ಸತ್ಯವನ್ನು ಮಾತ್ರ ಮಾತನಾಡುತ್ತೇನೆ; ಕಾಂಗ್ರೆಸ್​ ಕಾರ್ಯಕರ್ತರ ವಿರುದ್ಧ ಅಸಮಾಧಾನ ಹೊರಹಾಕಿದ ಪ್ರಿಯಾಂಕಾ ಗಾಂಧಿ

ನಾನು ಇಲ್ಲಿ ಯಾವುದೇ ಭಾಷಣ ಮಾಡುವುದಿಲ್ಲ. ಆದರೆ, ನಾನು ಕೆಲವು ವಿಚಾರವನ್ನು ಮಾತನಾಡಲೇಬೇಕು. ಸತ್ಯವನ್ನು ಮಾತನಾಡಲೇಬೇಕು. ಆ ಸತ್ಯ ಏನೆಂದರೆ ರಾಯ್​ಬರೇಲಿ ಕ್ಷೇತ್ರದ ಜನರ ಸಹಾಯದಿಂದ ಸೋನಿಯಾ ಗಾಂಧಿ ಗೆದ್ದಿದ್ದಾರೆ ಎಂದು ಉಗ್ರವಾಗಿ ಮಾತನಾಡಿದರು.

HR Ramesh | news18
Updated:June 13, 2019, 2:34 PM IST
ಸತ್ಯವನ್ನು ಮಾತ್ರ ಮಾತನಾಡುತ್ತೇನೆ; ಕಾಂಗ್ರೆಸ್​ ಕಾರ್ಯಕರ್ತರ ವಿರುದ್ಧ ಅಸಮಾಧಾನ ಹೊರಹಾಕಿದ ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ
  • News18
  • Last Updated: June 13, 2019, 2:34 PM IST
  • Share this:
ರಾಯ್​ಬರೇಲಿ (ಉತ್ತರಪ್ರದೇಶ): ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಕ್ಷೇತ್ರವಾದ ರಾಯ್​ಬರೇಲಿಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಸರಿಯಾಗಿ ಕೆಲಸ ಮಾಡದ ಪರಿಣಾಮ ಪಕ್ಷ ಹೀನಾಯವಾಗಿ ಸೋಲುವಂತಾಯಿತು ಎಂದು ಕುಟುಕಿದ್ದಾರೆ.

ರಾಯ್​ಬರೇಲಿ ಕ್ಷೇತ್ರದಲ್ಲಿ ಗೆದ್ದಿರುವ ಸೋನಿಯಾ ಗಾಂಧಿ ಅವರು ಬುಧವಾರ ಅಭಿನಂದನಾ ಸಮಾರಂಭ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಉತ್ತರಪ್ರದೇಶ ಪೂರ್ವ) ಪ್ರಿಯಾಂಕಾ ಗಾಂಧಿ, ಚುನಾವಣೆ ವೇಳೆ ಪಕ್ಷದ ಕಾರ್ಯಕರ್ತರು ಪಕ್ಷದ ಪರ ಕೆಲಸ ಮಾಡದಿರುವುದನ್ನು ನಾನು ಗುರುತಿಸಿದ್ದೇನೆ ಎಂದು ಕಾರ್ಯಕರ್ತರ ಬಗ್ಗೆ ಅಸಮಾಧಾನ ಹೊರಹಾಕಿದರು. ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶ ರಾಜ್ಯದಲ್ಲಿ ಕಾಂಗ್ರೆಸ್​ ಗೆದ್ದಿರುವುದು ಇದೊಂದು ಕ್ಷೇತ್ರದಲ್ಲಿ ಮಾತ್ರ. ಇದರ ಪಕ್ಕದ ಕ್ಷೇತ್ರ, ಕಾಂಗ್ರೆಸ್​ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ ರಾಹುಲ್​ ಗಾಂಧಿ ಕೂಡ ಸೋಲು ಕಂಡಿದ್ದಾರೆ.
ನಾನು ಇಲ್ಲಿ ಯಾವುದೇ ಭಾಷಣ ಮಾಡುವುದಿಲ್ಲ. ಆದರೆ, ನಾನು ಕೆಲವು ವಿಚಾರವನ್ನು ಮಾತನಾಡಲೇಬೇಕು. ಸತ್ಯವನ್ನು ಮಾತನಾಡಲೇಬೇಕು. ಆ ಸತ್ಯ ಏನೆಂದರೆ ರಾಯ್​ಬರೇಲಿ ಕ್ಷೇತ್ರದ ಜನರ ಸಹಾಯದಿಂದ ಸೋನಿಯಾ ಗಾಂಧಿ ಗೆದ್ದಿದ್ದಾರೆ ಎಂದು ಉಗ್ರವಾಗಿ ಮಾತನಾಡಿದರು.

ಇದನ್ನು ಓದಿ: Rahul Gandhi: ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಾಗಿ ರಾಹುಲ್ ಗಾಂಧಿ ಮುಂದುವರಿಯಲಿದ್ದಾರೆ; ರಣ್ದೀಪ್ ಸುರ್ಜೆವಾಲಾ!ಅಮೇಥಿ ಮತ್ತು ರಾಯ್​ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ ಚುನಾವಣೆ ವೇಳೆ ಭರ್ಜರಿ ಪ್ರಚಾರ ಮಾಡಿದ್ದರು. ಚುನಾವಣಾ ರ್ಯಾಲಿಗಳನ್ನು ನಡೆಸಿದ್ದರು.

ನಿಮಗೆಲ್ಲಾ ಗೊತ್ತು ಯಾರು ಧಾರ್ಮಿಕವಾಗಿ ಕೆಲಸ ಮಾಡಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಗೆದ್ದು ಎರಡನೇ ಅವಧಿಗೆ ಸರ್ಕಾರ ರಚಿಸಿದೆ. ಬಿಜೆಪಿ 303 ಸ್ಥಾನಗಳನ್ನು ಗಳಿಸಿದರೆ, ಎನ್​ಡಿಎ ಮೈತ್ರಿಕೂಟ ಒಟ್ಟಾರೆ 352 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಕಾಂಗ್ರೆಸ್​ ಕೇವಲ 52 ಸ್ಥಾನಗಳನ್ನಷ್ಟೇ ಪಡೆದುಕೊಂಡಿದೆ. ಮತ್ತು 18 ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಮಾವಶೇಷವಾಗಿದೆ.First published:June 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading