ರಸ್ತೆ ಗುಣಮಟ್ಟ ಕೆಟ್ಟದಾಗಿದ್ದರೆ, ಗುತ್ತಿಗೆದಾರರ ಮೇಲೆ ಹರಿಯಲಿದೆ ಬುಲ್ಡೋಜರ್​; ನಿತಿನ್​ ಗಡ್ಕರಿ ಎಚ್ಚರಿಕೆ

ಹೆದ್ದಾರಿ ನಿರ್ಮಾಣಕ್ಕಾಗಿ ಈಗಾಗಲೇ ಹೆಚ್ಚುಕಡಿಮೆ 10 ಲಕ್ಷ  ಕೋಟಿ ಗುತ್ತಿಗೆ ನೀಡಿದ್ದೇವೆ. ರಸ್ತೆ ಗುಣಮಟ್ಟ ನಿರ್ವಹಣೆ ವಿಷಯದಲ್ಲಿ ರೆ ಯಾವುದೇ ಹೊಂದಾಣಿಕೆಯನ್ನು ಮಾಡಿಕೊಳ್ಳುವುದಿಲ್ಲ.

Seema.R | news18
Updated:December 7, 2018, 10:54 AM IST
ರಸ್ತೆ ಗುಣಮಟ್ಟ ಕೆಟ್ಟದಾಗಿದ್ದರೆ, ಗುತ್ತಿಗೆದಾರರ ಮೇಲೆ ಹರಿಯಲಿದೆ ಬುಲ್ಡೋಜರ್​; ನಿತಿನ್​ ಗಡ್ಕರಿ ಎಚ್ಚರಿಕೆ
ಕೇಂದ್ರ ಸಚಿವ ನಿತಿನ್ ಗಡ್ಕರಿ
Seema.R | news18
Updated: December 7, 2018, 10:54 AM IST
ನವದೆಹಲಿ (ಡಿ.07): ರಸ್ತೆಗಳು ದೇಶದ ಆಸ್ತಿ ಅಂತಹದರಲ್ಲಿ ರಸ್ತೆಗಳ ಗುಣಮಟ್ಟದ ವಿಷಯದಲ್ಲಿ ನಾವು ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ರಸ್ತೆಗಳು ಹದಗೆಟ್ಟ ಸ್ಥಿತಿಯಲ್ಲಿ ಕಂಡು ಬಂದರೆ, ನಿರ್ಮಾಣ ಗುತ್ತಿಗೆಗಾರರ ಮೇಲೆ ಬುಲ್ಡೋಜರ್​ ಹರಿಯಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ.

ಹೆದ್ದಾರಿ ನಿರ್ಮಾಣಕ್ಕಾಗಿ ಈಗಾಗಲೇ ಹೆಚ್ಚುಕಡಿಮೆ 10 ಲಕ್ಷ  ಕೋಟಿ ಗುತ್ತಿಗೆ ನೀಡಿದ್ದೇವೆ. ಈ ಗುತ್ತಿಗೆ ಪಡೆಯಲು ಯಾವುದೇ ಟೆಂಡರ್​ ದಾರರು ಲಾಬಿ ಮಾಡಲು ದೆಹಲಿಗೆ ಬಂದಿಲ್ಲ. ಅನೇಕ ದೊಡ್ಡ ದೊಡ್ಡ ಟೆಂಡರ್​ ನೀಡಲಾಗಿದ್ದು, ಇವರುಗಳು ಏನಾದರೂ ರಸ್ತೆ ಗುಣಮಟ್ಟ ನಿರ್ವಹಣೆ ವಿಷಯದಲ್ಲಿ ರೆ ಯಾವುದೇ ಹೊಂದಾಣಿಕೆಯನ್ನು ಮಾಡಿಕೊಳ್ಳುವುದಿಲ್ಲ. ಅವರ ಮೇಲೆ ಬುಲ್ಡೋಜರ್​ ಹತ್ತಿಸುತ್ತೇವೆ ಎಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ: ಲೋಕಸಭಾ ಚುನಾವಣೆ: ಪುಣೆಯಿಂದ ಮಾಧುರಿ ದೀಕ್ಷಿತ್‌ ಬಿಜೆಪಿ ಅಭ್ಯರ್ಥಿ? ಎದುರಾಳಿಗಳಲ್ಲಿ ಸಣ್ಣ ನಡುಕ!

ನವಿ ಮುಂಬೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಸ್ತೆ  ನಿಲ್ದಾಣವನ್ನು ವೆನಿಸ್ ವಿಮಾನ ನಿಲ್ದಾಣದ ಮಾರ್ಗದಲ್ಲಿ ರಸ್ತೆಗಳಿಂದ ಹೊರತುಪಡಿಸಿ ಜಲಮಾರ್ಗಗಳ ಮೂಲಕ ಸಂಪರ್ಕಿಸಲಾಗುವುದು. ಈ ಮಾರ್ಗದ ಮೂಲಕ ಕೇವಲ 20 ನಿಮಿಷದಲ್ಲಿ ಜನರು ವಿಮಾನನಿಲ್ದಾಣಕ್ಕೆ ತಲುಪಬಹುದು.

First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ