ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ ಬಿಲ್ ಗೇಟ್ಸ್​ ತಂದೆ ನಿಧನ

ನನ್ನ ಅಪ್ಪನೇ ನಿಜವಾದ ಬಿಲ್ ಗೇಟ್ಸ್​. ನಾನೇನು ಆಗಬೇಕು ಎಂದುಕೊಂಡಿದ್ದೆನೋ ಅದೆಲ್ಲವನ್ನೂ ನನ್ನಪ್ಪ ಮಾಡಿದ್ದರು. ಅವರನ್ನು ಪ್ರತಿದಿನವೂ ನಾನು ನೆನಪಿಸಿಕೊಳ್ಳುತ್ತೇನೆ ಎಂದು ಬಿಲ್ ಗೇಟ್ಸ್ ಟ್ವೀಟ್ ಮಾಡಿದ್ದಾರೆ.

ಬಿಲ್ ಗೇಟ್ಸ್​ ತಂದೆ

ಬಿಲ್ ಗೇಟ್ಸ್​ ತಂದೆ

 • Share this:
  ನವದೆಹಲಿ (ಸೆ. 16): ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರ ತಂದೆ, ವೃತ್ತಿಯಲ್ಲಿ ವಕೀಲರಾಗಿದ್ದ ವಿಲಿಯಂ ಹೆನ್ರಿ ಗೇಟ್ಸ್​ (ಬಿಲ್ ಗೇಟ್ಸ್​ ಸೀನಿಯರ್) ಸೋಮವಾರ ಸಾವನ್ನಪ್ಪಿದ್ದಾರೆ. ಸೀಟಲ್ ಪ್ರದೇಶದ ಹೂಡ್ ಕೆನಲ್​ನಲ್ಲಿರುವ ಬೀಚ್ ಹೌಸ್​ನಲ್ಲಿ 94 ವರ್ಷದ ಅವರು ಕೊನೆಯುಸಿರೆಳೆದಿದ್ದಾರೆ. ಅಲ್ಜೀಮರ್​ ರೋಗದಿಂದ ಬಳಲುತ್ತಿದ್ದ ಸೀನಿಯರ್ ಬಿಲ್ ಗೇಟ್ಸ್​ ಸಾವಿನ ಸುದ್ದಿಯನ್ನು ಅವರ ಕುಟುಂಬಸ್ಥರು ನಿನ್ನೆ ಘೋಷಿಸಿದ್ದಾರೆ.

  1925ರ ನವೆಂಬರ್ 30ರಂದು ಹುಟ್ಟಿದ ಸೀನಿಯರ್ ಬಿಲ್ ಗೇಟ್ಸ್​ ವಾಷಿಂಗ್ಟನ್‌ನ ಬ್ರೆಮರ್ಟನ್‌ನಲ್ಲಿ ತಮ್ಮ ಬಾಲ್ಯವನ್ನು ಕಳೆದರು. ಅವರು ವಿಶ್ವದ ಅತಿದೊಡ್ಡ ಫಿಲಾಂಥ್ರೆಪಿಬಿಲ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಸ್ಥಾಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಸಾವಿನ ಬಳಿಕ ಪ್ರತಿಕ್ರಿಯೆ ನೀಡಿರುವ ಬಿಲ್ ಗೇಟ್ಸ್​, ನನ್ನ ಅಪ್ಪನೇ ನಿಜವಾದ ಬಿಲ್ ಗೇಟ್ಸ್​. ನಾನೇನು ಆಗಬೇಕು ಎಂದುಕೊಂಡಿದ್ದೆನೋ ಅದೆಲ್ಲವನ್ನೂ ನನ್ನಪ್ಪ ಮಾಡಿದ್ದರು. ಅವರನ್ನು ಪ್ರತಿದಿನವೂ ನಾನು ನೆನಪಿಸಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.  ನ್ಯೂಯಾರ್ಕ್ ಟೈಮ್ಸ್​ ಪತ್ರಿಕೆಯ ವರದಿ ಪ್ರಕಾರ, ನನ್ನ ಅಪ್ಪ ಮತ್ತು ಅಮ್ಮ ನನ್ನ ಜೀವನದಲ್ಲಿ ಅತಿ ಮುಖ್ಯ ಪಾತ್ರ ವಹಿಸಿದ್ದಾರೆ. ನನ್ನ ವ್ಯಕ್ತಿತ್ವದ ಮೇಲೆ ಅಪ್ಪನ ಪ್ರಭಾವ ಬಹಳಷ್ಟಿದೆ ಎಂದು ಬಿಲ್ ಗೇಟ್ಸ್​ ಹೇಳಿಕೆ ನೀಡಿದ್ದಾರೆ. ನನ್ನ ಅಪ್ಪ ಇರದೇ ಇದ್ದಿದ್ದರೆ ಇಂದು ಬಿಲ್ ಮತ್ತು ಮಿಲಿಂದಾ ಗೇಟ್ಸ್​ ಫೌಂಡೇಷನ್ ಇರುತ್ತಲೇ ಇರಲಿಲ್ಲ. ಆ ಫೌಂಡೇಷನ್​ನ ರೂಪುರೇಷೆಗಳನ್ನು ಅಪ್ಪನೇ ಸಿದ್ಧಪಡಿಸಿದ್ದರು ಎಂದು ಕೂಡ ಬಿಲ್ ಗೇಟ್ಸ್​ ನೆನಪಿಸಿಕೊಂಡಿದ್ದಾರೆ.

  ಸೋಮವಾರ ಮೃತಪಟ್ಟಿರುವ ಹೆನ್ರಿ ವಿಲಿಯಂ ಗೇಟ್ಸ್​ ತಮ್ಮ ಹೆಂಡತಿ, ಹೆಣ್ಣುಮಕ್ಕಳು, ಬಿಲ್ ಗೇಟ್ಸ್​ ಮತ್ತು ಸೊಸೆ, ಹಾಗೇ 8 ಮೊಮ್ಮಕ್ಕಳನ್ನು ಅಗಲಿದ್ದಾರೆ.
  Published by:Sushma Chakre
  First published: