ಹೆಸರು, ಲೋಗೋ ಸೂಚಿಸಿ ₹15 ಲಕ್ಷ ಬಹುಮಾನ ಗೆಲ್ಲಿ: ಹಣಕಾಸು ಸಚಿವಾಲಯದಿಂದ ಭರ್ಜರಿ ಆಫರ್

ನಿಮ್ಮ ಆಯ್ಕೆಗಳನ್ನು ಕಳುಹಿಸಲು ಆಗಸ್ಟ್ 15, 2021ರವರೆಗೆ ಅವಕಾಶ ನೀಡಲಾಗಿದೆ. ಆಜಾದಿ ಕಾ ಅಮೃತ್‌ಮಹೋತ್ಸವ (ಸ್ವಾತಂತ್ರ್ಯದ ಅಮೃತ ಮಹೋತ್ಸವ) ಆಚರಣೆಯ ಹಿನ್ನೆಲೆ ಸ್ಪರ್ಧೆ ಆಯೋಜಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ಕೇಂದ್ರ ಬಜೆಟ್ 2021ರಲ್ಲಿ ಮೂಲಸೌಕರ್ಯಗಳ ಧನಸಹಾಯಕ್ಕಾಗಿ ಅಭಿವೃದ್ಧಿ ಹಣಕಾಸು ಸಂಸ್ಥೆ (DFI) ಅನ್ನು ಸ್ಥಾಪಿಸುವ ಯೋಜನೆ ಘೋಷಿಸಲಾಗಿದ್ದು, ಹಣಕಾಸು ಸಚಿವಾಲಯವು ಇದೀಗ ನಾಗರೀಕರಿಗೆ ಹೊಸ ಸಂಸ್ಥೆಯ ರಚನೆಗೆ ಹೆಸರನ್ನು ಸೂಚಿಸಲು ಆಹ್ವಾನ ನೀಡಿದೆ. DFIಗಾಗಿ ಟ್ಯಾಗ್‌ಲೈನ್‌ಗಳು ಮತ್ತು ಲೋಗೋ ರಚಿಸಲು ಸಚಿವಾಲಯವು ನಾಗರಿಕರನ್ನು ವಿನಂತಿಸಿದ್ದು, ಇದರಲ್ಲಿ ವಿಜಯಿಯಾದವರಿಗೆ 15 ಲಕ್ಷ ಬಹುಮಾನ ನೀಡುವುದಾಗಿ ಸಚಿವಾಲಯ ತಿಳಿಸಿದೆ.


  ಡಿಎಫ್‌ಐ ಸ್ಪರ್ಧೆಯ ಬಹುಮಾನದ ವಿವರಗಳೇನು?


  ನಿಮ್ಮ ಆಯ್ಕೆಗಳನ್ನು ಕಳುಹಿಸಲು ಆಗಸ್ಟ್ 15, 2021ರವರೆಗೆ ಅವಕಾಶ ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದವರ ಆಯ್ಕೆಯನ್ನು ಸೃಜನಶೀಲತೆ, ಚೈತನ್ಯ, ಥೀಮ್‌ನೊಂದಿಗೆ ಸಂಪರ್ಕಿಸುವ ಸಾಮರ್ಥ್ಯದಂತಹ ಹಲವಾರು ಮಾನದಂಡಗಳ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಆಜಾದಿ ಕಾ ಅಮೃತ್‌ಮಹೋತ್ಸವ (ಸ್ವಾತಂತ್ರ್ಯದ ಅಮೃತ ಮಹೋತ್ಸವ) ಆಚರಣೆಯ ಹಿನ್ನೆಲೆ ಸ್ಪರ್ಧೆ ಆಯೋಜಿಸಲಾಗಿದೆ.


  ಹೆಸರು, ಟ್ಯಾಗ್‌ಲೈನ್ ಮತ್ತು ಲೋಗೋ ವಿನ್ಯಾಸ ಹೀಗೆ ಮೂರು ವಿಭಾಗಗಳಲ್ಲಿ ಪ್ರತಿಯೊಂದಕ್ಕೂ ನಗದು ಬಹುಮಾನ ನೀಡಲಾಗುತ್ತದೆ. ಪ್ರತಿಯೊಂದು ವಿಭಾಗವನ್ನು ಕ್ರಮವಾಗಿ ಪ್ರಥಮ ಸ್ಥಾನ, ಎರಡನೇ ಸ್ಥಾನ ಮತ್ತು ಮೂರನೇ ಸ್ಥಾನಕ್ಕೆ ವಿಂಗಡಿಸಲಾಗಿದೆ. ಹೆಸರು, ಲೋಗೋ ಅಥವಾ ಟ್ಯಾಗ್‌ಲೈನ್ ಆಗಿರಲಿ, ಪ್ರತಿ ವಿಭಾಗಕ್ಕೆ ಪ್ರಥಮ ಸ್ಥಾನ ಪಡೆದ ವಿಜೇತರಿಗೆ 5 ಲಕ್ಷ ರೂ ಮೌಲ್ಯದ ಬಹುಮಾನ. ಅದೇ ರೀತಿ ದ್ವಿತೀಯ ಸ್ಥಾನಕ್ಕೆ ಪ್ರತಿ ವಿಭಾಗಕ್ಕೆ 3 ಲಕ್ಷ ರೂ. ಮತ್ತು ಮೂರನೇ ಸ್ಥಾನಕ್ಕೆ ನಗದು ಬಹುಮಾನ 2 ಲಕ್ಷ ರೂ ಆಗಿದೆ. ಈ ಬಹುಮಾನಗಳು ಪ್ರತಿ ವಿಭಾಗಕ್ಕೂ ಅನ್ವಯಿಸುತ್ತವೆ.


  ಡಿಎಫ್‌ಐ ಉದ್ದೇಶವೇನು?


  ಭಾರತದಲ್ಲಿ ಮೌಲಸೌಕರ್ಯಗಳ ಉದ್ದೇಶಕ್ಕಾಗಿ ಬ್ಯಾಂಕ್‌ಗಳನ್ನು ಅವಲಂಬಿಸಲಾಗಿದೆ. ಇದೀಗ ಅಭಿವೃದ್ಧಿ ಹಣಕಾಸು ಸಂಸ್ಥೆಯು ಮೂಲಸೌಕರ್ಯದ ಅಭಿವೃದ್ಧಿಗೆ ಮಾತ್ರವೇ ಹಣಕಾಸು ಒದಗಿಸುವ ಉದ್ದೇಶದಿಂದ ರಚಿಸಲಾಗಿದೆ. ಮೂಲಭೂತ ಸೌಕರ್ಯ ಹಣಕಾಸು ಮತ್ತು ಅಭಿವೃದ್ಧಿ ಕಾಯ್ದೆಯ ರಾಷ್ಟ್ರೀಕೃತ ಬ್ಯಾಂಕ್ ಕಾಯ್ದೆ 2021ರ ಮೂಲಕ ಸಂಸತ್ತು ಈ ಸಂಸ್ಥೆಯನ್ನು ಅಂಗೀಕರಿಸಿದೆ. ಡಿಎಫ್‌ಐ ಆದೇಶಗಳ ಮೂಲಕ ಸರ್ಕಾರದ ಬೆಂಬಲದೊಂದಿಗೆ ಅಭಿವೃದ್ಧಿ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತದೆ.


  ಇದನ್ನೂ ಓದಿ: ಠೇವಣಿ ವಿಮೆ 5 ಲಕ್ಷಕ್ಕೆ ಹೆಚ್ಚಳ: ಬ್ಯಾಂಕ್ ದಿವಾಳಿಯಾದರೆ 90 ದಿನಗಳಲ್ಲಿ ಗ್ರಾಹಕರ ಕೈ ಸೇರಲಿದೆ ಹಣ

  ಈ ಸಂಸ್ಥೆ ಸಾಲದಾತರನ್ನು ಹೊರಗಿಡುವುದಿಲ್ಲ. ಬದಲಿಗೆ ಅವರನ್ನು ಒಗ್ಗೂಡಿಸುತ್ತದೆ ಎಂದು MyGov ವೆಬ್‌ಸೈಟ್‌ ಮಾಹಿತಿ ನೀಡಿದೆ. ಹೊಸ ಯೋಜನೆಗಳನ್ನು ರೂಪಿಸುವುದು, ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ವಿಸ್ತರಿಸುವುದು ಮತ್ತು ದುರ್ಬಲ ಮೂಲಸೌಕರ್ಯಗಳನ್ನು ಪುನರುಜ್ಜೀವನಗೊಳಿಸುವುದು ಇದರ ಉದ್ದೇಶವಾಗಿದೆ. ಈ ಕಾರಣಕ್ಕಾಗಿಯೇ ಸರ್ಕಾರವು ಈ ಯೋಜನೆಗಾಗಿ 111 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ ಮತ್ತು 2024 ರಿಂದ 2025ರ ವೇಳೆಗೆ ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ (ಎನ್‌ಐಪಿ) ಅಡಿಯಲ್ಲಿ ಹೂಡಿಕೆ ಮಾಡಲು 7,000 ಯೋಜನೆಗಳನ್ನು ಸಮಾನಾಂತರವಾಗಿ ಗುರುತಿಸಿದೆ.


  ಅಪಾಯ ತಗ್ಗಿಸುವುದು, ಉತ್ಪನ್ನ ನಾವೀನ್ಯತೆ, ನೈಸರ್ಗಿಕ ಅಭಿವೃದ್ಧಿ ಮತ್ತು ನೈತಿಕ ನಿಧಿಗಳನ್ನು ಪ್ರವೇಶಿಸುವುದರ ಜೊತೆಗೆ ಬಾಂಡ್ ಮಾರುಕಟ್ಟೆಯ ಅಭಿವೃದ್ಧಿಗೆ ಹೆಚ್ಚು ರೋಮಾಂಚನಕಾರಿಯಾಗಲು ಸಹಾಯ ಮಾಡುವುದು ಯೋಜನೆಯ ಉದ್ದೇಶವಾಗಿದೆ.


  ಬ್ಲೂಮ್‌ಬರ್ಗ್ ಕ್ವಿಂಟ್ ವರದಿಯ ಪ್ರಕಾರ ಈ ಸಂಸ್ಥೆ ಲಾಭದ ವಾಣಿಜ್ಯ ಮಾನದಂಡಗಳಿಗೆ ಅನುಗುಣವಾಗಿಲ್ಲದಿದ್ದರೂ, ಹೆಚ್ಚಿನ ಸರ್ಕಾರಿ ಸ್ವಾಮ್ಯದ ಅಥವಾ ಬೆಂಬಲಿತ ಏಜೆನ್ಸಿಗಳು ಸರ್ಕಾರದ ಖಾತರಿಗಳ ಅನುಕೂಲವನ್ನು ಆನಂದಿಸುತ್ತವೆ ಎಂದು ವರದಿ ತಿಳಿಸಿದೆ.

  Published by:Kavya V
  First published: