ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ರದ್ದು ಮಾಡಿದರೆ ನಾವು ಸಹಿಸೆವು; ಭಾರತಕ್ಕೆ ಪಾಕ್​ ಎಚ್ಚರಿಕೆ

ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದು ಮಾಡಲು ನಾವು ಸದಾ ಸಿದ್ಧ ಎಂದು ಬಿಜೆಪಿ ನಾಯಕರು ನಿರಂತರವಾಗಿ ಹೇಳಿಕೊಳ್ಳುತ್ತಾ ಬಂದಿದ್ದರು. ಇದಕ್ಕೆ ಕಾಂಗ್ರೆಸ್​ ಕೂಡ ಅಪಸ್ವರ ಎತ್ತಿತ್ತು. ಇದಾದ ಬೆನ್ನಲ್ಲೇ ಪಾಕಿಸ್ತಾನ ಈ ರೀತಿಯ ಹೇಳಿಕೆ ನೀಡಿದೆ.

Rajesh Duggumane | news18
Updated:April 7, 2019, 9:14 AM IST
ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ರದ್ದು ಮಾಡಿದರೆ ನಾವು ಸಹಿಸೆವು; ಭಾರತಕ್ಕೆ ಪಾಕ್​ ಎಚ್ಚರಿಕೆ
ಇಮ್ರಾನ್​ ಖಾನ್​
  • News18
  • Last Updated: April 7, 2019, 9:14 AM IST
  • Share this:
ಇಸ್ಲಾಮಾಬಾದ್​ (ಏ.7): ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನ 370ನೇ ವಿಧಿಯನ್ನು ರದ್ದು ಮಾಡಿದರೆ ನಾವು ಅದನ್ನು ಸಹಿಸುವುದಿಲ್ಲ ಎಂದು ಪಾಕಿಸ್ತಾನ ಭಾರತಕ್ಕೆ ಎಚ್ಚರಿಕೆ ನೀಡಿದೆ. ಇದು ವಿಶ್ವಸಂಸ್ಥೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿದೆ.

ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದು ಮಾಡಲು ನಾವು ಸದಾ ಸಿದ್ಧ ಎಂದು ಬಿಜೆಪಿ ನಾಯಕರು ನಿರಂತರವಾಗಿ ಹೇಳಿಕೊಳ್ಳುತ್ತಾ ಬಂದಿದ್ದರು. ಇದಕ್ಕೆ ಕಾಂಗ್ರೆಸ್​ ಕೂಡ ಅಪಸ್ವರ ಎತ್ತಿತ್ತು. ಇದಾದ ಬೆನ್ನಲ್ಲೇ ಪಾಕಿಸ್ತಾನ ಈ ರೀತಿಯ ಹೇಳಿಕೆ ನೀಡಿದೆ.

“ಭಾರತೀಯ ಸವಿಂಧಾನದಿಂದ 370ನೇ ವಿಧಿಯನ್ನು ರದ್ದು ಮಾಡುವುದು ವಿಶ್ವಸಂಸ್ಥೆಯ ನಿಯಮಗಳಿಗೆ ವಿರುದ್ಧವಾಗಿದೆ. ಯಾವುದೇ ಕಾರಣಕ್ಕೂ ಪಾಕಿಸ್ತಾನ ಇದನ್ನು ಸಹಿಸುವುದಿಲ್ಲ. ಕಾಶ್ಮೀರ ಕೂಡ ಇದನ್ನು ಸ್ವೀಕರಿಸುವುದಿಲ್ಲ,” ಎಂದು ಪಾಕಿಸ್ತಾನ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: India-Pak Tensions: ಜಮ್ಮು-ಕಾಶ್ಮೀರ ಹಾಗೂ ಪಂಜಾಬ್​ ವಿಮಾನ ನಿಲ್ದಾಣಗಳು ಸ್ಥಗಿತ

370ನೇ ವಿಧಿಯನ್ನು ರದ್ದು ಮಾಡಲು ನಾವು ಸಿದ್ಧವಿದ್ದೇವೆ ಎಂದು ಬಿಜೆಪಿ ಹೇಳುತ್ತಾ ಬಂದಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಹೆಚ್ಚು ಒಲವು ಹೊಂದಿದ್ದಾರಂತೆ. ಆದರೆ, ರಾಜ್ಯಸಭೆಯಲ್ಲಿ ಬಹುಮತ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಬಿಜೆಪಿ ಈ ನಿರ್ಧಾರ ತೆಗೆದುಕೊಳ್ಳುವ ಸಾಹಸಕ್ಕೆ ಮುಂದಾಗಿಲ್ಲ ಎನ್ನಲಾಗಿದೆ.

First published: April 7, 2019, 9:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading