ಆಕೆಗೆ ಇಯರ್ ಫೋನ್ ಮಾರಾಟ ಮಾಡಲು ನಿರಾಕರಿಸಿದ ಅಂಗಡಿಯ ಮಾಲೀಕ ಅಮೀನ್, ಆಕೆ ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕಾಗಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ, ಬುರ್ಖಾ ಧರಿಸುವಂತೆ ಅಂಗಡಿಯ ಮಾಲೀಕರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.ಈ ಘಟನೆಯ ನಂತರ, ಯುವತಿಯ ತಂದೆ ತನ್ನ ಮಗಳೊಂದಿಗೆ ತೋರಿದ ವರ್ತನೆಯನ್ನ ಪ್ರಶ್ನಿಸಿಲು ಎಲೆಕ್ಟ್ರಾನಿಕ್ ಸ್ಟೋರ್ಗೆ ಭೇಟಿ ನೀಡಿದ್ದರು. ಆದರೆ, ಅವರೊಂದಿಗೂ ಅಂಗಡಿಯ ಮಾಲೀಕ ನೂರುಲ್ನ ಪುತ್ರ ರಫಿಕುಲ್ ಇಸ್ಲಾಂ ಅಮಾನುಷವಾಗಿ ನಡೆಸಿಕೊಂಡಿದ್ದು, ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಇಬ್ಬರೂ ಆರೋಪಿಗಳು ಅಂದರ್
ಈ ಸಂಬಂಧ, ಯುವತಿಯ ತಂದೆ ಹಾಗೂ ಸಂತ್ರಸ್ಥೆ ಯುವತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. “ನಾನು ಇಯರ್ಫೋನ್ ಖರೀದಿಸಲು ಅಂಗಡಿಗೆ ಹೋಗಿದ್ದೆ. ಆದರೆ, ಅಂಗಡಿ ಮಾಲೀಕರಾದ ಅಮೀನ್ ನನಗೆ ಇಯರ್ ಫೋನ್ ಮಾರಾಟ ಮಾಡಲು ನಿರಾಕರಿಸಿದರು ಮತ್ತು ಜೀನ್ ಪ್ಯಾಂಟ್ ಧರಿಸಿದ್ದಕ್ಕಾಗಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು. ಬುರ್ಖಾ ಧರಿಸುವಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.ಬಳಿಕ ಬಿಸ್ವನಾಥ್ ಪೊಲೀಸರು ಆರೋಪಿ ನೂರುಲ್ ಅಮೀನ್ ಮತ್ತು ಅವರ ಮಗ ರಫಿಕುಲ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನು ಓದಿ :
ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಮುಂದಾದ 10ನೇ ತರಗತಿ ಬಾಲಕ; ಕೇರಳದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ
ಇತ್ತೀಚೆಗೆ ದೇಶದ ಹಲವೆಡೆ ನೈತಿಕ ಪೊಲೀಸ್ ಗಿರಿಯ ಘಟನೆಗಳು ಆಗಾಗ್ಗೆ ವರದಿಯಾಗುತ್ತಿವೆ. ಇಂತಹ ಘಟನೆಗಳು ಅಸಾಂವಿಧಾನಿಕವಾಗಿರುವುದಲ್ಲದೆ ಯುವತಿಯ ಸ್ವಾತಂತ್ರ್ಯವನ್ನು ನಿರಾಕರಿಸುವಂತಿದೆ. ಯುವತಿ ತನಗಿಷ್ಟ ಬಂದ ಉಡುಪನ್ನು ಧರಿಸುವ ಹಕ್ಕು ಆಕೆಗಿದೆ. ಆದರೆ, ಆಕೆಗೆ ಸಂಬಂಧಪಡದೆ ಇರುವವರು ಈ ರೀತಿ ಪ್ರಶ್ನೆ ಮಾಡಿರುವುದು ಅಥವಾ ಬೆದರಿಕೆ ಹಾಕುವ ಘಟನೆಗಳು ನಡೆದಿರುವುದು ದುರಂತ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ