ಮನೀಶ್ ಸಿಸೋಡಿಯಾ ಡಿಸಿಎಂ ಆಗಿ ಮುಂದುವರೆಯಲಿದ್ದಾರಾ ಎಂಬ ಪ್ರಶ್ನೆಗೆ ದ್ವಂದ್ವಾರ್ಥದ ಉತ್ತರ ನೀಡಿದ ಕೇಜ್ರಿವಾಲ್

ಪ್ರತಾಪ್​ಗಂಜ್ ಕ್ಷೇತ್ರದಲ್ಲಿ ಬಿಜೆಪಿಯ ಪ್ರಬಲ ಅಭ್ಯರ್ಥಿ ರವೀಂದ್ರ ಸಿಂಗ್ ನೇಗಿ ಮತ್ತು ಸಿಸೋಡಿಯಾ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟು, ಕೊನೆಗೂ ಕೇವಲ 2 ಸಾವಿರ ಮತಗಳ ಅಂತರದಿಂದ ಸಿಸೋಡಿಯಾ ಗೆಲುವು ದಾಖಲಿಸಿದರು.

ಮನೀಶ್ ಸಿಸೋಡಿಯಾ ಮತ್ತು ಅರವಿಂದ್ ಕೇಜ್ರಿವಾಲ್.

ಮನೀಶ್ ಸಿಸೋಡಿಯಾ ಮತ್ತು ಅರವಿಂದ್ ಕೇಜ್ರಿವಾಲ್.

  • Share this:
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಭರ್ಜರಿ ಜಯಭೇರಿ ಬಾರಿಸಿ, ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಿದೆ. ಇದೇ ಸಂದರ್ಭದಲ್ಲಿ ಮುಂದಿನ ದೆಹಲಿ ಸರ್ಕಾರದಲ್ಲಿ ಮನೀಶ್ ಸಿಸೋಡಿಯಾ ಉಪಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆಯೇ ಎಂಬ ಪ್ರಶ್ನೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ದ್ವಂದ್ವಾರ್ಥದ ಹೇಳಿಕೆ ನೀಡಿದ್ದಾರೆ.

ಪ್ರಚಂಡ ಜಯಭೇರಿ ಬಳಿಕ ನ್ಯೂಸ್ 18 ನೊಂದಿಗೆ ಮಾತನಾಡಿದ ಕೇಜ್ರಿವಾಲ್ ಅವರಿಗೆ ಮನೀಶ್ ಸಿಸೋಡಿಯಾ ಮತ್ತೆ ಉಪಮುಖ್ಯಮಂತ್ರಿಯಾಗಲಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಅವರು ನೇರವಾಗಿ ಉತ್ತರ ಹೇಳಲಿಲ್ಲ. ಎಲ್ಲವೂ ನಿಗದಿತ ವೇಳೆಯಲ್ಲಿಯೇ ನಡೆಯಲಿದೆ. ನೀವೇನು ಚಿಂತಿಸಬೇಡಿ ಎಂದು ನಗುತ್ತಾ ಉತ್ತರ ನೀಡಿದರು.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್​ ಆದ್ಮಿ ಪಾರ್ಟಿ ಸಂಪೂರ್ಣ ತನ್ನ ವಶಕ್ಕೆ ಪಡೆದುಕೊಂಡಿದೆ. 70 ಸದಸ್ಯ ಸ್ಥಾನದ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಬರೋಬ್ಬರಿ 62 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಹಿಂದಿನ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ಅವರು ಅರವಿಂದ್ ಕೇಜ್ರಿವಾಲ್ ಅವರ ನಂಬಿಕಸ್ಥರಲ್ಲಿ ಪ್ರಮುಖರು. ಬಿಜೆಪಿಯ ಪ್ರಬಲ ಪೈಪೋಟಿಯ ನಡುವೆ ಪ್ರತಾಪ್​ಗಂಜ್ ಕ್ಷೇತ್ರದಿಂದ ಪ್ರಯಾಸದ ಗೆಲುವು ಪಡೆದಿದ್ದಾರೆ.

ಇದನ್ನು ಓದಿ: ದೆಹಲಿ ಚುನಾವಣೆಯಲ್ಲಿ ಗೆದ್ದ ಆಪ್​ ಪಕ್ಷದ 8 ಮಹಿಳಾ ಅಭ್ಯರ್ಥಿಗಳು

ಮಂಗಳವಾರ ಫಲಿತಾಂಶದ ದಿನ ಸಿಸೋಡಿಯಾ ಮತ ಎಣಿಕೆ ಕೇಂದ್ರದ ಒಳಗೆ ಇದ್ದಿದ್ದರಿಂದ ಎಎಪಿ ಮುಖ್ಯಕಚೇರಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿರಲಿಲ್ಲ. ಅಲ್ಲದೇ, ಪ್ರತಾಪ್​ಗಂಜ್ ಕ್ಷೇತ್ರದಲ್ಲಿ ಬಿಜೆಪಿಯ ಪ್ರಬಲ ಅಭ್ಯರ್ಥಿ ರವೀಂದ್ರ ಸಿಂಗ್ ನೇಗಿ ಮತ್ತು ಸಿಸೋಡಿಯಾ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟು, ಕೊನೆಗೂ ಕೇವಲ 2 ಸಾವಿರ ಮತಗಳ ಅಂತರದಿಂದ ಸಿಸೋಡಿಯಾ ಗೆಲುವು ದಾಖಲಿಸಿದರು.
First published: