HOME » NEWS » National-international » WIPRO ANNOUNCES SECOND SALARY HIKE FOR 80 PERCENT ELIGIBLE IT EMPLOYEES FOR THIS YEAR FROM SEPTEMBER 1 STG SCT

Wipro: ವಿಪ್ರೋ ಉದ್ಯೋಗಿಗಳಿಗೆ ಡಬಲ್ ಧಮಾಕಾ!; ಸೆಪ್ಟೆಂಬರ್​ನಲ್ಲಿ 2ನೇ ಬಾರಿ ವೇತನ ಹೆಚ್ಚಳ!

Wipro Salary Hike: ಕೊರೋನಾದಿಂದ ಅನೇಕ ಕಂಪನಿಗಳಲ್ಲಿ ಸಂಬಳ ಸಿಗುವುದೇ ಕಷ್ಟವಾಗಿರುವಾಗ ವಿಪ್ರೋ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಈ ವರ್ಷದಲ್ಲಿ 2 ಬಾರಿ ವೇತನ ಹೆಚ್ಚಿಸುವ ಮೂಲಕ ಗುಡ್ ನ್ಯೂಸ್ ನೀಡಿದೆ. 

Trending Desk
Updated:June 23, 2021, 2:45 PM IST
Wipro: ವಿಪ್ರೋ ಉದ್ಯೋಗಿಗಳಿಗೆ ಡಬಲ್ ಧಮಾಕಾ!; ಸೆಪ್ಟೆಂಬರ್​ನಲ್ಲಿ 2ನೇ ಬಾರಿ ವೇತನ ಹೆಚ್ಚಳ!
ವಿಪ್ರೋ
  • Share this:

ಕೊರೊನಾ ವೈರಸ್‌ ಜಗತ್ತಿನಾದ್ಯಂತ ಮಿಲಿಯನ್‌ಗಟ್ಟಲೆ ಜನರ ಪ್ರಾಣಗಳನ್ನು ತೆಗೆದಿದೆ. ಅಲ್ಲದೆ, ಲಕ್ಚಾಂತರ ಉದ್ಯೋಗಿಗಳು ಕೆಲಸವನ್ನೂ ಕಳೆದುಕೊಳ್ಳುವಂತೆ ಮಾಡಿದೆ. ಇನ್ನೂ ಅನೇಕರು ಕೆಲಸ ಉಳಿಸಿಕೊಂಡಿದ್ದರೂ, ಸಂಬಳ ಕಳೆದುಕೊಂಡಿದ್ದಾರೆ. ಸಾಂಕ್ರಾಮಿಕ ರೋಗ, ಲಾಕ್‌ಡೌನ್‌ ಮುಂತಾದ ಕಾರಣಗಳಿಂದ ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಆದರೆ, ಇಲ್ಲಿದೆ ಗುಡ್‌ ನ್ಯೂಸ್‌. ವಿಪ್ರೋ ಕಂಪನಿ ಒಂದೇ ಕ್ಯಾಲೆಂಡರ್‌ ವರ್ಷದಲ್ಲಿ ಎರಡು ಬಾರಿ ವೇತನ ಹೆಚ್ಚಳ ಮಾಡಿದೆ.


ಐಟಿ ವಲಯದ ದೈತ್ಯ ಕಂಪನಿಗಳಲ್ಲೊಂದಾದ ವಿಪ್ರೋ ಲಿಮಿಟೆಡ್ ತನ್ನ ಸುಮಾರು 80 ಪ್ರತಿಶತದಷ್ಟು ಉದ್ಯೋಗಿಗಳಿಗೆ ಜೂನ್ 18 ರಂದು ವೇತನ ಹೆಚ್ಚಳವನ್ನು ಪ್ರಕಟಿಸಿದ್ದು, ಸೆಪ್ಟೆಂಬರ್ 1, 2021 ರಿಂದ ಇದು ಜಾರಿಗೆ ಬರಲಿದೆ. "ಸೆಪ್ಟೆಂಬರ್ 1, 2021 ರಿಂದ ಜಾರಿಗೆ ಬರುವ ಬ್ಯಾಂಡ್ ಬಿ 3 (ಸಹಾಯಕ ವ್ಯವಸ್ಥಾಪಕ ಮತ್ತು ಕೆಳಗಿನ) ವರೆಗಿನ ಎಲ್ಲಾ ಅರ್ಹ ಉದ್ಯೋಗಿಗಳಿಗೆ ಮೆರಿಟ್ ವೇತನ ಹೆಚ್ಚಳ (ಎಂಎಸ್ಐ)" ವನ್ನು ಪ್ರಾರಂಭಿಸುವುದಾಗಿ ಕಂಪನಿ ಹೇಳಿದೆ. ಕಂಪನಿಯ ಶೇಕಡಾ 80 ರಷ್ಟು ಉದ್ಯೋಗಿಗಳಿಗೆ ಇದು ಜಾರಿಗೆ ಬರಲಿದೆ ಎಂದೂ ತಿಳಿದುಬಂದಿದೆ.ಅರ್ಹ ಉದ್ಯೋಗಿಗಳಿಗೆ 2021 ರ ಜನವರಿಯಲ್ಲಿ ವೇತನ ಹೆಚ್ಚಳ ಮಾಡಿದ್ದ ವಿಪ್ರೋ ಕಂಪನಿ, ಈಗ ಸೆಪ್ಟೆಂಬರ್‌ನಲ್ಲಿ ಮತ್ತೆ ಅರ್ಹ ಉದ್ಯೋಗಿಗಳಿಗೆ ಸಂಬಳ ಹೈಕ್‌ ಘೋಷಿಸಿದೆ. ಅಲ್ಲದೆ, ಬ್ಯಾಂಡ್ ಸಿ 1 (ವ್ಯವಸ್ಥಾಪಕರು ಮತ್ತು ಮೇಲ್ಪಟ್ಟವರು) ಗಿಂತ ಮೇಲಿರುವ ಎಲ್ಲಾ ಅರ್ಹ ಉದ್ಯೋಗಿಗಳು ಜೂನ್ 1 ರಿಂದ ವೇತನ ಹೆಚ್ಚಳವನ್ನು ಸ್ವೀಕರಿಸುತ್ತಾರೆ ಎಂದೂ ವಿಪ್ರೋ ಘೋಷಿಸಿದೆ.


ಇದನ್ನೂ ಓದಿ: ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಕೊಳ್ಳೆ ಹೊಡೆದಿದ್ದ 18,170 ಕೋಟಿ ರೂ. ವಾಪಾಸ್!

ಕಂಪನಿಯ ಉನ್ನತ ಸಾಧಕರಿಗೆ ಗಣನೀಯವಾಗಿ ಹೆಚ್ಚಿನ ವೇತನ ಹೆಚ್ಚಳ ನೀಡುತ್ತೇವೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು, ಸರಾಸರಿಯಾಗಿ ಆಫ್‌ಶೋರ್‌ ಉದ್ಯೋಗಿಗಳಿಗೆ ಹಾಗೂ ಆನ್‌ಸೈಟ್‌ ಉದ್ಯೋಗಿಗಳಿಗೆ ಇಬ್ಬರಿಗೂ ಸಹ ಸಂಬಳ ಹೆಚ್ಚಳವಾಗಲಿದ್ದು, ಈ ಪೈಕಿ ಆಫ್‌ಶೋರ್‌ ಉದ್ಯೋಗಿಗಳಿಗೆ ವೇತನ ಹೆಚ್ಚಳದ ಪ್ರಮಾಣ ಸ್ವಲ್ಪ ಹೆಚ್ಚಿರುತ್ತದೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ, ಏಪ್ರಿಲ್ 1, 2021 ರಿಂದ ಜಾರಿಗೆ ಬರುವಂತೆ ಟಿಸಿಎಸ್‌ ಕಂಪನಿ ಸಹ ವೇತನ ಹೆಚ್ಚಳವನ್ನು ಘೋಷಿಸಿದ್ದು, ಈ ಆರ್ಥಿಕ ವರ್ಷದಲ್ಲಿ ಅಂದರೆ ಏಪ್ರಿಲ್‌ನಿಂದ ಜಾರಿಗೆ ಬರುವಂತೆ ಸಂಬಳ ಹೆಚ್ಚಳ ಪ್ರಕಟಿಸಿದ ಮೊದಲ ಪ್ರಮುಖ ಐಟಿ ಕಂಪನಿ ಎನಿಸಿಕೊಂಡಿತು. ವಿಪ್ರೋದ ದೊಡ್ಡ ಪ್ರತಿಸ್ಪರ್ಧಿಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಹ 6 ತಿಂಗಳಲ್ಲಿ ಎರಡನೆಯ ಬಾರಿ ವೇತನ ಹೆಚ್ಚಳ ಘೋಷಿಸಿದೆ. ಟಿಸಿಎಸ್‌ ಕಂಪನಿ 4.89 ಲಕ್ಷ ಉದ್ಯೋಗಿಗಳನ್ನು ಹೊಂದಿದೆ.


ಇದನ್ನೂ ಓದಿ: Crime News: ವಿಷ ಕುಡಿದು ಪ್ರಿಯಕರನ ತೊಡೆ ಮೇಲೇ ಪ್ರಾಣ ಬಿಟ್ಟ ವಿವಾಹಿತೆ; ಇದು ಅಂತಿಂಥಾ ಲವ್ ಸ್ಟೋರಿಯಲ್ಲ!

ಜತೆಗೆ, ಇನ್ಫೋಸಿಸ್ ಸಹ ಜುಲೈ 1, 2021 ರಿಂದ ಜಾರಿಗೆ ಬರುವಂತೆ ತನ್ನ ಉದ್ಯೋಗಿಗಳ 2ನೇ ಕಾರ್ಯಕ್ಷಮತೆಯ ವಿಮರ್ಶೆಯನ್ನು ಪ್ರಾರಂಭಿಸಲಿದೆ. ಜನವರಿಯಲ್ಲಿ ಸಹ ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಳ ಮಾಡಿತ್ತು ಇನ್ಫೋಸಿಸ್‌. ಅಲ್ಲದೆ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಎಚ್‌ಸಿಎಲ್ ನೌಕರರಿಗೆ ವೇತನ ಹೆಚ್ಚಳ ನೀಡಿದ್ದರೆ, ಟೆಕ್ ಮಹೀಂದ್ರಾ ಜನವರಿಯಲ್ಲಿ ವೇತನವನ್ನು ಹೆಚ್ಚಿಸಿದೆ.Youtube Video

ದೇಶದ ಟಾಪ್ 5 ಐಟಿ ಕಂಪನಿಗಳು ಒಟ್ಟು 1.24 ಮಿಲಿಯನ್‌ ಜನರಿಗೆ ಉದ್ಯೋಗ ನೀಡುತ್ತವೆ. ಇದು ಭಾರತದ 4.6 ಮಿಲಿಯನ್ ತಂತ್ರಜ್ಞಾನದ ಉದ್ಯೋಗಿಗಳ ಪೈಕಿ ನಾಲ್ಕನೇ ಒಂದು ಭಾಗವಾಗಿದೆ. ಕೊರೋನಾದಿಂದ ಅನೇಕ ಕಂಪನಿಗಳಲ್ಲಿ ಸಂಬಳ ಸಿಗುವುದೇ ಕಷ್ಟವಾಗಿರುವಾಗ ವಿಪ್ರೋ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಈ ಒಂದು ವರ್ಷದಲ್ಲಿ 2 ಬಾರಿ ವೇತನ ಹೆಚ್ಚಿಸುವ ಮೂಲಕ ಗುಡ್ ನ್ಯೂಸ್ ನೀಡಿದೆ.


Published by: Sushma Chakre
First published: June 23, 2021, 2:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories