ರಾಮ ಮಂದಿರ ನಿರ್ಮಾಣವಾದರೆ ಕೊರೋನಾದಿಂದ ದೇಶ ಮುಕ್ತವಾಗುತ್ತದೆಯೇ? ಶರದ್ ಪವಾರ್ ಪ್ರಶ್ನೆ

ನನ್ನ ಪ್ರಕಾರ ಕೊರೋನಾ ವೈರಸ್ ಇದೀಗ ದೇಶಕ್ಕೆ ದೊಡ್ಡ ಬೆದರಿಕೆಯಾಗಿ ಬದಲಾಗಿದೆ. ತುರ್ತಾಗಿ ಈ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಬೇಕಿದೆ. ಕೇಂದ್ರ ಮತ್ತು ರಾಜ್ಯ ಎರಡೂ ಸರ್ಕಾರಗಳೂ ಈ ವಿಚಾರದ ಮೇಲೆ ಗಮನವನ್ನು ಕೇಂದ್ರೀಕರಿಸಬೇಕಿದೆ ಎಂದು ಶರದ್ ಪವಾರ್ ಸಲಹೆ ನೀಡಿದ್ದಾರೆ.

ಶರದ್ ಪವಾರ್

ಶರದ್ ಪವಾರ್

  • Share this:
ಮುಂಬೈ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 05 ರಂದು ಅಡಿಪಾಯ ಹಾಕಲಿರುವುದು ಬಹುತೇಕ ಖಚಿತವಾಗಿದೆ. ಆದರೆ, ಇದನ್ನು ಕಟುವಾಗಿ ಟೀಕಿಸಿರುವ ಎನ್‌ಸಿಪಿ ಪಕ್ಷದ ಮುಖಂಡ ಶರದ್ ಪವಾರ್, “ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ, ಕೊರೋನಾದಿಂದ ಈ ದೇಶ ಮುಕ್ತವಾಗಲಿದೆಯೇ?” ಎಂದು ಪ್ರಶ್ನೆ ಎತ್ತುವ ಮೂಲಕ ಕೇಂದ್ರ ಸರ್ಕಾರದ ನಡೆಯನ್ನು ಕಟುವಾಗಿ ವಿಮರ್ಶಿಸಿದ್ದಾರೆ. ಅಲ್ಲದೆ, ತಮ್ಮ ಪ್ರಶ್ನೆಯ ಮೂಲಕ ಹೊಸ ವಿವಾದವೊಂದನ್ನು ಹುಟ್ಟುಹಾಕಿದ್ಧಾರೆ.

ರಾಮ ಮಂದಿರ ನಿರ್ಮಾಣದ ಕುರಿತು ಮಾತನಾಡಿರುವ ಶರದ್ ಪವಾರ್, “ದೇವಾಲಯವನ್ನು ನಿರ್ಮಿಸುವ ಮೂಲಕ ಕೊರೋನಾವನ್ನು ತೊಲಗಿಸಬಹುದು ಎಂದು ಕೆಲವರು ಭಾವಿಸಿದ್ದಾರೆಯೇ?, ಭಾಗಶಃ ಅವರು ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡೆ ದೇವಾಲಯ ನಿರ್ಮಾಣ ಕಾರ್ಯಕ್ಕೆ ಯೋಜಿಸಿದ್ದಾರೆಯೇ? ನನಗೆ ಗೊತ್ತಿಲ್ಲ. ಆದರೆ, ಇಂತಹ ಸಂದರ್ಭದಲ್ಲಿ ದೇವಾಲಯಕ್ಕಿಂತ ಮಾರಣಾಂತಿಕ ವೈರಸ್‌ನಿಂದ ಜನರನ್ನು ರಕ್ಷಿಸುವುದು ಮತ್ತು ಸಹಾಯ ಮಾಡುವುದು ಮೊದಲ ಆದ್ಯತೆಯಾಗಬೇಕಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ನನ್ನ ಪ್ರಕಾರ ಕೊರೋನಾ ವೈರಸ್ ಇದೀಗ ದೇಶಕ್ಕೆ ದೊಡ್ಡ ಬೆದರಿಕೆಯಾಗಿ ಬದಲಾಗಿದೆ. ತುರ್ತಾಗಿ ಈ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಬೇಕಿದೆ. ಕೇಂದ್ರ ಮತ್ತು ರಾಜ್ಯ ಎರಡೂ ಸರ್ಕಾರಗಳೂ ಈ ವಿಚಾರದ ಮೇಲೆ ಗಮನವನ್ನು ಕೇಂದ್ರೀಕರಿಸಬೇಕಿದೆ” ಎಂದು ಶರದ್ ಪವಾರ್ ಸಲಹೆ ನೀಡಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲು ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಆಗಸ್ಟ್ 05ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1.10 ರ ನಡುವೆ ಪ್ರಧಾನಿ ಮೋದಿ ಅಯೋಧ್ಯೆಗೆ ಆಗಮಿಸಲಿದ್ದಾರೆ ಎಂದು ಮೂಲಗಳು ನ್ಯೂಸ್ 18 ಗೆ ತಿಳಿಸಿವೆ. ಅಯೋಧ್ಯೆಯ ಭೂಮಿ ಪೂಜೆಗೆ ಪ್ರಧಾನಿ ಮೋದಿ ಆಗಮಿಸಿದರೆ, ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ಅವರು ಇದೇ ಮೊದಲ ಬಾರಿಗೆ ಆಯೋಧ್ಯೆಗೆ ಆಗಮಿಸಿದಂತಾಗುತ್ತದೆ.

ಇದನ್ನೂ ಓದಿ : ದಿನ ಬಿಟ್ಟು ದಿನ ಡೀಸೆಲ್ ಬೆಲೆ ಏರಿಕೆ; 12 ದಿನದಲ್ಲಿ 7 ಬಾರಿ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರಸುದೀರ್ಘ ಕಾನೂನು ಜಗಳದ ನಂತರ, ಸುಪ್ರೀಂ ಕೋರ್ಟ್ ಕಳೆದ ನವೆಂಬರ್‌ ತಿಂಗಳಿನಲ್ಲಿ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಟ್ರಸ್ಟ್‌ ವತಿಯಿಂದ ರಾಮ ದೇವಾಲಯ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. ಅಲ್ಲದೆ, ಸುನ್ನಿ ವಕ್ಫ್ ಮಂಡಳಿಗೆ ಪರ್ಯಾಯ 5 ಎಕರೆ ಜಾಗವನ್ನು ಮಂಜೂರು ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು. ಹೀಗಾಗಿ ಇದೀಗ ಹಿಂದೂಪರ ಸಂಘಟನೆಗಳು ಒಂದಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಿವೆ.
Published by:MAshok Kumar
First published: