ಕಾಲಿನ ಮಧ್ಯೆ ಬಡಿಗೆ ಇಟ್ಟುಕೊಂಡು ಡ್ರಿಲ್; ಕೆಟ್ಟ ರೀತಿಯಲ್ಲಿ ಟ್ರೋಲ್ ಆದ ಉತ್ತರ ಪ್ರದೇಶ ಪೊಲೀಸರು

ಅಯೋಧ್ಯೆ ತೀರ್ಪಿನ ವೇಳೆ ವಿವಾದದ ಕೇಂದ್ರ ಬಿಂದು ಆಗಿದ್ದ ಉತ್ತರ ಪ್ರದೇಶಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಇದಕ್ಕೂ ಹಿಂದಿನ ದಿನ ಪೊಲೀಸರು ಅಣಕು ಡ್ರಿಲ್​ ​ ಪ್ರದರ್ಶನ ಮಾಡಿದ್ದರು. ಈಗ ಈ ವಿಚಾರ ಟ್ರೋಲಿಗರಿಗೆ ಆಹಾರವಾಗಿದೆ.  

Rajesh Duggumane | news18-kannada
Updated:November 13, 2019, 2:49 PM IST
ಕಾಲಿನ ಮಧ್ಯೆ ಬಡಿಗೆ ಇಟ್ಟುಕೊಂಡು ಡ್ರಿಲ್; ಕೆಟ್ಟ ರೀತಿಯಲ್ಲಿ ಟ್ರೋಲ್ ಆದ ಉತ್ತರ ಪ್ರದೇಶ ಪೊಲೀಸರು
ಉತ್ತರ ಪ್ರದೇಶ ಪೊಲೀಸರು ಡ್ರಿಲ್​ ನಡೆಸಿದ ದೃಶ್ಯ
  • Share this:
ಲಖನೌ (ನ.13): ಕೆಲವೊಂದು ವಿಚಾರಗಳನ್ನು ಒಳ್ಳೆಯ ದೃಷ್ಟಿಯಿಂದಲೇ ಮಾಡಿದ್ದರೂ ಅದು ಟ್ರೋಲ್ ಆಗಿ ಬಿಡುತ್ತದೆ. ಉತ್ತರ ಪ್ರದೇಶದ ಪೊಲೀಸರು ಕೂಡ ಈಗ ಇದೇ ರೀತಿ ಎಡವಟ್ಟು ಮಾಡಿಕೊಂಡಿದ್ದಾರೆ.

ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ಶನಿವಾರ ತೀರ್ಪು ನೀಡಿತ್ತು. ಯಾವುದೇ ಗಲಭೆಗಳು ಉಂಟಾಗಬಾರದು ಎನ್ನುವ ಕಾರಣಕ್ಕೆ ಎಲ್ಲೆಡೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಅದರಲ್ಲೂ ವಿವಾದದ ಕೇಂದ್ರ ಬಿಂದು ಆಗಿದ್ದ ಉತ್ತರ ಪ್ರದೇಶಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಈ ವೇಳೆ ಪೊಲೀಸರು ಅಣಕು ಡ್ರಿಲ್​ ​ ಪ್ರದರ್ಶನ ಮಾಡಿದ್ದರು. ಇದು ಈಗ ಟ್ರೋಲಿಗರಿಗೆ ಆಹಾರವಾಗಿದೆ.

ಸಮಾಜವಾದಿ ನಾಯಕ ವಿಕಾಸ್​ ಯಾದವ್​ ಈ ವಿಡಿಯೋ ಪೋಸ್ಟ್​ ಮಾಡಿದ್ದರು. ಫೀರೋಜ್​ಬಾದ್​ನಲ್ಲಿ ಅಣಕು ಡ್ರಿಲ್​ ನಡೆದಿತ್ತು. ಕುದುರೆ ಇಲ್ಲ ಎನ್ನುವ ಕಾರಣಕ್ಕೆ ಕೋಲನ್ನೇ ಕಾಲಿನ ಮಧ್ಯೆ ಇಟ್ಟು ಕುದರೆ ಎಂದು ತಿಳಿದು ಪ್ರಾಕ್ಟೀಸ್​ ಮಾಡಲಾಗಿತ್ತು.

“ಗುಂಪನ್ನು ನಿಯಂತ್ರಣ ಮಾಡಲು ಈ ಡ್ರಿಲ್​ ಸಹಕಾರಿ. ಆದರೆ, ನಮ್ಮಲ್ಲಿ ಕುದುರೆ ಇಲ್ಲ ಎನ್ನುವ ಕಾರಣಕ್ಕೆ, ಕೋಲನ್ನೇ ಕುದುರೆ ಎಂದು ಭಾವಿಸಿಕೊಳ್ಳಿ ಎನ್ನುವ ಸೂಚನೆ ನೀಡಿದ್ದೇವು,” ಎಂದು ಅಲ್ಲಿನ ಪೊಲೀಸ್​ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: KGF: ಇನ್ನೂ ನಿಲ್ಲದ ಕೆ.ಜಿ.ಎಫ್ ಹವಾ: ಕನ್ನಡ ಸಿನಿಮಾ ಈಗ ಉತ್ತರ ಪ್ರದೇಶ ಪೊಲೀಸರ ಹೊಸ ಅಸ್ತ್ರ..!

ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ಈ ವಿಡಿಯೋವನ್ನು ಟ್ರೋಲ್​ ಮಾಡಿದ್ದಾರೆ. ಇನ್ನೂ ಪೊಲೀಸರಿಗೆ ಸರಿಯಾದ ವ್ಯವಸ್ಥೆ ಇಲ್ಲ ಎಂದು ಕೆಲವರು ಬೇಸರ ಹೊರ ಹಾಕಿದ್ದಾರೆ.

First published:November 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading