• Home
  • »
  • News
  • »
  • national-international
  • »
  • Moon Lighting: ‘ಮೂನ್‌ಲೈಟಿಂಗ್’ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸಿದ ವಿಪ್ರೋ

Moon Lighting: ‘ಮೂನ್‌ಲೈಟಿಂಗ್’ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸಿದ ವಿಪ್ರೋ

ವಿಪ್ರೋ

ವಿಪ್ರೋ

ಈ ‘ಮೂನ್‌ಲೈಟಿಂಗ್’ ಅನ್ನು ಕೆಲವು ಕಂಪನಿಗಳು ವಿರೋಧಿಸಿದರೆ, ಇನ್ನೂ ಕೆಲವು ಕಂಪನಿಗಳು ಏನಾದರೂ ಮಾಡಿ, ಆದರೆ ನಮ್ಮ ಕೆಲಸಕ್ಕೆ ಏನೂ ತೊಂದರೆಯಾಗಬಾರದು ಅಂತ ಹೇಳುತ್ತಿವೆ. ‘ಮೂನ್‌ಲೈಟಿಂಗ್’ ಬಗ್ಗೆ ವಿಪ್ರೋ ಕಂಪನಿ ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ.

  • Trending Desk
  • 5-MIN READ
  • Last Updated :
  • New Delhi, India
  • Share this:

ಈ ಎರಡೂವರೆ ವರ್ಷಗಳಿಂದ ಅನೇಕ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡ ನಂತರ ಬರೀ ಒಂದೇ ಉದ್ಯೋಗದ ಮೇಲೆ ಅವಲಂಬಿತವಾಗಬಾರದು (Defend) ಅಂತ ಅರ್ಥ ಮಾಡಿಕೊಂಡು ಒಟ್ಟಿಗೆ ಒಂದೆರಡು ಕೆಲಸಗಳನ್ನು ಮಾಡುತ್ತಿದ್ದಾರೆ. ಅಲ್ಲ ಒಂದು ಕಂಪನಿ (Company) ಕೆಲಸ ಮಾಡುವುದೇ ಕಷ್ಟವಾಗಿರಬೇಕಾದರೆ, ಇನ್ನೊಂದು ಕೆಲಸ (Work) ಹೇಗೆ ಇದರ ಜೊತೆಗೆ ಮಾಡುತ್ತಾರೆ ಅಂತ ಅನೇಕರು ಕೇಳಬಹುದು. ಈಗ ಕೆಲವು ಕೆಲಸಗಳು ಮನೆಯಲ್ಲಿಯೇ (Home) ಕುಳಿತು ಮಾಡುವ ಕೆಲಸಗಳಾಗಿರುವುದರಿಂದ, ಒಂದೇ ಸಮಯಕ್ಕೆ ಒಂದೆರಡು ಕೆಲಸಗಳನ್ನು ಮಾಡಬಹುದು.


ಹೀಗೆ ಮಾಡುವುದರಿಂದ ಇನ್ನೊಂದು ಹೆಚ್ಚುವರಿ ಆದಾಯ ಸಹ ಬರುತ್ತೆ ಮತ್ತು ಒಂದು ಕೆಲಸ ಹೋದರೂ ಸಹ ಹೊಟ್ಟೆ ಪಾಡಿಗಾಗಿ ಇನ್ನೊಂದು ಕೆಲಸ ಸೈಡಲ್ಲಿ ನಡೀತಾ ಇರುತ್ತದೆ. ಇದನ್ನು ಈ ಐಟಿ ಕಂಪನಿಗಳು ‘ಮೂನ್‌ಲೈಟಿಂಗ್’ ಅಂತ ಹೇಳುತ್ತಾರೆ.


ಈ ‘ಮೂನ್‌ಲೈಟಿಂಗ್’ ಅನ್ನು ಕೆಲವು ಕಂಪನಿಗಳು ವಿರೋಧಿಸಿದರೆ, ಇನ್ನೂ ಕೆಲವು ಕಂಪನಿಗಳು ಏನಾದರೂ ಮಾಡಿ, ಆದರೆ ನಮ್ಮ ಕೆಲಸಕ್ಕೆ ಏನೂ ತೊಂದರೆಯಾಗಬಾರದು ಅಂತ ಹೇಳುತ್ತಿವೆ. ‘ಮೂನ್‌ಲೈಟಿಂಗ್’ ಬಗ್ಗೆ ವಿಪ್ರೋ ಕಂಪನಿ ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ ಎಂದು ತೋರುತ್ತದೆ.


‘ಮೂನ್ಲೈಟಿಂಗ್’ ಬಗ್ಗೆ ವಿಪ್ರೋ ಕಂಪನಿಯವರು ಹೇಳುವುದೇನು?


ಮೊದಲು ವಿಪ್ರೋ ಕಂಪನಿಯ ಮುಖ್ಯಸ್ಥ ರಿಷದ್ ಪ್ರೇಮ್‌ಜೀ ಅವರು ನೌಕರರು ಎರಡನೇ ಉದ್ಯೋಗಗಳನ್ನು ತೆಗೆದುಕೊಳ್ಳುವುದರ ಬಗ್ಗೆ ತಮ್ಮ ತೀವ್ರ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದರು. ಭಾರತೀಯ ಐಟಿ ದೈತ್ಯ ತನ್ನ 300 ಉದ್ಯೋಗಿಗಳನ್ನು ‘ಮೂನ್‌ಲೈಟಿಂಗ್’ ಕಾರಣ ಹೇಳಿ ಕೆಲಸದಿಂದ ತೆಗೆದುಹಾಕಿತ್ತು.


ಈ ಪದವನ್ನು ರಹಸ್ಯವಾಗಿ ಎರಡನೇ ಉದ್ಯೋಗವನ್ನು ತೆಗೆದುಕೊಂಡ ಕಾರ್ಮಿಕರಿಗೆ ಬಳಸಲಾಗುತ್ತದೆ. ವಿಪ್ರೋ ಮುಖ್ಯ ಕಾರ್ಯನಿರ್ವಾಹಕ ಥಿಯೆರ್ರಿ ಡೆಲಾಪೋರ್ಟ್ ಎರಡನೇ ಕೆಲಸವನ್ನು ತೆಗೆದುಕೊಳ್ಳುವ ಅಭ್ಯಾಸವನ್ನು ಸಂಪೂರ್ಣವಾಗಿ ವಿರೋಧಿಸುವುದಿಲ್ಲ ಎಂದು ತೋರುತ್ತದೆ. ಅವರು "ಸೈಡ್ ಜಾಬ್ಸ್" ತೆಗೆದುಕೊಳ್ಳುವ ಆಲೋಚನೆಯನ್ನು ಬೆಂಬಲಿಸಿದರು, ಆದರೆ ಪ್ರತಿಸ್ಪರ್ಧಿಗಳೊಂದಿಗೆ ಅಲ್ಲ.


ವಿಪ್ರೋ ಸಿಇಒ ‘ಮೂನ್ಲೈಟಿಂಗ್’ ಬಗ್ಗೆ ಹೇಳಿದ್ದೇನು?


ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿರುವಂತೆ, ವಿಪ್ರೋ ಸಿಇಒ ಥಿಯೆರ್ರಿ ಡೆಲಾಪೋರ್ಟ್ ಅವರು ಪ್ರತಿಸ್ಪರ್ಧಿ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದು "ನೈತಿಕತೆಯ ಪ್ರಶ್ನೆ" ಎಂದು ಹೇಳಿದ್ದಾರೆ. ಕಂಪನಿಯ ಟಿಪ್ಪಣಿಗಳನ್ನು ಉಲ್ಲೇಖಿಸಿ ವರದಿಯು, "ನಮ್ಮ ಒಪ್ಪಂದಗಳು ಪ್ರತಿಸ್ಪರ್ಧಿ ಕಂಪನಿಯೊಂದಿಗೆ ಕೆಲಸ ಮಾಡಬಾರದು ಎಂದು ಷರತ್ತು ವಿಧಿಸುತ್ತವೆ. ಇದು ಕಾನೂನು (ಔಚಿತ್ಯ)ದ ಪ್ರಶ್ನೆಯಲ್ಲ, ಇದು ನೈತಿಕತೆಯ ಪ್ರಶ್ನೆ" ಎಂದು ಹೇಳಿದ್ದಾರೆ.


"ನಾನು ಕಾನೂನುಬಾಹಿರ ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ. ನಾನು ಸೈಡ್ ಕೆಲಸಗಳ ಬಗ್ಗೆ ಮಾತನಾಡುತ್ತಿಲ್ಲ. ನಾನು ನಿಜವಾಗಿಯೂ ಹಿತಾಸಕ್ತಿ ಸಂಘರ್ಷದ ಸ್ಪಷ್ಟ ಪರಿಸ್ಥಿತಿಯಲ್ಲಿರುವುದರ ಬಗ್ಗೆ ಮಾತನಾಡುತ್ತಿದ್ದೇನೆ. ನಮ್ಮ ಉದ್ಯೋಗಿಗಳು ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಸಿಇಒ ಹೇಳಿದ್ದಾರೆ.


ಇದನ್ನೂ ಓದಿ: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿದೆ ಹುದ್ದೆ; ವಾಕ್​-ಇನ್​ನಲ್ಲಿ ಭಾಗಿಯಾಗಿ


ಟೆಕ್ ಮಹೀಂದ್ರಾದಂತಹ ಇತರ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳು ಕಚೇರಿ ಸಮಯದ ನಂತರ ಎರಡನೇ ಕೆಲಸವನ್ನು ತೆಗೆದುಕೊಳ್ಳಲು ಯಾವುದೇ ರೀತಿಯ ಸಮಸ್ಯೆಯನ್ನು ಹೊಂದಿಲ್ಲ ಎಂದು ಹೇಳಿವೆ. ಡೆಲಾಪೋರ್ಟ್ ಅವರು "ಇತರರಿಗೆ ಯಾವುದೇ ಸಮಸ್ಯೆಯಿಲ್ಲದಿದ್ದರೆ, ನಾವು ಅದನ್ನು ಗೌರವಿಸುತ್ತೇವೆ. ಆದರೆ ನಾವು ಏನು ಹೊಸದನ್ನು ಅಥವಾ ವಿಭಿನ್ನವಾದುದನ್ನು ಮಾಡುತ್ತಿಲ್ಲ" ಎಂದು ಹೇಳಿದ್ದಾರೆ.


ಎರಡನೇ ಕೆಲಸ ತೆಗೆದುಕೊಳ್ಳಲು ಓಕೆ ಎಂದ ಟೆಕ್ ಮಹೀಂದ್ರಾ


ಇದಕ್ಕೂ ಮೊದಲು, ಐಟಿ ವಲಯದಲ್ಲಿ ‘ಮೂನ್‌ಲೈಟಿಂಗ್’ ಬಗ್ಗೆ ಎಲ್ಲಾ ಚರ್ಚೆಗಳ ನಡುವೆ, ಟೆಕ್ ಮಹೀಂದ್ರಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿಪಿ ಗುರ್ನಾನಿ ಅವರು ಎರಡನೇ ಕೆಲಸವನ್ನು ತೆಗೆದುಕೊಳ್ಳುವ ಉದ್ಯೋಗಿಗಳಿಗೆ ತಮ್ಮ ಅನುಮೋದನೆಯನ್ನು ನೀಡಿದರು. ಟೆಕ್ ಮಹೀಂದ್ರಾ ಕಂಪನಿಯ ನೀತಿಗಳಲ್ಲಿ ‘ಮೂನ್‌ಲೈಟಿಂಗ್’ ಅನ್ನು ಒಪ್ಪಬಹುದು, ಆದರೆ ಉದ್ಯೋಗಿಗಳು ಅದರ ಬಗ್ಗೆ ಮುಕ್ತವಾಗಿರಬೇಕು ಎಂದು ಅವರು ಹೇಳಿದರು.


ಇದನ್ನೂ ಓದಿ: ಕೊಟ್ಟ ಮಾತು ಈಡೇರಿಸುತ್ತೇನೆಂದು ಸಾಬೀತುಪಡಿಸಲು ತನ್ನದೇ ಅಶ್ಲೀಲ ವಿಡಿಯೋ ಲೀಕ್ ಮಾಡಿದ ಅಭ್ಯರ್ಥಿ!


ಇದಕ್ಕೆ ವ್ಯತಿರಿಕ್ತವಾಗಿ, ಇನ್ಫೋಸಿಸ್, ಐಬಿಎಂ ಮತ್ತು ಇತರ ಭಾರತೀಯ ಐಟಿ ಸಂಸ್ಥೆಗಳು ಈ ವಿಷಯದ ಬಗ್ಗೆ ತಮ್ಮ ಬಲವಾದ ಅಸಮ್ಮತಿಯನ್ನು ವ್ಯಕ್ತಪಡಿಸಿವೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು