ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರು ಹರಿಯಾಣದ ರೈತರಿಗೆ; ಪ್ರಧಾನಿ ಮೋದಿ ಭರವಸೆ

ಕಳೆದ 70 ವರ್ಷಗಳಿಂದ ಹರಿಯಾಣ ರೈತರಿಗೆ ಒದಗಬೇಕಾದ ನೀರು ಪಾಕಿಸ್ತಾನಕ್ಕೆ ಹರಿದು ಹೋಗುತ್ತಿದೆ. ಈಗ ನಾವು ಆ ನೀರು ಪಾಕಿಸ್ತಾನಕ್ಕೆ ಹರಿಯುವುದನ್ನು ನಿಲ್ಲಿಸಿ, ಹರಿಯಾಣ ರೈತರಿಗೆ ನೀಡುತ್ತೇವೆ- ಮೋದಿ

Latha CG | news18-kannada
Updated:October 16, 2019, 2:46 PM IST
ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರು ಹರಿಯಾಣದ ರೈತರಿಗೆ; ಪ್ರಧಾನಿ ಮೋದಿ ಭರವಸೆ
ಪ್ರಧಾನಿ ನರೇಂದ್ರ ಮೋದಿ
Latha CG | news18-kannada
Updated: October 16, 2019, 2:46 PM IST
ಹರಿಯಾಣ(ಅ.16): ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರು ಹರಿಯಾಣ ರೈತರದ್ದು, ಆ ನೀರನ್ನು ಹರಿಯಾಣಕ್ಕೆ ತಿರುಗಿಸಿ, ಅಲ್ಲಿನ ರೈತರಿಗೆ ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ನಿನ್ನೆ ಹರಿಯಾಣದಲ್ಲಿ ನಡೆದ ಚುನಾವಣೆ ರ್ಯಾಲಿಯಲ್ಲಿ ಮತದಾರರನ್ನು ಉದ್ದೇಶಿಸಿ ಮೋದಿ ಮಾತನಾಡಿದರು. "ಕಳೆದ 70 ವರ್ಷಗಳಿಂದ ಹರಿಯಾಣ ರೈತರಿಗೆ ಒದಗಬೇಕಾದ ನೀರು ಪಾಕಿಸ್ತಾನಕ್ಕೆ ಹರಿದು ಹೋಗುತ್ತಿದೆ. ಈಗ ನಾವು ಆ ನೀರು ಪಾಕಿಸ್ತಾನಕ್ಕೆ ಹರಿಯುವುದನ್ನು ನಿಲ್ಲಿಸಿ, ಹರಿಯಾಣ ರೈತರಿಗೆ ನೀಡುತ್ತೇವೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲಸ ಆರಂಭವಾಗಿದೆ. ಆ ನೀರು ಭಾರತ ಮತ್ತು ಹರಿಯಾಣ ರೈತರಿಗೆ ಸೇರಿದೆ. ಅದಕ್ಕಾಗಿಯೇ ಮೋದಿ ನಿಮಗಾಗಿ ಹೋರಾಟ ಮಾಡುತ್ತಿದ್ದಾರೆ," ಎಂದರು.

ಮನಮೋಹನ್​ ಸಿಂಗ್​-ರಘುರಾಮ್​ ರಾಜನ್​ ಆಡಳಿತಾವಧಿಯಲ್ಲಿ ಬ್ಯಾಂಕ್​ಗಳ ಸ್ಥಿತಿ ಶೋಚನೀಯವಾಗಿತ್ತು; ನಿರ್ಮಲಾ ಸೀತಾರಾಮನ್​

ಕಾಶ್ಮೀರದಲ್ಲಿ 370 ವಿಧಿ ರದ್ದು ಪಡಿಸಿದ ಸಂದರ್ಭದಲ್ಲಿ ಕಾಂಗ್ರೆಸ್​ ನಾಯಕರು ಅದನ್ನು ವಿರೋಧಿಸಿ, ಊಹಾಪೋಹಗಳನ್ನು ಹಬ್ಬಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ತೆಗೆದು ಹಾಕಲಾಗಿದೆ. ಆದರೆ ಕೆಲವು ಕಾಂಗ್ರೆಸ್​ ನಾಯಕರು ದೇಶ ಹಾಗೂ ವಿಶ್ವದಾದ್ಯಂತ ಇದರ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಮೋದಿ ಆರೋಪಿಸಿದರು.

ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಜಮ್ಮು-ಕಾಶ್ಮೀರ ಇತರೆ ಪ್ರದೇಶಗಳ ಜೊತೆ ಒಂದಾಗಿದೆ. ಜಮ್ಮು ಇನ್ನು ಕೆಲವೇ ದಿನಗಳಲ್ಲಿ ಶೀಘ್ರ ಅಭಿವೃದ್ಧಿ ಕಾಣಲಿದೆ ಎಂದು ಹೇಳಿದರು.

ಇದೇ ವೇಳೆ, ಹರಿಯಾಣದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂದು ಮೋದಿ ಮತದಾರರಿಗೆ ಕರೆ ನೀಡಿದರು. ಮೋದಿ ಹಾಗೂ ಹರಿಯಾಣ ಸಿಎಂ ಮನೋಹರ್​ ಲಾಲ್ ಕಟ್ಟರ್​​ ಅವರಿಂದಾಗಿ ರಾಜ್ಯವು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಮೋದಿ ಹೇಳಿದರು.

ಮಹಾರಾಷ್ಟ್ರ ಚುನಾವಣಾ ಪ್ರಚಾರ ವೇಳೆ ಚಾಕು ಇರಿತ; ಕೂದಲೆಳೆ ಅಂತರದಲ್ಲಿ ಪಾರಾದ ಶಿವಸೇನೆ ಸಂಸದ ನಿಂಬಾಳ್ಕರ್
Loading...

First published:October 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...