LS Elections: 2024ರ ಚುನಾವಣೆಯಲ್ಲಿ ಚುನಾವಣೆಯಲ್ಲಿ ಮೋದಿಗೆ ಎದುರಾಳಿಯಾಗ್ತಾರಾ ನಿತೀಶ್ ಕುಮಾರ್?

ಇನ್ನೇನು 2024 ರಲ್ಲಿ ಲೋಕಸಭೆ ಚುನಾವಣೆ ನಡೆಯುವ ಹಿನ್ನೆಲೆ ಎಲ್ಲ ಕಡೆ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬ ಪ್ರಶ್ನೆ ಕುರಿತು ನಿಧಾನವಾಗಿ ಚರ್ಚಿಸಲು ಪ್ರಾರಂಭಿಸಿದ್ದಾರೆ. ಈಗ ಸದ್ಯಕ್ಕೆ ಸುದ್ದಿಯಲ್ಲಿರುವುದು ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌. ಇವರು ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿ ಮುಂದಿನ ಪ್ರಧಾನ ಮಂತ್ರಿ ಸ್ಥಾನಕ್ಕೆ ಪೈಪೋಟಿ ನೀಡಲಿದ್ಧಾರೆ ಎಂಬ ಊಹಾಪೋಹಗಳು ಹಬ್ಬುತ್ತಿರುವ ಹಿನ್ನೆಲೆ ಈ ವಿಷಯ ಚರ್ಚೆಯಾಗುತ್ತಿದೆ.

ಪ್ರಧಾನಿ ಮೋದಿ ಮತ್ತು ನಿತೀಶ್ ಕುಮಾರ್ (ಸಂಗ್ರಹ ಚಿತ್ರ)

ಪ್ರಧಾನಿ ಮೋದಿ ಮತ್ತು ನಿತೀಶ್ ಕುಮಾರ್ (ಸಂಗ್ರಹ ಚಿತ್ರ)

  • Share this:
ಇನ್ನೇನು 2024 ರಲ್ಲಿ ಲೋಕಸಭೆ ಚುನಾವಣೆ (Lok Sabha Elections) ನಡೆಯುವ ಹಿನ್ನೆಲೆ ಎಲ್ಲ ಕಡೆ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬ ಪ್ರಶ್ನೆ ಕುರಿತು ನಿಧಾನವಾಗಿ ಚರ್ಚಿಸಲು ಪ್ರಾರಂಭಿಸಿದ್ದಾರೆ. ಈಗ ಸದ್ಯಕ್ಕೆ ಸುದ್ದಿಯಲ್ಲಿರುವುದು ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (NItish Kumar). ಇವರು ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿ ಮುಂದಿನ ಪ್ರಧಾನ ಮಂತ್ರಿ (Prime Minister) ಸ್ಥಾನಕ್ಕೆ ಪೈಪೋಟಿ ನೀಡಲಿದ್ಧಾರೆ ಎಂಬ ಊಹಾಪೋಹಗಳು ಹಬ್ಬುತ್ತಿರುವ ಹಿನ್ನೆಲೆ ಈ ವಿಷಯ ಚರ್ಚೆಯಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಶಿವಸೇನಾ ಭವಿಷ್ಯದ ಹೊರತಾಗಿ, ಜನತಾ ದಳ (ಯುನೈಟೆಡ್) ಅನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ತೊರೆಯಲು ಮತ್ತೊಂದು ಕಾರಣವೆಂದರೆ 2024 ರ ಲೋಕಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದು ಎಂಬ ಸುದ್ದಿ ಹರಡುತ್ತಿದೆ.

ನರೇಂದ್ರ ಮೋದಿ ವಿರುದ್ಧ ನಿತೀಶ್‌ ಕುಮಾರ್‌ ಪ್ರಧಾನಿ ಹುದ್ದೆಗೆ ಸ್ಪರ್ಧಿಸುತ್ತಾರೆಯೇ?

ಜೆಡಿಯು ನಾಯಕರ ಪ್ರಕಾರ, “ಇದೀಗ ನಿತೀಶ್‌ ಕುಮಾರ್‌ ಅವರು ನರೇಂದ್ರ ಮೋದಿ ವಿರುದ್ಧ ಪ್ರಧಾನಿ ಹುದ್ದೆಗೆ ಸ್ಪರ್ಧಿಸುವ ಸಮಯ ಬಂದಿದೆ” ಎಂದು ಉಪೇಂದ್ರ ಕುಶ್ವಾಹಾ ಟ್ವೀಟ್ ಮಾಡಿದ್ದಾರೆ. ಆದರೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಎಲ್ಲೆ ಇರಲಿ, ಯಾವಾಗಲೂ ಅಧಿಕಾರವನ್ನು ಹುಡುಕುವ ಯು-ಟರ್ನ್‌ ಮಾಸ್ಟರ್ ಎಂದು ಹೆಚ್ಚು ಖ್ಯಾತಿ ಪಡೆದಿದ್ದಾರೆ. ಆದರೆ ಅವರ ರಾಜ್ಯದಲ್ಲಿಯೇ ಸ್ಥಿರವಾದ ರಾಜಕೀಯ ಎಂಬುದಕ್ಕೆ ಅರ್ಥವೇ ಇಲ್ಲದಂತೆ ಆಗಿದೆ. ಭಾರತೀಯ ಜನತಾ ಪಕ್ಷದ ಪ್ರತಿಸ್ಪರ್ಧಿ ಪಾಳಯದಿಂದ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ನಿತೀಶ್‌ ಕುಮಾರ್‌ ಅವರನ್ನು ಪರಿಗಣಿಸಬಹುದೇ?

ಇದನ್ನೂ ಓದಿ: Conversion: ಪಾಕ್​ನಲ್ಲಿ ಹಿಂದೂ ಹೆಣ್ಮಕ್ಕಳ ಬಲವಂತದ ಮತಾಂತರ: ಮಾಜಿ ಪಿಎಂ ಬಾಯ್ಬಿಟ್ಟ ಕರಾಳ ಸತ್ಯ!

ನಿತೀಶ್ ಅವರು 2013 ಮತ್ತು 2017 ರ ನಡುವೆ ತಮ್ಮ ಪ್ರಧಾನ ಮಂತ್ರಿ ಆಕಾಂಕ್ಷೆಗಳನ್ನು ಮುಂದುವರಿಸಲು ಉತ್ತಮ ಅವಕಾಶವನ್ನು ಹೊಂದಿದ್ದರು, ಆದರೆ 2022 ಅವರಿಗೆ ವಿಭಿನ್ನವಾದ ಆಟವಾಗಲಿದೆ. ಅವರು ಇತ್ತಿಚೀನ ಯು-ಟರ್ನ್‌ ವ್ಯಕ್ತಿ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಮೋದಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿದಾಗ ರಾಜಕೀಯ ಮೈತ್ರಿ ಮುರಿದ ನಿತೀಶ್ ಕುಮಾರ್ 

ಜೂನ್ 2013 ರಲ್ಲಿ ಬಿಜೆಪಿ ಪಕ್ಷವು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿದಾಗ ನಿತೀಶ್ ಕುಮಾರ್ ತಮ್ಮ ರಾಜಕೀಯ ಮೈತ್ರಿ ಮುರಿದರು. ತದನಂತರ ಮುಂದಿನ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷ ಕೇವಲ ಎರಡು ಸ್ಥಾನಗಳನ್ನಷ್ಟೇ ಗೆಲ್ಲಲು ಶಕ್ತವಾಯಿತು. 2015 ರಲ್ಲಿ, ಅವರು ಹೊಸ ರಾಜಕೀಯ ಇನ್ನಿಂಗ್ಸ್ ಪ್ರಾರಂಭಿಸಲು ರಾಷ್ಟ್ರೀಯ ಜನತಾ ದಳ (RJD) ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರು. ಅವರ ನಾಯಕತ್ವದಲ್ಲಿ, 2015 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿ (ಯು), ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಮಹಾ ಮೈತ್ರಿಕೂಟವಾದ ಮಹಾಘಟಬಂಧನ್ (ಎಂಜಿಬಿ) ಅದ್ಭುತ ವಿಜಯವನ್ನು ಕಂಡಿತು.

Will Nitish Kumar be the next prime ministerial candidate in 2024 Lok Sabha elections stg asp
ನಿತೀಶ್‌ ಕುಮಾರ್‌


ಆದ್ದರಿಂದ, ನಿತೀಶ್ ಅವರು ಮುಂದೆ ತಮ್ಮ ರಾಜಕೀಯ ಭವಿಷ್ಯವನ್ನು ರಾಷ್ಟ್ರೀಯವಾಗಿ ವಿಸ್ತರಿಸಲು ಅವಕಾಶಗಳನ್ನು ಹೊಂದಿದ್ದಾರೆ. ಉತ್ತಮ ಆಡಳಿತಕ್ಕಾಗಿ ಜನಾದೇಶ ಪಡೆದ ನಾಯಕ ಎಂದು ಹೆಸರಾಗಿದ್ದರು. 2005 ರಿಂದ ಸಿಎಂ ಕುರ್ಚಿಯಲ್ಲಿ ಮುಂದುವರಿದ ಅವರು ಬಿಜೆಪಿಯ ಪ್ರತಿಸ್ಪರ್ಧಿ ಪಾಳೆಯದಲ್ಲಿ ಅತ್ಯಂತ ಹಿರಿಯ ರಾಜಕಾರಣಿಯಾಗಿದ್ದರು.

ಇದನ್ನೂ ಓದಿ:  ದಿನ ಬೆಳಗಾಗ್ತಿದ್ದಂತೆ ಸ್ಟಾರ್​​ ಆದ ಡೆಲಿವರಿ ಬಾಯ್, ಭೇಟಿಯಾಗುವಂತೆ ಕರೆ ಮಾಡಿದ Dubai ರಾಜಕುಮಾರ!

ಆದ್ದರಿಂದ, ಅತ್ಯಂತ ಹಿರಿಯ ಮತ್ತು ಆಡಳಿತದ ಜನಾದೇಶವನ್ನು ಪಡೆಯುವುದರಿಂದ, ನಿತೀಶ್ ಅವರು ವಿರೋಧ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಇತರ ಎಲ್ಲಾ ಪ್ರಾದೇಶಿಕ ರಾಜಕೀಯ ವಲಯಗಳನ್ನು ಗೆಲ್ಲುವ ಅವಕಾಶ ಹೊಂದಿದ್ದಾರೆ. ವಾಷಿಂಗ್ಟನ್ ಮೂಲದ ಥಿಂಕ್ ಟ್ಯಾಂಕ್ ಬ್ರೂಕಿಂಗ್ಸ್ ಪ್ರಕಾರ, ನಿತೀಶ್ ಅವರ "ಮಿರಾಕಲ್ಸ್‌ಗಳ" ನಂತರ ನಿತೀಶ್ "ನಿಸ್ಸಂಶಯವಾಗಿ ಇವರು ಯೋಗ್ಯವಾದ ರಾಜಕೀಯ ನಾಯಕ" ಆಗಿದ್ದರು, "ಅನೇಕರು ಬಿಹಾರವನ್ನು ವಿಫಲ ರಾಜ್ಯವೆಂದು ಬರೆದಿದ್ದಾರೆ, ಆದರೆ ಅವರ ಜನರೇ ಅವರಿಗೆ ದೊಡ್ಡ ಶಕ್ತಿ " ಎಂದಿದ್ದಾರೆ.
Published by:Ashwini Prabhu
First published: