ದೇಶದಲ್ಲಿ ಹೆಚ್ಚುತ್ತಿದೆ ಅಪರಾಧಿಗಳ ಸಂಖ್ಯೆ; ಜೈಲಿನಲ್ಲಿ ಕೈದಿಗಳಿಗೆ ಇಲ್ಲ ಉಳಿದುಕೊಳ್ಳಲು ಜಾಗ

2012ರ ಅವಧಿಯಲ್ಲಿ 3,85,135 ಕೈದಿಗಳು ಭಾರತದಲ್ಲಿದ್ದರು. ಈ ಸಂಖ್ಯೆ 2017ರಲ್ಲಿ 4,50,696ಕ್ಕೆ ಏರಿಕೆ ಆಗಿದೆ. ಅಂದರೆ, ಅಪರಾಧ ಮಾಡಿ ಜೈಲು ಸೇರುವವರ ಸಂಖ್ಯೆಯಲ್ಲಿ ಶೇ.17ರಷ್ಟು ಏರಿಕೆ ಆಗಿದೆ.

Rajesh Duggumane | news18-kannada
Updated:October 23, 2019, 9:29 AM IST
ದೇಶದಲ್ಲಿ ಹೆಚ್ಚುತ್ತಿದೆ ಅಪರಾಧಿಗಳ ಸಂಖ್ಯೆ; ಜೈಲಿನಲ್ಲಿ ಕೈದಿಗಳಿಗೆ ಇಲ್ಲ ಉಳಿದುಕೊಳ್ಳಲು ಜಾಗ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಅ.23): ದೇಶದಲ್ಲಿ ಅಪರಾಧ ಪ್ರಕರಣಗಳ ಜೊತೆಗೆ ಜೈಲು ಸೇರುವ ಕೈದಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಪರಿಣಾಮ ಜೈಲಿನಲ್ಲಿ ಜಾಗವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ರಾಷ್ಟ್ರೀಯ ಅಪರಾಧ ದಳ (ಎನ್​ಸಿಆರ್​ಬಿ) ತಿಳಿಸಿದೆ.

2012-2017ರ ಅವಧಿಯಲ್ಲಿ ಕೈದಿಗಳ ಸಂಖ್ಯೆ ಮಿತಿಮೀರಿ ಏರಿಕೆಯಾಗಿದೆ. ಹೀಗಾಗಿ ಜೈಲಿನಲ್ಲಿ ಜಾಗದ ಕೊರತೆ ಉಂಟಾಗುತ್ತಿದೆ. 201-17ರ ಅವಧಿಯಲ್ಲಿ ಈ ಸಂಖ್ಯೆಯಲ್ಲಿ ಭಾರೀ ಬದಲಾವಣೆ ಕಂಡಿದೆ ಎಂದು ಎನ್​ಸಿಆರ್​ಬಿ ಹೇಳಿದೆ.

2012ರ ಅವಧಿಯಲ್ಲಿ 3,85,135 ಕೈದಿಗಳು ಭಾರತದಲ್ಲಿದ್ದರು. ಈ ಸಂಖ್ಯೆ 2017ರಲ್ಲಿ 4,50,696ಕ್ಕೆ ಏರಿಕೆ ಆಗಿದೆ. ಅಂದರೆ, ಅಪರಾಧ ಮಾಡಿ ಜೈಲು ಸೇರುವವರ ಸಂಖ್ಯೆಯಲ್ಲಿ ಶೇ.17ರಷ್ಟು ಏರಿಕೆ ಆಗಿದೆ.

ಉತ್ತರ ಪ್ರದೇಶದ ಜೈಲಿನಲ್ಲಿ ಅತಿ ಹೆಚ್ಚು ಕೈದಿಗಳನ್ನು ತುಂಬಲಾಗಿದೆಯಂತೆ. 100 ಜನರನ್ನು ಕೂಡಿಡುವ ಜಾಗದಲ್ಲಿ 165 ಕೈದಿಗಳನ್ನು ಇಡಲಾಗುತ್ತಿದೆ. ಚತ್ತೀಸ್​​ಗಢ ಜೈಲಿನ ಪರಿಸ್ಥಿತಿ ಕೂಡ ಹೀಗೆಯೇ ಇದೆ. 100 ಜನರನ್ನು ಕೂಡಿಡುವ ಜಾಗದಲ್ಲಿ 157 ಕೈದಿಗಳನ್ನು ಬಂಧಿಸಿಡಲಾಗುತ್ತಿದೆ. ಈ ಸಾಲಿನಲ್ಲಿ ದೆಹಲಿ ಮೂರನೇ ಸ್ಥಾನದಲ್ಲಿದ್ದು, 100 ಜನರನ್ನು ಬಂಧಿಸಿಡುವ ಜಾಗದಲ್ಲಿ 151 ಜನರನ್ನು ಇಡಲಾಗಿದೆ. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಈ ವರದಿ ಜೈಲಿನ ಮೂಲಸೌಕರ್ಯದ ಬಗ್ಗೆ ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಹೆಚ್ಚಿನ ಕೈದಿಗಳನ್ನು ಕೂಡಿಡುತ್ತಿರುವುದರಿಂದ ಆಗುತ್ತಿರುವ ತೊಂದರೆ ಬಗ್ಗೆ ವರದಿಯಲ್ಲಿ ಹೇಳಿಲ್ಲ ಎನ್ನಲಾಗಿದೆ. ಈ ವಿಚಾರ ಮಾನವ ಹಕ್ಕು ಸಂಘಟನೆಯ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ.

First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading