• Home
  • »
  • News
  • »
  • national-international
  • »
  • Gujarat: ಪಿಎಂ ಎದುರು ಬಿಜೆಪಿ ಹೊಗಳಿದ ಪುಟ್ಟ ಹುಡುಗಿ, ಭೇಷ್ ಎಂದ ಮೋದಿ: ಚುನಾವಣಾ ಆಯೋಗದ ವಿರುದ್ಧ ಕೈ ಕಿಡಿ!

Gujarat: ಪಿಎಂ ಎದುರು ಬಿಜೆಪಿ ಹೊಗಳಿದ ಪುಟ್ಟ ಹುಡುಗಿ, ಭೇಷ್ ಎಂದ ಮೋದಿ: ಚುನಾವಣಾ ಆಯೋಗದ ವಿರುದ್ಧ ಕೈ ಕಿಡಿ!

ರಂಗೇರಿದ ಗುಜರಾತ್ ಚುನಾವಣಾ ಕಣ

ರಂಗೇರಿದ ಗುಜರಾತ್ ಚುನಾವಣಾ ಕಣ

ಸೋಮವಾರ ಸಂಜೆಯಿಂದ ಅಂತರ್ಜಾಲದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ಗುಜರಾತಿ ಭಾಷೆಯಲ್ಲಿ ಬಿಜೆಪಿಯನ್ನು ಹೊಗಳಿ ಮಾತನಾಡಿರುವ ದೃಶ್ಯವಿದೆ. ಈ ವಿಡಿಯೋದಲ್ಲಿ ಪ್ರಧಾನಿ ಮೋದಿಯವರು ಆ ಹುಡುಗಿಯ ಮಾತುಗಳನ್ನು ಸಾವಧಾನವಾಗಿ ಕೇಳುತ್ತಿರುವುದನ್ನು ಕಾಣಬಹುದು. ಇದೀಗ ಈ ವಿಡಿಯೋ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ಚುನಾವಣಾ ಪ್ರಚಾರಕ್ಕೆ ಬಿಜೆಪಿ ಚಿಕ್ಕ ಮಕ್ಕಳನ್ನು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.

ಮುಂದೆ ಓದಿ ...
  • News18 Kannada
  • Last Updated :
  • Ahmadabad (Ahmedabad) [Ahmedabad], India
  • Share this:

ಅಹಮದಾಬಾದ್(ನ.22): ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ (Gujarat Assembly Elections) ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಪ್ರತಿಪಕ್ಷವೂ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲು ಹವಣಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸೋಮವಾರ ಸಂಜೆಯಿಂದ ಅಂತರ್ಜಾಲದಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದ್ದು, ಅದರಲ್ಲಿ ಚಿಕ್ಕ ಹುಡುಗಿಯೊಬ್ಬರು ಪ್ರಧಾನಿ ಮೋದಿಯವರೊಂದಿಗೆ (Prime Minister Narendra Modi) ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ವಿಡಿಯೋದಲ್ಲಿ ಹುಡುಗಿ ಗುಜರಾತಿ ಭಾಷೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಕರೆ ನೀಡಿದ್ದಾಳೆ. ಈ ವಿಡಿಯೋ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ಚುನಾವಣಾ ಪ್ರಚಾರಕ್ಕೆ ಬಿಜೆಪಿ ಚಿಕ್ಕ ಮಕ್ಕಳನ್ನು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ (Congress) ಹೇಳಿದೆ.


ವಿಡಿಯೋದಲ್ಲಿ ಬಾಲಕಿಯ ಕೊರಳಿಗೆ ಬಿಜೆಪಿಯ ಸ್ಕಾರ್ಫ್ ಹಾಕಿರುವುದನ್ನು ಕಾಣಬಹುದು. 'ಬಿಜೆಪಿ ನಮ್ಮನ್ನು ಉಳಿಸುತ್ತದೆ, ಬಿಜೆಪಿ ಮತ್ತೆ ಬರುತ್ತದೆ' ಎಂದು ಈ ಪುಟ್ಟ ಬಾಲಕಿ ವಿಡಿಯೋದಲ್ಲಿ ಹೇಳುತ್ತಾಳೆ. ಇದರೊಂದಿಗೆ, ಈ ವಿಡಿತಯೋದಲ್ಲಿ, ರಾಮಮಂದಿರ, ಅಯೋಧ್ಯೆಯಲ್ಲಿ ಏಕತೆಯ ಪ್ರತಿಮೆ ಸೇರಿದಂತೆ ಬಿಜೆಪಿಯ ಸಾಧನೆಗಳನ್ನು ಹುಡುಗಿ ಬಣ್ಣಿಸಿದ್ದಾರೆ. ಈ ಹುಡುಗಿ ಮಾತನಾಡುವಾಗ ಪ್ರಧಾನಿ ಮೋದಿ ಕೂಡ ಈ ಹುಡುಗಿಯ ಮಾತನ್ನು ಬಹಳ ಎಚ್ಚರಿಕೆಯಿಂದ ಆಲಿಸುತ್ತಿದ್ದರು. ಭಾಷಣ ಕೇಳಿದ ಪ್ರಧಾನಿ ಮೋದಿ ಕೂಡಾ ಆ ಬಾಲಕಿಯನ್ನು ಹೊಗಳಿ ಆಕೆಯ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.


ಇದನ್ನೂ ಓದಿ: Hardik Patel: 'ಬರೀ ಮೋದಿಯನ್ನೇ ಬಯ್ತಾರೆ', ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಹಾರ್ದಿಕ್ ಪಟೇಲ್


ಕಾಂಗ್ರೆಸ್​ ಗರಂ


ಈ ವಿಡಿಯೋ ಕುರಿತು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಪ್ರಶ್ನೆಗಳನ್ನು ಎತ್ತಿದ್ದಾರೆ. ಟ್ವೀಟ್ ಮಾಡುವ ಮೂಲಕ ಬಿಜೆಪಿಯನ್ನು ಟಾರ್ಗೆಟ್ ಮಾಡಿರುವ ಅವರು, ಚಿಕ್ಕ ಮಗುವನ್ನು ಪ್ರಧಾನಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಚುನಾವಣಾ ಆಯೋಗ ಎಲ್ಲಿದೆ? ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ (NCPCR) ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.


ಚುನಾವಣಾ ಆಯೋಗಕ್ಕೆ ಸವಾಲೆಸೆದ ಸುಪ್ರಿಯಾ ಶ್ರೀನತೆ


ವಾಸ್ತವವಾಗಿ, ಈ ವಿಡಿಯೋ ಕುರಿತಾದ ಮೊದಲ ಪ್ರಶ್ನೆಯನ್ನು ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಮುಖ್ಯಸ್ಥರು ಎತ್ತಿದ್ದಾರೆ. ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ಸುಪ್ರಿಯಾ ಶ್ರೀನತೆ ಟ್ವೀಟ್ ಮಾಡುವ ಮೂಲಕ ಬಿಜೆಪಿಯನ್ನು ಗುರಿಯಾಗಿಸಿದ್ದಾರೆ. ರಾಜಕೀಯದಲ್ಲಿ ಮಕ್ಕಳನ್ನು ಹೀಗೆ ಬಳಸಿಕೊಳ್ಳುತ್ತಾರೆ ಎಂದು ಬರೆದಿರುವ ಅವರು, ಪ್ರಧಾನಿ ಮೋದಿ ಚುನಾವಣಾ ಪ್ರಚಾರಕ್ಕೆ ಚಿಕ್ಕ ಹುಡುಗಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಇದರೊಂದಿಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಟ್ವೀಟ್ ಮಾಡಿರುವ ಅವರು, ಕುಂಭಕರ್ಣನಂತೆ ನಿದ್ದೆ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.


ಇದಾದ ಬಳಿಕ ಚುನಾವಣಾ ಆಯೋಗಕ್ಕೆ ಟ್ಯಾಗ್ ಮಾಡಿ, ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಬೇಕು ಎಂದು ಬರೆದುಕೊಂಡಿದ್ದಾರೆ. ಸುಪ್ರಿಯಾ ಶ್ರೀನೆತ್ ಅವರ ಈ ಟ್ವೀಟ್ ಅನ್ನು ರೀಟ್ವೀಟ್ ಮಾಡುವಾಗ, ಜೈರಾಮ್ ರಮೇಶ್ ಕೂಡಾ ಪ್ರಶ್ನೆಗಳನ್ನು ಎತ್ತಿದ್ದಾರೆ.


ಇದನ್ನೂ ಓದಿ: ರಾಜೀವ್ ಗಾಂಧಿ ಹಂತಕರ ರಿಲೀಸ್​: ನಳಿನಿ ಸೇರಿ 6 ಅಪರಾಧಿಗಳ ಬಿಡುಗಡೆಗೆ ಸುಪ್ರೀಂ ಆದೇಶ!


ಕನ್ಹಯ್ಯಾ ಕಿಡಿ


ಅವರು ಮಾಥ್ರವಲ್ಲದೇ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಕೂಡ ಈ ವಿಡಿಯೋ ಬಗ್ಗೆ ಬಿಜೆಪಿಯನ್ನು ಗುರಿಯಾಗಿಸಿದ್ದಾರೆ. ಕನ್ಹಯ್ಯಾ ಈ ಬಗ್ಗೆ ಬರೆಯುತ್ತಾ, 'ರಾಹುಲ್ ಗಾಂಧಿಯವರೊಂದಿಗೆ ಮಕ್ಕಳು ನಡೆದುಕೊಂಡು ಹೋಗುವುದನ್ನು ಎನ್‌ಸಿಪಿಸಿಆರ್ ಗಮನಿಸಿದೆ. ಇಂದು ನೀವು ಮಕ್ಕಳೊಂದಿಗೆ ಪ್ರಧಾನಿಯ ಚಿತ್ರವನ್ನು ನೋಡಿದ್ದೀರಿ, ಎನ್‌ಸಿಪಿಸಿಆರ್​ಗೆ ಈ ಬಗ್ಗೆ ಅರಿವಿದೆಯೇ?' ಎಂದು ಕೇಳಿದ್ದಾರೆ.

Published by:Precilla Olivia Dias
First published: