ಶ್ರೀನಗರ: ನನಗೆ ಸೂಕ್ತ ಹುಡುಗಿ ಸಿಕ್ಕಾಗ ಮದುವೆಯಾಗುತ್ತೇನೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. 52 ವರ್ಷವಾಗಿರುವ ರಾಹುಲ್ ಗಾಂಧಿ ಅವರು, ಭಾರತದ ದಿ ಮೋಸ್ಟ್ ಎಲಿಜಿಬುಲ್ ಬ್ಯಾಚುಲರ್ಗಳಲ್ಲಿ ಒಬ್ಬರು. ಸದ್ಯ ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದಅವರಿಗೆ ಸಂದರ್ಶಕರು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ನೀವು ಶೀಘ್ರದಲ್ಲೇ ಮದುವೆಯಾಗಲು (Marriage) ಪ್ಲ್ಯಾನ್ ಮಾಡಿದ್ದೀರಾ ಅಥವಾ ನಿಮಗೆ ಮದುವೆಯಾಗುವ ಆಲೋಚನೆ ಇಲ್ಲವೇ ಎಂದು ಕೇಳಿದ್ದಾರೆ. ಅದಕ್ಕೆ ರಾಹುಲ್ ಗಾಂಧಿ, ಸೂಕ್ತ ಹುಡುಗಿ ಸಿಕ್ಕಿದಾಗ ಖಂಡಿತಾ ನಾನು ಮದುವೆಯಾಗುತ್ತೇನೆ ಎಂದಿದ್ದಾರೆ.
Rahul Gandhi ji's Chit-chat on marriage with Kamiya Jani of curly tales. pic.twitter.com/IGABLIerbu
— Nitin Agarwal (@nitinagarwalINC) January 22, 2023
ನನ್ನನ್ನು ತೊಂದರೆಗೆ ಸಿಲುಕಿಸುತ್ತಿದ್ದೀರಿ ಎಂದ ರಾಹುಲ್
ಇದೇ ವೇಳೆ ಕೂಡಲೇ ಸಂದರ್ಶಕಿ ಅಂತವರು ಯಾರಾದರೂ ಸಿಕ್ಕಿದ್ದಾರೆಯೇ, ಎಂತಹ ಹುಡುಗಿ ನಿಮಗೆ ಸಿಗಬೇಕು ಎಂದು ಕೇಳಿದಾಗ, ಹಾಗೇನಿಲ್ಲ, ಪ್ರೀತಿಸುವ ಹುಡುಗಿಯಾಗಿದ್ದು, ಆಕೆ ಬುದ್ಧಿವಂತಳಾಗಿದ್ದರೆ ಸಾಕು ಎಂದು ತಿಳಿಸಿದ್ದಾರೆ. ಓ ಈಗ ರಾಹುಲ್ ಗಾಂಧಿಯವರ ಕಡೆಯಿಂದ ಹುಡುಗಿಯರಿಗೆ ಮೆಸೇಜ್ ಹೋಗಿರುತ್ತದೆ ಎಂದು ಕಾಮಿಡಿ ಮಾಡಿದಾಗ ನಕ್ಕ ರಾಹುಲ್ ಗಾಂಧಿ ನೀವೀಗ ನನ್ನನ್ನು ತೊಂದರೆಗೆ ಸಿಲುಕಿಸುತ್ತಿದ್ದೀರಿ ಎನ್ನುತ್ತಾ ಮುಗುಳು ನಗೆ ಬೀರಿದ್ದಾರೆ.
ಟ್ರೋಲ್ಗಳನ್ನು ಗಿಫ್ಟ್ ಎಂದು ಪರಿಗಣಿಸುತ್ತೇನೆ
ಇದೇ ವೇಳೆ ಬಹುದೊಡ್ಡ ರಾಜಕೀಯ ಕುಟುಂಬ ಹಿನ್ನೆಲೆ ಹೊಂದಿರುವ ರಾಹುಲ್ ಗಾಂಧಿ ಅವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಟೀಕೆಗಳು ವ್ಯಕ್ತವಾಗುತ್ತಿರುತ್ತದೆ. ನೆಗೆಟಿವ್ ಕಾಮೆಂಟ್ಗಳು ಬರುತ್ತಿರುತ್ತದೆ ಇದನ್ನು ಹೇಗೆ ಸ್ವೀಕರಿಸುತ್ತೀರಾ ಎಂದು ಕೇಳಿದಾಗ, ಟ್ರೋಲ್ಗಳನ್ನು ಗಿಫ್ಟ್ ಎಂದು ಪರಿಗಣಿಸುತ್ತೇನೆ. ಗಿಫ್ಟ್ ಗಳನ್ನು ಸ್ವೀಕರಿಸುವುದು, ಬಿಡುವುದು ನಮ್ಮ ನಮ್ಮ ಇಚ್ಛೆ. ಅದೇ ರೀತಿ ಟ್ರೋಲ್ಗಳನ್ನು ಇಷ್ಟವಿದ್ದರೆ ಸ್ವೀಕರಿಸುತ್ತೇನೆ ಇಲ್ಲದಿದ್ದರೆ ತಲೆಕೆಡಿಸಿಕೊಳ್ಳದೆ ಬಿಟ್ಟುಬಿಡುತ್ತೇನೆ ಎಂದು ಹೇಳಿದ್ದಾರೆ.
RG's Message for Trolls... pic.twitter.com/6etu0TMcxg
— Nitin Agarwal (@nitinagarwalINC) January 23, 2023
ಅಜ್ಜಿ, ಅಮ್ಮನಂತ ಗುಣ ಇದ್ದ ಹುಡುಗಿ ಸಿಕ್ರೆ ಮದ್ವೆಯಾಗ್ತೀನಿ ಅಂದಿದ್ದ ರಾಹುಲ್
ಈ ಹಿಂದೆ ಭಾರತ್ ಜೋಡೋ ಯಾತ್ರೆ ವೇಳೆ ತಮ್ಮ ಬಾಳ ಸಂಗಾತಿ ಹೇಗಿರಬೇಕು ಎಂಬ ವಿಚಾರವನ್ನು ರಾಹುಲ್ ಗಾಂಧಿ ರಿವೀಲ್ ಮಾಡಿದ್ದರು. ಯೂಟ್ಯೂಬ್ ಚಾನೆಲ್ವೊಂದರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೇ ನನ್ನ ಮೊದಲ ಪ್ರೀತಿ ಮತ್ತು ನನ್ನ ಎರಡನೇ ತಾಯಿ ಎಂದಿದ್ದರು.
#WATCH | Congress MP Rahul Gandhi had a joyful moment with his mother Sonia Gandhi during the party's 138th Foundation Day celebration event in Delhi pic.twitter.com/tgqBAxY2co
— ANI (@ANI) December 28, 2022
ನಾನು ಮಹಿಳೆಯನ್ನು ಮದುವೆಯಾಗುತ್ತೇನೆ. ಅದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಅವಳು ನನ್ನ ತಾಯಿ ಮತ್ತು ಅಜ್ಜಿ ಇಬ್ಬರ ಗುಣಗಳನ್ನು ಹೊಂದಿದ್ದರೆ ಉತ್ತಮ ಎಂದು ಹೇಳಿದ್ದರು.
ರಾಹುಲ್ಗೆ ತಮಿಳುನಾಡು ಹುಡುಗಿ ಹುಡುಕಲು ಮುಂದಾಗಿದ್ದ ಮಹಿಳೆ
ಈ ಮುನ್ನ ಕನ್ಯಾಕುಮಾರಿಯ ಮಾರ್ತಾಂಡಂನಲ್ಲಿ ಪ್ರಧಾನಮಂತ್ರಿ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರೊಬ್ಬರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬಳಿ ಮದುವೆ ಬಗ್ಗೆ ಮಾತೆತ್ತಿದ್ದರು. ರಾಹುಲ್ ಗಾಂಧಿ ಜೊತೆ ಭಾರತ್ ಜೋಡೋ ಯಾತ್ರೆಯಲ್ಲಿ ಜೊತೆಗಿದ್ದ ಸಂಸದ ಜೈರಾಮ್ ರಮೇಶ್, ರಾಹುಲ್ ಗಾಂಧಿ ತಮಿಳುನಾಡಿನ ಮೇಲೆ ಭಾರೀ ಪ್ರೀತಿ ಇಟ್ಟಿದ್ದಾರೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ.
ಅಲ್ಲದೇ ತಮಿಳು ಹುಡುಗಿಯನ್ನು ರಾಹುಲ್ ಗಾಂಧಿಗಾಗಿ ಹುಡುಕಲು ತಾವು ಸಿದ್ಧರಿರುವುದಾಗಿಯೂ ಆ ಮಹಿಳೆ ಹೇಳಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಜೊತೆಗೆ ರಾಹುಲ್ ಗಾಂಧಿ ಆ ಮಹಿಳೆಯ ಜೊತೆ ಚರ್ಚೆ ನಡೆಸುತ್ತಿರುವ ಫೋಟೋಗಳನ್ನು ಸಹ ಹಂಚಿಕೊಂಡಿದ್ದರು.
ಸದ್ಯ ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್
129 ದಿನಗಳಿಂದ 12 ರಾಜ್ಯಗಳಲ್ಲಿ ಪಾದಯಾತ್ರೆ ನಡೆಸಿದ ರಾಹುಲ್ ಗಾಂಧಿ ಅವರು ಜಮ್ಮುವಿನಲ್ಲಿದ್ದಾರೆ. ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಜನವರಿ 30 ರಂದು ಶ್ರೀನಗರದಲ್ಲಿ ಕೊನೆಗೊಳ್ಳಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ