ಸುಪ್ರೀಂಕೋರ್ಟ್​ಗೆ ಸುಳ್ಳು ದಾಖಲೆ ನೀಡಿದ ಮೋದಿ ಸರ್ಕಾರ, ಮಹಾಲೇಖಪಾಲರು, ಅಟಾರ್ನಿ ಜನರಲ್​ಗೆ ಸಮನ್ಸ್; ಖರ್ಗೆ

29 ಪುಟಗಳ ತೀರ್ಪಿನಲ್ಲಿ, ರಫೇಲ್​ ಒಪ್ಪಂದದ ವರದಿಯನ್ನು ಸಾರ್ವಜನಿಕ ಲೆಕ್ಕ ಸಮಿತಿ (ಪಿಎಸಿ) ಮುಂದೆ ಹಂಚಿಕೊಳ್ಳಲಾಗಿತ್ತು ಎಂದು ಹೇಳಿದೆ. ಆದರೆ, ಪಿಎಸಿ ಮುಖ್ಯಸ್ಥರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ, ಸಮಿತಿಯ ಮುಂದೆ ಯಾವುದೇ ವರದಿ ಸಲ್ಲಿಕೆಯಾಗಿಲ್ಲ ಎಂದಿದ್ದಾರೆ.

HR Ramesh | news18india
Updated:December 15, 2018, 8:46 PM IST
ಸುಪ್ರೀಂಕೋರ್ಟ್​ಗೆ ಸುಳ್ಳು ದಾಖಲೆ ನೀಡಿದ ಮೋದಿ ಸರ್ಕಾರ, ಮಹಾಲೇಖಪಾಲರು, ಅಟಾರ್ನಿ ಜನರಲ್​ಗೆ ಸಮನ್ಸ್; ಖರ್ಗೆ
ಮಲ್ಲಿಕಾರ್ಜುನ ಖರ್ಗೆ
  • Share this:
ನವದೆಹಲಿ: ಮಹಾಲೇಖಪಾಲರು ನೀಡಿದ ವರದಿ ಪರಿಣಾಮ ರಫೇಲ್​ ಒಪ್ಪಂದ ಸಂಬಂಧ ಯಾವುದೇ ತನಿಖೆಯ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್​ ಶುಕ್ರವಾರ ನೀಡಿದ ತೀರ್ಪು ಈಗ ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್​ ನಡುವಿನ ಮತ್ತೊಂದು ಸುತ್ತಿನ ಕಲಹಕ್ಕೆ ಕಾರಣವಾಗಿದೆ.

29 ಪುಟಗಳ ತೀರ್ಪಿನಲ್ಲಿ, ರಫೇಲ್​ ಒಪ್ಪಂದದ ವರದಿಯನ್ನು ಸಾರ್ವಜನಿಕ ಲೆಕ್ಕ ಸಮಿತಿ (ಪಿಎಸಿ) ಮುಂದೆ ಹಂಚಿಕೊಳ್ಳಲಾಗಿತ್ತು ಎಂದು ಹೇಳಿದೆ. ಆದರೆ, ಪಿಎಸಿ ಮುಖ್ಯಸ್ಥರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ, ಸಮಿತಿಯ ಮುಂದೆ ಯಾವುದೇ ವರದಿ ಸಲ್ಲಿಕೆಯಾಗಿಲ್ಲ. ಸರ್ಕಾರ ದೇಶದ ಅತ್ಯುನ್ನತ ಕೋರ್ಟ್​ಗೆ ಸುಳ್ಳು ಹೇಳಿ, ಕೋರ್ಟ್​ನಿಂದ ಕ್ಲಿನ್​ಚೀಟ್​ ಪಡೆದಿದೆ ಎಂದು ಆರೋಪಿಸಿದ್ದಾರೆ.

ಸಿಎಜಿ ವರದಿಯನ್ನು ಸದನದಲ್ಲಿ ಮತ್ತು ಅದಕ್ಕು ಹಿಂದೆ ಪಿಎಸಿ ಮುಂದೆ ಸಲ್ಲಿಸಲಾಗಿತ್ತು ಎಂದು ಸರ್ಕಾರ ಸುಪ್ರೀಂಕೋರ್ಟ್​ಗೆ ಸುಳ್ಳು ಹೇಳಿದೆ. ಸುಪ್ರೀಂಕೋರ್ಟ್​ನಲ್ಲಿ ಸರ್ಕಾರ (ಸಿಎಜಿ ವರದಿ) ಇದು ಸಾರ್ವಜನಿಕವಾಗಿದೆ ಎಂದು ಹೇಳಿದೆ. ಅದು ಎಲ್ಲಿ? ಅದನ್ನು ನೀವು ನೋಡಿದ್ದೀರಾ? ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಶನಿವಾರ ಪ್ರಶ್ನೆ ಮಾಡಿದ್ದಾರೆ.
ಸಾರ್ವಜನಿಕ ಲೆಕ್ಕ ಸಮಿತಿಯಿಂದ ಅಟಾರ್ನಿ ಜನರಲ್​ ಕೆ.ಕೆ.ವೇಣುಗೋಪಾಲ್ ಮತ್ತು ಮಹಾಲೇಖಪಾಲ ರಾಜೀವ್ ಮೇಹರಿಶಿ ಅವರಿಗೆ ಸಮನ್ಸ್​ ಜಾರಿ ಮಾಡಲಾಗುವುದು ಮತ್ತು ಯಾವಾಗ ವರದಿಯನ್ನು ಸಮಿತಿ ಮುಂದೆ ಹಾಜರುಪಡಿಸಲಾಗಿತ್ತು, ಹಾಜರುಪಡಿಸದಿದ್ದರೂ ಅದನ್ನು ದೇಶದ ಉನ್ನತ ನ್ಯಾಯಾಲಯದಲ್ಲಿ ಹೇಗೆ ಸಲ್ಲಿಸಿದಿರಿ ಎಂದು ಅವರನ್ನು ಪ್ರಶ್ನೆ ಮಾಡಲಾಗುವುದು ಎಂದು ಅವರು ತಿಳಿಸಿದರು.


ಎಜಿ ಮತ್ತು ಸಿಎಜಿಗೆ ಸಮನ್​ ನೀಡುವಂತೆ ಸಮಿತಿಯ ಎಲ್ಲ ಸದಸ್ಯರಿಗೂ ಮನವಿ ಮಾಡುತ್ತೇನೆ ಮತ್ತು ರಫೇಲ್​ ಒಪ್ಪಂದ ಸಂಬಂಧ ಸಿಎಜಿ ವರದಿ ಸಂಸತ್​ ಮುಂದೆ ಸಲ್ಲಿಕೆಯಾಗಿತ್ತೆ ಎಂಬುದ ಬಗ್ಗೆ ಕೇಳಬೇಕಾಗಿ ಖರ್ಗೆ ಹೇಳಿದರು.
ನೀವು ಸುಪ್ರೀಂಕೋರ್ಟ್​ಗೆ ತಪ್ಪು ಮಾಹಿತಿ ನೀಡಿ ಕ್ಲಿನ್ ಪಡೆದಿದ್ದಿರಾ. ಇದು ಸರಿಯಲ್ಲ. ನಾವು ಸುಪ್ರೀಂಕೋರ್ಟ್​ಅನ್ನು ಗೌರವಿಸುತ್ತೇವೆ. ಆದರೆ, ಅದು ತನಿಖಾ ಸಂಸ್ಥೆಯಲ್ಲ. ರಫೇಲ್​ ಒಪ್ಪಂದ ಸಂಬಂಧ ಜಂಟಿ ಸದನ ಸಮಿತಿ ತನಿಖೆ ನಡೆಸಲು ಸಾಧ್ಯ. ಸರ್ಕಾರ ನ್ಯಾಯಾಲಯದ ಪ್ರಕ್ರಿಯೆಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ಆರೋಪಿಸಿದರು.

ನರೇಂದ್ರ ಮೋದಿ ಸರ್ಕಾರದ ಮೇಲೂ ಹರಿಹಾಯ್ದ ಖರ್ಗೆ, ಸುಪ್ರೀಂಕೋರ್ಟ್​ಗೆ ಸಿಎಜಿ ವರದಿಯಲ್ಲಿ ಸತ್ಯವನ್ನು ಮರೆಮಾಚಿ, ಸುಳ್ಳು ಮಾಹಿತಿ ನೀಡಿ, ದಿಕ್ಕು ತಪ್ಪಿಸಿದ್ದರಿಂದ ಮೋದಿ ಅವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಸುಪ್ರೀಂಕೋರ್ಟ್​ ತೀರ್ಪು ಪ್ರಕಟಗೊಂಡ ನಂತರ ರಫೇಲ್​ ಒಪ್ಪಂದದ ಬಗ್ಗೆ ಪ್ರಧಾನಿ ಮೋದಿ ಅವರ ಮೇಲೆ ಸುಳ್ಳು ಆರೋಪ ಮಾಡಿದ್ದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕ್ಷಮೆ ಕೇಳಬೇಕು ಎಂದು ಆಡಳಿತ ಪಕ್ಷ ಬಿಜೆಪಿ ನೆನ್ನೆ ಆಗ್ರಹ ಮಾಡಿತ್ತು.
First published: December 15, 2018, 12:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading