ವೈದ್ಯಕೀಯ ವಿಭಾಗದಲ್ಲಿ ಮೂವರು ವಿಜ್ಞಾನಿಗಳಿಗೆ ನೋಬೆಲ್ ಪ್ರಶಸ್ತಿ

19ನೇ ಶತಮಾನದ ಅಂತ್ಯದವರೆಗೂ ಬದುಕಿದ್ದ ಸ್ವೀಡನ್ ದೇಶದ ರಸಾಯನಶಾಸ್ತ್ರಜ್ಞ, ಎಂಜಿನಿಯರ್, ಸಂಶೋಧಕ ಆಲ್​ಫ್ರೆಡ್ ಅವರ ಸ್ಮರಣಾರ್ಥ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ. ಇಲ್ಲಿಯವರೆಗೂ 800ಕ್ಕೂ ಹೆಚ್ಚು ಮಂದಿಗೆ ಈ ಪುರಸ್ಕಾರ ಸಿಕ್ಕಿದೆ.

Vijayasarthy SN | news18
Updated:October 7, 2019, 4:49 PM IST
ವೈದ್ಯಕೀಯ ವಿಭಾಗದಲ್ಲಿ ಮೂವರು ವಿಜ್ಞಾನಿಗಳಿಗೆ ನೋಬೆಲ್ ಪ್ರಶಸ್ತಿ
2019ರ ಸಾಲಿನ ನೊಬೆಲ್ ಪುರಸ್ಕೃತ ವೈದ್ಯಕೀಯ ವಿಜ್ಞಾನಿಗಳು
  • News18
  • Last Updated: October 7, 2019, 4:49 PM IST
  • Share this:
2019ರ ಸಾಲಿನ ನೋಬೆಲ್ ಪ್ರಶಸ್ತಿ ಪ್ರಕಟಣೆ ಇವತ್ತು ಪ್ರಾರಂಭವಾಗಿದೆ. ಮೊದಲ ದಿನದಂದು ವೈದ್ಯಕೀಯ ವಿಭಾಗದಲ್ಲಿ ಮೂವರು ವಿಜ್ಞಾನಿಗಳಿಗೆ ಅತ್ಯುಚ್ಛ ವಿಜ್ಞಾನ ಪ್ರಶಸ್ತಿ ಘೋಷಿಸಲಾಗಿದೆ. ವಿಲಿಯಮ್ ಜಿ. ಕೇಲಿನ್ ಜೂನಿಯರ್, ಸರ್ ಪೀಟರ್ ಜೆ. ರಾಟ್​ಕ್ಲಿಫ್ ಮತ್ತು ಗ್ರೆಗ್ ಎಲ್. ಸೆಮೆಂಜಾ ಅವರಿಗೆ ವೈದ್ಯಕೀಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಸಿಕ್ಕಿದೆ.

ಆಮ್ಲಜನಕದ ಅವಶ್ಯಕತೆಗೆ ತಕ್ಕಂತೆ ಜೀವಕೋಶಗಳು ಹೇಗೆ ಹೊಂದಿಕೊಳ್ಳುತ್ತವೆ ಹಾಗೂ ಹೇಗೆ ಸ್ಪಂದಿಸುತ್ತವೆ ಎಂಬುದನ್ನು ಈ ಮೂವರು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಅನೀಮಿಯಾ, ಕ್ಯಾನ್ಸರ್ ಇತ್ಯಾದಿ ಅನೇಕ ರೋಗಗಳ ಚಿಕಿತ್ಸೆಯಲ್ಲಿ ಇವರ ಸಂಶೋಧನೆಯು ಬಹಳ ಸಹಕಾರಿ ಆಗುತ್ತದೆ ಎಂದು ನೊಬೆಲ್ ಕಮಿಟಿ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಕೇಂದ್ರದ ಕೈಸೇರಿದ ಸ್ವಿಸ್​ ಬ್ಯಾಂಕ್ ಖಾತೆದಾರರ ಮಾಹಿತಿ; ಕಪ್ಪುಹಣ ಹಿಂದಿರುಗಿಸುವ ಹೋರಾಟದಲ್ಲಿ ಭಾರತಕ್ಕೆ ಮೊದಲ ಜಯ

ನೊಬೆಲ್ ಪಾರಿತೋಷಕದಲ್ಲಿ 9 ಮಿಲಿಯನ್ ಕ್ರೊನೋರ್ (ಸುಮಾರು 65 ಕೋಟಿ ರೂಪಾಯಿ) ನಗದು ಹಣ ಒಳಗೊಂಡಿರುತ್ತದೆ. ಈ 65 ಕೋಟಿ ಹಣವನ್ನು ಮೂವರು ವಿಜ್ಞಾನಿಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ ಎಂದು ಕರೋಲಿಂಸ್ಕಾ ಇನ್ಸ್​ಟಿಟ್ಯೂಟ್ ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

1901ರಿಂದಲೂ ವೈದ್ಯಕೀಯ ಅಥವಾ ಫಿಸಿಯೋಲಜಿ ವಿಭಾಗದಲ್ಲಿ ಈ ವರ್ಷದ್ದೂ ಸೇರಿ ಒಟ್ಟು 110 ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗಿದೆ. ಇವತ್ತು ಪ್ರಾರಂಭವಾಗಿರುವ ನೊಬೆಲ್ ಪ್ರಶಸ್ತಿ ಘೋಷಣೆ ಅ. 14ರವರೆಗೂ ಮುಂದುವರಿಯಲಿದೆ. ಅ. 12 ಮತ್ತು 13 ಹೊರತುಪಡಿಸಿ ಈ ಅವಧಿಯಲ್ಲಿ ಬರುವ ಎಲ್ಲಾ ದಿನಗಳಲ್ಲೂ ನೊಬೆಲ್ ಪ್ರಶಸ್ತಿ ಘೋಷಣೆಯಾಗಲಿದೆ.

ನೊಬೆಲ್ ಪ್ರಶಸ್ತಿ ಪ್ರಕಟವಾಗುವ ದಿನ ಮತ್ತು ವಿಭಾಗ:
ಅ. 7: ವೈದ್ಯಕೀಯಅ. 8: ಭೌತಶಾಸ್ತ್ರ
ಅ. 9: ರಸಾಯನಶಾಸ್ತ್ರ
ಅ. 10: ಸಾಹಿತ್ಯ
ಅ. 11: ಶಾಂತಿ
ಅ. 14: ಅರ್ಥಶಾಸ್ತ್ರ

ಇದನ್ನೂ ಓದಿ: ಹಿಂದೂ ದೇವಿಯಾಗಿ ಸಿಂಗಾರಗೊಂಡ ಮುಸ್ಲಿಂ ಬಾಲಕಿ; ಕೊಲ್ಕತ್ತಾದಲ್ಲಿ ಧಾರ್ಮಿಕ ಸಾಮರಸ್ಯಕ್ಕೆ ಭಾರೀ ಮೆಚ್ಚುಗೆ

ಏನಿದು ನೊಬೆಲ್ ಪ್ರಶಸ್ತಿ?

19ನೇ ಶತಮಾನದ ಅಂತ್ಯದವರೆಗೂ ಬದುಕಿದ್ದ ಸ್ವೀಡನ್ ದೇಶದ ರಸಾಯನಶಾಸ್ತ್ರಜ್ಞ, ಎಂಜಿನಿಯರ್, ಸಂಶೋಧಕ ಆಲ್​ಫ್ರೆಡ್ ಅವರ ಸ್ಮರಣಾರ್ಥ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ. ತಾವು ಸಾಯುವ ಮುನ್ನ ಆಲ್​ಫ್ರೆಡ್ ನೊಬೆಲ್ ಅವರು ಫಿಸಿಯಾಲಜಿ, ಕೆಮಿಸ್ಟ್ರಿ, ಲಿಟರೇಚರ್, ಪೀಸ್ ಮತ್ತು ಫಿಸಿಕ್ಸ್ ವಿಭಾಗದಲ್ಲಿ ಪ್ರಶಸ್ತಿ ನೀಡಬೇಕೆಂದು ವಿಲ್ ಬರೆದಿದ್ದರು. ಅದರಂತೆ ಸ್ವೀಡನ್ ಮತ್ತು ನಾರ್ವೆ ದೇಶದ ಸಂಸ್ಥೆಗಳು 1901ರಿಂದ ಜಗತ್ತಿನ ವಿಜ್ಞಾನಿಗಳನ್ನ ಗುರುತಿಸಿ ನೊಬೆಲ್ ಪಾರಿತೋಷಕಗಳ ನೀಡುತ್ತಾ ಬಂದಿವೆ. 1969ರಿಂದ ಅರ್ಥಶಾಸ್ತ್ರಜ್ಞರಿಗೂ ನೊಬೆಲ್ ಪ್ರಶಸ್ತಿ ನೀಡುವ ಪರಿಪಾಟ ಶುರುವಾಯಿತು.

ನೊಬೆಲ್ ಪ್ರಶಸ್ತಿಯನ್ನು ವಿಶ್ವದ ಅತ್ಯುಚ್ಚ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ. ಭಾರತ ಸಂಜಾತ ಬ್ರಿಟಿಷರಾದ ರೊನಾಲ್ಡ್ ರಾಸ್ ಮತ್ತು ರುಡ್ಯಾರ್ಡ್ ಕಿಪ್ಲಿಂಗ್ ಸೇರಿದಂತೆ ಒಟ್ಟು 10 ಭಾರತೀಯರು ನೊಬೆಲ್ ಪಾರಿತೋಷಕ ಪಡೆದಿದ್ದಾರೆ. ರಬೀಂದ್ರನಾಥ್ ಟಾಗೂರ್, ಸಿ.ವಿ. ರಾಮನ್, ಮದರ್ ತೆರೇಸಾ, ಅಮರ್ಥ್ಯ ಸೇನ್, ಹರ್​ಗೋವಿಂದ್ ಖುರಾನ, ಎಸ್. ಚಂದ್ರಶೇಖರ್ ಅವರು ಪ್ರಮುಖರು. 2014ರಲ್ಲಿ ಕೈಲಾಶ್ ಸತ್ಯಾರ್ಥಿ ಅವರು ಶಾಂತಿ ನೊಬೆಲ್ ಪಡೆದುಕೊಂಡಿದ್ದರು.

(ಮಾಹಿತಿ ನೆರವು: ಎಪಿ ಸುದ್ದಿ ಸಂಸ್ಥೆ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 7, 2019, 4:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading