ವಿಶ್ವಾಸಮತ ಯಾಚನೆಯಲ್ಲಿ ಬಹುಮತ ಸಾಬೀತುಪಡಿಸುವ ವಿಶ್ವಾಸದಲ್ಲಿ ಮಧ್ಯಪ್ರದೇಶದ ಕಮಲನಾಥ್ ಸರ್ಕಾರ!

ಸಿಂಧಿಯಾ ಬಳಗದಲ್ಲಿರುವ ಆರು ಸಚಿವರನ್ನು ಹೊರತುಪಡಿಸಿ, ಅವರು ಕರೆದೊಯ್ದಿರುವ 13 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಸಚಿವ ಪಿ.ಸಿ.ಶರ್ಮಾ ಹೇಳಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಸಲ್ಲಿಕೆಯಾಗಿರುವ ರಾಜೀನಾಮೆಗಳು ನಕಲಿ. ಅವರೆಲ್ಲರೂ ಫ್ಲೋರ್ ಟೆಸ್ಟ್​ನಲ್ಲಿ ಭಾಗಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

news18-kannada
Updated:March 10, 2020, 9:25 PM IST
ವಿಶ್ವಾಸಮತ ಯಾಚನೆಯಲ್ಲಿ ಬಹುಮತ ಸಾಬೀತುಪಡಿಸುವ ವಿಶ್ವಾಸದಲ್ಲಿ ಮಧ್ಯಪ್ರದೇಶದ ಕಮಲನಾಥ್ ಸರ್ಕಾರ!
ಸಿಎಂ ಕಮಲನಾಥ್
  • Share this:
ಭೋಪಾಲ್: ಮಧ್ಯಪ್ರದೇಶದಲ್ಲಿ ರಾಜಕೀಯ ಅಸ್ಥಿರತೆ ಎದುರಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷದ 22 ಶಾಸಕರು ಬಂಡಾಯ ಎದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ ಕುಸಿದ್ದಿದ್ದು, ಸರ್ಕಾರ ಪತನದ ಹಾದಿಯಲ್ಲಿದೆ.

ಪಕ್ಷದ ಮತ್ತೊರ್ವ ಹಿರಿಯ ನಾಯಕ ಜ್ಯೋತಿರಾಧಿತ್ಯಾ ಸಿಂಧಿಯಾ ಅವರು ಕಾಂಗ್ರೆಸ್​ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ರಾಜ್ಯದಲ್ಲಿ ಇಷ್ಟೆಲ್ಲಾ ರಾಜಕೀಯ ಬೆಳವಣಿಗೆಗಳ ನಡುವೆಯೂ ಸಿಎಂ ಕಮಲನಾಥ್ ಅವರು ಮುಖದಲ್ಲಿ ಯಾವುದೇ ಭಯ ಕಾಣಿಸುತ್ತಿಲ್ಲ. ಪರಿಸ್ಥಿತಿಯನ್ನು ಧೈರ್ಯಯಾಗಿ ಎದುರಿಸುತ್ತಿರುವ ಅವರು, ಸರ್ಕಾರಕ್ಕೆ ಬೇಕಾಗಿರುವ ಬಹುಮತವನ್ನು ಸದನದಲ್ಲಿ ವಿಶ್ವಾಸಮತ ಯಾಚನೆ ವೇಳೆ ಸಾಬೀತು ಮಾಡುವುದಾಗಿ ಹೇಳಿದ್ದಾರೆ.

ಲೋಕೋಪಯೋಗಿ ಸಚಿವ ಸಜ್ಜನ್​ ಸಿಂಗ್ ವರ್ಮಾ ಮತ್ತು ಇತರೆ ಇಬ್ಬರು ಸಚಿವರು, ರಾಜೀನಾಮೆ ನೀಡಿರುವ ಬಂಡಾಯ ಶಾಸಕರ ಮನವೊಲಿಸಿ ರಾಜ್ಯಕ್ಕೆ ಕರೆತರಲು ಬೆಂಗಳೂರಿಗೆ ತೆರಳಿದ್ದಾರೆ ಎಂದು ಮೂಲಗಳು ಹೇಳಿವೆ. ಬಂಡಾಯ ಶಾಸಕರ ನಿರೀಕ್ಷೆಯ ಸ್ಥಾನಗಳನ್ನು ನೀಡುವ ಭರವಸೆ ನೀಡಿ ಅವರನ್ನು ವಾಪಸ್ ಕರೆತಂದು ಸರ್ಕಾರ ಉಳಿಸಿಕೊಳ್ಳುವ ಉಪಾಯವನ್ನು ಕಾಂಗ್ರೆಸ್ ಮಾಡಿದೆ.

ಪಕ್ಷದ ಶಾಸಕಾಂಗ ಸಭೆಯಲ್ಲಿ ನಮ್ಮ ಹಲವಾರು ಶಾಸಕರು ಮತ್ತು ಪಕ್ಷೇತರರು ಪಾಲ್ಗೊಂಡಿದ್ದಾರೆ.  ಇತ್ತೀಚೆಗೆ ಕರೆದೊಯ್ಯಲ್ಪಟ್ಟ ಶಾಸಕರನ್ನು ದಾರಿ ತಪ್ಪಿಸಲಾಗಿದೆ. ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ಒತ್ತಡ ಹೇರಲು ಅವರು ಒಟ್ಟುಗೂಡಿದ್ದಾರೆ. ಪಕ್ಷವನ್ನು ಬಿಟ್ಟರೆ ಏನಾಗುತ್ತದೆ ಎಂಬ ಕಲ್ಪನೆ ಅವರಿಗೆ ಇಲ್ಲ ಎಂದು ಕಾಂಗ್ರೆಸ್ ಮಾಧ್ಯಮ ವಕ್ತಾರರಾದ ಶೋಭಾ ಓಜಾ ಅವರು ಮಂಗಳವಾರ ಸಂಜೆ ಭೋಪಾಲ್​ನಲ್ಲಿ ನಡೆದ ಸಿಎಲ್​ಪಿ ಸಭೆ ಬಳಿಕ ಹೇಳಿದ್ದಾರೆ. ಬಂಡಾಯ ಶಾಸಕರೆಲ್ಲರೂ ಮುಖ್ಯಮಂತ್ರಿ ಕಮಲನಾಥ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ನಮ್ಮ ಸರ್ಕಾರ ಸ್ಥಿರವಾಗಿದೆ. ಮತ್ತು ಸದನದಲ್ಲಿ ಸರ್ಕಾರಕ್ಕೆ ಬೇಕಾದ ಬಹುಮತವನ್ನು ಸಾಬೀತು ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ: ಗಾಂಧಿ ಕುಟುಂಬದ್ದು ವಂಶಪಾರಂಪರ್ಯ ರಾಜಕಾರಣವಾದರೆ ಸಿಂಧಿಯಾದು ಏನು?; ಬಿಜೆಪಿಗೆ ಪ್ರಶಾಂತ್​​ ಕಿಶೋರ್​​ ಪ್ರಶ್ನೆ

ಸಿಂಧಿಯಾ ಬಳಗದಲ್ಲಿರುವ ಆರು ಸಚಿವರನ್ನು ಹೊರತುಪಡಿಸಿ, ಅವರು ಕರೆದೊಯ್ದಿರುವ 13 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಸಚಿವ ಪಿ.ಸಿ.ಶರ್ಮಾ ಹೇಳಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಸಲ್ಲಿಕೆಯಾಗಿರುವ ರಾಜೀನಾಮೆಗಳು ನಕಲಿ. ಅವರೆಲ್ಲರೂ ಫ್ಲೋರ್ ಟೆಸ್ಟ್​ನಲ್ಲಿ ಭಾಗಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
First published:March 10, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading