HOME » NEWS » National-international » WITH ALLEGATIONS OF INSTIGATING FARMERS RIOT AT DELHI WHAT ROLE HAD DEEP SIDHU LAKHA PLAYED SNVS

ರೈತರ ದಂಗೆಯ ಹಿಂದಿನ ರಾತ್ರಿ ನಡೆದದ್ದೇನು? ದೀಪ್ ಸಿಧು ಎಂಬ ಪಂಜಾಬಿ ನಟನ ಪಾತ್ರವೇನು?

ಗಣರಾಜ್ಯೋತ್ಸವ ದಿನದ ಹಿಂದಿನ ರಾತ್ರಿ, ಅಂದರೆ ಜ. 25ರ ರಾತ್ರಿ ಪ್ರತಿಭಟನಾನಿರತ ರೈತರ ಸಭೆ ನಡೆದಿತ್ತು. ಈ ವೇಳೆ ದೀಪ್ ಸಿಧು ಮತ್ತು ಲಖ ಸಿಧಾನ ಅವರು ವಿಭಿನ್ನ ನಿಲುವು ತಳೆದಿದ್ದರೆನ್ನಲಾಗಿದೆ. ಆ ಸಭೆಯಲ್ಲಿ ಅವರು ಮಾತನಾಡಿದ್ದೇನು? ರೈತರ ದಂಗೆಯ ಹಿಂದೆ ಅವರ ಪಾತ್ರವೇನು?

Vijayasarthy SN | news18
Updated:January 27, 2021, 2:26 PM IST
ರೈತರ ದಂಗೆಯ ಹಿಂದಿನ ರಾತ್ರಿ ನಡೆದದ್ದೇನು? ದೀಪ್ ಸಿಧು ಎಂಬ ಪಂಜಾಬಿ ನಟನ ಪಾತ್ರವೇನು?
ದೀಪ್ ಸಿಧು
  • News18
  • Last Updated: January 27, 2021, 2:26 PM IST
  • Share this:
ನವದೆಹಲಿ(ಜ. 27): ನಿನ್ನೆ ಗಣರಾಜ್ಯೋತ್ಸವ ದಿನದಂದು ಪ್ರತಿಭಟನಾನಿರತ ರೈತರು ನಡೆಸಿದ ದಂಗೆ ಘಟನೆ ಇಡೀ ಜಗತ್ತನ್ನು ಭಾರತದತ್ತ ಮತ್ತೊಮ್ಮೆ ತಿರುಗು ನೋಡುವಂತೆ ಮಾಡಿದೆ. ಐತಿಹಾಸಿಕ ಕೆಂಪುಕೋಟೆಯ ಮೇಲೆ ಲಗ್ಗೆ ಇಟ್ಟು ರೈತರು ಬೆಚ್ಚಿಬೀಳಿಸಿದ್ಧಾರೆ. ಈ ಘಟನೆಯ ಹಿಂದೆ ನಿಜವಾದ ರೈತರಿಲ್ಲ. ರೈತರ ಪ್ರತಿಭಟನೆಯನ್ನು ದೇಶವಿರೋಧಿ ಶಕ್ತಿಗಳು ಹೈಜಾಕ್ ಮಾಡಿದ್ದಾರೆ ಎಂಬ ಆರೋಪ ಇನ್ನಷ್ಟು ಗಟ್ಟಿಯಾಗಿ ಕೇಳಲು ಆರಂಭಿಸಿದೆ. ಈ ಮಧ್ಯೆ ನಿನ್ನೆಯ ದಾಂದಲೆ ಘಟನೆ ಹಿಂದೆ ಕೈವಾಡ ಇದೆ ಎನ್ನಲಾದ ಕೆಲ ಹೆಸರುಗಳು ಕೇಳಿಬಂದಿವೆ. ಅವರಲ್ಲಿ ದೀಪ್ ಸಿಧು ಮತ್ತು ಲಖನ ಸಿಧಾನ ಎಂಬಿಬ್ಬರು ವ್ಯಕ್ತಿಗಳಿದ್ಧಾರೆ. ಪ್ರತಿಭಟನೆ ಹಿಂಸಾರೂಪ ಪಡೆಯಲು ಇವರಿಬ್ಬರ ಕುಮ್ಮಕ್ಕು ಇದೆ ಎಂಬ ಆರೋಪ ಇದೆ. ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿ ಸಿಖ್ ಪವಿತ್ರ ಧ್ವಜವನ್ನ ಪ್ರತಿಷ್ಠಾಪಿಸಿದ್ದು ಇವರೇ ಎಂದೂ ಹೇಳಲಾಗುತ್ತಿದೆ. ಯಾರು ಈ ದೀಪ್ ಸಿಧು ಮತ್ತು ಲಖನ ಸಿಧಾನ?

ಗ್ಯಾಂಗ್​ಸ್ಟರ್ ಪಾತ್ರಧಾರಿ ಸಿಧು: 36 ವರ್ಷದ ದೀಪ್ ಸಿಧು ಪಂಜಾಬ್​ನ ಮುಕ್​ಸರ್ ಜಿಲ್ಲೆಯವರು. ಕಾನೂನು ಪದವೀಧರರಾದ ಇವರು ಕಿಂಗ್​ಫಿಶರ್ ಮಾಡೆಲ್ ಹಂಟ್ ಪ್ರಶಸ್ತಿ ಪಡೆದು ಬಳಿಕ 2015ರಲ್ಲಿ ಪಂಜಾಬ್ ಸಿನಿರಂಗ ಪ್ರವೇಶ ಮಾಡಿದರು. ರಮ್ತಾ ಜೋಗಿ ಇವರ ಮೊದಲ ಸಿನಿಮಾ. ಮೂರು ವರ್ಷಗಳ ನಂತರ ಜೋರಾ ದಾಸ್ ನುಂಬ್ರಿಯಾ ಎಂಬ ಪಂಜಾಬೀ ಸಿನಿಮಾದಲ್ಲಿ ಇವರು ಗ್ಯಾಂಗ್​ಸ್ಟರ್ ಪಾತ್ರ ಮಾಡಿ ಪ್ರಖ್ಯಾತರಾದರು. ಬಿಜೆಪಿ ಸಂಸದ ಸನ್ನಿ ದೇವಲ್ ಅವರ ಜೊತೆಯೂ ಗುರುತಿಸಿಕೊಂಡಿದ್ದರು. ರೈತರ ಪ್ರತಿಭಟನೆ ಹೊತ್ತಿಕೊಂಡ ಬೆನ್ನಲ್ಲೇ ಬಿಜೆಪಿಯಿಂದ ದೂರವಾಗಿ ರೈತರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ತಿಳಿದುಬಂದಿದೆ. ಕಳೆದ ನವೆಂಬರ್​ನಲ್ಲಿ ಶಂಬು ಗಡಿಭಾಗದಲ್ಲಿ ಪೊಲೀಸರು ಹಾಕಿದ್ದ ತಡೆಗಳನ್ನ ರೈತರು ಮುರಿದುಹಾಕಿದ ಘಟನೆಯ ವೇಳೆಯೂ ಇವರಿದ್ದರು. ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ ಎಂಬ ಸಂಘಟನೆ ವಿರುದ್ಧದ ಪ್ರಕರಣ ಸಂಬಂಧ ಜನವರಿಯಲ್ಲಿ ದೀಪ್ ಸಿಧು ಮತ್ತವರ ಸಹೋದರ ಮಂದೀಪ್ ಸಿಂಗ್ ಅವರನ್ನ ಎನ್​ಐಎ ವಿಚಾರಣೆ ನಡೆಸಿತ್ತು.

ಇದನ್ನೂ ಓದಿ: ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ಘರ್ಷಣೆ; ಪಾರ್ಲಿಮೆಂಟ್ ಚಲೋ ಮೇಲೆ ಪರಿಣಾಮ ಸಾಧ್ಯತೆ

ರಿಯಲ್ ಗ್ಯಾಂಗ್​ಸ್ಟರ್ ಆಗಿದ್ದ ಲಖ: ಇನ್ನು, 40 ವರ್ಷದ ಲಖಬೀರ್ ಸಿಂಗ್ ಸಿಧಾನ ಅಲಿಯಾಸ್ ಲಖ ಸಿಧಾನ ರಾಜಕಾರಣಕ್ಕೆ ಬರುವ ಮುನ್ನ ಗ್ಯಾಂಗ್​ಸ್ಟರ್ ಆಗಿದ್ದವರು. ಮಾಲ್ವಾ ಯೂಥ್ ಫೆಡರೇಶನ್ ಸಂಘಟನೆಯ ಅಧ್ಯಕ್ಷರಾಗಿದ್ದಾರೆ. ಇವರ ವಿರುದ್ಧ ಹಲವು ಪ್ರಕರಣಗಳಿದ್ದವು. ಅವೆಲ್ಲವಿಂದ ಖುಲಾಸೆಗೊಂಡು 2012ರಲ್ಲಿ ಮನಪ್ರೀತ್ ಸಿಂಗ್ ಬಾದಲ್ ಅವರ ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು.

ರೈತರ ದಂಗೆಯಲ್ಲಿ ದೀಪ್, ಲಖ ಪಾತ್ರವೇನು?

ಗಣರಾಜ್ಯೋತ್ಸವ ದಿನದಂದು ಟ್ರಾಕ್ಟರ್ ಮೆರವಣಿಗೆ ಮಾಡಬೇಕೆಂಬ ರೈತ ಸಂಘಟನೆಗಳ ಮನವಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಅದರಂತೆ ನಿನ್ನೆ ರಾತ್ರಿಯೇ ಟ್ರಾಕ್ಟರ್​ಗಳ ಮೆರವಣಿಗೆಗೆ ಸಿದ್ಧತೆಗಳು ನಡೆದಿದ್ದವು. ವಿವಿಧ ರೈತ ಸಂಘಟನೆಗಳ ಸಮನ್ವಯತೆ ಸಾಧಿಸುತ್ತಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಈ ಟ್ರಾಕ್ಟರ್ ಮೆರವಣಿಗೆಯನ್ನ ಪೊಲೀಸರ ಸೂಚನೆಯಂತೆ ನಿಗದಿತ ಮಾರ್ಗದಲ್ಲಿ ನಡೆಸಲು ನಿರ್ಧರಿಸಿತ್ತು. ಆದರೆ, ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ರಿಂಗ್ ರೋಡ್​ನಲ್ಲಿ ಪ್ರತ್ಯೇಕವಾಗಿ ಟ್ರಾಕ್ಟರ್ ಮೆರವಣಿಗೆ ನಡೆಸಲು ಯೋಜಿಸಿತು. ಸೋಮವಾರ ರಾತ್ರಿ ಸಂಯುಕ್ತ ಕಿಸಾನ್ ಮೋರ್ಚಾದ ಸಭೆಯಲ್ಲಿ ಈ ವಿಚಾರ ಚರ್ಚೆಯಾದವು. ಆಗ ನಿಗದಿಯಾದ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ರ್ಯಾಲಿ ಕೈಗೊಳ್ಳುವ ಬಗ್ಗೆ ಬಿಸಿಬಿಸಿ ಚರ್ಚೆಯಾದವು. ಈ ವೇಳೆ ಕೆಲ ಅಪರಿಚತ ವ್ಯಕ್ತಿಗಳು ಭಾಷಣ ಮಾಡಿದರು. ಆ ನಂತರ ದೀಪ್ ಸಿಧು ಮತ್ತು ಲಖ ಸಿಧಾನ ಕೂಡ ಭಾಷಣ ಮಾಡಿದರು.

“ಸಂಯುಕ್ತ ಕಿಸಾನ್ ಮೋರ್ಚಾದ ನಿಲುವು ಬೇರೆ ಇದೆ. ರೈತರ ಭಾವನೆ ಬೇರೆ ಇದೆ. ರೈತರ ಅಭಿಪ್ರಾಯದ ಪ್ರಕಾರ ಮೋರ್ಚಾ ನಿರ್ಧಾರ ತೆಗೆದುಕೊಳ್ಳಲು ವಿಫಲವಾಗಿದೆ. ನಮ್ಮ ನಾಯಕತ್ವ ಒತ್ತಡದಲ್ಲಿದೆ. ನಾವು ಅವರ ಮೇಲೆ ಒತ್ತಡ ಹಾಕಬಾರದು. ಎಲ್ಲರಿಗೂ ಸಮ್ಮತವಾಗುವಂಥ ನಿರ್ಧಾರವನ್ನು ಅವರು ತೆಗೆದುಕೊಳ್ಳಬೇಕೆಂದು ಕೇಳಬಹುದು. ಅವರು ವೇದಿಕೆ ಮೇಲೆ ಬಂದು ಮಾತನಾಡಬೇಕು. ಅವರು ಬರದಿದ್ದರೆ ನಾವೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅಂಥ ಸಂದರ್ಭದಲ್ಲಿ ಯಾರು ನಿರ್ಧಾರ ತೆಗೆದುಕೊಳ್ಳಬೇಕೆಂದು ನೀವು ನಿರ್ಧರಿಸಿ” ಎಂದು ದೀಪ್ ಸಿಧು ತಮ್ಮ ಭಾಷಣದಲ್ಲಿ ಮಾತನಾಡಿದ್ದರು.ಇದನ್ನೂ ಓದಿ: ತಾಯ್ನಾಡು ಸ್ವರ್ಗವೆನಿಸುತ್ತಿದೆ!; 18 ವರ್ಷದ ಬಳಿಕ ಪಾಕಿಸ್ತಾನಿ ಜೈಲಿನಿಂದ ಬಿಡುಗಡೆಯಾದ ಮಹಾರಾಷ್ಟ್ರದ ಮಹಿಳೆ

ಅದಾದ ಬಳಿಕ ಮಾತನಾಡಿದ ಲಖ ಸಿಧಾನ, “ಸಾವಿರಾರು ಯುವಕರು ರಿಂಗ್ ರೋಡ್ ಮೇಲೆ ಹೋಗಬೇಕೆನ್ನುತ್ತಿದ್ದಾರೆ. ಕಿಸಾನ್ ಮಜ್ದೂರ್ ಸಂಘರ್ಷ್ ಕಮಿಟಿ ಈಗಾಗಲೇ ರಿಂಗ್ ರೋಡ್ ಮೂಲಕ ಹೋಗಲು ನಿರ್ಧರಿಸಿದೆ. ನಮಗಿಂತ ಮುಂಚೆಯೇ ಅವರು ರ್ಯಾಲಿ ಹೊರಡಲಿದ್ದಾರೆ. ನಮ್ಮ ಟ್ರಾಕ್ಟರ್​ಗಳು ಅವರ ಹಿಂದೆ ಇರುತ್ತವೆ. ಯಾರಾದರೂ ರಿಂಗ್ ರೋಡ್ ಮೇಲೆ ಹೋಗಬೇಕೆಂದಿದ್ದರೆ ಕಿಸಾನ್ ಮಜ್ದೂರ್ ಸಂಘರ್ಷ್ ಕಮಿಟಿಯವರನ್ನ ಫಾಲೋ ಮಾಡಬಹುದು. ಇದರಲ್ಲಿ ಏನಿದೆ ಸಮಸ್ಯೆ? ನೀವು ಸಮಾಧಾನವಾಗಿರಿ” ಎಂದು ಹೇಳಿದ್ದರು.

ಕೆಂಪುಕೋಟೆಯಲ್ಲಿ ರೈತರು ಲಗ್ಗೆ ಹಾಕಿದ ವೇಳೆ ದೀಪ್ ಸಿಧು ಸ್ಥಳದಲ್ಲಿದ್ದರು. ಅದನ್ನ ಅವರು ಒಪ್ಪಿಕೊಂಡಿದ್ಧಾರೆ. ಆದರೆ ಧ್ವಜ ಹಾರಿಸಿದ್ದು ತಾನಲ್ಲ ಎಂದು ಹೇಳಿರುವ ಅವರು ಧ್ವಜ ಹಾರಿಸಿದ ಘಟನೆಯನ್ನ ಸಮರ್ಥನೆಯಂತೂ ಮಾಡಿಕೊಂಡಿದ್ದಾರೆ. ಹಾಗೆಯೇ, ಜನರನ್ನ ಕೆಂಪುಕೋಟೆಗೆ ಲಗ್ಗೆ ಇಡುವಂತೆ ತಾನಂತೂ ಪ್ರೇರೇಪಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗಣರಾಜ್ಯೋತ್ಸವ ದಿನ ರೈತರು ದಂಗೆ ಏದಿದ್ದು ಹಲವು ತಿಂಗಳುಗಳಿಂದ ನಡೆಯುತ್ತಿರುವ ಪ್ರತಿಭಟನೆಯ ಫಲಶ್ರುತಿಯಾಗಿದೆ. ಇದಕ್ಕೆ ಒಬ್ಬ ವ್ಯಕ್ತಿಯ ಮೇಲೆ ಬೊಟ್ಟು ಮಾಡಲು ಸಾಧ್ಯವಿಲ್ಲ. ಸಂದರ್ಭದ ಆವೇಶದಲ್ಲಿ ನಿಶಾನ್ ಸಾಹೀಬ್ ಮತ್ತು ಕಿಸಾನ್ ಯೂನಿಯನ್ ಧ್ವಜಗಳನ್ನ ರೆಡ್ ಫೋರ್ಟ್​ನಲ್ಲಿ ಹಾರಿಸಲಾಗಿತ್ತು ಎಂದು ದೀಪ್ ಸಿಧು ತಮ್ಮ ಫೇಸ್​ಬುಕ್​ನಲ್ಲಿ ಹೇಳಿಕೊಂಡಿದ್ದಾರೆ.
Published by: Vijayasarthy SN
First published: January 27, 2021, 2:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories