• Home
  • »
  • News
  • »
  • national-international
  • »
  • JATE: ಭಯೋತ್ಪಾದನೆ ತಡೆಯುವ ಬಗ್ಗೆ ಪಾಕ್ ನಿರ್ಲಕ್ಷ್ಯ, ಭಾರತ ಆಯೋಜಿಸ್ತಿರೋ JATE ಸಮಾರೋಪದಲ್ಲಿ ಪಾಲ್ಗೊಳ್ಳುತ್ತಾ?

JATE: ಭಯೋತ್ಪಾದನೆ ತಡೆಯುವ ಬಗ್ಗೆ ಪಾಕ್ ನಿರ್ಲಕ್ಷ್ಯ, ಭಾರತ ಆಯೋಜಿಸ್ತಿರೋ JATE ಸಮಾರೋಪದಲ್ಲಿ ಪಾಲ್ಗೊಳ್ಳುತ್ತಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

JATE 'ಮನೇಸರ್ ಆಂಟಿ-ಟೆರರ್ 2022'ರ ಕೊನೆಯ ದಿನದ ಸಮಾರಂಭಕ್ಕೆ ಪಾಕಿಸ್ತಾನದ ನಿಯೋಗಕ್ಕೆ ಆಹ್ವಾನವನ್ನು ನೀಡಲಾಗಿದೆ. ಆದರೆ SCO ಸದಸ್ಯರಾಗಿ ಪಾಕಿಸ್ತಾನ ತಂಡವು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದೆ ಎನ್ನಲಾಗಿದೆ.

  • News18 Kannada
  • Last Updated :
  • New Delhi, India
  • Share this:

ಭಾರತವು (India) ಆಯೋಜಿಸುತ್ತಿರುವ ಶಾಂಘೈ ಸಹಕಾರ ಸಂಘಟನೆಯ (SCO) ಅಡಿಯಲ್ಲಿ ಅಕ್ಟೋಬರ್ 13 ರಂದು ನಡೆಯುತ್ತಿರುವ ಜಾಯಿಂಟ್‌ ಆಂಟಿ ಟೆರ್ರರ್‌ ಎಕ್ಸೆಸೈಜ್‌ (JATE) ಸಮಾರೋಪ ಸಮಾರಂಭಕ್ಕೆ ಪಾಕಿಸ್ತಾನವನ್ನು (Pakistan) ಆಹ್ವಾನಿಸಲಾಗಿದೆ ಎಂದು ಅಧಿಕೃತ ರಾಜತಾಂತ್ರಿಕ ಮೂಲಗಳು ಹೇಳಿವೆ. JATE 'ಮನೇಸರ್ ಆಂಟಿ-ಟೆರರ್ 2022' ರ ಕೊನೆಯ ದಿನದ ಸಮಾರಂಭಕ್ಕೆ ಪಾಕಿಸ್ತಾನದ ನಿಯೋಗಕ್ಕೆ ಆಹ್ವಾನವನ್ನು (Invitation) ನೀಡಲಾಗಿದೆ ಎಂಬುದನ್ನು ಇತರ ಅಧಿಕೃತ ಮೂಲಗಳೂ ಸಹ ದೃಢಪಡಿಸಿವೆ. ಇನ್ನು, ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ಮನೇಸರ್ ಗ್ಯಾರಿಸನ್‌ನಲ್ಲಿ SCO ಪ್ರಾದೇಶಿಕ ಆಂಟಿ-ಟೆರರಿಸ್ಟ್ ಸ್ಟ್ರಕ್ಚರ್ (RATS) ಚೌಕಟ್ಟಿನ ಅಡಿಯಲ್ಲಿ ಬಹುರಾಷ್ಟ್ರೀಯ JATE "ಮನೇಸರ್ ಆಂಟಿ-ಟೆರರ್ 2022" ಅನ್ನು ಆಯೋಜಿಸುತ್ತಿದೆ ಎನ್ನಲಾಗಿದೆ. SCO ಸದಸ್ಯರಾಗಿ ಪಾಕಿಸ್ತಾನ ತಂಡವು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದೆ ಎನ್ನಲಾಗಿದೆ.


ಪಾಕ್‌ ನಲ್ಲಿ ನಡೆದಿದ್ದ RATS ಮೀಟ್‌ನಲ್ಲಿ ಪಾಲ್ಗೊಂಡಿತ್ತು ಭಾರತ!
ಅಷ್ಟಕ್ಕೂ ಕಳೆದ ವರ್ಷ ಪಾಕಿಸ್ತಾನ ಆಯೋಜಿಸಿದ್ದ RATS ಮೀಟ್‌ನಲ್ಲಿ ಭಾರತವೂ ಭಾಗವಹಿಸಿತ್ತು. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಖೈಬರ್ ಪುಖ್ತುಂಖ್ವಾದಲ್ಲಿರುವ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ, ಪಬ್ಬಿಯಲ್ಲಿ ಪಾಕಿಸ್ತಾನ ಆಯೋಜಿಸಿದ್ದ ಎರಡು ವಾರಗಳ ಕಾಲದ JATE-2021 ರ ಸಮಾರೋಪ ಸಮಾರಂಭದಲ್ಲಿ ಭಾರತೀಯ ನಿಯೋಗ ಪಾಲ್ಗೊಂಡಿತ್ತು.


ಇನ್ನು ಈ ಅಧಿವೇಶನವು ಪರಿಣತಿ ಮತ್ತು ಉತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳುವ ಗುರಿಯನ್ನು ಹೊಂದಿದೆ. ಅಲ್ಲದೇ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳನ್ನು ನಡೆಸುವ ಮತ್ತು ಇತರ ಭದ್ರತಾ ಬೆದರಿಕೆಗಳನ್ನು ಸಾಮೂಹಿಕವಾಗಿ ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸುವ, SCO RATS ಸದಸ್ಯ ರಾಷ್ಟ್ರಗಳ ಭಯೋತ್ಪಾದನಾ ನಿಗ್ರಹ ಪಡೆಗಳ ನಡುವೆ ಸಹಕಾರ ಮನೋಭಾವನೆ ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು NSG ಹೇಳಿಕೆಯಲ್ಲಿ ತಿಳಿಸಿದೆ.


ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಪಡೆಗಳು ತಮ್ಮ ಪ್ರಾಂತ್ಯಗಳಲ್ಲಿ ಅಭ್ಯಾಸ 
ಮೇ ತಿಂಗಳಲ್ಲಿ, ಪಾಕಿಸ್ತಾನ, ರಷ್ಯಾ, ಚೀನಾ ಸೇರಿದಂತೆ ನಾಲ್ಕು ಮಧ್ಯ ಏಷ್ಯಾ ರಾಷ್ಟ್ರಗಳ ಭಯೋತ್ಪಾದನಾ ನಿಗ್ರಹ ಅಧಿಕಾರಿಗಳು ದೆಹಲಿಯಲ್ಲಿ ಸಭೆ ಮಾಡಿದ್ದರು. ಭಾರತವು ಅಕ್ಟೋಬರ್ 2021 ರಲ್ಲಿ SCO-RATS ಕಾರ್ಯವಿಧಾನದ ಅಧ್ಯಕ್ಷನಾಗಿ ತನ್ನ ಪಾತ್ರವನ್ನು ವಹಿಸಿಕೊಂಡಿತ್ತು. ಎಸ್‌ಸಿಒ ಸದಸ್ಯ ರಾಷ್ಟ್ರಗಳ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಪಡೆಗಳು ತಮ್ಮ ಪ್ರಾಂತ್ಯಗಳಲ್ಲಿ ಜುಲೈ 27 ರಿಂದ ಆಗಸ್ಟ್ 1, 2022 ರವರೆಗೆ ಹಂತ-1 ರ ಅಭ್ಯಾಸವನ್ನು ನಡೆಸಿವೆ. ಈ ಬಗ್ಗೆ ಎನ್‌ಎಸ್‌ಜಿ ಬಿಡುಗಡೆ ಮಾಡಿದ ತನ್ನ ಹೇಳಿಕೆಯಲ್ಲಿ ತಿಳಿಸಿದೆ.


ಇದನ್ನೂ ಓದಿ: UNGA: ಮತ್ತೆ ಕಾಶ್ಮೀರ ರಾಗ ಎಳೆದ ಪಾಕಿಸ್ತಾನ, ನೆರೆ ರಾಷ್ಟ್ರಕ್ಕೆ ತಕ್ಕ ಉತ್ತರ ಕೊಟ್ಟ ಭಾರತ!


ಇನ್ನು, "ಅಕ್ಟೋಬರ್ 08 ರಿಂದ 13 ರವರೆಗೆ NSG ಮನೇಸರ್ ಗ್ಯಾರಿಸನ್‌ನಲ್ಲಿ ಹಂತ-2 ರ ಅಭ್ಯಾಸವನ್ನು ನಡೆಸಲಾಗುತ್ತಿದೆ. ಇದರಲ್ಲಿ ರಿಪಬ್ಲಿಕ್ ಆಫ್ ಕಝಾಕಿಸ್ತಾನ್, ಕಿರ್ಗಿಜ್ ಗಣರಾಜ್ಯ, ಉಜ್ಬೇಕಿಸ್ತಾನ್ ಗಣರಾಜ್ಯ, ರಷ್ಯಾದ ಒಕ್ಕೂಟ ಮತ್ತು NSG ಆಫ್ ಇಂಡಿಯಾದ ಎನ್‌ಸಿಟಿಎಫ್‌ನ ಎಂಟು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ" ಎಂದು ಎನ್‌ಎಸ್‌ಜಿ ತಿಳಿಸಿದೆ.


ಈ ಬಗ್ಗೆ ಎನ್‌ಎಸ್‌ಜಿ ಏನು ಹೇಳಿದೆ 
ಈ ಅಭ್ಯಾಸವನ್ನು RATS ನ ಕಾರ್ಯಕಾರಿ ಸಮಿತಿಯಿಂದ (EC) ನಾಲ್ಕು "ವೀಕ್ಷಕರು" ಮತ್ತು ತಜಕಿಸ್ತಾನ್ ರಾಷ್ಟ್ರೀಯ ಭದ್ರತೆಗಾಗಿ ರಾಜ್ಯ ಸಮಿತಿಯಿಂದ ಒಬ್ಬ ವೀಕ್ಷಕರು ವೀಕ್ಷಿಸುತ್ತಾರೆ. ಖಾಯಂ ಪ್ರತಿನಿಧಿಗಳು, SCO ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು, ಭಾರತದಲ್ಲಿನ SCO ಸದಸ್ಯ ರಾಷ್ಟ್ರಗಳ ರಾಜತಾಂತ್ರಿಕ ಕಾರ್ಯಗಳ ಪ್ರತಿನಿಧಿಗಳು ಮತ್ತು RATS ನೊಂದಿಗೆ ಸಹಕರಿಸುವ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ EC RATS ನ ಉನ್ನತ ಮಟ್ಟದ ನಿಯೋಗಗಳು, ಭಾರತದಿಂದ ರಾಷ್ಟ್ರೀಯ ಪ್ರತಿನಿಧಿಗಳು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆಂದು NSG ಹೇಳಿದೆ.


ಇದನ್ನೂ ಓದಿ:  Elnaaz Norouzi: ಹಿಜಾಬ್​ಗೆ ವಿರೋಧ, ಕ್ಯಾಮೆರಾದೆದುರೇ ಬಟ್ಟೆ ಕಳಚಿಟ್ಟು ಅರೆಬೆತ್ತಲಾದ ಖ್ಯಾತ ನಟಿ!


ಸಾಮಾನ್ಯ ಪ್ರಾದೇಶಿಕ ಭದ್ರತಾ ಸವಾಲುಗಳಾದ ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದವನ್ನು ಎದುರಿಸುವಲ್ಲಿ ಭಾಗವಹಿಸುವ ಸದಸ್ಯ ರಾಷ್ಟ್ರಗಳಿಗೆ ತಮ್ಮ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಅನುಭವವನ್ನು ವಿನಿಮಯ ಮಾಡಿಕೊಳ್ಳಲು ಈ ಸಮಾರಂಭ ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

Published by:Ashwini Prabhu
First published: